newskadaba

ನಿಷೇಧಿತ ಎಂಡಿಎಂಎ ಮಾರಾಟ- ರಿಕ್ಷಾ ಚಾಲಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ 07. ಪೊಲೀಸ್ ಠಾಣಾ ವ್ಯಾಪ್ತಿಯ ಇಲ್ಲಿನ ಕುಂಪಲದ ಭಗಂಬಿಲ ಸ್ಮಶಾನದ ಮೈದಾನದಲ್ಲಿ ಸಾರ್ವಜನಿಕವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ  ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ ಘಟನೆ ನಡೆದಿದೆ.   ಬಂಧಿತ ಆರೋಪಿಯನ್ನು ಶಾಂತಿಬಾಗ್ ನಿವಾಸಿ ಮಹಮ್ಮದ್ ಶರೀಫ್ ಯಾನೆ ಫೈಝಲ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 12 ಗ್ರಾಂ. ಎಂಡಿಎಂಎ ಮಾದಕ ವಸ್ತು ಹಾಗೂ ಎರಡು ಮೊಬೈಲ್ ಫೋನ್ ಸಮೇತ ಮಾದಕ […]

ನಿಷೇಧಿತ ಎಂಡಿಎಂಎ ಮಾರಾಟ- ರಿಕ್ಷಾ ಚಾಲಕ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಬಸ್‌ ಗಳಲ್ಲಿ ಕರ್ಕಶ ಹಾರ್ನ್, ಧ್ವನಿವರ್ಧಕ ಬಳಕೆ ವಿರುದ್ಧ ಕಾರ್ಯಾಚರಣೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.05. ವಾಹನಗಳಿಗೆ ನಿಯಮ ಮೀರಿ ಕರ್ಕಶ ಹಾರ್ನ್ ಅಳವಡಿಸುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆಗೆ ನಡೆಸಿದ್ದು ಒಟ್ಟಾರೆ 24 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2 ಗಂಟೆಗಳ ಕಾಲ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 24 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಕರ್ಕಶ ಹಾರ್ನ್ ಬಳಕೆ ಮತ್ತು ಬಸ್‌ ನೊಳಗೆ ಧ್ವನಿ ವರ್ಧಕಗಳನ್ನು ಬಳಸುವುದರ ವಿರುದ್ಧ ಸಂಚಾರ ವಿಭಾಗದ ಪೊಲೀಸರು ಮಂಗಳೂರು ನಗರ ವ್ಯಾಪ್ತಿಯಲ್ಲಿ ವಿಶೇಷ

ಬಸ್‌ ಗಳಲ್ಲಿ ಕರ್ಕಶ ಹಾರ್ನ್, ಧ್ವನಿವರ್ಧಕ ಬಳಕೆ ವಿರುದ್ಧ ಕಾರ್ಯಾಚರಣೆ..! Read More »

ಕರಾವಳಿ

ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಸಿಹಿ ಸುದ್ದಿ – ಸ್ಪರ್ಧಾ ವಯೋಮಿತಿ 25 ರಿಂದ 18ಕ್ಕೆ ಇಳಿಕೆ

(ನ್ಯೂಸ್ ಕಡಬ) newskadaba.com  ನವದೆಹಲಿ, ಆ. 05. ಇನ್ನುಮುಂದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿಧಿಸಲಾಗಿರುವ ಕನಿಷ್ಠ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದ್ದು, ಇದರಿಂದ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದಂತಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.   ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿಯನ್ನು 25 ರಿಂದ 18ಕ್ಕೆ ಇಳಿಸಲು ಶುಕ್ರವಾರದಂದು ಸಂಸದೀಯ ಸಮಿತಿ ಸಲಹೆ ನೀಡಿದೆ. ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮೊದಲಾದ ದೇಶಗಳಲ್ಲಿ ಪರಿಶೀಲನೆ ನಡೆಸಿದ

ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಸಿಹಿ ಸುದ್ದಿ – ಸ್ಪರ್ಧಾ ವಯೋಮಿತಿ 25 ರಿಂದ 18ಕ್ಕೆ ಇಳಿಕೆ Read More »

ರಾಷ್ಟ್ರೀಯ ನ್ಯೂಸ್

ಗುಂಡಿನ ಕಾಳಗ- ಮೂವರು ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಕುಲ್ಗಾಮ್‌, ಆ. 05. ಜಮ್ಮು ಮತ್ತು ಕಾಶ್ಮೀರ ಕುಲ್ಗಾಮ್‌ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ ಕೌಂಟರ್‌ನಲ್ಲಿ ಮೂವರು ಸೇನಾ ಯೋಧರು ಹುತಾತ್ಮರಾಗಿರುವ ಕುರಿತು ವರದಿಯಾಗಿದೆ. ಭಯೋತ್ಪಾದಕರು ಕುಲ್ಗಾಮ್‌ ನ ಹಾಲನ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ, ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಈ ಗುಂಡಿನ ಕಾಳಗದಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದು, ನಂತರ ಮೃತಪಟ್ಟಿರುವುದಾಗಿ ಸೇನೆ ಹೇಳಿದೆ. ಈ ನಡುವೆ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಶ್ರೀನಗರ ಮೂಲದ

