News Kadaba

Theft, crime, Robbery

ದೇವಸ್ಥಾನದಲ್ಲಿ 70,000 ಮೌಲ್ಯದ ನಗದು, ಇತರ ಬೆಲೆಬಾಳುವ ವಸ್ತುಗಳ ಕಳವು

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಜ.09.  ದೇವಸ್ಥಾನವೊಂದಕ್ಕೆ ಅಪರಿಚಿತ ವ್ಯಕ್ತಿಗಳು ನುಗ್ಗಿ ಸುಮಾರು ರೂ. 70,000 ರೂಪಾಯಿ ನಗದು ಹೊಂದಿದ್ದ ಕಾಣಿಕೆ ಪೆಟ್ಟಿಗೆ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ವರದಿಯಾಗಿದೆ. ದಾಪೋಲಿ ಗ್ರಾಮದ ರೇಣುಕಾ ಮಾತಾ ಮಂದಿರದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಬಾಗಿಲಿನ ಬೀಗ ಒಡೆದಿರುವುದು ಮತ್ತು ಹಣದ ಪೆಟ್ಟಿಗೆ ಹಾಗೂ ದೇವಿಯ ವಿಗ್ರಹದ ಬೆಳ್ಳಿ ಸರ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಅರ್ಚಕರು ನೀಡಿರುವ ದೂರಿನ ಆಧಾರದ […]

ದೇವಸ್ಥಾನದಲ್ಲಿ 70,000 ಮೌಲ್ಯದ ನಗದು, ಇತರ ಬೆಲೆಬಾಳುವ ವಸ್ತುಗಳ ಕಳವು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
crime, arrest, suspected

ಉಡುಪಿ: ಎರಡು ಪ್ರತ್ಯೇಕ ಗಾಂಜಾ ಪ್ರಕರಣ..! ➤ ಇಬ್ಬರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com  ಮಣಿಪಾಲ, ಜ.09. ಗಾಂಜಾ ಸೇವನೆಯ ಎರಡು ಪ್ರಕರಣದಲ್ಲಿ ಇಬ್ಬರು ಯುವಕರನ್ನು ಉಡುಪಿ ಪಬ್ ಒಂದರ ಬಳಿ ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ. ಪ್ರಕರಣವೊಂದರಲ್ಲಿ ಉಡುಪಿಯ ಚಿಟ್ಟಾಡಿಯ ಫರೇಶ್(20) ಹಾಗೂ ಮತ್ತೊಂದು ಪ್ರಕರಣದಲ್ಲಿ ಉಡುಪಿ ಒಳಕಾಡುವಿನ ಪ್ರತೀಕ್(22) ಎಂಬವರ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ಧೃಢವಾಗಿದೆ ಎಂದು ವರದಿ ತಿಳಿಸಿದೆ.  

