ಆನ್‌ಲೈನ್ ನಲ್ಲಿ ಹಣ ಹೂಡಿಕೆ ಮಾಡಿಸಿ ವಂಚನೆ- ಪ್ರಕರಣ ದಾಖಲು



(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 25. ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿಸಿ ಬಳಿಕ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







ದೂರುದಾರರ ವಾಟ್ಸಪ್‌ಗೆ ಕಂಪೆನಿಯೊಂದರ ಹೆಸರಿನಲ್ಲಿ ಮೆಸೇಜ್ ಬಂದಿದ್ದು, ಅದರಲ್ಲಿ ಪಾರ್ಟ್ ಟೈಮ್ ಟಾಸ್ಕ್‌ ಗಳನ್ನು ಪ್ರತಿದಿನ ಮಾಡಿದರೆ ಶೇ. 30ರಷ್ಟು ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಬಳಿಕ ಟೆಲಿಗ್ರಾಂ ಆಯಪ್‌ನಲ್ಲಿರುವ ವ್ಯಕ್ತಿಯ ಮೂಲಕ ಕಾಶ್ಮೀರ್ 2233 ಎಂಬ ವ್ಯಕ್ತಿಯನ್ನು ಪರಿಚಯಿಸಿ ಮಾರ್ಕೆಟಿಂಗ್ ಕಂಪೆನಿಯ ಗುಂಪಿನಲ್ಲಿ ಸೇರಿಸಿ ಆಮಿಷವೊಡ್ಡಲಾಗಿತ್ತು. ಇದನ್ನು ಇದನ್ನು ನಂಬಿದ ದೂರುದಾರ ಹಂತ ಹಂತವಾಗಿ 10,52,000 ರೂ. ಹಣ ಹೂಡಿಕೆ ಮಾಡಿರುವುದಾಗಿಯೂ ಹಣವನ್ನು ನನಗೆ ವಾಪಸ್ ನೀಡದೆ ವಂಚಿಸಲಾಗಿದೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಲಾಗಿದೆ.






error: Content is protected !!
Scroll to Top