ಐವನ್ ಓರ್ವ ಭಯೋತ್ಪಾದಕ, ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ತಿರುಗೇಟು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 23.  ಐವನ್‌ ಡಿಸೋಜಾ ಒಬ್ಬ ಭಯೋತ್ಪಾದಕ. ತಾಕತ್ತಿದ್ದರೆ ನನ್ನ ಮೇಲೆ ರೌಡಿಶೀಟರ್‌ ಹಾಕಲಿ ನೋಡೋಣ ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ಸವಾಲನ್ನು ಹಾಕಿರುವುದಾಗಿ ವರದಿಯಾಗಿದೆ.

 

ಕಾಂಗ್ರೆಸ್‌ನ ತಪ್ಪನ್ನು ಎತ್ತಿ ತೋರಿಸಿದವರಿಗೆ ರೌಡಿಶೀಟರ್‌ ತೆರೆಯೋದು ಇವರ ಕೆಲಸ. ಇಂತಹ ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತಿದರೆ ರೌಡಿಶೀಟರ್‌ ಕೇಸು ಹಾಕುವುದು ನಿಮ್ಮ ಡಿಎನ್‌ಎಯಲ್ಲೇ ಇದೆ. ಇದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಮಾಹಿತಿಯನ್ನು ನೀಡಿರುವ ಕುರಿತು ವರದಿಯಾಗಿದೆ. ರಾಜ್ಯಪಾಲರ ವಿರುದ್ಧ ಮಾತನಾಡಿದ, ರಾಜಭವನದ ಮೇಲೆ ಬಾಂಗ್ಲಾ ಮಾದರಿ ಉಗ್ರದಾಳಿ ನಡೆಸುವ ಬೆದರಿಕೆ ಹಾಕಿದ ಐವನ್‌ ಡಿಸೋಜಾ ಮೇಲೆ ಯಾವ ಶೀಟರ್‌ ಹಾಕಬೇಕು? ವೇದವ್ಯಾಸ ಕಾಮತ್‌ ರೌಡಿಶೀಟರ್‌ ಆದರೆ ಐವನ್‌ ಡಿಸೋಜಾ ಭಯೋತ್ಪಾದಕ. ಬಿಜೆಪಿ ಭಯೋತ್ಪಾದಕ ಐವನ್‌ ಡಿಸೋಜಾರಿಂದ ಕಲಿಯುವಂತದ್ದು ಏನೂ ಇಲ್ಲ ಎಂದು ತಿರುಗೇಟು ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ

Scroll to Top