ಉಡುಪಿ: ಎರಡು ಪ್ರತ್ಯೇಕ ಗಾಂಜಾ ಪ್ರಕರಣ..! ➤ ಇಬ್ಬರು ಆರೋಪಿಗಳು ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಲೋಕಾಯುಕ್ತ ಅಧೀಕ್ಷಕರಾದ ಲಕ್ಷ್ಮೀಗಣೇಶ್ ರವರ ದಿಢೀರ್ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.09.  ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡ  ಕರ್ನಾಟಕ ಲೋಕಾಯುಕ್ತದ ಮಂಗಳೂರು ಪೊಲೀಸ್ ಅಧೀಕ್ಷಕ ಲಕ್ಷ್ಮೀಗಣೇಶ್ ರವರು ದಿಢೀರ್ ವರ್ಗಾವಣೆಯಾಗಿದ್ದಾರೆ ಎಂದು ವರದಿ ಪ್ರಕಟಣೆ ತಿಳಿಸಿದೆ. ಮುಂದಿನ ಆದೇಶದವರೆಗೆ ಬೆಂಗಳೂರಿನ ಕರ್ನಾಟಕ ಲೋಕಾಯುಕ್ತದ ಪ್ರಧಾನ ಕಚೇರಿಯಲ್ಲಿ ಖಾಲಿ ಇರುವ ಪೊಲೀಸ್ ಅಧೀಕ್ಷಕರ ಹುದ್ದೆಗೆ ಆಡಳಿತದ ಹಿತದೃಷ್ಟಿಯಿಂದ ಆಂತರಿಕ ವರ್ಗಾವಣೆಗೆ ಆದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಸದರಿ ಹುದ್ದೆ ಪ್ರಭಾರವನ್ನು ಕರ್ನಾಟಕ ಲೋಕಾಯುಕ್ತದ ಪೊಲೀಸ್ ಉಪಾಧೀಕ್ಷಕರ ಹುದ್ದೆಯನ್ನು ಚಲುವರಾಜು ಅವರಿಗೆ ನೀಡಲಾಗಿದೆ. ನೂತನ ಅಧೀಕ್ಷಕರಾಗಿ ಸಿ ಎ ಸೈಮನ್ ಕರ್ತವ್ಯಕ್ಕೆ ನಿಯೋಜನೆಗೊಂಡ ಬಳಿಕ ಹುದ್ದೆಯ ಪ್ರಭಾರವನ್ನು ಅವರಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ,ಮರಳುಗಾರಿಕೆಯ ವಿರುದ್ದ ಕಾನೂನು ಸಮರಕ್ಕೆ

ಮಂಗಳೂರು: ಲೋಕಾಯುಕ್ತ ಅಧೀಕ್ಷಕರಾದ ಲಕ್ಷ್ಮೀಗಣೇಶ್ ರವರ ದಿಢೀರ್ ವರ್ಗಾವಣೆ Read More »

ಕರ್ನಾಟಕ

ಮಲ್ಪೆ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು..! ➤ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ

(ನ್ಯೂಸ್ ಕಡಬ)newskadaba.com  ಮಲ್ಪೆ, ಜ.09. ಮಲ್ಪೆಯ ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃತಪಟ್ಟವರನ್ನು ಸುಶೀಲ್ ರಘುರಾಮ್ ಶೆಟ್ಟಿ(42) ಎಂದು ಗುರುತಿಸಲಾಗಿದೆ. ಇವರು ಮುಂಬಯಿ ನಿವಾಸಿಯಾಗಿದ್ದು, ಮುಂಬಯಿಯಿಂದ  ಊರಿಗೆ ಬಂದ ಇವರು ಮಲ್ಪೆಯ ಲಾಡ್ಜ್ ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಲ್ಪೆ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿ ಮೃತ್ಯು..! ➤ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಭೀಕರ ರಸ್ತೆ ಅಪಘಾತ ➤ 40 ಮಂದಿ ಮೃತ್ಯು, 85 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ದಕ್ಷಿಣ ಅಫ್ರಿಕಾ, ಜ.09.   ಸಾರ್ವಜನಿಕ ಬಸ್‌ವೊಂದರ ಟೈರ್ ಪಂಕ್ಚರ್ ಆಗಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್‌ಗೆ ಢಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 40 ಮಂದಿ ಮೃತಪಟ್ಟ ಹಾಗೂ 85 ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ದಕ್ಷಿಣ ಅಫ್ರಿಕಾದ ಸೆನೆಗಲ್‌ ದೇಶದ ರಾಜಧಾನಿ ಡಾಕಾರ್‌ನಲ್ಲಿ ವರದಿಯಾಗಿದೆ.   85 ಮಂದಿ ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಮೃತ್ಯುವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕಾಫ್ರಿನ್

