newskadaba

ನಾಳೆಯಿಂದ 4 ದಿನ ಪಾಸ್ ಪೋರ್ಟ್ ಸೇವಾ ಪೋರ್ಟಲ್ ಬಂದ್ – ಪಾಸ್ ಪೋರ್ಟ್ ಇಲಾಖೆ ಆದೇಶ

(ನ್ಯೂಸ್ ಕಡಬ) newskadaba.com ಆ. 28. ಟೆಕ್ನಿಕಲ್ ಮೈಂಟೆನೆನ್ಸ್ ಇರುವ ಕಾರಣಕ್ಕೆ ಪಾಸ್​ಪೋರ್ಟ್ ಗೆ ಸಂಬಂಧ ಪಟ್ಟ ಕೆಲಸಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದ್ದು, ನಾಳೆ (ಆ. 29 ಗುರುವಾರ) ಸಂಜೆ 8 ಗಂಟೆಯಿಂದ ಸೆಪ್ಟಂಬರ್ 2ರ ಬೆಳಗ್ಗೆ 6 ಗಂಟೆಯವರೆಗೂ ಪಾಸ್​ಪೋರ್ಟ್ ಸೇವಾ ಪೋರ್ಟಲ್ ಬಂದ್ ಆಗಿರುತ್ತದೆ ಎಂದು ಇಲಾಖೆ ತಿಳಿಸಿದೆ.   ಪೋರ್ಟಲ್​ನ ಟೆಕ್ನಿಕಲ್ ಮೈಂಟೆನೆನ್ಸ್ ಕಾರ್ಯ ನಡೆಯುತ್ತಿರುವುದರಿಂದ ಅದು ಸಾರ್ವಜನಿಕ ಬಳಕೆಗೆ ಲಭ್ಯ ಇರುವುದಿಲ್ಲ. ಹಾಗಾಗಿ ನಾಳೆ ಸಂಜೆ 8ರಿಂದ ಸೆಪ್ಟೆಂಬರ್ 2ರ ಬೆಳಗ್ಗೆ […]

ನಾಳೆಯಿಂದ 4 ದಿನ ಪಾಸ್ ಪೋರ್ಟ್ ಸೇವಾ ಪೋರ್ಟಲ್ ಬಂದ್ – ಪಾಸ್ ಪೋರ್ಟ್ ಇಲಾಖೆ ಆದೇಶ Read More »

ಬ್ರೇಕಿಂಗ್ ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ- ಸೆಪ್ಟೆಂಬರ್ 9ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಪಾಲಾಗಿರುವ ಆರೋಪಿ ದರ್ಶನ್‌ ಮತ್ತು ಗ್ಯಾಂಗ್‌ ಗೆ ಸೆಪ್ಟೆಂಬರ್‌ 9ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ನ್ಯಾಯಾಂಗ ಬಂಧನ ಅಂತ್ಯವಾಗಿದ್ದ ಹಿನ್ನೆಲೆ ಇಂದು ವೀಡಿಯೋ ಕಾನ್ಫರೆನ್ಸ್‌ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿಗಳನ್ನು ಪುನಃ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡರು. ಮನವಿ ಪುರಸ್ಕರಿಸಿದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ದರ್ಶನ್‌ ಮತ್ತು ಗ್ಯಾಂಗ್‌ ನ

ರೇಣುಕಾಸ್ವಾಮಿ ಕೊಲೆ ಪ್ರಕರಣ- ಸೆಪ್ಟೆಂಬರ್ 9ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ Read More »

