news kannada

ರಾಜ್ಯಾದ್ಯಂತ ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಏಕರೂಪದ ವೇಳಾಪಟ್ಟಿ ಜಾರಿ

(ನ್ಯೂಸ್‌ ಕಡಬ) newskadaba.com,  ಜೂ.26 :ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಹತ್ವದ ಸಿಹಿಸುದ್ದಿ ನೀಡಿದ್ದು, ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಜ್ಯದಾದ್ಯಂತ ಈ ಹಿಂದೆ ಇದ್ದ ಗೊಂದಲಗಳಿಗೆ ತೆರೆ ಎಳೆದು, ಎಲ್ಲಾ ಜಿಲ್ಲೆಗಳ ಶಾಲೆಗಳಿಗೂ ಅನ್ವಯವಾಗುವಂತೆ ಏಕರೂಪದ ವೇಳಾಪಟ್ಟಿಯನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಶನಿವಾರದ ತರಗತಿಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ನಡೆಯಲಿವೆ.ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಇದೇ ಸಮಯವನ್ನು […]

ರಾಜ್ಯಾದ್ಯಂತ ಶನಿವಾರದ ಶಾಲಾ ಅವಧಿಯಲ್ಲಿ ಮಹತ್ವದ ಬದಲಾವಣೆ ಏಕರೂಪದ ವೇಳಾಪಟ್ಟಿ ಜಾರಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಡಿವೈಡರ್‌ಗೆ ಪೊಲೀಸ್ ವಾಹನ ಡಿಕ್ಕಿ – ಇಬ್ಬರು ಡಿಎಸ್ಪಿ ಸಾವು

(ನ್ಯೂಸ್ ಕಡಬ) newskadaba.com ಜು. 26. ಹೈದರಾಬಾದ್: ತೆಲಂಗಾಣದ ಯಾದಾದ್ರಿಯಲ್ಲಿ ಪೊಲೀಸ್ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಡಿಎಸ್ಪಿ ಅಧಿಕಾರಿಗಳು ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಡಿಎಸ್ಪಿಗಳಾದ ಚಂದ್ರಕರ್ ರಾವ್ ಮತ್ತು ಶಾಂತಾ ರಾವ್‌ರನ್ನು ಮೃತರೆಂದು ಗುರುತಿಸಲಾಗಿದೆ. ಎಎಸ್ಪಿ ಪ್ರಸಾದ್ ಮತ್ತು ಹೆಡ್ ಕಾನ್‌ಸ್ಟೇಬಲ್ ನರಸಿಂಗ್ ರಾವ್ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಹೈದ್ರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿವೈಡರ್‌ಗೆ ಪೊಲೀಸ್ ವಾಹನ ಡಿಕ್ಕಿ – ಇಬ್ಬರು ಡಿಎಸ್ಪಿ ಸಾವು Read More »

ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು

(ನ್ಯೂಸ್ ಕಡಬ) newskadaba.com ಫೆ. 13. ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಭೂಕುಸಿತ ನಡೆದ ಜಾಗದಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭಾರಿ ಸ್ಫೋಟದ ಸದ್ದು ಕೇಳಿ ಬಂದಿದೆ. ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಭೂ ಕುಸಿತದಿಂದ ಗುಡ್ಡ ಕುಸಿದಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೊಡ್ಲಗದ್ದೆ ಗ್ರಾಮದಲ್ಲಿ ಗುಡ್ಡ ಕುಸಿತ ಪರಿಣಾಮ ಸ್ಥಳಿಯರ ತೋಟಕ್ಕೆ ದೊಡ್ಡ ದೊಡ್ಡ ಪ್ರಮಾಣದ ಬಂಡೆಕಲ್ಲು ಹಾಗೂ ಮಣ್ಣಿನ ರಾಶಿ ಉರುಳಿ ಬಂದಿವೆ. ಕಳೆದ ಎರಡು ತಿಂಗಳ ಹಿಂದೆ

ಉತ್ತರಕನ್ನಡದಲ್ಲಿ ಮತ್ತೆ ಭೂಕುಸಿತ, 3 ಕಿ.ಮೀ ದೂರ ಕೇಳಿಸಿದ ಭಾರಿ ಸದ್ದು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಯುವತಿ ನಾಪತ್ತೆ..!

(ನ್ಯೂಸ್ ಕಡಬ) newskadaba.com ಸುರತ್ಕಲ್, ಸೆ. 20. ಸ್ನೇಹಿತೆಯೊಂದಿಗೆ ಮಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳಪೇಟೆಯಲ್ಲಿ ವಾಸವಿದ್ದ ಹನುಮಂತ ಹಾಗೂ ಲಕ್ಷ್ಮವ್ವ ಎಂಬವರ ಮಗಳು ಕುಮಾರಿ ಸುನೀತಾ (19) ಕಾಣೆಯಾದ ಯುವತಿ ಎಂದು ತಿಳಿದು ಬಂದಿದೆ. ಕಾಣೆಯಾಗಿರುವ ಸುನೀತಾ ಸಾಧಾರಣ ಶರೀರ ಹೊಂದಿದ್ದು, 4.5 ಅಡಿ ಎತ್ತರ ಇದ್ದಾರೆ. ಎಣ್ಣೆ ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ತುಳು ಭಾಷೆ ಬಲ್ಲವರಾಗಿದ್ದಾರೆ.

ಯುವತಿ ನಾಪತ್ತೆ..! Read More »

ಕರಾವಳಿ
Scroll to Top