newskadaba

ಮಾಜಿ ಸಿಎಂ ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 26. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ (93) ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪಾರ್ಥೀವ ಶರೀರವನ್ನು ಚಿಂಚೋಳಿಗೆ ತೆಗೆದುಕೊಂಡು ಹೋಗಲು ಕುಟಂಬಸ್ಥರು ತೀರ್ಮಾನಿಸಲಾಗಿದ್ದು, ಚಿಂಚೋಳಿಯಲ್ಲಿರುವ ವೀರೇಂದ್ರ ಪಾಟೀಲರ ಸಮಾಧಿ ಪಕ್ಕದಲ್ಲೇ ಶಾರದಾ ಪಾಟೀಲರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನಡೆಯಲಿದೆ ಎಂದು ಕೈಲಾಸನಾಥ ಪಾಟೀಲ ತಿಳಿಸಿದ್ದಾರೆ. ಕರ್ನಾಟಕ ಪ್ರಬಲ ಲಿಂಗಾಯಿತ ಸಮುದಾಯದ ನಾಯಕರಾಗಿದ್ದ ವೀರೇಂದ್ರ ಪಾಟೀಲ್ ಅವರು 1989 […]

ಮಾಜಿ ಸಿಎಂ ವೀರೇಂದ್ರ ಪಾಟೀಲರ ಪತ್ನಿ ಶಾರದಾ ಪಾಟೀಲ ನಿಧನ Read More »

ಕರ್ನಾಟಕ

ಬಾಲಕಿಯ ಅಪಹರಿಸಿ ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್- ಅರೆಸ್ಟ್

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಸೆ. 26. 16 ವರ್ಷದ ಬಾಲಕಿಯನ್ನು ಅಪಹರಿಸಿ ಚಲಿಸುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ಮೂವರು ಕಾಮುಕರನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆರೋಪಿಗಳು ಗೋಶಾಲೆಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದು ನಂತರ ಸಾಮೂಹಿಕ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಸಂತ್ರಸ್ಥೆಗೆ ಮೊದಲು ನೆರೆಮನೆಯಾತ ಅತ್ಯಾಚಾರ ನಡೆಸಿ ನಂತರ ಆತನ ಇಬ್ಬರು ಸಹಚರರು ಆಕೆಯನ್ನು ಅಪಹರಿಸಿ, ಚಲಿಸುವ ವಾಹನದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿ, ನಂತರ

ಬಾಲಕಿಯ ಅಪಹರಿಸಿ ಚಲಿಸುವ ವಾಹನದಲ್ಲಿ ಗ್ಯಾಂಗ್ ರೇಪ್- ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟ- ಜಾನುವಾರ ಸಹಿತ ಪಿಕಪ್ ವಶಕ್ಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಸೆ. 26. ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ಸೆ. 24 ರಂದು ರಾತ್ರಿ ಐವತ್ತೊಕ್ಲು ಗ್ರಾಮದ ಕುಳ್ಳಕೋಡಿ ಎಂಬಲ್ಲಿ ನಡೆದಿದೆ. ಸೆ. 24 ರಂದು ರಾತ್ರಿ ಐವತ್ತೊಕ್ಲು ಗ್ರಾಮದ ಕುಳ್ಳಕೋಡಿ ಎಂಬಲ್ಲಿ 5 ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವು ರಸ್ತೆಯಲ್ಲಿ ಸಿಲುಕಿ ಮುಂದಕ್ಕೆ ಹೋಗದೇ ಬಾಕಿಯಾಗಿತ್ತು ಎನ್ನಲಾಗಿದೆ. ಬಳಿಕ ಪಿಕಪ್ ನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದರು ಎನ್ನಲಾಗಿದೆ. ವಿಷಯ ತಿಳಿದ ಸುಬ್ರಹ್ಮಣ್ಯ ಪೊಲೀಸರು

ಸುಬ್ರಹ್ಮಣ್ಯ: ಅಕ್ರಮ ಜಾನುವಾರು ಸಾಗಾಟ- ಜಾನುವಾರ ಸಹಿತ ಪಿಕಪ್ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

2024ರ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆ..!

