newskadaba

ಅಂಗನವಾಡಿ ಕಾರ್ಯಕರ್ತೆ ಹುದ್ದೆ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ರಾಜ್ಯಾದ್ಯಂತ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಆರಂಭಿಸಿದ್ದು 10ನೇ ತರಗತಿ ಪಾಸಾದ ಹಾಗೂ ದ್ವಿತೀಯ ಪಿಯುಸಿ ಪಾಸ್ ಆದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಜಿಲ್ಲೆಗಳ ಪ್ರಕಾರ ಖಾಲಿ ಇರುವ ಹುದ್ದೆಗಳ ವಿವರ- ಕರ್ನಾಟಕ ರಾಜ್ಯದ ಒಟ್ಟು ಮೂರು ಜಿಲ್ಲೆಗಳಲ್ಲಿ 1,112 ಹುದ್ದೆಗಳ ನೇಮಕಾತಿ ಆರಂಭವಾಗಿದ್ದು, ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ ಈ ಕೇಳಗಿನಂತಿದೆ. ಹಾಸನ ಜಿಲ್ಲೆಯಲ್ಲಿ – 734 ಹುದ್ದೆಗಳು, ಬಳ್ಳಾರಿ ಜಿಲ್ಲೆಯಲ್ಲಿ – […]

ಅಂಗನವಾಡಿ ಕಾರ್ಯಕರ್ತೆ ಹುದ್ದೆ- ಅರ್ಜಿ ಆಹ್ವಾನ Read More »

ಕರ್ನಾಟಕ

ಮುಂದಿನ 5 ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ಮೀನುಗಾರರಿಗೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಮುಂದಿನ 5 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕ ಕರಾವಳಿಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಅಲ್ಲದೇ ಈ ಸಂದರ್ಭ 12.5 ಸೆಂಟಿಮೀಟರ್ ನಿಂದ 20 ಸೆಂಟಿಮೀಟರ್ ವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದೂ ಅದು ಎಚ್ಚರಿಸಿದೆ. ಇದೇ ವೇಳೆ ಗಾಳಿಯ ವೇಗವು ನಿರಂತರವಾಗಿ 30ರಿಂದ 40 kmph ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಅತ್ತ ಮಲೆನಾಡು ಭಾಗದ

ಮುಂದಿನ 5 ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ – ಮೀನುಗಾರರಿಗೆ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಕರ್ನಾಟಕ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ರಾಜ್ಯದ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಆಗಸ್ಟ್​​ 30ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.   ಹುದ್ದೆಯ ಮಾಹಿತಿ ಲೀಗಲ್‌ ಟೈಪಿಸ್ಟ್‌-1 ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)-1, ವಿದ್ಯಾರ್ಹತೆ: ಲೀಗಲ್‌ ಟೈಪಿಸ್ಟ್‌- ಎಲ್‌ಎಲ್‌ಬಿ, ಐಟಿ ಪ್ರೊಫೆಶನಲ್-2 (ಫಾರೆನ್ಸಿಕ್‌ ಡೇಟಾ ಸೈಂಟಿಸ್ಟ್‌)- CSE/ISನಲ್ಲಿ ಬಿಇ, ಪಿಜಿ ಡಿಪ್ಲೊಮಾ ಮಾಡಿರಬೇಕು. ವೇತನ: ಲೀಗಲ್‌ ಟೈಪಿಸ್ಟ್‌-

ಕರ್ನಾಟಕ ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು – ಅರ್ಜಿ ಆಹ್ವಾನ Read More »

ಕರ್ನಾಟಕ

ಸೆ. 01ರಿಂದ ಮೊಬೈಲ್ ಒಟಿಪಿ ವ್ಯವಸ್ಥೆ ಬಂದ್…?

