newskadaba

ಪ್ರಚೋದನಕಾರಿ ಹೇಳಿಕೆ – ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ವಿರುದ್ದ ದೂರು ದಾಖಲು

(ನ್ಯೂಸ್ ಕಡಬ) newskadaba.com ಉಡುಪಿ, ಆ. 04. ಇಲ್ಲಿನ ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಉಡುಪಿಯಲ್ಲಿ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಮಹಿಳಾ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 28ರಂದು ಉಡುಪಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ  ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ಮಾತನಾಡಿದ ವೀಣಾ ಶೆಟ್ಟಿ, ಮುಸ್ಲಿಂ ಹುಡುಗಿಯರನ್ನು ಶಾಲಾ ಕಾಲೇಜಿಗೆ […]

ಪ್ರಚೋದನಕಾರಿ ಹೇಳಿಕೆ – ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ವಿರುದ್ದ ದೂರು ದಾಖಲು Read More »

ಕರಾವಳಿ

ಪ್ರತಿ ಕೆಜಿಗೆ 250ರ ಗಡಿದಾಟಿದ ‘ಕಿಚನ್ ಕ್ವೀನ್’ – ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ

(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 04. ದಿನದಿಂದ ದಿನಕ್ಕೆ ದೇಶದಲ್ಲಿ ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಈಗಾಗಲೇ ಗ್ರಾಹಕರ ಕೈಸುಟ್ಟಿರುವ ಟೊಮ್ಯಾಟೋ ಇದೀಗ ಪ್ರತಿ ಕೆಜಿಗೆ 250 ರುಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆ ಮೊನ್ನೆ ಕೆಜೆಗೆ ಎರಡು ನೂರು ರೂಪಾಯಿ ಇದ್ದ ಟೊಮೇಟೊ ಈಗ 250 ರೂಪಾಯಿ ಆಗಿದ್ದು, ಜನರಿಗೆ ಟೊಮೇಟೊ ಮೇಲಿನ ಆಸೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯಕ್ಕೆ ಟೊಮೆಟೊ ದರ 250 ಕ್ಕೆ ನಿಲ್ಲದೇ 300ರ ಗಡಿ ಕೂಡ ತಲುಪಬಹುದು ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಪ್ರತಿ ಕೆಜಿಗೆ 250ರ ಗಡಿದಾಟಿದ ‘ಕಿಚನ್ ಕ್ವೀನ್’ – ಗ್ರಾಹಕರ ಕೈಸುಡುತ್ತಿರುವ ಟೊಮ್ಯಾಟೊ Read More »

ಕರ್ನಾಟಕ

ಹಳೆ ದ್ವೇಷ- ಟೊಮೆಟೊ ನಾಶ – 15 ಲಕ್ಷಕ್ಕೂ ಅಧಿಕ ನಷ್ಟ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಆ. 04. ಹಳೆಯ ದ್ವೇಷ ಹಾಗೂ ಇನ್ನಿತರ ಕಾರಣಗಳಿಂದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಟೊಮೆಟೊ ಬೆಳೆಯನ್ನು ನಾಶಪಡಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಮಲೆಯೂರು ಸಮೀಪದ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ. ರೈತ ಮಂಜು ಎಂಬವರಿಗೆ ಸೇರಿದ ಅಂದಾಜು 15ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಟೊಮೆಟೊ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಬೇಗೂರು ಪೊಲೀಸರು ಹಾಗೂ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಹಳೆ ದ್ವೇಷ- ಟೊಮೆಟೊ ನಾಶ – 15 ಲಕ್ಷಕ್ಕೂ ಅಧಿಕ ನಷ್ಟ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್‍ ಪಾಸ್ – ಆ.11ರಂದು ಕೊಯಿಲ ಪಂಚಾಯತ್ ಕಚೇರಿಯಲ್ಲಿ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಉಚಿತ ಬಸ್‍ಪಾಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ನಿಗದಿಪಡಿಸಿರುವ ಸ್ಥಳಗಳು: ಆ.9ರಂದು ಬೆಳಿಗ್ಗೆ 10ರಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಡೋ ಸಂತ್ರಸ್ತರ ಪಾಲನಾ ಕೇಂದ್ರ, ಆ.10ರಂದು ಬೆಳಿಗ್ಗೆ 10ರಿಂದ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಆ.11ರಂದು ಬೆಳಿಗ್ಗೆ 10 ಗಂಟೆಯಿಂದ ಪುತ್ತೂರು ತಾಲೂಕಿನ ಕೊಯಿಲ ಪಂಚಾಯತ್ ಕಚೇರಿ, ಆ.12ರಂದು ಬೆಳಿಗ್ಗೆ

ಎಂಡೋಸಲ್ಫಾನ್ ಸಂತ್ರಸ್ತರಿಗೆ ಉಚಿತ ಬಸ್‍ ಪಾಸ್ – ಆ.11ರಂದು ಕೊಯಿಲ ಪಂಚಾಯತ್ ಕಚೇರಿಯಲ್ಲಿ ವಿತರಣೆ Read More »

