newskadaba

ವಿಟ್ಲ: ರಸ್ತೆಗೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸುವ ಭರದಲ್ಲಿ ಪಲ್ಟಿಯಾದ ಆಟೋರಿಕ್ಷಾ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 13. ಚಲಿಸುತ್ತಿದ್ದ ಆಟೋರಿಕ್ಷಾಕ್ಕೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸುವ ವೇಳೆ ನಿಯಂತ್ರಣ ತಪ್ಪಿದ ಆಟೋರಿಕ್ಷಾದಿಂದ ಚಾಲಕ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ಪುಣಚದಲ್ಲಿ ನಡೆದಿದೆ. ಮೃತ ಚಾಲಕನನ್ನು ಜಗನ್ನಾಥ ಪೈಸಾರಿ(57) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ಮಧ್ಯಾಹ್ನ ಊಟದ ಬಳಿಕ ಪುಣಚದ ರಿಕ್ಷಾ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಿದ್ದ ವೇಳೆ ಆಟೋರಿಕ್ಷಾ ಮಣಿಲ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ರಸ್ತೆಗೆ ಪಲ್ಟಿಯಾಗಿ ಬಿದ್ದ ಪರಿಣಾಮ, ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ […]

ವಿಟ್ಲ: ರಸ್ತೆಗೆ ಅಡ್ಡಲಾಗಿ ಬಂದ ದನವನ್ನು ತಪ್ಪಿಸುವ ಭರದಲ್ಲಿ ಪಲ್ಟಿಯಾದ ಆಟೋರಿಕ್ಷಾ ➤ ಚಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವರ್ಕ್ ಫ್ರಂ ಹೋಂ ರದ್ದುಗೊಳಿಸಿದ ಟಾಟಾ ➤ ಮಹಿಳಾ ಉದ್ಯೋಗಿಗಳಿಂದ ಸಾಮೂಹಿಕ ರಾಜೀನಾಮೆ

(ನ್ಯೂಸ್ ಕಡಬ) newskadaba.com  ನವದೆಹಲಿ, ಜೂ. 13.  ಜಗತ್ತಿನಾದ್ಯಂತ ಕೋವಿಡ್‌ 19 ಸೋಂಕು ಬಾಧಿಸಿದ ಮೂರು ವರ್ಷಗಳ ಬಳಿಕ ಭಾರತದ ಅತೀ ದೊಡ್ಡ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಕಂಪನಿಯು ವರ್ಕ್‌ ಫ್ರಂ ಹೋಮ್‌ ಅನ್ನು ರದ್ದುಗೊಳಿಸಿದ್ದು, ಇದರ ಪರಿಣಾಮ ಮಹಿಳಾ ಉದ್ಯೋಗಿಗಳು ಸಾಮೂಹಿಕ ರಾಜೀನಾಮೆ ನೀಡುತ್ತಿರುವ ಘಟನೆ ಹೆಚ್ಚಳವಾಗಿದೆ. ಟಿಸಿಎಸ್ ಕಂಪನಿಯು ಯಾವುದೇ ಲಿಂಗತಾರತಮ್ಯವಿಲ್ಲದೇ ಮಹಿಳೆಯರಿಗೆ ಹಲವಾರು ಉದ್ಯೋಗಾವಕಾಶಗಳನ್ನು ಕಲ್ಪಿಸಿತ್ತು, ಆದರೆ ಇದೀಗ ಕಂಪನಿಯು ವರ್ಕ್‌ ಫ್ರಂ ಹೋಮ್‌ ನಿಯಮವನ್ನು ರದ್ದುಗೊಳಿಸಿದ ಹಿನ್ನೆಲೆ

ವರ್ಕ್ ಫ್ರಂ ಹೋಂ ರದ್ದುಗೊಳಿಸಿದ ಟಾಟಾ ➤ ಮಹಿಳಾ ಉದ್ಯೋಗಿಗಳಿಂದ ಸಾಮೂಹಿಕ ರಾಜೀನಾಮೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಕುಸಿದು ಬಿದ್ದು ಮೆಸ್ಕಾಂ ಪವರ್ ಮ್ಯಾನ್ ಮೃತ್ಯು ➤ ಮೃತರ ಮನೆಗೆ ಭೇಟಿ ನೀಡಿದ ಸಾಂತ್ವನ ಹೇಳಿದ ಶಾಸಕ ಅಶೋಕ್ ರೈ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 13. ಅನಾರೋಗ್ಯದಿಂದಿದ್ದ ಮೆಸ್ಕಾಂ ಪವರ್‌ ಮ್ಯಾನ್ ಓರ್ವರು ಮನೆಯೊಳಗೆ ಕುಸಿದು ಬಿದ್ದು ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಕುರಿಯ ಗ್ರಾಮದ ಇಡಬೆಟ್ಟು ಕುಂಡಕೋರಿ ನಿವಾಸಿ ಕುಂಡಮೇರ ಎಂಬವರ ಪುತ್ರ ಕುಂಬ್ರದಲ್ಲಿ ಮೆಸ್ಕಾಂ ಪವರ್‌ಮ್ಯಾನ್ ಆಗಿ ಕರ್ತವ್ಯದಲ್ಲಿರುವ ಉಮೇಶ್ ಕುಂಡಕೋರಿ (42) ಎಂದು ಗುರುತಿಸಲಾಗಿದೆ. ಇವರು ಕೆಲದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದು ಜೂ. 12ರಂದು ರಾತ್ರಿ ಮನೆಯೊಳಗೆ ಕುಸಿದು ಬಿದ್ದು, ಇವರ ತಲೆಗೆ ಗಂಭೀರ ಗಾಯವಾಗಿತ್ತು.