ಗುಂಡಿನ ಕಾಳಗ- ಮೂವರು ಯೋಧರು ಹುತಾತ್ಮ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಪಿವಿ ಸಿಂಧು ಹೊರಕ್ಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 05. ಎರಡು ಬಾರಿ ಒಲಿಂಪಿಕ್ ಪದಕ ವಿಜೇತರಾಗಿರುವ ಪಿ ವಿ ಸಿಂಧು ಅವರು ಆಸ್ಟ್ರೇಲಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ ಬಿಡಬ್ಲ್ಯೂಎಫ್ 500 ಟೂರ್ನಿ ಯಿಂದ ಹೊರ ಬಿದ್ದಿದ್ದಾರೆ. ಸಿಂಧು ಅವರು ಅಮೆರಿಕದ ಆಟಗಾರ ಬೆಯಿವೆನ್ ಜಾಂಗ್ ವಿರುದ್ಧ 21 -12 ಮತ್ತು21-17 ಅಂತರದಿಂದ ಸೋಲು ಕಂಡಿದ್ದಾರೆ. ಇತ್ತೀಚಿನ ಶ್ರೇಯಾಂಕದಲ್ಲಿ 12ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಪಿವಿ ಸಿಂಧು ಹೊರಕ್ಕೆ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ನೆರೆಮನೆಯ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಣ – ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 04. ನೆರೆ‌ ಮನೆಯ ಮಹಿಳೆಯೊಬ್ಬರು ಸ್ನಾನ ಮಾಡುವ ಸಂದರ್ಭ ಅದರ ವಿಡಿಯೋವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಸಂಘಪರಿವಾರದ ಕಾರ್ಯಕರ್ತನೊಬ್ಬನನ್ನು ಸ್ಥಳೀಯರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಕ್ಷಿಕೆರೆ ಹೊಸಕಾಡು ಎಂಬಲ್ಲಿ ಬುಧವಾರ ರಾತ್ರಿ ನಡೆದಿದ್ದು, ಶುಕ್ರವಾರದಂದು ತಡವಾಗಿ ಬೆಳಕಿಗೆ ಬಂದಿದೆ. ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ್ ಪೂಜಾರಿ (22) ಎಂದು ತಿಳಿದು‌ ಬಂದಿದೆ. ಬಂಧಿತ ಆರೋಪಿ ಸುಮಂತ್ ತನ್ನ ನೆರೆಮನೆಯ

ನೆರೆಮನೆಯ ಮಹಿಳೆಯ ಸ್ನಾನದ ವಿಡಿಯೋ ಚಿತ್ರೀಕರಣ – ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ಳಾರೆ ಝಕರಿಯ್ಯ ಜುಮಾ ಮಸೀದಿ ಆಡಳಿತ ಮಂಡಳಿಗೆ ಸೆ. 09ರಂದು ಚುನಾವಣೆ – ನಾಮಪತ್ರ ಸಲ್ಲಿಕೆಗೆ ಆ. 17ರಂದು ಲಾಸ್ಟ್ ಡೇಟ್..!

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 04. ಇಲ್ಲಿನ ಝಕರಿಯ್ಯ ಮಸೀದಿಯ ಆಡಳಿತ ಮಂಡಳಿಯಲ್ಲಿ ವಿವಾದವಿದ್ದ ಕಾರಣ ಸುಮಾರು 3 ವರ್ಷಗಳಿಂದ ಮಸೀದಿಗೆ ಆಡಳಿತಾಧಿಕಾರಿಯ ನೇಮಕ ಮಾಡಲಾಗಿತ್ತು. ಇದೀಗ ವಕ್ಫ್ ಮಂಡಳಿಯು ಮಸೀದಿಯ ಆಡಳಿತ ಮಂಡಳಿ ರಚನೆಗೆ ಚುನಾವಣೆಯನ್ನು ಘೋಷಿಸಿದ್ದು, ಸೆ. 09 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸುವವರು ಆ. 08 ರಿಂದ ಆ.17 ರವರೆಗೆ ಸಾರ್ವತ್ರಿಕ ರಜೆ ಹೊರತುಪಡಿಸಿ ಉಳಿದ ದಿನದಲ್ಲಿ ದ.ಕ.ಜಿಲ್ಲಾ ವಕ್ಫ್ ಕಚೇರಿ ಮಂಗಳೂರು ಇಲ್ಲಿ ನಾಮಪತ್ರ ಸಲ್ಲಿಸಬಹುದು. ನಾಮಪತ್ರ

