ಬಾಲಕನಿಗೆ ಲೈಂಗಿಕ ದೌರ್ಜನ್ಯ – ಮೌಲ್ವಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕುಮಟಾ, ಸೆ. 24. ಧಾರ್ಮಿಕ ಶಿಕ್ಷಣ ಕಲಿಕೆಗೆ ಬರುತಿದ್ಧ ಅಪ್ರಾಪ್ತ ಬಾಲಕನ ಮೇಲೆ ಮೌಲ್ವಿಯೊಬ್ಬ ಮಸೀದಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಪಟ್ಟಣದ ಮಸೀದಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಅಬ್ಬುಲ್ ಸಮದ್ ಜಿಯಾಯಿ (25) ಎಂದು ಗುರುತಿಸಲಾಗಿದೆ. ಈತ ಶನಿವಾರದಂದು ರಾತ್ರಿ ವೇಳೆ ಬಾಲಕನಿಗೆ ಮಸೀದಿಯಲ್ಲಿ ಬಟ್ಟೆಗಳನ್ನು ತೆಗೆಯುವಂತೆ ಹೇಳಿ ಲೈಂಗಿಕ ದೌರ್ಜನ್ಯವೆಸಗಿದ್ದನು. ಈ ಕುರಿತು ಬಾಲಕನ ತಂದೆಯ ದೂರಿನನ್ವಯ ಮೌಲ್ವಿಯನ್ನು ಕುಮಟಾ ಠಾಣಾ ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿ ತಿಳಿದುಬಂದಿದೆ.

Scroll to Top