newskadaba

Crime

ವಾಹನ ತಡೆದು ಅವಾಚ್ಯ ಪದಗಳಿಂದ ನಿಂದನೆ ಆರೋಪ – ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ. 29. ವ್ಯಕ್ತಿಯೋರ್ವ ವಾಹನವನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಕುರಿತು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಣಿಯೂರು ನಿವಾಸಿ ಸಿದ್ದಿಕ್(43ವ) ಎಂಬವರು ನೀಡಿದ ದೂರಿನ ಮೇರೆಗೆ ಶರತ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ. 27ರಂದು ರಾತ್ರಿ ಸಿದ್ದೀಕ್ ಅವರು ತನ್ನ ಗೂಡ್ಸ್ ವಾಹನವನ್ನು ಕಲ್ಲೇರಿಯಿಂದ ಅವರ ಮನೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿಗೆ ತಲುಪಿದಾಗ ಶರತ್ […]

ವಾಹನ ತಡೆದು ಅವಾಚ್ಯ ಪದಗಳಿಂದ ನಿಂದನೆ ಆರೋಪ – ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ ಆಲ್ ಇಂಡಿಯಾ KMCC ಸಭೆ – ಸೆಪ್ಟೆಂಬರ್ 5 ರಿಂದ 30ರ ವರೆಗೆ ಸದಸ್ಯತ್ವ ಅಭಿಯಾನ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 29. ಆಲ್ ಇಂಡಿಯಾ KMCC ಸುಳ್ಯ ವಲಯದ ವಿಶೇಷ ಸಭೆಯು ಆರಂತೋಡು ತೆಕ್ಕಿಲ್ ಸಭಾಂಗಣದಲ್ಲಿ ಬುಧವಾರದಂದು ಖಲಂದರ್ ಎಲಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೆಪ್ಟೆಂಬರ್ 5 ರಿಂದ 30ರ ವರೆಗೆ ಸದಸ್ಯತ್ವ ಅಭಿಯಾನ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಖಲಂದರ್ ಎಲಿಮಲೆಯವರು ಸದಸ್ಯತ್ವ ಅಭಿಯಾನ, ಅಂಬುಲನ್ಸ್ ಸೇವೆ, ಸಾಮೂಹಿಕ ವಿವಾಹ ಪಾಲಿಯೇಟಿವ್ ಕೇರ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಆಲ್ ಇಂಡಿಯಾ KMCC ವತಿಯಿಂದ ರಾಜ್ಯದ ಬೆಂಗಳೂರು,

ಸುಳ್ಯ ಆಲ್ ಇಂಡಿಯಾ KMCC ಸಭೆ – ಸೆಪ್ಟೆಂಬರ್ 5 ರಿಂದ 30ರ ವರೆಗೆ ಸದಸ್ಯತ್ವ ಅಭಿಯಾನ Read More »

ಕರಾವಳಿ, ಕರ್ನಾಟಕ

ಕುಸಿತಗೊಂಡ ಕೊಂತೂರು ಸರಕಾರಿ ಶಾಲೆಗೆ ಎಸ್‌ಡಿಎಂಸಿ ಜಿಲ್ಲಾ ಸಮನ್ವಯ ವೇದಿಕೆಯ ನಿಯೋಗ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ. 29. ತಾಲೂಕಿನ ಕುಂತೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಲ್ಲಿನ ಶಾಲಾಭಿವೃಧ್ದಿ ಸಮಿತಿ ಹಾಗೂ ಮುಖ್ಯಗುರುಗಳ ಜೊತೆ ಸಮಾಲೋಚನೆ ನಡೆಸಿ, ಘಟನೆ ನಡೆದ ಸ್ಥಳವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಎಸ್‌ಎಂ ಮಾತನಾಡಿ, ಶಾಲಾ ಕಟ್ಟಡ ಕುಸಿತದಿಂದ ಪೋಷಕರಲ್ಲಿ ಸರಕಾರಿ ಶಾಲೆಯ

ಕುಸಿತಗೊಂಡ ಕೊಂತೂರು ಸರಕಾರಿ ಶಾಲೆಗೆ ಎಸ್‌ಡಿಎಂಸಿ ಜಿಲ್ಲಾ ಸಮನ್ವಯ ವೇದಿಕೆಯ ನಿಯೋಗ ಭೇಟಿ Read More »

