newskadaba

ಕೊರಗರ ಕಲ್ಯಾಣ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಜಿ.ಪಂ ಸಿಇಓ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಪರಿಶಿಷ್ಟ ಪಂಗಡದ ಸಮುದಾಯಗಳ ಕಲ್ಯಾಣ ಸಮುದಾಯಗಳ ಮೆಗಾ ಇವೆಂಟ್  ಕಾರ್ಯಕ್ರಮವನ್ನು ಸೆಪ್ಟೆಂಬರ್ ಮೊದಲನೇ ವಾರದಲ್ಲಿ  ಆಯೋಜಿಸಬೇಕು. ಮೆಗಾ ಇವೆಂಟ್ ಕಾರ್ಯಕ್ರಮದಲ್ಲಿ  ಕೊರಗ ಸಮುದಾಯಕ್ಕೆ ಉಪಯೋಗವಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್ ಕೆ ಹೇಳಿದರು. ಅವರು ಶುಕ್ರವಾರದಂದು ಈ ಸಂಬಂಧ ಜಿಲ್ಲಾ ಮಟ್ಟದಲ್ಲಿ ಅಗತ್ಯ ಪೂರ್ವ ಸಿದ್ಧತೆ ಮತ್ತು ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಜಿಲ್ಲಾ ಪಂಚಾಯತ್‍ನಲ್ಲಿ ನಡೆದ […]

ಕೊರಗರ ಕಲ್ಯಾಣ ಕಾರ್ಯಕ್ರಮಗಳನ್ನು ತೀವ್ರಗೊಳಿಸಲು ಜಿ.ಪಂ ಸಿಇಓ ಸೂಚನೆ Read More »

ಕರಾವಳಿ, ಕರ್ನಾಟಕ

ಆ. 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆ. 26 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಹಂಪಕಟ್ಟೆ ನಂದಿನಿ ಸಭಾಭವನ ಸರಕಾರಿ ನೌಕರರ ಸಂಘದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ ಹಮ್ಮಿಕೊಳ್ಳಲಾಗಿದೆ. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರ ಘನ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ದಕ್ಷಿಣ

ಆ. 26 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ Read More »

ಕರಾವಳಿ, ಕರ್ನಾಟಕ

ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 24. 2024-25ನೇ ಸಾಲಿಗೆ Cerebral Palsy, Muscular Dystrophy, Parkinsons & Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ. 1,000 ಪ್ರೋತ್ಸಾಹ ಧನ ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ವಿಶಿಷ್ಟ ಗುರುತಿನ ಚೀಟಿ ಕಡ್ಡಾಯ (UDID), ವಿಕಲತೆಯ ಪ್ರಮಾಣ ಶೇ.75% ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು, ವಯಸ್ಸಿನ ಮಿತಿ ಇರುವುದಿಲ್ಲ, ವಿಕಲಚೇತನರ ಹಾಗೂ ಆರೈಕೆದಾರರ ಆಧಾರ್ ಕಾರ್ಡ್, ಜಂಟಿ ಭಾವಚಿತ್ರ ಹಾಗೂ

ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಬೆಂಕಿ ಆಕಸ್ಮಿಕ- ಫ್ಯಾನ್ಸಿ ಸ್ಟೋರ್ ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 23. ಪ್ರತಿಮಾ ಎಂಬವರಿಗೆ ಸೇರಿದ ಫ್ಯಾನ್ಸಿ ಸ್ಟೋರೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಅಂಗಡಿಯಲ್ಲಿನ ವಸ್ತುಗಳು ಸುಟ್ಟು ಕರಕಲಾದ ಘಟನೆ ಬೈಂದೂರು ತಾಲೂಕಿನ ನಾವುಂದ ಜಂಕ್ಷನ್ ನಲ್ಲಿ ಶುಕ್ರವಾರದಂದು ನಡೆದಿದೆ. ಪ್ರತಿಮಾರವರು ಟೈಲರಿಂಗ್ ಜೊತೆಯಲ್ಲಿ ಬಟ್ಟೆ ಹಾಗೂ ಸ್ಟೇಶನರಿಯೊಂದಿಗೆ ಅಂಗಡಿ ನಡೆಸಿಕೊಂಡಿದ್ದರು. ಅಂಗಡಿಯಲ್ಲಿ ಹೊಲಿಗೆ ಯಂತ್ರ, ಫ್ರಿಡ್ಜ್, ಬಟ್ಟೆ, ಪುಸ್ತಕಗಳು, ಸ್ಟೇಶನರಿ ವಸ್ತುಗಳು, ಕಪಾಟು, ಫ್ಯಾನ್ಸಿ ವಸ್ತುಗಳು ಸಹಿತ ಸುಮಾರು 5‌ ಸಾವಿರ ರೂ. ನಗದು ಬೆಂಕಿಗಾಹುತಿಯಾಗಿದೆ. ಅಂಗಡಿ ಮಾಲಕಿ

