newskadaba

ಬಿಗ್ ಬಾಸ್ ಸೀಸನ್-10 – ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡಲಿದೆ “ಚಾರ್ಲಿ”

(ನ್ಯೂಸ್ ಕಡಬ) newskadaba.com ಬೆಂಗಳೂರು ಸೆ. 24. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ 10 ನೇ ಸೀಸನ್ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗುತ್ತಿದ್ದು, ಈ ಬಾರಿ ಬಿಗ್ ಬಾಸ್ ವಿಶೇಷತೆಯಿಂದ ಕೂಡಿರಲಿದೆ. ಅದೇನೆಂದರೆ ಈ ಬಾರಿ ಬಿಗ್ ಬಾಸ್ 10 ನೇ ಸೀಸನ್ ನಲ್ಲಿ 777 ಚಾರ್ಲಿ ಸಿನಿಮಾ ಖ್ಯಾತಿಯ ‘ಚಾರ್ಲಿ’ ಮೊದಲ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಲಿದೆ. ಹೌದು, ಇದು ಈ ಬಾರಿಯ ವಿಶೇಷತೆ ಎಂದರೆ ತಪ್ಪಾಗಲಾರದು. ಈ ನಾಯಿ ‘ಚಾರ್ಲಿ’ ಸಿನಿಮಾದಲ್ಲಿ […]

ಬಿಗ್ ಬಾಸ್ ಸೀಸನ್-10 – ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡಲಿದೆ “ಚಾರ್ಲಿ” Read More »

ಕರ್ನಾಟಕ

ಕಾವೇರಿ ಕಿಚ್ಚು- ಸೆ. 29ರಂದು ಬೆಂಗಳೂರು ಬಂದ್; ಹೋಟೆಲ್ ಮಾಲೀಕರ ಸಂಘ ಬೆಂಬಲ- ಎಲ್ಲಾ ಹೋಟೆಲ್ ಗಳು ಬಂದ್

(ನ್ಯೂಸ್ ಕಡಬ) newskadba.com ಬೆಂಗಳೂರು, ಸೆ. 24. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮಂಗಳವಾರದಂದು ನಡೆಯುವ ಬೆಂಗಳೂರು ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಅದೇ ರೀತಿ ಹೋಟೆಲ್ ಮಾಲೀಕರ ಸಂಘವೂ ಕೂಡಾ ಬೆಂಗಳೂರು ಬಂದ್ ಗೆ ಬೆಂಬಲ ನೀಡಿವೆ. ಅದೇ ರೀತಿ ಸಾರಿಗೆ ಸಂಘಟನೆಗಳು ಕೂಡಾ ಬೆಂಬಲ ನೀಡಿವೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.ತಮಿಳುನಾಡಿಗೆ

ಕಾವೇರಿ ಕಿಚ್ಚು- ಸೆ. 29ರಂದು ಬೆಂಗಳೂರು ಬಂದ್; ಹೋಟೆಲ್ ಮಾಲೀಕರ ಸಂಘ ಬೆಂಬಲ- ಎಲ್ಲಾ ಹೋಟೆಲ್ ಗಳು ಬಂದ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬಾಲಕನಿಗೆ ಲೈಂಗಿಕ ದೌರ್ಜನ್ಯ – ಮೌಲ್ವಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕುಮಟಾ, ಸೆ. 24. ಧಾರ್ಮಿಕ ಶಿಕ್ಷಣ ಕಲಿಕೆಗೆ ಬರುತಿದ್ಧ ಅಪ್ರಾಪ್ತ ಬಾಲಕನ ಮೇಲೆ ಮೌಲ್ವಿಯೊಬ್ಬ ಮಸೀದಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಪಟ್ಟಣದ ಮಸೀದಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಅಬ್ಬುಲ್ ಸಮದ್ ಜಿಯಾಯಿ (25) ಎಂದು ಗುರುತಿಸಲಾಗಿದೆ. ಈತ ಶನಿವಾರದಂದು ರಾತ್ರಿ ವೇಳೆ ಬಾಲಕನಿಗೆ ಮಸೀದಿಯಲ್ಲಿ ಬಟ್ಟೆಗಳನ್ನು ತೆಗೆಯುವಂತೆ ಹೇಳಿ ಲೈಂಗಿಕ ದೌರ್ಜನ್ಯವೆಸಗಿದ್ದನು. ಈ ಕುರಿತು ಬಾಲಕನ ತಂದೆಯ ದೂರಿನನ್ವಯ ಮೌಲ್ವಿಯನ್ನು ಕುಮಟಾ ಠಾಣಾ ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ

ಬಾಲಕನಿಗೆ ಲೈಂಗಿಕ ದೌರ್ಜನ್ಯ – ಮೌಲ್ವಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 24. ವಿದ್ಯಾರ್ಥಿನಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೂರು ಕರ್ಮಲದಲ್ಲಿ ಭಾನುವಾರದಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಬನ್ನೂರು ಕರ್ಮಲ ಸನ್ನಿಧಿ ಲೇ ಔಟ್ ನಿವಾಸಿ ಕಿಶೋರ್ ಎಂಬವರ ಪುತ್ರಿ ಅಂತಿಮ ಬಿ.ಸಿ.ಎ ವಿದ್ಯಾರ್ಥಿನಿ ಕೀರ್ತಿಕಾ ಎಂದು ಗುರುತಿಸಲಾಗಿದೆ. ಕೀರ್ತಿಕಾ ಮನೆಯೊಳಗೆ ಸೀಲಿಂಗ್ ಫ್ಯಾನ್‌ ಗೆ ಬೆಡ್‌ಶೀಟ್ ಸುತ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಾದಕ ವಸ್ತು ಸೇವನೆ – ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಇಡ್ಕಿದು, ಸೆ. 24. ನಿರ್ಜನ ಪ್ರದೇಶದಲ್ಲಿ ಯುವಕರ ತಂಡವೊಂದು ಗಾಂಜಾ ಮತ್ತು ಮಾದಕ ವಸ್ತು ಸೇವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಕಾದು ಕುಳಿತು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಡ್ಕಿದು ಗ್ರಾಮದ ಮುಂಡ್ರಬೈಲು ಎಂಬಲ್ಲಿ ನಡೆದಿದೆ. ಬಂಧಿತ ಯುವಕರಿಬ್ಬರು ಮಾದಕ ವಸ್ತು ಸೇವಿಸಿ ದಾರಿಯಲ್ಲಿ ಹೋಗುತ್ತಿದ್ದ ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇವರಿಂದ 1 ಬೈಕ್‌ ಹಾಗೂ ಸ್ಕೂಟರ್‌ ನ್ನು ವಶಕ್ಕೆ

ಮಾದಕ ವಸ್ತು ಸೇವನೆ – ಯುವಕರಿಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು Read More »

ಕರಾವಳಿ, ಕ್ರೈಮ್ ನ್ಯೂಸ್

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು; ಸೆ. 26ರಂದು ಬೆಂಗಳೂರಿನಲ್ಲಿ ಸಂದರ್ಶನ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ (NIANP) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬಹುದು. ಆಸಕ್ತರು ಸೆಪ್ಟಂಬರ್ 26 ರೊಳಗೆ ಅರ್ಜಿ ಸಲ್ಲಿಸಬೇಕು. ಅಂದರೆ ಸೆಪ್ಟಂಬರ್ 26ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಸಂದರ್ಶನದಲ್ಲಿ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲೇ ಪೋಸ್ಟಿಂಗ್ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ

ರಾಷ್ಟ್ರೀಯ ಪಶು ಪೋಷಣೆ ಮತ್ತು ಶರೀರ ಕ್ರಿಯಾ ವಿಜ್ಞಾನ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು; ಸೆ. 26ರಂದು ಬೆಂಗಳೂರಿನಲ್ಲಿ ಸಂದರ್ಶನ- ಅರ್ಜಿ ಆಹ್ವಾನ Read More »

ಉದ್ಯೋಗ, ಕರ್ನಾಟಕ

ಹೃದಯಾಘಾತ- ಎಎಸ್ಐ ವಿಧಿವಶ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ. 24. ಹೃದಯಘಾತದಿಂದ ಪೊಲೀಸ್‌ ಅಧಿಕಾರಿಯೋರ್ವರು ಮೃತಪಟ್ಟ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಮೃತ ಅಧಿಕಾರಿಯನ್ನು ಕಳಸ ಠಾಣೆಯ ಎಎಸ್‌ಐ ಜಿ.ಕೆ ಮುರಳೀಧರ್ ಎಂದು ಗುರುತಿಸಲಾಗಿದೆ. ಜಿ.ಕೆ ಮುರಳೀಧರ್ ಅವರು ಕರ್ತವ್ಯ ಮುಗಿಸಿ ಮನೆಯಲ್ಲಿದ್ದು, ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಳಸದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಿ.ಕೆ ಮುರಳೀಧರ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಹೃದಯಾಘಾತ- ಎಎಸ್ಐ ವಿಧಿವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಆನ್ ಲೈನ್ ವಂಚನೆ- ಸುಮಾರು 99 ಲಕ್ಷ ರೂ.ಕಳೆದುಕೊಂಡ ಇಂಜಿನಿಯರ್