ಕರ್ನಾಟಕ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ಸಾಹಿತಿ ಪ್ರೊ ಅಮರೇಶ ನುಗಡೋಣಿ, ಕೆ.ಷರೀಫಾ, ಡಾ. ಬಂಜಗೆರೆ ಜಯಪ್ರಕಾಶ್, ಡಾ.ನಟರಾಜ್ ಹುಳಿಯಾರ್, ಬಿ.ಪೀರ್ ಬಾಷಾ, ಚ.ಹ.ರಘುನಾಥ್, ಆಯೆಷಾ ಫರ್ಝಾನಾ, ಸಿದ್ದಪ್ಪ ಮೂಲಗೆ ಸೇರಿದಂತೆ ಹಲವರನ್ನು ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.   ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡವರ ಪಟ್ಟಿ ಈ ಕೆಳಗಿನಂತಿದೆ- ಬೆಂಗಳೂರು (ಜ್ಞಾನಭಾರತಿ), ವಿಶ್ವವಿದ್ಯಾಲಯ, ಬೆಂಗಳೂರು:- ಡಾ. ಜಯಶ್ರೀ ಹೆಗ್ಡೆ, ಎಂ.ಎ. ಮಹದೇವ ನಾಯ್ಕ್‌, ಡಾ.ಕೆ.ಷರೀಫಾ, ಡಿ.ಬಿ.ಗಂಗರಾಜು, ದಂಡಿಕೆರೆ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ Read More »

ಕರ್ನಾಟಕ

ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 28. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ನೂತನ ಅಧ್ಯಕ್ಷರಾಗಿ ಜಯ್ ಶಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಮಂಡಳಿ ಕಾರ್ಯದರ್ಶಿಯಾಗಿರುವ ಜಯ್ ಶಾ ಅವರು ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಡಿಸೆಂಬರ್ 1, 2024 ರಿಂದ ಜಯ್ ಶಾ ICCಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜಯ್ ಶಾ ಅವರು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ ಆರೋಪ- ಕಬಕ ಗ್ರಾಮಸ್ಥರಿಂದ ಶಾಸಕರಿಗೆ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 28. ಪುತ್ತೂರು ಟ್ರಾಫಿಕ್ ಪೊಲೀಸರಿಂದ ಸಾರ್ವಜನಿಕರಿಗೆ ನಿತ್ಯ ಕಿರುಕುಳ ಉಂಟಾಗುತ್ತಿದ್ದು ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಮುಂದಾಳು ಮೋಹನ್ ಗುರ್ಜಿನಡ್ಕ ನೇತೃತ್ವದಲ್ಲಿ ಕಬಕದ ಸಾರ್ವಜನಿಕರ ನಿಯೋಗವೊಂದು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದೆ. ಪ್ರತೀ ದಿನ ಬೆಳಿಗ್ಗೆ 8.30ರ ವೇಳೆಗೆ ಕಬಕಕ್ಕೆ ಬರುವ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆಯ ಕಾರಣವಿಟ್ಟು ಬೈಕ್ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ. ಪೋಷಕರು ಬೆಳಗ್ಗೆ ಶಾಲಾ ಮಕ್ಕಳನ್ನು ಬಸ್ಸಿಗೆ ಬಿಡಲು

ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ ಆರೋಪ- ಕಬಕ ಗ್ರಾಮಸ್ಥರಿಂದ ಶಾಸಕರಿಗೆ ದೂರು Read More »

ಕರಾವಳಿ, ಕರ್ನಾಟಕ
Theft, crime, Robbery

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 28. ನಗರದ ಸೂಟರ್‌ ಪೇಟೆಯ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ. 23ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಎದುರಿನ ಬಾಗಿಲನ್ನು ತೆರೆದು ಲಾಕರ್‌ನಲ್ಲಿದ್ದ 25 ಗ್ರಾಂ ಚಿನ್ನಾಭರಣ, 47,000 ರೂ. ನಗದು ಸಹಿತ ಅಂದಾಜು 1.47 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಗೆ ನುಗ್ಗಿ ಚಿನ್ನಾಭರಣ ದೋಚಿದ ಕಳ್ಳರು Read More »

