newskadaba

ಲೈನ್ ದುರಸ್ತಿ ವೇಳೆ ವಿದ್ಯುತ್ ಶಾಕ್- ಸಿಬ್ಬಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 18. ವಿದ್ಯುತ್ ಲೈನ್ ಬದಲಾವಣೆ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಗಾಯಗೊಂಡ ಘಟನೆ ತಾಲೂಕಿನ ಕೊಡಿಯಾಲ್ ಬೈಲಿನಲ್ಲಿ ನಡೆದಿದೆ. ಗಾಯಗೊಂಡವರನ್ನು ಖಾಸಗಿ ಇಲೆಕ್ಟ್ರಿಕಲ್ ಸಂಸ್ಥೆಯ ಸಿಬ್ಬಂದಿ ಭವಿತ್ ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬವೇರಿ ವಿದ್ಯುತ್ ಬದಲಾವಣೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಲೈನ್ ಸ್ಪರ್ಶಿಸಿ ವಿದ್ಯುತ್ ಶಾಕ್ ತಗಲಿದ ಪರಿಣಾಮ ಕಂಬದಿಂದ ನೆಲಕ್ಕೆ ಬಿದ್ದ ಭವಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನುಸುಳ್ಯದ ಖಾಸಗಿ […]

ಲೈನ್ ದುರಸ್ತಿ ವೇಳೆ ವಿದ್ಯುತ್ ಶಾಕ್- ಸಿಬ್ಬಂದಿಗೆ ಗಾಯ Read More »

ಬ್ರೇಕಿಂಗ್ ನ್ಯೂಸ್
pilikula

ಪೆಂಗ್ವಿನ್, ಆನಕೊಂಡ ತರಿಸುವ ನಿರ್ಧಾರಕ್ಕೆ ಮುಂದಾದ ಪಿಲಿಕುಳ ಉದ್ಯಾನವನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮುಂಬಯಿಯ ಬೈಕುಲಾ ಮೃಗಾಲಯದಿಂದ ದಕ್ಷಿಣ ಅಮೇರಿಕಾ ಮೂಲದ ಪೆಂಗ್ವಿನ್ ತರಿಸುವ ಮಹತ್ವದ ನಿರ್ಧಾರವೊಂದನ್ನು ಪ್ರಾಣಿಗಳ ವಿನಿಮಯ ಯೋಜನೆಯಡಿ ಕೈಗೊಳ್ಳಲಾಗಿದೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ ಮಾರ್ಶ್ ಮೊಸಳೆಯನ್ನು ಬೈಕುಲಾಕ್ಕೆ ನೀಡಲಾಗುತ್ತದೆ. ಪೆಂಗ್ವಿನ್ ಗಳು ಸಾಮಾನ್ಯವಾಗಿ ಹಿಮಚ್ಚಾದಿತ ವಾತಾವರಣವಿರುವ ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದು ನೀರು ಮತ್ತು ಭೂಮಿ ಎರಡರಲ್ಲೂ ವಾಸಿಸುತ್ತವೆ. ಹೀಗಾಗಿ ಪೆಂಗ್ವಿನ್ ಗಳಿಗೆ ವಾಸಿಸಲು ಪೂರಕವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು

ಪೆಂಗ್ವಿನ್, ಆನಕೊಂಡ ತರಿಸುವ ನಿರ್ಧಾರಕ್ಕೆ ಮುಂದಾದ ಪಿಲಿಕುಳ ಉದ್ಯಾನವನ Read More »

ಕರಾವಳಿ

ಕಡಬ: ಹವ್ಯಾಸಿ ಗಾಯಕ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ. 18. ಹವ್ಯಾಸಿ ಗಾಯಕರಾಗಿ ಚಿರಪರಿಚಿತರಾಗಿದ್ದ ಕುಟ್ರುಪ್ಪಾಡಿ ಗ್ರಾಮದ ಬಾಬು ಸಂಪಡ್ಕ ರವರು ಹೃದಯಾಘಾತದಿಂದ ನಿಧನರಾಗಿರುವ ಕುರಿತು ವರದಿಯಾಗಿದೆ. ಕಡಬದ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿ ಎಲ್ಲರಿಗೂ ಪರಿಚಿತರಾಗಿದ್ದ ಇವರು, ಬಳಿಕ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಬಾಬು ಸಂಪಡ್ಕ ಅವರು ಹಲವಾರು ಕಡೆಗಳಲ್ಲಿ ಗಾಯನ, ಭಜನೆ, ನೃತ್ಯಗಳ ಮೂಲಕ ಜನರ ಪ್ರೀತಿ ಗಳಿಸಿದ್ದರು. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ

ಕಡಬ: ಹವ್ಯಾಸಿ ಗಾಯಕ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಿಎಂಟಿಸಿ ಬಸ್ ಹರಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ಬಿಎಂಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ವಿಕಲಚೇತನ ಯುವಕ ಮೃತಪಟ್ಟ ಘಟನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ. ವಿಶೇಷ ಚೇತನ ಯುವಕನೋರ್ವ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಬಿಎಂಟಿಸಿ ಬಸ್ ನಿಯಂತ್ರಣ ಸಿಗದೇ ಯುವಕನ ಮೇಲೆಯೇ ಹರಿದಿದ್ದು, ಪರಿಣಾಮ ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಬಸ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣವೆನ್ನಲಾಗಿದೆ.