ಬೆಂಕಿ ಆಕಸ್ಮಿಕ- ಫ್ಯಾನ್ಸಿ ಸ್ಟೋರ್ ಸಂಪೂರ್ಣ ಭಸ್ಮ Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತ- ಮಲಯಾಳಂ ಕಲಾವಿದ ನಿರ್ಮಲ್ ಬೆನ್ನಿ ನಿಧನ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 23. ಮಲಯಾಳಂನಲ್ಲಿ ಸುಮಾರು 12 ವರ್ಷಗಳ ಕಾಲ ಕಲಾವಿದರಾಗಿ ನಟಿಸಿರುವ ನಿರ್ಮಲ್ ಬೆನ್ನಿ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಅನೇಕರು ಸಂತಾಪ ಸೂಚಿಸಿದ್ದಾರೆ.   2012ರಲ್ಲಿ ನಿರ್ಮಲ್ ಚಿತ್ರರಂಗಕ್ಕೆ ಕಾಲಿಟ್ಟರು. ‘ಅಮೆನ್’ ಸಿನಿಮಾದಲ್ಲಿ ಕೊಚ್ಚನ್ ಹೆಸರಿನ ಪಾತ್ರಕ್ಕೆ ನಿರ್ಮಲ್ ಹೆಸರುವಾಸಿ. ನಿರ್ಮಲ್ ಕಲಾವಿದನಾಗಿ ನಟಿಸಿದ್ದಕ್ಕಿಂತ ಹೆಚ್ಚು ಯೂಟ್ಯೂಬ್ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದರು. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ನಿರ್ಮಾಪಕ ಸಂಜಯ್ ಪಡಿಯೂರ್ ಸೋಶಿಯಲ್ ಮೀಡಿಯಾದಲ್ಲಿ

ಹೃದಯಾಘಾತ- ಮಲಯಾಳಂ ಕಲಾವಿದ ನಿರ್ಮಲ್ ಬೆನ್ನಿ ನಿಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆರ್.ಜಿಕರ್ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್ – ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಆ. 23. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂಜಯ್ ರಾಯ್‌ನನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಸಂಜಯ್‌ನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಸೀಲ್ದಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯಕ್ಕೆ ಕರೆತರಲಾಗಿದ್ದು, ಆರೋಪಿ ಸಂಜಯ್ ರಾಯ್ ನ ಸಿಬಿಐ ಕಸ್ಟಡಿ ಇಂದು ಅಂತ್ಯಗೊಂಡ ಬೆನ್ನಲ್ಲೇ ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಆರ್.ಜಿಕರ್ ವೈದ್ಯೆಯ ಅತ್ಯಾಚಾರ, ಕೊಲೆ ಕೇಸ್ – ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಡ್ಡೂರು ಪ್ರದೇಶವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿರುವ ಭರತ್ ಶೆಟ್ಟಿಯವರ ನಡೆ ಖಂಡನೀಯ- ಎಸ್ಡಿಪಿಐ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಡ್ಡೂರು ಎಂಬ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಕಾರಣಕ್ಕೆ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಡಾ.ಭರತ್ ಶೆಟ್ಟಿ ಆ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವುದು ಖಂಡನೀಯ. ಭಾರತದ ಸಾರ್ವಭೌಮತ್ವಕ್ಕೆ ಒಳಪಟ್ಟ ಪ್ರದೇಶ ಅಥವಾ ಜನರನ್ನು ಶತ್ರು ರಾಷ್ಟ್ರಗಳೊಂದಿಗೆ ತುಲನೆ ಮಾಡಿ ನಿಂದಿಸಿ ಹೇಳಿಕೆ ನೀಡಿರುವ ಭರತ್ ಶೆಟ್ಟಿಯವರು ಕೂಡಲೇ ಕ್ಷೇತ್ರದ ಜನರೊಂದಿಗೆ ಕ್ಷಮೆ ಯಾಚಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ

ಅಡ್ಡೂರು ಪ್ರದೇಶವನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿರುವ ಭರತ್ ಶೆಟ್ಟಿಯವರ ನಡೆ ಖಂಡನೀಯ- ಎಸ್ಡಿಪಿಐ Read More »