ಕರಾವಳಿ, ಕರ್ನಾಟಕ

ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆ ಕಡಬ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ

(ನ್ಯೂಸ್ ಕಡಬ) newskadaba.com ಕಡಬ, ಆ. 28. ಇಲ್ಲಿನ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಯಲ್ಲಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತ್ರೋಬಾಲ್ ಪಂದ್ಯಾಟವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸೈಂಟ್ ಜೋಕಿಮ್ಸ್ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಕಡಬ ಇದರ ಜಂಟಿ ಸಹಯೋಗದಲ್ಲಿ ನಡೆಯಿತು. ಕಡಬ ಭೂಮಿಕಾ ಕನ್ಸಲ್ಟೆನ್ಸಿ ಇದರ ಉದ್ಯಮಿಗಳಾದ ಶ್ರೀ ಸತೀಶ್ ನಾಯ್ಕ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಇಲಾಖೆಯ ಆಶಯದಂತೆ ಸೋಲು ಗೆಲುವುಗಳನ್ನು

ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆ ಕಡಬ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ Read More »

ಕರಾವಳಿ, ಕರ್ನಾಟಕ

ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಪ್ರಕರಣ- ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com  ಮಂಗಳೂರು, ಆ. 28. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ಮನೆಗೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತರನ್ನು ಬಂಟ್ವಾಳ ತಾಲೂಕು ಬೋಳಂತೂರು ನಾರಾಯಣ ಕೋಡಿಯ ಭರತ್ ಯಾನೆ ಯಕ್ಷಿತ್ (24) ಮತ್ತು ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿಯ ದಿನೇಶ್ ಕುಡ್ತಮುಗೇರು (20) ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರ್ವಾಲ್‌ ಮಾಹಿತಿ ನೀಡಿದ್ದಾರೆ.

ಐವನ್ ಡಿಸೋಜಾ ಮನೆಗೆ ಕಲ್ಲು ತೂರಾಟ ಪ್ರಕರಣ- ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ

ಕಡಬ: ಶಾಲಾ ಗೋಡೆ ಬಿದ್ದು 4 ವಿದ್ಯಾರ್ಥಿಗಳಿಗೆ ಗಾಯ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ. 28. ತಾಲೂಕಿನ ಪೆರಾಬೆ ಸಮೀಪದ ಕುಂತೂರಿನ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆ ಛಾವಣಿ ಕುಸಿದುಬಿದ್ದ ಪರಿಣಾಮ ಗಾಯಗೊಂಡು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಲ್ವರು ವಿದ್ಯಾರ್ಥಿಗಳನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಹಾಗೂ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಪಾಲಕರು ಮತ್ತು ಮಕ್ಕಳಿಗೆ ಧೈರ್ಯ ತುಂಬಿದರು‌. ಸೂಕ್ತ ಚಿಕಿತ್ಸೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಕಡಬ: ಶಾಲಾ ಗೋಡೆ ಬಿದ್ದು 4 ವಿದ್ಯಾರ್ಥಿಗಳಿಗೆ ಗಾಯ- ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಭೇಟಿ Read More »

ಕರಾವಳಿ

ಐಪಿಎಲ್ ಗೆ ಮರಳಿದ ಝಹೀರ್ ಖಾನ್..??

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)ಗೆ ವಿಶ್ವಕಪ್‌ ವಿಜೇತ ಬೌಲರ್‌ ಝಹೀರ್‌ಖಾನ್‌ ಅವರು ಮರು ಎಂಟ್ರಿಯಾಗಿದ್ದಾರೆ. 2018 ರಿಂದ 2022ರವರೆಗೂ ಐದು ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದ ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ತಂಡದ ಪ್ರತಿಭಾನ್ವೇಷಕರಾಗಿದ್ದ ಝಹೀರ್‌ಖಾನ್‌, ಕಳೆದೆರಡು ವರ್ಷಗಳಿಂದ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿದ್ದರು. ಆದರೆ 2025ರ ಐಪಿಎಲ್‌ ನಿಮಿತ್ತ ಡಿಸೆಂಬರ್‌ನಲ್ಲಿ ಮೆಗಾ ಹರಾಜು ನಡೆಯಲಿದ್ದು ಲಕ್ನೋ ಸೂಪರ್‌ ಜಯಂಟ್ಸ್ ತಂಡದ ಮೆಂಟರ್‌ ಆಗಿ ಜಾಹೀರ್‌ಖಾನ್‌ ಅವರು ಮತ್ತೆ