ಕರಾವಳಿ

ಡ್ರಗ್ಸ್ ದುಷ್ಪರಿಣಾಮಗಳ ರೀಲ್ಸ್, ಕಿರುಚಿತ್ರಗಳ ನಿರ್ಮಾಣಕ್ಕೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ಡ್ರಗ್ಸ್ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾಲೇಜುಗಳಲ್ಲಿನ ಆಸಕ್ತ ವಿದ್ಯಾರ್ಥಿಗಳಿಂದ ರೀಲ್ಸ್ ಹಾಗೂ ಕಿರು ಚಿತ್ರಗಳನ್ನು ತಯಾರಿಸಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಕಾಲೇಜು ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗೆ ಸೂಚನೆ ನೀಡಿದರು. ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರದಮದು ಹಮ್ಮಿಕೊಳ್ಳಲಾಗಿದ್ದ ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್‍ ನ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜುಗಳಲ್ಲಿ ಈಗಾಗಲೇ ಡ್ರಗ್ಸ್ ನಿರ್ಮೂಲನಾ ಸಮಿತಿಯನ್ನು

ಡ್ರಗ್ಸ್ ದುಷ್ಪರಿಣಾಮಗಳ ರೀಲ್ಸ್, ಕಿರುಚಿತ್ರಗಳ ನಿರ್ಮಾಣಕ್ಕೆ ಸೂಚನೆ Read More »

ಕರಾವಳಿ

ಬೇಡಿಕೆ ಈಡೇರಿಸದಿದ್ದರೆ ಸಿಎಂ ಕಾರ್ಯಕ್ರಮದಲ್ಲಿ ಪ್ರತಿಭಟನೆ – ವಿದ್ಯುತ್ ಗುತ್ತಿಗೆದಾರರಿಂದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 04. ಶುಕ್ರವಾರದಂದು ಮಧ್ಯಾಹ್ನ ಎರಡು ಗಂಟೆಯೊಳಗೆ ವಿದ್ಯುತ್‌ ಗುತ್ತಿಗೆದಾರರ ಸಂಘದ ಮನವಿಗಳನ್ನು ಸರಕಾರ ಪೂರೈಸದಿದ್ದಲ್ಲಿ ಆ. 05 ರಂದು ನಡೆಯುವ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ 5,000 ಜನರು ಪ್ರತಿಭಟನೆ ನಡೆಸಲಿದ್ದೇವೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ ಎಚ್ಚರಿಕೆ ನೀಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಜೆಸ್ಕಾಂ ವ್ಯವಸ್ಥಾಪಕರ ಗಮನಕ್ಕೆ ತರಲಾಗಿದೆ. ಆದರೆ, ನಮ್ಮ ಅಹವಾಲುಗಳನ್ನು ಕೇಳದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಜೆಸ್ಕಾಂ ಎಂಡಿಯನ್ನು ವರ್ಗಾವಣೆ ಮಾಡಬೇಕು. ಅಲ್ಲದೇ

ಬೇಡಿಕೆ ಈಡೇರಿಸದಿದ್ದರೆ ಸಿಎಂ ಕಾರ್ಯಕ್ರಮದಲ್ಲಿ ಪ್ರತಿಭಟನೆ – ವಿದ್ಯುತ್ ಗುತ್ತಿಗೆದಾರರಿಂದ ಎಚ್ಚರಿಕೆ Read More »

ಕರ್ನಾಟಕ
Theft, crime, Robbery

ಮೂರು ಅಂಗಡಿಗಳಿಂದ ಕಳ್ಳತನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ. 04. ಮೂರು ಅಂಗಡಿಗೆ ನುಗ್ಗಿದ ಕಳ್ಳನೋರ್ವ, ನಗದು ಹಾಗೂ ಸಾಮಗ್ರಿಗಳನ್ನು ಕಳವುಗೈದಿರುವ ಘಟನೆ ಇಲ್ಲಿನ ತೊಕ್ಕೊಟ್ಟು ಎಂಬಲ್ಲಿ ನಡೆದಿದ್ದು, ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಹರಿಶ್ಚಂದ್ರ ಶೆಟ್ಟಿ ಎಂಬವರಿಗೆ ಸೇರಿದ ಲಕ್ಷ್ಮೀ ಕ್ಯಾಂಟೀನ್, ಹ್ಯಾರೀಸ್ ಎಂಬವರಿಗೆ ಸೇರಿದ ಸ್ಟೀಲ್ ಸಾಮಗ್ರಿಗಳ ಮಾರಾಟ ಮಳಿಗೆ ಹಾಗೂ ಮೋಹನ್ ಎಂಬವರಿಗೆ ಸೇರಿದ ಎಸ್.ಎಸ್ ಕಮ್ಯುನಿಕೇಷನ್ಸ್ ಮೊಬೈಲ್ ಅಂಗಡಿಗಳ ಹೆಂಚು ತೆಗೆದು ಒಳನುಗ್ಗಿದ ಕಳ್ಳ ಕ್ಯಾಷ್ ನಲ್ಲಿದ್ದ ನಗದು ಹಾಗೂ ಕೆಲವು