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 26. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಮುಂಬರುವ ಜನವರಿಯಲ್ಲಿ ಲೋಕಾರ್ಪಣೆಗೊಳ್ಳುವುದು ಬಹುತೇಕ ಖಚಿತ ಎಂದು ಟ್ರಸ್ಟ್ ಹೇಳಿರುವುದಾಗಿ ವರದಿಯೊಂದು ಪ್ರಕಟಿಸಿದೆ. ಮಂದಿರದ ನೆಲ ಅಂತಸ್ತಿನ ಕಾಮಗಾರಿಯನ್ನು ನವೆಂಬರ್‌ನಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು, ಮೊದಲ ಅಂತಸ್ತಿನ ಶೇ.50ರಷ್ಟು ಪಿಲ್ಲರ್ ಗಳು ಪೂರ್ಣಗೊಂಡಿವೆ. ಡಿಸೆಂಬರ್ ಅಂತ್ಯದೊಳಗೆ ಮೊದಲ ಮಹಡಿಯ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಟ್ರಸ್ಟ್ ಹೊಂದಿದ್ದು, 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿದೆ ಎನ್ನಲಾಗಿದೆ. ರಾಮ ಜನ್ಮಭೂಮಿಯ ಶಂಕುಸ್ಥಾಪನೆ ಸಮಾರಂಭವು

2024ರ ಜನವರಿಯಲ್ಲಿ ರಾಮಮಂದಿರ ಲೋಕಾರ್ಪಣೆ..! Read More »

ರಾಷ್ಟ್ರೀಯ ನ್ಯೂಸ್

ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 26. ಪ್ರಯಾಣಿಕರ ಒತ್ತಡವನ್ನು ಕಡಿಮೆಗೊಳಿಸಲು ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ರೈಲಿಗೆ ತಾತ್ಕಾಲಿಕವಾಗಿ 3 ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು ಒಂದು ಜನರಲ್ ಸೆಕೆಂಡ್ ಕ್ಲಾಸ್ ಸಿಟ್ಟಿಂಗ್ ಕೋಚ್‌ಗಳನ್ನು ಒದಗಿಸಲಾಗುವುದು. 2023ರ ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್‌ನಿಂದ ಹೊರಡುವ ರೈಲು (ನಂಬರ್ 01165) ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ವಿಶೇಷ ರೈಲಿಗೆ 3 ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು ಒಂದು

ಮುಂಬೈ ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ Read More »

ಕರಾವಳಿ, ಕರ್ನಾಟಕ

ಆನ್‌ಲೈನ್ ನಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 25. ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರ ವಾಟ್ಸಪ್‌ಗೆ ಕಂಪೆನಿಯೊಂದರ ಹೆಸರಿನಲ್ಲಿ ಮೆಸೇಜ್ ಬಂದಿದ್ದು, ಅದರಲ್ಲಿ ಪಾರ್ಟ್ ಟೈಮ್ ಟಾಸ್ಕ್‌ ಗಳನ್ನು ಪ್ರತಿದಿನ ಮಾಡಿದರೆ ಶೇ. 30ರಷ್ಟು ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಬಳಿಕ ಟೆಲಿಗ್ರಾಂ ಆಯಪ್‌ನಲ್ಲಿರುವ ವ್ಯಕ್ತಿಯ ಮೂಲಕ ಕಾಶ್ಮೀರ್ 2233 ಎಂಬ ವ್ಯಕ್ತಿಯನ್ನು ಪರಿಚಯಿಸಿ ಮಾರ್ಕೆಟಿಂಗ್ ಕಂಪೆನಿಯ ಗುಂಪಿನಲ್ಲಿ ಸೇರಿಸಿ ಆಮಿಷವೊಡ್ಡಲಾಗಿತ್ತು. ಇದನ್ನು ಇದನ್ನು

ಆನ್‌ಲೈನ್ ನಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ- ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಹೆಬ್ರಿ, ಸೆ. 25. ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೇಳಂಜೆ ಗ್ರಾಮದ ಈಶ್ವರನಗರ ಎಂಬಲ್ಲಿ ನಡೆದಿದೆ. ಮೃತರನ್ನು ವಿಷ್ಣುಮೂರ್ತಿ(48) ಎಂದು ಗುರುತಿಸಲಾಗಿದೆ. ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಇವರು, ಸ್ನಾನ ಮಾಡಲು ಮನೆಯ ಅಂಗಳದಲ್ಲಿನ ಆವರಣವಿಲ್ಲದ ಬಾವಿಯ ಬಳಿ ಹೋಗಿದ್ದರು. ಅಲ್ಲಿ ಪಂಪ್‌ ನಲ್ಲಿ ನೀರು ಬಾರದ ಹಿನ್ನೆಲೆ ಬಾವಿಯೊಳಗೆ ಇದ್ದ ಫುಟ್ ಬಾಲ್ ಎತ್ತಿ ನೋಡಲು ಹೋಗಿದ್ದು, ಈ ವೇಳೆ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ

ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಸೆ. 25. ವ್ಯಕ್ತಿಯೊಬ್ಬರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ನಗರದ ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂದು ಗುರುತಿಸಲಾಗಿದೆ. ಇವರು ಸೆ. 24 ರಂದು ಸಂಜೆ ಮನೆಯಿಂದ ಹೊರಟಿದ್ದು, ಇಂದು ಬೆಳಗ್ಗೆ ರೈಲ್ವೇ ಗೇಟ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರನ್ನು ಉಳ್ಳಾಲದ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ನಡೆದುಕೊಂಡು ಹೋಗಿ

ಮಂಗಳೂರು: ರೈಲಿನಡಿಗೆ ತಲೆಯಿಟ್ಟು ವ್ಯಕ್ತಿ ಆತ್ಮಹತ್ಯೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ʻನಮ್ಮ ಮೆಟ್ರೋ’ದಲ್ಲಿ ಟಿಕೆಟ್‌ ರಹಿತ ಪ್ರಯಾಣ – ಯೂಟ್ಯೂಬರ್ ವಿರುದ್ಧ BMRCL ಕ್ರಮ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 25. ಮೆಟ್ರೋ ನಿಲ್ದಾಣದಲ್ಲಿ ಗೇಟ್ ಜಿಗಿದು ಟಿಕೆಟ್‌ರಹಿತ ಪ್ರಯಾಣ ಮಾಡಿರುವ ವೀಡಿಯೊ ಹಂಚಿಕೊಂಡ ಖ್ಯಾತ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ ಅವರ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ. ಖ್ಯಾತ ಯೂಟ್ಯೂಬರ್ ಫಿಡಿಯಾಸ್ ಪನಾಯೊಟೌ ಎಂಬಾತ ‘ಭಾರತದ ಮೆಟ್ರೋದೊಳಗೆ ನುಗ್ಗುವುದು ಹೇಗೆ’ ಎಂಬ ಶೀರ್ಷಿಕೆಯ ವಿಡಿಯೋವನ್ನು ತಮ್ಮ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು

ʻನಮ್ಮ ಮೆಟ್ರೋ’ದಲ್ಲಿ ಟಿಕೆಟ್‌ ರಹಿತ ಪ್ರಯಾಣ – ಯೂಟ್ಯೂಬರ್ ವಿರುದ್ಧ BMRCL ಕ್ರಮ Read More »

ಕರ್ನಾಟಕ

ಬೆಂಗಳೂರು ಬಂದ್‌ ಗೆ ಬೆಂಬಲವಿಲ್ಲ, ಸೆ. 29ಕ್ಕೆ ‘ಕರ್ನಾಟಕ ಬಂದ್ʼ – ವಾಟಾಳ್ ನಾಗರಾಜ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.25. ಸೆಪ್ಟೆಂಬರ್ 29ರಂದು ʼಅಖಂಡ ಕರ್ನಾಟಕ ಬಂದ್ʼ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ. ಈ ಕುರಿತು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕನ್ನಡ ಒಕ್ಕೂಟ ಸಂಘಟನೆಗಳು ಕರ್ನಾಟಕ ಬಂದ್ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡಿತು. “ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಚಾಲಕರು ಎರಡು ದಿನ ಬಂದ್ ಮಾಡುವ ಪರಿಸ್ಥಿತಿಯಲ್ಲಿಲ್ಲ. ಎರಡು ದಿನ ದುಡಿಮೆ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕೂಗು ನಮ್ಮ ಸಂಘಟನೆಗಳ ಚಾಲಕರಿಂದ ಕೇಳಿಬರುತ್ತಿವೆ. ಹಾಗಾಗಿ

ಬೆಂಗಳೂರು ಬಂದ್‌ ಗೆ ಬೆಂಬಲವಿಲ್ಲ, ಸೆ. 29ಕ್ಕೆ ‘ಕರ್ನಾಟಕ ಬಂದ್ʼ – ವಾಟಾಳ್ ನಾಗರಾಜ್ Read More »

ಕರ್ನಾಟಕ
Scroll to Top