ಪುತ್ತೂರು: ಕುಸಿದು ಬಿದ್ದು ಮೆಸ್ಕಾಂ ಪವರ್ ಮ್ಯಾನ್ ಮೃತ್ಯು ➤ ಮೃತರ ಮನೆಗೆ ಭೇಟಿ ನೀಡಿದ ಸಾಂತ್ವನ ಹೇಳಿದ ಶಾಸಕ ಅಶೋಕ್ ರೈ..! Read More »

ಕರಾವಳಿ

ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಜೂ. 13. ಕಡಬದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಗಳವಾರದಂದು ಭೇಟಿ ನೀಡಿದರು. ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಆರೋಗ್ಯ ಕೇಂದ್ರದ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಬೇಕಾದ ಸಿಬ್ಬಂದಿಗಳು, ಚಿಕಿತ್ಸೆಗೆ ಬೇಕಾದ ಸಲಕರಣೆಗಳು ಅತೀ ಶೀಘ್ರವಾಗಿ ಒದಗಿಸಿಕೊಡಲು ಪ್ರಯತ್ನ ನಡೆಸಲಾಗುವುದು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ತಾಲೂಕಿನ ಉತ್ತಮ ಆರೋಗ್ಯ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ

ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಕರಾವಳಿ

ಹೆಚ್ಚು ಹಣ ಕೇಳಿದ್ದಕ್ಕೆ ಜಗಳ ➤ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಕೆಲಸ ಮುಗಿಸಿಕೊಂಡು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಬಳಿ ಹೆಚ್ಚಿನ ಹಣ ಕೇಳಿದ ಚಾಲಕನೊಂದಿಗೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅಸ್ಸಾಂ ಮೂಲದ ಅಹ್ಮದ್ (28) ಮತ್ತು ಗಾಯಗೊಂಡಿರುವ ಯುವಕನನ್ನು ಅಯೂಬ್ (26) ಎಂದು ಗುರುತಿಸಲಾಗಿದೆ. ಪ್ರಯಾಣಿಕರು ಮತ್ತು ಚಾಲಕನ ನಡುವೆ ಹಣದ ವಿಷಯಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರು ಪ್ರಯಾಣಿಕರಿಗೆ ಆಟೋ ಚಾಲಕ ಚಾಕುವಿನಿಂದ ಇರಿದಿದ್ದು,

ಹೆಚ್ಚು ಹಣ ಕೇಳಿದ್ದಕ್ಕೆ ಜಗಳ ➤ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗೃಹಕಛೇರಿ ಕೃಷ್ಣಾದಲ್ಲಿ ಸಿಎಂ ಮಹತ್ವದ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಕಛೇರಿ ಕೃಷ್ಣಾದಲ್ಲಿ ರಾ. ಆರೋಗ್ಯ ಅಭಿಯಾನ, ಸುವರ್ಣ ರೋಗ್ಯ ಸುರಕ್ಷಾ ಟ್ರಸ್ಟ್, ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಲಭ್ಯತೆ ಕುರಿತು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು, ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹಮದ್ ಮೊದಲಾದವರು ಉಪಸ್ಥಿತರಿದ್ದರು.

ಗೃಹಕಛೇರಿ ಕೃಷ್ಣಾದಲ್ಲಿ ಸಿಎಂ ಮಹತ್ವದ ಸಭೆ Read More »

ಕರ್ನಾಟಕ

ತಾಮ್ರದ ತಂತಿಪಟ್ಟಿ ಕಳವು ಪ್ರಕರಣ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಇಲ್ಲಿನ ನಗರದ ಫ್ಲ್ಯಾಟ್ ಒಂದರಿಂದ ತಾಮ್ರದ ತಂತಿಪಟ್ಟಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತನನ್ನು ಬಂಟ್ವಾಳ ತಾಲೂಕಿನ ಅಳಿಕೆಯ ಜಯಂತ್  ವರ್ಷ ಎಂದು ಗುರುತಿಸಲಾಗಿದೆ. ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ತಾಮ್ರದ ತಂತಿಪಟ್ಟಿ ಕಳವು ಪ್ರಕರಣ ➤ ಓರ್ವನ ಬಂಧನ Read More »

ಕರಾವಳಿ

ಮಂಗಳೂರು: ಪ್ರತಿಭಟನೆ ಮೊಟಕುಗೊಳಿಸಲು ಅಣಬೆ ಫ್ಯಾಕ್ಟರಿ ಗೆ ಕಲ್ಲು ತೂರಾಟ ನಡೆಸಿ ಗಲಭೆಗೆ ಯತ್ನ- ಆರೋಪ