ಕರಾವಳಿ, ಕರ್ನಾಟಕ

ಐವನ್ ಓರ್ವ ಭಯೋತ್ಪಾದಕ, ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ತಿರುಗೇಟು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23.  ಐವನ್‌ ಡಿಸೋಜಾ ಒಬ್ಬ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್‌ ಹಾಕಲಿ ನೋಡೋಣ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಸವಾಲನ್ನು ಹಾಕಿರುವುದಾಗಿ ವರದಿಯಾಗಿದೆ.   ಕಾಂಗ್ರೆಸ್‌ನ ತಪ್ಪನ್ನು ಎತ್ತಿ ತೋರಿಸಿದವರಿಗೆ ರೌಡಿಶೀಟರ್‌ ತೆರೆಯೋದು ಇವರ ಕೆಲಸ. ಇಂತಹ ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತಿದರೆ ರೌಡಿಶೀಟರ್‌ ಕೇಸು ಹಾಕುವುದು ನಿಮ್ಮ ಡಿಎನ್‌ಎಯಲ್ಲೇ ಇದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಮಾಹಿತಿಯನ್ನು ನೀಡಿರುವ ಕುರಿತು ವರದಿಯಾಗಿದೆ. ರಾಜ್ಯಪಾಲರ ವಿರುದ್ಧ ಮಾತನಾಡಿದ,

ಐವನ್ ಓರ್ವ ಭಯೋತ್ಪಾದಕ, ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ತಿರುಗೇಟು Read More »

ಕರಾವಳಿ, ಕರ್ನಾಟಕ

ರಾತ್ರಿ ವೇಳೆ 1091 ಕ್ಕೆ ಕರೆ ಮಾಡಿದರೆ ಉಚಿತ ಡ್ರಾಪ್- ಸುದ್ದಿ ವೈರಲ್ ; ಪೊಲೀಸ್ ಇಲಾಖೆ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾತ್ರಿ ವೇಳೆ ಒಬ್ಬಂಟಿಯಾಗಿ ಓಡಾಡುವ ಮಹಿಳೆಯರು 1091 ಗೆ ಕರೆ ಮಾಡಿದರೆ, ಪೊಲೀಸರು ಕರೆದೊಯ್ದು ಮನೆಗೆ ಡ್ರಾಪ್‌ ನೀಡುತ್ತಾರೆ ಎಂಬ ಸುದ್ದಿಯನ್ನು ಇತ್ತೀಚೆಗೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಪೊಲೀಸರು ಇದೊಂದು ಸುಳ್ಳು ಸಂದೇಶ ಎಂದು ಸ್ಪಷ್ಟಪಡಿಸಿದ್ದಾರೆ.   ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆ ಅವಧಿಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಯಾವುದಾದರೂ ವಾಹನ ದೊರೆಯದೇ ಇದ್ದ ಸಂದರ್ಭ ಸಹಾಯವಾಣಿ

ರಾತ್ರಿ ವೇಳೆ 1091 ಕ್ಕೆ ಕರೆ ಮಾಡಿದರೆ ಉಚಿತ ಡ್ರಾಪ್- ಸುದ್ದಿ ವೈರಲ್ ; ಪೊಲೀಸ್ ಇಲಾಖೆ ಸ್ಪಷ್ಟನೆ Read More »

ಕರ್ನಾಟಕ

ರಾಜ್ಯಪಾಲರಿಂದ ಸರ್ಕಾರದ 6 ಮಸೂದೆ ರಿಜೆಕ್ಟ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 23. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದ ಪರಿಣಾಮವೋ ಎಂಬಂತೆ ರಾಜ್ಯಪಾಲರು ಆಗಸ್ಟ್ ಮಾಸದಲ್ಲಿ ಆರು ಪ್ರಮುಖ ವಿಧೇಯಕಗಳನ್ನು ಹೆಚ್ಚಿನ ಮಾಹಿತಿ ಕೋರಿ ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಿದ್ದಾರೆ. ಈ  ಮೂಲಕ ಕಳೆದ ಜನವರಿಯಿಂದ ಇದುವರೆಗೂ ಒಟ್ಟು 11 ವಿಧೇಯಕಗಳನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದಂತಾಗಿದೆ. ಯಾವ ಮಸೂದೆ ಸರ್ಕಾರಕ್ಕೆ ವಾಪಸ್?  1 ಕರ್ನಾಟಕ ಸಾರ್ವಜನಿಕ ಪರೀಕ್ಷಾ(ಭ್ರಷ್ಟಾಚಾರ ತಡೆ) ವಿಧೇಯಕ 2 ಕರ್ನಾಟಕ ಧಾರ್ಮಿಕ ದತ್ತಿ (ತಿದ್ದುಪಡಿ) ವಿಧೇಯಕ 3

ರಾಜ್ಯಪಾಲರಿಂದ ಸರ್ಕಾರದ 6 ಮಸೂದೆ ರಿಜೆಕ್ಟ್..! Read More »

ಕರ್ನಾಟಕ
Scroll to Top