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಸೆ. 24. ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಕಳುಹಿಸಿದ ಲಿಂಕ್ ಕ್ಲಿಕ್ ಮಾಡುವ ಮೂಲಕ ಸಾಫ್ಟ್‌ ವೇರ್ ಇಂಜಿನಿಯರ್ ಓರ್ವರು ಬರೋಬ್ಬರಿ 99 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಶಿವಮೊಗ್ಗದಿಂದ ವರದಿಯಾಗಿದೆ. ಶಿವಮೊಗ್ಗದ ಸಾಫ್ಟ್‌ ವೇರ್ ಇಂಜಿನಿಯರ್ ಓರ್ವರಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ ನಲ್ಲಿ ಸ್ವಪ್ನಾ ಎಂಬ ಹೆಸರಿನ ಯುವತಿಯ ಪರಿಚಯವಾಗಿದ್ದು, ಇಬ್ಬರು ವಾಟ್ಸಪ್ ಮೂಲಕ ಚಾಟಿಂಗ್ ಮಾಡಿದ್ದಾರೆ. ಸ್ವಪ್ನಾ ತಾನು ಲಂಡನ್‌ನಲ್ಲಿ ವಾಸವಾಗಿದ್ದು, ತನ್ನ ಚಿಕ್ಕಪ್ಪ ವಾಲ್‌ ಸ್ಟ್ರೀಟ್‌ನಲ್ಲಿ ಮಾರ್ಕೆಟ್

ಆನ್ ಲೈನ್ ವಂಚನೆ- ಸುಮಾರು 99 ಲಕ್ಷ ರೂ.ಕಳೆದುಕೊಂಡ ಇಂಜಿನಿಯರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪದವಿ ಪರೀಕ್ಷೆ ಮುಗಿದ 12 ದಿನದಲ್ಲೇ ಫಲಿತಾಂಶ ಪ್ರಕಟಿಸಿದ ಬೆಂಗಳೂರು ವಿವಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24.  ಪದವಿ ಪರೀಕ್ಷೆ ನಡೆದ 12 ದಿನಗಳಲ್ಲೇ ಫಲಿತಾಂಶ ಪ್ರಕಟಿಸುವ ಮೂಲಕ ಬೆಂಗಳೂರು ವಿಶ್ವವಿದ್ಯಾಲಯವು ಫಲಿತಾಂಶ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ. ಬೆಂಗಳೂರು ವಿವಿಯು 6ನೇ ಸೆಮಿಸ್ಟರ್‌ ಬಿ.ಕಾಂ, ಬಿಬಿಎ ಮತ್ತು ಬಿಸಿಎ ಪದವಿ ಪರೀಕ್ಷೆಯನ್ನು ಸೆ.11 ರಂದು ನಡೆಸಿದ್ದು, ಶನಿವಾರದಂದು ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ಮೂರು ಕೋರ್ಸ್‌ಗಳಿಂದ 72 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 35 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು

ಪದವಿ ಪರೀಕ್ಷೆ ಮುಗಿದ 12 ದಿನದಲ್ಲೇ ಫಲಿತಾಂಶ ಪ್ರಕಟಿಸಿದ ಬೆಂಗಳೂರು ವಿವಿ Read More »

ಕರ್ನಾಟಕ

ಉದ್ಯಮಿಗೆ ವಂಚನೆ ಪ್ರಕರಣ – ಚೈತ್ರಾ ಸೇರಿ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ನಂಬಿಸಿ ಕೋಟ್ಯಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಸೇರಿ 7 ಮಂದಿ ಆರೋಪಿಗಳನ್ನು ಅ. 06ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮೂರನೆ ಎಸಿಎಂಎಂ ನ್ಯಾಯಾಲಯವು ಶನಿವಾರದಂದು ಆದೇಶ ಹೊರಡಿಸಿದೆ. ಚೈತ್ರಾ ಜೊತೆಗೆ ಉಳಿದ ಆರೋಪಿಗಳಾದ ಗಗನ್ ಕಡೂರ್, ಪ್ರಜ್ವಲ್, ರಮೇಶ್, ಚೆನ್ನಾನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್ ಸೇರಿ ಏಳು ಮಂದಿಯನ್ನೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದ್ದು, ಇದರ ಬೆನ್ನಲ್ಲೇ ಚೈತ್ರಾ ಮತ್ತು

ಉದ್ಯಮಿಗೆ ವಂಚನೆ ಪ್ರಕರಣ – ಚೈತ್ರಾ ಸೇರಿ 7 ಆರೋಪಿಗಳಿಗೆ ನ್ಯಾಯಾಂಗ ಬಂಧನ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top