ಬಿಎಂಟಿಸಿ ಬಸ್ ಹರಿದು ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಯಾಂಡಲ್ ವುಡ್ ನಿರ್ಮಾಪಕ ಕೋಡಳ್ಳಿ ಶಿವರಾಂ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 18. ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದ ರಾಜ್ಯ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಕೋಡಳ್ಳಿ ಶಿವರಾಮ್ ವಿಧಿವಶರಾಗಿದ್ದಾರೆ. ಕೋಡಳ್ಳಿ ಶಿವರಾಮ್ ಅವರು ಕನ್ನಡದ ಚಲನಚಿತ್ರಗಳಾದ ಗ್ರಹಣ, ಬೆಳ್ಳಿ ಬೆಳಕು ಸೇರಿದಂತೆ ಇತರೆ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದರು.

ಸ್ಯಾಂಡಲ್ ವುಡ್ ನಿರ್ಮಾಪಕ ಕೋಡಳ್ಳಿ ಶಿವರಾಂ ವಿಧಿವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶಿಸಿ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 18. ಮನೆಯ‌ ಹಿಂಬಾಗಿಲು ಮರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಪಡ್ನೂರು‌ ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ದೂರಿನ ಪ್ರಕಾರ, ವಿಟ್ಲಪಡ್ನೂರು‌ ಗ್ರಾಮದ ಕುಂಟುಕುಡೇಲು ನಿವಾಸಿ ಲೀಲಾ ಕೆ. ಎಂಬವರು ಮಂಗಳವಾರದಂದು ಮನೆಯ ಬಾಗಿಲುಗಳನ್ನು ಭದ್ರಪಡಿಸಿ, ಮಗಳೊಂದಿಗೆ ಕೊಡಂಗಾಯಿಗೆ ತೆರಳಿದ್ದು, ಮಧ್ಯಾಹ್ನ ವೇಳೆ ಹಿಂತಿರುಗಿ ಬಂದಾಗ ಮನೆಯ ಹಿಂಬಾಗದ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿತ್ತು. ಕೂಡಲೇ ಮನೆಯೊಳಗಡೆ ಪ್ರವೇಶಿಸಿ ನೋಡಿದಾಗ ಮನೆಯ ಕೋಣೆಯೊಂದರ ಕಪಾಟಿನ

ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶಿಸಿ ಚಿನ್ನಾಭರಣ ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್

ಸೆ. 22ರಂದು ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಕಡಬ, ಸೆ. 17. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯತ್ ಪುತ್ತೂರು, ಪಟ್ಟಣ ಪಂಚಾಯತ್ ಕಡಬ, ತಾಲೂಕು ಪಂಚಾಯತ್ ಕಡಬ, ತಾಲೂಕು ಯುವಜನ ಒಕ್ಕೂಟ ಕಡಬ, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಕಡಬ ಸರಕಾರಿ ಪದವಿ ಪೂರ್ವ ಕಾಲೇಜು, ಕೇಪು ಲಕ್ಷ್ಮೀ ಜನಾರ್ದನ ಯುವಕ ಮಂಡಲ, ಬಿಳಿನೆಲೆ ಯುವಕ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆ.22ರಂದು ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ

ಸೆ. 22ರಂದು ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ Read More »

ಕರಾವಳಿ

ಕಡಬ: ಸೆ.21ರಂದು ಗುರುವಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಸೆ. 18. ಕಡಬ ಹಾಗೂ ಪುತ್ತೂರು ತಾಲೂಕುಗಳ ಕರ್ನಾಟಕ ರಾಜ್ಯ ಪ್ರೌಢಶಾಲಾ ಮತ್ತು ಶಿಕ್ಷಕರ ಸಂಘ, ಕಡಬ ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಬೆಂಗಳೂರಿನ ಪ್ರಣವ್ ಫೌಂಡೇಷನ್ ಇವರಿಂದ ಸಾಧಕ ಶಿಕ್ಷಕರಿಗೆ ಪ್ರಣವ್ ಗುರು ಪುರಸ್ಕಾರ, ಗುರುವಂದನಾ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಡಬ ಅನುಗ್ರಹ ಸಭಾಭವನದಲ್ಲಿ ಸೆ. 21ರಂದು ನಡೆಯಲಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಕಡಬ: ಸೆ.21ರಂದು ಗುರುವಂದನಾ ಕಾರ್ಯಕ್ರಮ Read More »

ಕರಾವಳಿ

ಸ್ಕೂಟರ್ ಗೆ ಕಂಟೈನರ್ ಢಿಕ್ಕಿ- ಸಹಸವಾರೆ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ಸ್ಕೂಟರ್‌ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ಸಹಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಕೂಳೂರು ಬಳಿ ನಡೆದಿದೆ. ಮೃತ ಸಹಸವಾರೆಯನ್ನು ಲಾವಣ್ಯ (27) ಎಂದು ಗುರುತಿಸಲಾಗಿದೆ. ಶಕೀಲ್ ಸುವರ್ಣ ಎಂಬವರು ಪತ್ನಿ ಲಾವಣ್ಯ ಅವರೊಂದಿಗೆ ಪಣಂಬೂರಿನಿಂದ ಕಾವೂರು ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕೂಳೂರು ನದಿ ಸೇತುವೆಯಲ್ಲಿ ಪಣಂಬೂರು ಕಡೆಯಿಂದ ಬರುತ್ತಿದ್ದ ಕಂಟೈನರ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಇದರಿಂದಾಗಿ ಶಕೀಲ್ ಸುವರ್ಣ ಮತ್ತು ಲಾವಣ್ಯ ಸ್ಕೂಟರ್ ಸಮೇತ ರಸ್ತೆಗೆ

ಸ್ಕೂಟರ್ ಗೆ ಕಂಟೈನರ್ ಢಿಕ್ಕಿ- ಸಹಸವಾರೆ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top