ಕರಾವಳಿ, ಕರ್ನಾಟಕ

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಹಾಸನ, ಆ. 28. ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬೇಲೂರು ತಾಲ್ಲೂಕಿನ, ಜೆ.ಸುರಪುರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮಲ್ಲಿಕಾರ್ಜುನ (58) ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನರವರು ಆ. 13 ರಂದು ಬೈಕಿನಲ್ಲಿ ಜಮೀನಿಗೆ ತೆರಳುತ್ತಿದ್ದ ವೇಳೆ ಕಾಡಾನೆಯೊಂದು ಅವರ ಮೇಲೆ ದಾಳಿ ಮಾಡಿ ಸೊಂಡಿಲಿನಿಂದ ಎಸೆದು, ತುಳಿದು ಗಾಯಗೊಳಿಸಿತ್ತು. ಇದರಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲ್ಲಿಕಾರ್ಜುನ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು..! Read More »

ಕರ್ನಾಟಕ

ನಟ ಸಿದ್ದೀಖ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 28. ಮಲಯಾಳಂ ನಟ ಸಿದ್ದೀಕ್‌ ಅವರು 2016ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಆರೋಪಿಸಿದ ಹಿನ್ನೆಲೆಯಲ್ಲಿ, ಸಿದ್ದೀಕ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಸಿದ್ದೀಕ್‌ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪರಾಧವು 2016ರಲ್ಲಿ ನಡೆದಿರುವ ಕಾರಣ ಐಪಿಸಿ ಅಡಿಯಲ್ಲಿ ಪ್ರಕರಣ

ನಟ ಸಿದ್ದೀಖ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು Read More »

ರಾಷ್ಟ್ರೀಯ ನ್ಯೂಸ್

ಕಡಬ: ಶಾಲಾ ಕಟ್ಟಡ ಕುಸಿತ – ಮುಖ್ಯೋಪಾಧ್ಯಾಯ ಹಾಗೂ ಜಿ.ಪಂ. ಇಂಜಿನಿಯರ್ ಅಮಾನತು

(ನ್ಯೂಸ್ ಕಡಬ) newskadaba.com ಕಡಬ, ಆ. 28. ಪೆರಾಬೆ ಗ್ರಾಮದ ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕುಸಿದ ಪರಿಣಾಮ ವಿದ್ಯಾರ್ಥಿಗಳು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಂಗಪ್ಪ ಹುಕ್ಕೇರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅವರ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಶಾಲಾ ಕಟ್ಟಡದ ಕುಸಿದು ಬಿದ್ದು ಏಳನೇ ತರಗತಿಯ ರಶ್ಮಿ, ದೀಕ್ಷಾ, ಫಾತಿಮಾ ಸುಹಾನಾ ಮತ್ತು ಯಶಿತಾ ಎಂಬವರು ಗಾಯಗೊಂಡಿದ್ದರು. ಅದೃಷ್ಟವಶಾತ್

ಕಡಬ: ಶಾಲಾ ಕಟ್ಟಡ ಕುಸಿತ – ಮುಖ್ಯೋಪಾಧ್ಯಾಯ ಹಾಗೂ ಜಿ.ಪಂ. ಇಂಜಿನಿಯರ್ ಅಮಾನತು Read More »

ಕರಾವಳಿ, ಕರ್ನಾಟಕ

ಮಹಿಳೆ ಎಂಬುದು ಪರಿಗಣಿಸಿ ಜಾಮೀನು ನೀಡಿ – ಪವಿತ್ರಾ ಗೌಡ ಪರ ವಕೀಲರ ಮನವಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 28. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರದಂದು  ಮಾಡಲಾಗಿದ್ದು, ಮಹಿಳೆ ಎಂಬುದನ್ನು ಪರಿಗಣಿಸಿ ಪವಿತ್ರಾ ಗೌಡ ಅವರಿಗೆ ಜಾಮೀನು ನೀಡಬೇಕು ಎಂದು ಪವಿತ್ರಾ ಗೌಡ ಪರ ವಕೀಲರು ಮನವಿ ಮಾಡಿದ್ದಾರೆ. ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದೆ. ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ

ಮಹಿಳೆ ಎಂಬುದು ಪರಿಗಣಿಸಿ ಜಾಮೀನು ನೀಡಿ – ಪವಿತ್ರಾ ಗೌಡ ಪರ ವಕೀಲರ ಮನವಿ Read More »

ಕರ್ನಾಟಕ
Scroll to Top