newskadaba

ಕುಸಿದು ಬಿದ್ದು ಯುವ ಟೆನ್ನಿಸ್ ಆಟಗಾರ್ತಿ ಮೃತ್ಯು.!

(ನ್ಯೂಸ್ ಕಡಬ) newskadaba.com ಇಸ್ಲಾಮಾಬಾದ್, ಫೆ. 15. ಐಟಿಎಫ್ ಜೂನಿಯರ್ ಪಂದ್ಯಾವಳಿಯ ಅಭ್ಯಾಸದ ವೇಳೆ ಹೃದಯಾಘಾತ ಸಂಭವಿಸಿ ಪಾಕಿಸ್ತಾನದ ಯುವ ಟೆನಿಸ್ ಆಟಗಾರ್ತಿ ಝೈನಾಬ್ ಅಲಿ ನಖ್ವಿ ಅವರು ಮೃತಪಟ್ಟಿರುವ ಕುರಿತು ವರದಿಯಾಗಿದೆ. ಝೈನಬ್ ಅವರು ಮುಂಬರುವ ಐಟಿಎಫ್ ಜೂನಿಯ ರ್ಟೂರ್ನಿಯಲ್ಲಿ ಆಡಲೆಂದು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ತಮ್ಮ ಕೋಣೆಯಲ್ಲಿದ್ದ ಅವರು ಹಠಾತ್ ಕುಸಿದುಬಿದ್ದಿದ್ದು, ಪ್ರಜ್ಞಾಹೀನರಾದ ಝೈನಾಬ್ ಅವರನ್ನು ತಕ್ಷಣ ಆಸ್ಪತ್ರೆ ಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.

ಕುಸಿದು ಬಿದ್ದು ಯುವ ಟೆನ್ನಿಸ್ ಆಟಗಾರ್ತಿ ಮೃತ್ಯು.! Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಪೈಶಾಚಿಕ ಕೃತ್ಯ- 2 ವರ್ಷದ ಮಗುವಿನ ಮೇಲೆ ಅತ್ಯಾಚಾರ..!

(ನ್ಯೂಸ್ ಕಡಬ) newskadaba.com ಕೊಡಗು, ಫೆ. 15. 2 ವರ್ಷದ ಮಗುವಿನ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಬೀಭತ್ಸ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಎಸ್ಟೇಟ್ ನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಕಾಮುಕ ಮಣಿ ಎಂಬಾತ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸದ್ಯ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಪೈಶಾಚಿಕ ಕೃತ್ಯ- 2 ವರ್ಷದ ಮಗುವಿನ ಮೇಲೆ ಅತ್ಯಾಚಾರ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ

(ನ್ಯೂಸ್ ಕಡಬ) newskadaba.com ಅರಂತೋಡು, ಫೆ. 15. ಸಂವಿಧಾನ ಪೀಠಿಕೆಯ ಆಶಯ ಮತ್ತು ಮೌಲ್ಯಗಳನ್ನು ಸ್ತಬ್ದ ಚಿತ್ರದ ಮೂಲಕ ಜನರಿಗೆ ತಿಳಿಸಲು ಸಂವಿಧಾನ ಜಾಥಾವು ಫೆ. 17 ರಂದು ಅಪರಾಹ್ನ 3 ಗಂಟೆಗೆ ಆಗಮಿಸುವ ಸಂದರ್ಭದಲ್ಲಿ ಜಾಥಾವನ್ನು ಅದ್ಧೂರಿಯಾಗಿ ಸ್ವಾಗತಿಸುವ ಸಲುವಾಗಿ ರೂಪು ರೇಶೆಗಳ ಬಗ್ಗೆ ಚರ್ಚಿಸಲು ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ಪೂರ್ವಭಾವಿ ಸಭೆಯು ಬುಧವಾರದಂದು ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್

ಅರಂತೋಡು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ Read More »

ಕರಾವಳಿ

HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 14. ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ (ಹೆಚ್​​​ಎಸ್​ಆರ್​ಪಿ) ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅವರು, HSRP ನಂಬರ್​ ಪ್ಲೇಟ್​​ ಅಳವಡಿಸಲು ಫೆ 17ರ ವರೆಗೆ ನೀಡಿದ್ದ ಗಡುವನ್ನು ಮೂರು ತಿಂಗಳುಗಳ ವಿಸ್ತರಿಸಲಾಗುತ್ತದೆ. ಫೇಕ್​ ವೆಬ್ ಸೈಟ್ ಬಗ್ಗೆ ಎಚ್ಚರ ವಹಿಸಲಾಗುತ್ತದೆ. ಈ ಯೋಜನೆ ಪಾರದರ್ಶಕವಾಗಿದೆ ಎಂದು ತಿಳಿಸಿದ್ದಾರೆ.

HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆ Read More »

ಕರ್ನಾಟಕ

ಚಿರತೆ ಕೊಂದು ಮರಕ್ಕೆ ನೇತುಹಾಕಿದ ಗ್ರಾಮಸ್ಥರು..!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಫೆ. 14. ಚಿರತೆಯೊಂದನ್ನು ಕೊಂದು ಹಗ್ಗದಿಂದ ಕಟ್ಟಿ ಮರದಲ್ಲಿ ನೇತುಹಾಕಿರುವ ವಿಲಕ್ಷಣ ಘಟನೆ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯ ಕುರಿತು ಗ್ರಾಮಸ್ಥರಿಂದ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟ ನೀಡಿ ಚಿರತೆಯ ಶವವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಅಗತ್ಯವಿರುವ ದಾಖಲೆಗಳನ್ನು ಸಂಗ್ರಹಿಸಿ, ಚಿರತೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ವರದಿ ತಿಳಿಸಿದೆ.

ಚಿರತೆ ಕೊಂದು ಮರಕ್ಕೆ ನೇತುಹಾಕಿದ ಗ್ರಾಮಸ್ಥರು..! Read More »

ರಾಷ್ಟ್ರೀಯ ನ್ಯೂಸ್

ಫೆ. 25ರಂದು 1137 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. 2022-23ನೇ ಸಾಲಿನ ಪೊಲೀಸ್ ಕಾನ್ಸ್‍ಟೇಬಲ್, ಸಿವಿಲ್, ಪುರುಷ ಮತ್ತು ಮಹಿಳಾ ಹಾಗೂ ಸೇವಾನಿರತ ಮತ್ತು ಬ್ಯಾಕ್‍ ಲಾಕ್ 1137 ಹುದ್ದೆಗಳ ನೇಮಕಾತಿಗಾಗಿ ಫೆಬ್ರವರಿ 25ರಂದು ಬೆಳಿಗ್ಗೆ 11 ಗಂಟೆಯಿಂದ 12.30ರ ವರೆಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಕರೆ ಪತ್ರದ ಬಗ್ಗೆ ಎಸ್‍ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ ಹಾಗೂ ಕರೆ ಪತ್ರದ ಲಿಂಕ್ ಅನ್ನು ಸಹ ಕಳುಹಿಸಲಾಗುತ್ತದೆ. ಅಭ್ಯರ್ಥಿಗಳು ಕರೆ ಪತ್ರವನ್ನು ಡೌನ್ ಲೋಡ್

ಫೆ. 25ರಂದು 1137 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ Read More »

ಕರಾವಳಿ

ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಶೀಘ್ರವೇ ಬಗೆಹರಿಸಿ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ಕಾರ್ಡ್‍ಗಳಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ತಿಳಿಸಿದರು. ಅವರು ಮಂಗಳವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಂಗವಿಕಲರ ಕುಂದು ಕೊರತೆಗಳ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡ್‍ಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗೆ ಕಾರಣಗಳನ್ನು ಹುಡುಕಿ ಆದಷ್ಟು ಬೇಗ ವಿಕಲಚೇತನರ ವಿಶಿಷ್ಟ ಗುರುತಿನ ಕಾರ್ಡ್

ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ಸಮಸ್ಯೆ ಶೀಘ್ರವೇ ಬಗೆಹರಿಸಿ- ಜಿಲ್ಲಾಧಿಕಾರಿ Read More »