ಬೆಳ್ಳಾರೆ ಝಕರಿಯ್ಯ ಜುಮಾ ಮಸೀದಿ ಆಡಳಿತ ಮಂಡಳಿಗೆ ಸೆ. 09ರಂದು ಚುನಾವಣೆ – ನಾಮಪತ್ರ ಸಲ್ಲಿಕೆಗೆ ಆ. 17ರಂದು ಲಾಸ್ಟ್ ಡೇಟ್..! Read More »

ಕರಾವಳಿ

ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಪಲ್ಟಿ – 9 ಮಂದಿ ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಬೈಂದೂರು, ಆ. 04. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೃಹತ್ ಅಲೆಗೆ ಸಿಲುಕಿದ ದೋಣಿಯೊಂದು ಪಲ್ಟಿಯಾದ ಘಟನೆ ಕೊಡೇರಿ ಕಡಲ ತೀರದಲ್ಲಿ ಶುಕ್ರವಾರದಂದು ಸಂಭವಿಸಿದೆ. ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಪಾಳ್ಯದರತೋಪ್ಲು ಪುರ್ಶುಯ್ಯನ ಪುಂಡಲೀಕ ಎಂಬವರ ಮಾಲಿಕತ್ವದ ಶ್ರೀ ದುರ್ಗಾಪರಮೇಶ್ವರಿ ದೋಣಿಯಲ್ಲಿ 9 ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದು, ಈ ವೇಳೆ ಕೊಡೇರಿ ಸಮುದ್ರ ತೀರದ ಸುಮಾರು 5 ನಾಟಿಕಲ್ ದೂರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ. ತಕ್ಷಣ ಇತರೆ ದೋಣಿಗಳ ಸಹಾಯದಿಂದ

ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಪಲ್ಟಿ – 9 ಮಂದಿ ಮೀನುಗಾರರ ರಕ್ಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ “ಕಾವ್ಯಶ್ರೀ ಪ್ರಶಸ್ತಿ”

(ನ್ಯೂಸ್ ಕಡಬ) newskadaba.com ಕುಂತೂರು, ಆ. 04. “ಕರ್ನಾಟಕ ರಾಜ್ಯ ಭಾವೈಕ್ಯತ ಪರಿಷತ್” ವತಿಯಿಂದ ಮಂಗಳೂರಿನಲ್ಲಿ ನಡೆದ ರಾಜ್ಯದ ವಿವಿಧ ಭಾಗದ ಕವಿಗಳು ಭಾಗವಹಿಸುವ ರಾಜ್ಯಮಟ್ಟದ ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಶ್ರೀ ಮಂಜುನಾಥ್ ಹುಟ್ಟಗನ್ನ ಹಾಗೂ ಶ್ರೀ ಝುನೈಫ್ ಪಾಲ್ಗೊಂಡು ತಮ್ಮ ಸ್ವ-ರಚಿತ ಕವನ ವಾಚಿಸಿ “ಕಾವ್ಯಶ್ರೀ ಪ್ರಶಸ್ತಿ”ಯನ್ನು ಸ್ವೀಕರಿಸಿದರು.

ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ “ಕಾವ್ಯಶ್ರೀ ಪ್ರಶಸ್ತಿ” Read More »

ಕರಾವಳಿ

ಟ್ರಕ್ ಢಿಕ್ಕಿ- ಯವಕ ಮೃತ್ಯು; ಅಂಗಾಂಗ ದಾನ

(ನ್ಯೂಸ್ ಕಡಬ) newskadaba.com ಕಾಪು, ಆ. 04. ರಸ್ತೆ ದಾಟುವ ಸಂದರ್ಭ ಟ್ರಕ್ ಢಿಕ್ಕಿ ಹೊಡೆದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಾವರ ನಿವಾಸಿ ಪ್ರಶಾಂತ್ (37) ಎಂಬವರ ಮೆದುಳು ನಿಷ್ಕ್ರಿಯಗೊಂಡಿದ್ದು, ಇದರಿಂದ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್, ಬುಧವಾರದಂದು ಕೆಲಸ ಮುಗಿಸಿ ಮನೆಗೆ ತೆರಳಲು ಹೆದ್ದಾರಿ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಮಣಿಪಾಲ ಆಸ್ಪತ್ರೆಗೆ

ಟ್ರಕ್ ಢಿಕ್ಕಿ- ಯವಕ ಮೃತ್ಯು; ಅಂಗಾಂಗ ದಾನ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top