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 27.  ದೇಶದಲ್ಲಿ ಸೆ. 01ರಿಂದ ಮೊಬೈಲ್‌ ನಂಬರ್‌ಗಳಿಗೆ ಬ್ಯಾಂಕ್‌ & ಇತರ ವೇದಿಕೆಗಳಿಂದ ಬರುವ OTP ವ್ಯವಸ್ಥೆ ಬಂದ್‌ ಆಗುವ ಸಾಧ್ಯತೆಯಿದ್ದು, ಹೀಗಾದರೆ ಸಾರ್ವಜನಿಕರು ಲಾಗ್‌ ಇನ್‌ ಮತ್ತು ಆರ್ಥಿಕ ವಹಿವಾಟುಗಳಿಗೆ ಸಂಬಂಧಿಸಿ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.   ಸ್ಪ್ಯಾಮ್‌ ಮೆಸೇಜ್‌ ಗಳಿಗೆ ಕಡಿವಾಣ ಹಾಕಲು ಟ್ರಾಯ್‌ ಹೊರಡಿಸಿದ್ದ ಆದೇಶ ಸೆ. 01ರಿಂದ ಜಾರಿಯಾಗಲಿದೆ. ಮೊಬೈಲ್‌ ಕಂಪೆನಿಗಳ ಜತೆ ನೊಂದಣಿ ಮಾಡಿಕೊಳ್ಳದಿದ್ದರೆ ಅಂಥಹ ಕಂಪೆನಿ ಮೆಸೇಜ್‌ ನಿರ್ಬಂಧಿಸಲು ಸೂಚಿಸಿತ್ತು. ಕಂಪೆನಿಗಳು

ಸೆ. 01ರಿಂದ ಮೊಬೈಲ್ ಒಟಿಪಿ ವ್ಯವಸ್ಥೆ ಬಂದ್…? Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಗನ್ ಒರೆಸುವ ವೇಳೆ ಮಿಸ್ ಫೈರ್ – ವ್ಯಕ್ತಿ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಆ. 27. ಮನೆಯಲ್ಲಿದ್ದ ಗನ್ ಒರೆಸುತ್ತಿದ್ದ ವೇಳೆ ಮಿಸ್ ಫೈರ್ ಆಗಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕಳುವಾಸೆ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕಳವಾಸೆ ಗ್ರಾಮದ ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಅವರು ತನ್ನ ಮನೆಯ ಶೆಡ್ ನಲ್ಲಿದ್ದ ಗನ್ ನ್ನು ಒರೆಸುವ ವೇಳೆ ಏಕಾಏಕಿ ಗುಂಡು ಹಾರಿ ಬಲಗಣ್ಣನ್ನು ಹೊಕ್ಕಿದ್ದು, ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ

ಗನ್ ಒರೆಸುವ ವೇಳೆ ಮಿಸ್ ಫೈರ್ – ವ್ಯಕ್ತಿ ಸ್ಥಳದಲ್ಲೇ ಮೃತ್ಯು..! Read More »

ಕರ್ನಾಟಕ

ಗಡಿಮೀರಿ ಮೀನುಗಾರಿಕೆ ನಡೆಸಿದ ಆರೋಪ – ತಮಿಳುನಾಡಿನ 8 ಮೀನುಗಾರನ್ನು ಬಂಧಿಸಿದ ಶ್ರೀಲಂಕಾ

(ನ್ಯೂಸ್ ಕಡಬ) newskadaba.com ರಾಮೇಶ್ವರಂ, ಆ. 27. ಡೆಲ್ಫ್ಟ್ ದ್ವೀಪದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಡಿ ತಮಿಳುನಾಡಿನ 8 ಮಂದಿ ಮೀನುಗಾರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ ಘಟನೆ ವರದಿಯಾಗಿದೆ. ಮೀನುಗಾರರು ಧನುಷ್ಕೋಡಿ ಮತ್ತು ತಲೈಮನ್ನಾರ್ ಎಂಬಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾಪಡೆ ಗಡಿ ಮೀರಿ ಮೀನುಗಾರಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಾಡದೋಣಿ ಸಹಿತ 8 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ಕುರಿತು ಹೇಳಿಕೆ ನೀಡಿರುವ ರಾಮೇಶ್ವರಂ ಮೀನುಗಾರಿಕೆ ಸಹಾಯಕ ನಿರ್ದೇಶಕ, ರಾಮೇಶ್ವರಂನಿಂದ 430 ಯಾಂತ್ರೀಕೃತ

ಗಡಿಮೀರಿ ಮೀನುಗಾರಿಕೆ ನಡೆಸಿದ ಆರೋಪ – ತಮಿಳುನಾಡಿನ 8 ಮೀನುಗಾರನ್ನು ಬಂಧಿಸಿದ ಶ್ರೀಲಂಕಾ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯ್ಕ್ ನೇಮಕ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 27. ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯ್ಕ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಸುಳ್ಯ  ಇನ್ಸ್ಪೆಕ್ಟರ್ ಆಗಿದ್ದ ಸತ್ಯನಾರಾಯಣ ಕೆ.ಯವರು ವರ್ಗಾವಣೆಗೊಂಡ ಬಳಿಕ ಪುತ್ತೂರಿನವರಿಗೆ ಪ್ರಭಾರ ವಹಿಸಲಾಗಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ತಿಮ್ಮಪ್ಪ ನಾಯ್ಕ್ ರವರನ್ನು, ಇದೀಗ ಸುಳ್ಯಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ತಿಮ್ಮಪ್ಪ ನಾಯ್ಕ್ ನೇಮಕ Read More »