ಕರಾವಳಿ

ಫೆ. 26 ಹಾಗೂ 27ರಂದು ಬೃಹತ್ ಉದ್ಯೋಗ ಮೇಳ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳ ಫೆ. 26 ಹಾಗೂ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಬೃಹತ್ ಉದ್ಯೋಗ ಮೇಳಕ್ಕೆ ರಾಜ್ಯದ ಎಲ್ಲಾ ವಲಯಗಳಿಂದ 500ಕ್ಕೂ ಹೆಚ್ಚಿನ ಪ್ರತಿಷ್ಠಿತ ಬೃಹತ್/ಮಧ್ಯಮ/ಸಣ್ಣ ಉದ್ಯೋಗದಾತರ ಸಂಸ್ಥೆಗಳು ಭಾಗವಹಿಸಲಿದೆ. ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ನರ್ಸಿಂಗ್, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಮತ್ತು ಇತರೆ ವಿದ್ಯಾರ್ಹತೆಯುಳ್ಳ

ಫೆ. 26 ಹಾಗೂ 27ರಂದು ಬೃಹತ್ ಉದ್ಯೋಗ ಮೇಳ Read More »

ಕರಾವಳಿ

ಕಡಬ: ಹೊಯಿಗೆಕೆರೆಯಲ್ಲಿ ಮೊಸಳೆ ಪತ್ತೆ..!

(ನ್ಯೂಸ್ ಕಡಬ) newskadaba.com ಕಡಬ, ಫೆ. 13. ಇಲ್ಲಿನ ಸಮೀಪದ ಅಡ್ಡಗದ್ದೆ ಎಂಬಲ್ಲಿನ ಹೊಯಿಗೆಕೆರೆಯಲ್ಲಿ ಮೊಸಳೆ ಇರುವುದು ಕಂಡುಬಂದಿದೆ. ಫೆ. 12ರಂದು ಸ್ಥಳೀಯ ಯುವತಿಯೋರ್ವಳು ಕೆರೆಯ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೇಳೆ ಮೊಸಳೆ ಕಂಡುಬಂದಿದೆ ಎನ್ನಲಾಗಿದೆ. ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿರುವ ಸಮಯದಲ್ಲಿ ಮೊಸಳೆಗಳು ಕಾಣಸಿಗುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಡಬ: ಹೊಯಿಗೆಕೆರೆಯಲ್ಲಿ ಮೊಸಳೆ ಪತ್ತೆ..! Read More »

ಕರಾವಳಿ

ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ – ಕೆಲಕಾಲ ಸಂಚಾರ ವ್ಯತ್ಯಯ

(ನ್ಯೂಸ್ ಕಡಬ) newskadaba.com, ಪುತ್ತೂರು, ಫೆ. 13. ರೋಡ್ ರೋಲರ್ ವಾಹನವನ್ನು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಯೊಂದು ರೈಲ್ವೇ ಓವರ್ ಬ್ರಿಡ್ಜ್ ನ ಅಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆಯಾದ ಘಟನೆ ಬಿಸಿರೋಡಿನ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿ ನಡೆದಿದೆ. ಖಾಸಗಿ ಗುತ್ತಿಗೆ ಸಂಸ್ಥೆಗೆ ಸೇರಿದ ಲಾರಿ ಇದಾಗಿದ್ದು, ಬೆಂಜನಪದವು ಸೈಟ್ ನಿಂದ ಸವಣೂರಿನಲ್ಲಿ ನಡೆಯಲಿರುವ ಕಾಮಗಾರಿಗೆ ರೋಲರ್ ನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೋಗಲಾಗಿತ್ತು. ಈ ವೇಳೆ ಮೊಡಂಕಾಪು ಎಂಬಲ್ಲಿ ರೈಲ್ವೇ ಸೇತುವೆಯ ಅಡಿಭಾಗದಲ್ಲಿ ಕ್ರಾಸ್ ಮಾಡಲು

ರೋಲರ್ ಸಾಗಾಟದ ಲಾರಿ ಓವರ್ ಬ್ರಿಡ್ಜ್ ಗೆ ಢಿಕ್ಕಿ – ಕೆಲಕಾಲ ಸಂಚಾರ ವ್ಯತ್ಯಯ Read More »

ಕರಾವಳಿ
Scroll to Top