ಐಪಿಎಲ್ ಗೆ ಮರಳಿದ ಝಹೀರ್ ಖಾನ್..?? Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ನದಿಯಿಂದುಂಟಾಗುವ ಪ್ರವಾಹಕ್ಕೆ ಶಾಶ್ವತ ಪರಿಹಾರ – ಸಿಎಂ ಭರವಸೆ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಘಟಪ್ರಭಾ ನದಿ ನೀರಿನ ಪ್ರವಾಹದಿಂದಾಗಿ ಪ್ರತಿವರ್ಷ ಉಂಟಾಗುತ್ತಿರುವ ಹಾನಿಯ ಕುರಿತು ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.   ಅವರು ತಮ್ಮನ್ನು ಭೇಟಿಯಾದ ಮುಧೋಳ ತಾಲೂಕಿನ ರೈತರ ನಿಯೋಗದೊಂದಿಗೆ ಚರ್ಚಿಸಿದ ಬಳಿಕ ನೀರಾವರಿ ಸಚಿವರು, ಕಂದಾಯ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಆದಷ್ಟು ಬೇಗ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದಾಗಿ ತಿಳಿಸಿದರು. ಕಳೆದ ನಾಲ್ಕು ವರ್ಷಗಳ

ನದಿಯಿಂದುಂಟಾಗುವ ಪ್ರವಾಹಕ್ಕೆ ಶಾಶ್ವತ ಪರಿಹಾರ – ಸಿಎಂ ಭರವಸೆ Read More »

ಕರ್ನಾಟಕ

ಹೃದಯಾಘಾತ- ನಿರ್ಮಾಪಕ ಪ್ರಭಾಕರ್ ವಿಧಿವಶ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ನಿರ್ದೇಶಕ ಪ್ರಭಾಕರ್ (64) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನೇಕ ಚಿತ್ರಗಳಿಗೆ ನಿರ್ಮಾಣ ಮಾಡಿದ ಅವರು ಅವಳೇ ನನ್ನ ಹೆಂಡ್ತಿ, ಅಣ್ಣತಂಗಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವು ದೊಡ್ಡ ಯಶಸ್ಸು ಕಂಡಿತು. ಈ ಗೆಲುವಿನ ನಂತರ ಅವನೇ ನನ್ನ ಗಂಡ ಚಿತ್ರವನ್ನು ನಿರ್ಮಿಸಿದರು. ವಿಷ್ಣುವರ್ಧನ್ ಅಭಿನಯದ ತುಂಬಿದ ಮನೆ ಮತ್ತು ಎಲ್ಲರಂಥಲ್ಲ ನನ್ನ ಗಂಡ, ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ, ಶಶಿಕುಮಾರ್ ಅಭಿನಯದ ಮುದ್ದಿನ

ಹೃದಯಾಘಾತ- ನಿರ್ಮಾಪಕ ಪ್ರಭಾಕರ್ ವಿಧಿವಶ Read More »

ಕರ್ನಾಟಕ
crime, arrest, suspected

ಅಕ್ರಮ ಮದ್ಯ ಸಾಗಾಣಿಕೆ- ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com  ಚಾಮರಾಜನಗರ, ಆ. 28. ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ, ವಶಕ್ಕೆ ತೆಗದುಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಂಧಿತನನ್ನು ಶಿವಸ್ವಾಮಿ ಎಂದು ಗುರುತಿಸಲಾಗಿದೆ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮರೆ ಮಾಚಿ ಸಾಗಾಣಿಕೆ ಮಾಡುತ್ತಿದ್ದಾಗ, ಗಸ್ತು ನಿರತರಾಗಿದ್ದ ಅಬಕಾರಿ ಸಿಬ್ಬಂದಿಗಳಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಶಿವಸ್ವಾಮಿಯಿಂದ 2,918 ರೂ ಮೌಲ್ಯದ ಮದ್ಯ ಹಾಗೂ 70 ಸಾವಿರ ರೂ

ಅಕ್ರಮ ಮದ್ಯ ಸಾಗಾಣಿಕೆ- ಆರೋಪಿ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top