ಮೂರು ಅಂಗಡಿಗಳಿಂದ ಕಳ್ಳತನ – ದೃಶ್ಯ ಸಿಸಿಟಿವಿಯಲ್ಲಿ ಸೆರೆ Read More »

ಕರಾವಳಿ

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಉಡುಪಿ, ಆ. 04. ಇತ್ತೀಚೆಗೆ ಉಡುಪಿಯ ಖಾಸಗಿ ಕಾಲೇಜಿನಲ್ಲಿ ನಡೆದ ಶೌಚಾಲಯದ ವಿಡಿಯೋ ಪ್ರಕರಣಕ್ಕೆ ಸಂಬಂಧಸಿದಂತೆ ಸಂತ್ರಸ್ತೆ ವಿದ್ಯಾರ್ಥಿನಿ ಗುರುವಾರದಂದು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಹೇಳಿಕೆ ನೀಡಿರುವ ಕುರಿತು ವರದಿಯಾಗಿದೆ. ಜುಲೈ18ರಂದು ಸಂತ್ರಸ್ತೆ ಕಾಲೇಜಿನ ಶೌಚಾಲಯದಲ್ಲಿದ್ದ ವೇಳೆ 3 ಮಂದಿ ಅನ್ಯಕೋಮಿನ ವಿದ್ಯಾರ್ಥಿನಿಯರು ಮೊಬೈಲಿನಲ್ಲಿ ಆಕೆಯ ಚಿತ್ರೀಕರಣ ನಡೆಸಿದ್ದರು. ನಂತರ ಅದು ವಿವಾದಕ್ಕೆ ಕಾರಣವಾಗಿತ್ತು ಎಂದು ಅಂದು ನಡೆದ ಘಟನೆಯ ವಿವರಗಳನ್ನು ಆಕೆ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾಳೆ. ನ್ಯಾಯಾಲಯ ಆಕೆಯ

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ ವಿದ್ಯಾರ್ಥಿನಿ Read More »

ಕರಾವಳಿ

ಬಿಗಿ ಭದ್ರತೆಯೊಂದಿಗೆ ಜ್ಞಾನವ್ಯಾಪಿ ಸರ್ವೇ ಕಾರ್ಯ ಆರಂಭ..!

(ನ್ಯೂಸ್ ಕಡಬ) newskadaba.com ವಾರಣಾಸಿ, ಆ. 04. ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತನ್ನ ಸಮೀಕ್ಷೆಯನ್ನು ಶುಕ್ರವಾರದಂದು ಆರಂಭಿಸಿದೆ. ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಸರ್ವೇ ಕಾರ್ಯ ಆರಂಭಿಸಲಾಗಿದ್ದು, ಮಸೀದಿಗೆ ಭಾರೀ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಶುಕ್ರವಾರದಂದು ಬೆಳಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಂಡವು ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿದ್ದು, ಬಿಗಿ

ಬಿಗಿ ಭದ್ರತೆಯೊಂದಿಗೆ ಜ್ಞಾನವ್ಯಾಪಿ ಸರ್ವೇ ಕಾರ್ಯ ಆರಂಭ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಚಲಿಸುತ್ತಿದ್ದ ರೈಲಿನಡಿಯಲ್ಲಿ ಆಟವಾಡುತ್ತಿದ್ದ ಮಕ್ಕಳು..!

(ನ್ಯೂಸ್ ಕಡಬ) newskadaba.com ರಾಂಚಿ, ಆ. 04. ಚಲಿಸುತ್ತಿರುವ ಗೂಡ್ಸ್‌ ರೈಲಿನಡಿಯಲ್ಲಿ ನಾಲ್ವರು ಮಕ್ಕಳು ಅಡಗಿ, ಆಟ ಆಡುತ್ತಿದ್ದ ಘಟನೆ ಜಾರ್ಖಂಡ್‌ನ‌ ಪಶ್ಚಿಮ ಸಿಂಗ್ಭೂಮ್‌ ಜಿಲ್ಲೆಯಿಂದ ವರದಿಯಾಗಿದೆ. ಸುರಕ್ಷತೆಯನ್ನು ಲೆಕ್ಕಿಸದೇ ಮಕ್ಕಳು ಚಲಿಸುತ್ತಿರುವ ರೈಲಿನಡಿಯಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗೂಡ್ಸ್‌ ರೈಲು ನಿಂತ ವೇಳೆ ತಪಾಸಣೆ ನಡೆಸುತ್ತಿದ್ದ ಕಾರ್ಮಿಕ ಈ ದೃಶ್ಯವನ್ನು ಗಮನಿಸಿದ್ದು, ಈ ಕುರಿತು ಆತ ವಿಡಿಯೋ ಮಾಡಿದ್ದಲ್ಲದೇ ಸಂಬಂಧಪಟ್ಟ ರೈಲು ಮತ್ತು ಗಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.   ಈ

ಚಲಿಸುತ್ತಿದ್ದ ರೈಲಿನಡಿಯಲ್ಲಿ ಆಟವಾಡುತ್ತಿದ್ದ ಮಕ್ಕಳು..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top