(ನ್ಯೂಸ್ ಕಡಬ) newskadaba.com ವಾಮಂಜೂರು, ಜೂ. 13. ತಿರುವೈಲು ವಾರ್ಡ್ ನಲ್ಲಿ ಕಾರ್ಯಾಚರಿಸುತ್ತಿರುವ ವೈಟ್‌ ಗ್ರೋ ಎಗ್ರಿ ಎಲ್‌ ಎಲ್‌ ಪಿ ಅಣಬೆ ಉತ್ಪಾದನಾ ಘಟಕವನ್ನು ತೆರವುಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಯ ದಾರಿ ತಪ್ಪಿಸಲು ಗಲಭೆ ನಡೆಸಲು‌ ಮುಂದಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸದಿದ್ದಲ್ಲಿ ವಾಮಂಜೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಹೋರಾಟ‌ ಸಮಿತಿ ಎಚ್ಚರಿಸಿದೆ. ಕಳೆದ ಕೆಲವು ದಿನಗಳಿಂದ ವಾಮಂಜೂರಿನಲ್ಲಿ ಅಣಬೆ ಫ್ಯಾಕ್ಟರಿ ವಿರುದ್ಧ ಶಾಂತಿಯುತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸುವ ಸಲುವಾಗಿ

ಮಂಗಳೂರು: ಪ್ರತಿಭಟನೆ ಮೊಟಕುಗೊಳಿಸಲು ಅಣಬೆ ಫ್ಯಾಕ್ಟರಿ ಗೆ ಕಲ್ಲು ತೂರಾಟ ನಡೆಸಿ ಗಲಭೆಗೆ ಯತ್ನ- ಆರೋಪ Read More »

ಕರಾವಳಿ

ಬಿ.ಐ.ಇ.ಆರ್.ಟಿ. ಹುದ್ದೆಗೆ ಅರ್ಹ ಶಿಕ್ಷಕರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 13. ಸಮನ್ವಯ ಶಿಕ್ಷಣದ ಕಾರ್ಯತಂತ್ರದಡಿ ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಖಾಲಿ ಇರುವ 14 ಬಿ.ಐ.ಇ.ಆರ್.ಟಿ. (ಪ್ರಾಥಮಿಕ) ಹಾಗೂ 1 ಬಿ.ಐ.ಇ.ಆರ್.ಟಿ. (ಮಾಧ್ಯಮಿಕ ಮತ್ತು ಪ್ರೌಢ) ಹುದ್ದೆಗೆ ಅರ್ಹ ವಿಶೇಷ ಶಿಕ್ಷಕರನ್ನು ನೇರ ಗುತ್ತಿಗೆ ಮೂಲಕ ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ. ಖಾಲಿಯಿರುವ 14 ಬಿ.ಐ.ಇ.ಆರ್.ಟಿ. (ಪ್ರಾಥಮಿಕ) ಹುದ್ದೆಗಳು:  ಬಂಟ್ವಾಳ -2, ಬೆಳ್ತಂಗಡಿ– 2, ಮಂಗಳೂರು ಉತ್ತರ-2, ಮಂಗಳೂರು ದಕ್ಷಿಣ-2, ಮೂಡಬಿದ್ರೆ – 2, ಪುತ್ತೂರು – 2 ಮತ್ತು ಸುಳ್ಯ -2

ಬಿ.ಐ.ಇ.ಆರ್.ಟಿ. ಹುದ್ದೆಗೆ ಅರ್ಹ ಶಿಕ್ಷಕರಿಂದ ಅರ್ಜಿ ಆಹ್ವಾನ Read More »

ಕರ್ನಾಟಕ

ಕೊಕ್ಕಡ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು..!

(ನ್ಯೂಸ್ ಕಡಬ) newskadaba.com ಕೊಕ್ಕಡ, ಜೂ. 13. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಪಡೆಯುತ್ತಿರುವಾಗಲೇ ಮೃತಪಟ್ಟ ಘಟನೆ ಕೊಕ್ಕಡದಲ್ಲಿ ಸೋಮವಾರದಂದು ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ಕೊಕ್ಕಡ ಗ್ರಾಮದ ಮೀಯಾಳ ನಿವಾಸಿ ನಾಗೇಶ್ ನಳಿಯಾರ್ – ಹೇಮಾವತಿ ದಂಪತಿಗಳ ಪುತ್ರಿ ಶ್ರಾವ್ಯ (17) ಎಂದು ಗುರುತಿಸಲಾಗಿದೆ. ಶ್ರಾವ್ಯ ಕಳೆದ ಕೆಲವು ದಿನಗಳಿಂದ ಉರಿಮೂತ್ರದ ಸಮಸ್ಯೆಯಿಂದ ಬಳಲುತ್ತಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಹತ್ತು ದಿನಗಳ ಹಿಂದೆ ಆಕೆ ಆರೋಗ್ಯದಲ್ಲಿ ತೀರಾ ಏರುಪೇರು ಉಂಟಾಗಿದ್ದು ಚಿಕಿತ್ಸೆಗಾಗಿ

ಕೊಕ್ಕಡ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top