ಮನೆಯ ಹಿಂಬಾಗಿಲು ಮುರಿದು ಒಳಪ್ರವೇಶಿಸಿ ಚಿನ್ನಾಭರಣ ಕಳವು

Theft, crime, Robbery

(ನ್ಯೂಸ್ ಕಡಬ) newskadaba.com ವಿಟ್ಲ, ಸೆ. 18. ಮನೆಯ‌ ಹಿಂಬಾಗಿಲು ಮರಿದು ಒಳನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ವಿಟ್ಲ ಪಡ್ನೂರು‌ ಗ್ರಾಮದ ಕುಂಟುಕುಡೇಲು ಎಂಬಲ್ಲಿ ನಡೆದಿದೆ.


ದೂರಿನ ಪ್ರಕಾರ, ವಿಟ್ಲಪಡ್ನೂರು‌ ಗ್ರಾಮದ ಕುಂಟುಕುಡೇಲು ನಿವಾಸಿ ಲೀಲಾ ಕೆ. ಎಂಬವರು ಮಂಗಳವಾರದಂದು ಮನೆಯ ಬಾಗಿಲುಗಳನ್ನು ಭದ್ರಪಡಿಸಿ, ಮಗಳೊಂದಿಗೆ ಕೊಡಂಗಾಯಿಗೆ ತೆರಳಿದ್ದು, ಮಧ್ಯಾಹ್ನ ವೇಳೆ ಹಿಂತಿರುಗಿ ಬಂದಾಗ ಮನೆಯ ಹಿಂಬಾಗದ ಬಾಗಿಲನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿರುವುದು ಕಂಡುಬಂದಿತ್ತು. ಕೂಡಲೇ ಮನೆಯೊಳಗಡೆ ಪ್ರವೇಶಿಸಿ ನೋಡಿದಾಗ ಮನೆಯ ಕೋಣೆಯೊಂದರ ಕಪಾಟಿನ ಒಳಗಡೆ ಇರಿಸಿದ್ದ, ಒಟ್ಟು 36 ಗ್ರಾಂ. ತೂಕದ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ 1,46,000 ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top