ಕರ್ನಾಟಕ

ಕಾರ್ಕಳ‌ ಅತ್ಯಾಚಾರ ಪ್ರಕರಣ – ಮೂರನೇ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಆ. 27. ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿಯೋರ್ವನನ್ನು ಬಂಧಿಸಲಾಗಿದೆ.   ಬಂಧಿತ ಬಿಜೆಪಿ ಕಾರ್ಯಕರ್ತನಾಗಿದ್ದು, ಕಾರ್ಕಳ ತೆಲ್ಲರು ನಿವಾಸಿ ಅಭಯ್ ಎಂದು ತಿಳಿದುಬಂದಿದೆ. ಅಲ್ತಾಫ್ ಹಾಗೂ ಅಭಯ್ ಇಬ್ಬರೂ ಸ್ನೇಹಿತರಾಗಿದ್ದು, ಇವರಿಬ್ಬರೂ ಒಟ್ಟಿಗೆ ತಿರುಗಾಡುತ್ತಿದ್ದಾರೆಂದು ಸಾರ್ವಜನಿಕರು ತಿಳಿಸಿದ್ದಾರೆ.

ಕಾರ್ಕಳ‌ ಅತ್ಯಾಚಾರ ಪ್ರಕರಣ – ಮೂರನೇ ಆರೋಪಿ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಚೆಕ್ ಬೌನ್ಸ್: ನಟಿ ಪದ್ಮಜಾ ರಾವ್’ಗೆ 3 ತಿಂಗಳ ಜೈಲು ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 27. ಕನ್ನಡ ಚಿತ್ರರಂಗದ ನಟ-ನಟಿಯರ ಒಂದೊಂದೇ ವಿವಾದಗಳು ಬೆಳಕಿಗೆ ಬರುತ್ತಿದ್ದು, ಇದೀಗ ಜನಪ್ರಿಯ ನಟಿಯೊಬ್ಬರು ಜೈಲು ಸೇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವ ಹಿನ್ನೆಲೆ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ನಲವತ್ತು ಲಕ್ಷ ರೂಪಾಯಿ ದಂಡ ವಿಧಿಸಿ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯವು ಆದೇಶ ಹೊರಡಿಸಿದೆ. ಸಿನಿಮಾ ಜೊತೆಗೆ ಸದ್ಯ ಕಿರುತೆರೆಯಲ್ಲೂ ಬಹುಬೇಡಿಕೆಯ ನಟಿಯಾಗಿರುವ ಪದ್ಮಜಾ ರಾವ್ ಅವರ ಚೆಕ್

ಚೆಕ್ ಬೌನ್ಸ್: ನಟಿ ಪದ್ಮಜಾ ರಾವ್’ಗೆ 3 ತಿಂಗಳ ಜೈಲು ಶಿಕ್ಷೆ ಪ್ರಕಟ Read More »

ಕರ್ನಾಟಕ

ಸಾಲಬಾಧೆ- ರೈತ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಯಾದಗಿರಿ, ಆ. 27. ಸಾಲಬಾಧೆ ತಾಳಲಾರದೇ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಸುರಪುರ ತಾಲೂಕಿನ‌ ನಗನೂರ ಗ್ರಾಮದಲ್ಲಿ ನಡೆದಿದೆ.  ಆತ್ಮಹತ್ಯೆ ಮಾಡಿಕೊಂಡ ರೈತನನ್ನು ತಿಪ್ಪಣ್ಣ ಕಟ್ಟಿಮನಿ (45) ಎಂದು‌ ಗುರುತಿಸಲಾಗಿದೆ. ಬ್ಯಾಂಕ್ ಸಾಲ ಹಾಗೂ ಕೈ ಸಾಲ ಸೇರಿ ಒಟ್ಟು 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಇವರು ಸಾಲತೀರಿಸಲಾಗದೇ ಕಂಗಾಲಾಗಿದ್ದರು. ಇದರಿಂದಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಾಲಬಾಧೆ- ರೈತ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top