ಭೀಕರ ರಸ್ತೆ ಅಪಘಾತ ➤ 40 ಮಂದಿ ಮೃತ್ಯು, 85 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿ: ಹೆಚ್ಚಾದ ಹುಚ್ಚು ನಾಯಿ ಹಾವಳಿ..! ➤ ಹಲವರಿಗೆ ಕಡಿತ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಜ. 09. ಹುಚ್ಚುನಾಯಿಯ ಹಾವಳಿ ಮತ್ತೆ ಆರಂಭವಾಗಿದ್ದು,  ಐದಾರು ಮಂದಿಗೆ ಹುಚ್ಚು ನಾಯಿಯೊಂದು ಕಚ್ಚಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ದ್ವಿಚಕ್ರ ವಾಹನ ಚಲಾಯಿಸಲು ಮುಂದಾಗಿದ್ದ ಪತ್ರಕರ್ತರೋರ್ವರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿ ಅವರ ಕಾಲನ್ನು ಕಚ್ಚಿ ಗಂಭೀರ ಗಾಯಗೊಳಿಸಿದೆ. ಗಾಯಾಳುವನ್ನು ಉಪ್ಪಿನಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ವ್ಯಕ್ತಿಯೋರ್ವರ ಮೇಲೆ ದಾಳಿ ನಡೆಸಿ ಓಡಿ ಹೋಗುವ ಸಮಯದಲ್ಲಿ ಸ್ಥಳದಲ್ಲೇ ಇದ್ದ ಕಾರ್ಮಿಕನಿಗೆ ಕಚ್ಚಿದ್ದು,

ಉಪ್ಪಿನಂಗಡಿ: ಹೆಚ್ಚಾದ ಹುಚ್ಚು ನಾಯಿ ಹಾವಳಿ..! ➤ ಹಲವರಿಗೆ ಕಡಿತ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೊರವರಿಗೆ ಅದ್ದೂರಿ ಸ್ವಾಗತ

(ನ್ಯೂಸ್ ಕಡಬ) newskadaba.com ಮೂಡಬಿದ್ರೆ, ಜ.09.  ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಯಾಗಿ ಅಲ್ಫೋನ್ಸ್  ಫ್ರಾಂಕೊರವರು ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಬಂದಾಗ ಅವರಿಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು ಎಂದು ವರದಿಯಾಗಿದೆ. ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಪಕ್ಷದ ನಾಯಕರು ಕಾರ್ಯಕರ್ತರು, ಹಿತೈಷಿಗಳು, ಹಾಗೂ ಮಹಿಳೆಯರು ಅದ್ದೂರಿಯ ಸ್ವಾಗತಿಸಿದರು ಎಂದು ತಿಳಿದು ಬಂದಿದೆ. ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ವಿಮ್ ರಾಷ್ಟ್ರೀಯ ಕಾರ್ಯದರ್ಶಿ ಅಯಿಷಾ ಬಜ್ಪೆ, ಜಿಲ್ಲಾ  ಕಾರ್ಯದರ್ಶಿ

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೊರವರಿಗೆ ಅದ್ದೂರಿ ಸ್ವಾಗತ Read More »

ಕರಾವಳಿ

ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಬೆಳ್ತಂಗಡಿಗೆ ಭೇಟಿ..!

(ನ್ಯೂಸ್ ಕಡಬ)newskadaba.com  ಬೆಳ್ತಂಗಡಿ, ಜ.09. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಕಛೇರಿಗೆ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಅವರು ಭೇಟಿ ನೀಡಿದರು ಎಂದು ವರದಿಯಾಗಿದೆ. ರಿಯಾಜ್ ಕಡಂಬು ಅವರು ನೆರೆದಿದ್ದ ಕಾರ್ಯಕರ್ತರಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸುವ ಕುರಿತು ಮತ್ತು ಪಕ್ಷ ಸಂಘಟಿಸುವಿಕೆಯ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ನವಾಝ್ ಶರೀಫ್ ಕಟ್ಟೆ, ನಿಕಟ ಪೂರ್ವ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಜೊತೆ

ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಬೆಳ್ತಂಗಡಿಗೆ ಭೇಟಿ..! Read More »

ಕರಾವಳಿ, ಕರ್ನಾಟಕ

13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ!

(ನ್ಯೂಸ್ ಕಡಬ) newskadaba.com ಕಾನ್ಪುರ, ಜ.09.   47 ವರ್ಷದ ಶಿಕ್ಷಕನೋರ್ವ 13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿರುವ ಘಟನೆ ಕನೌಜ್ ಬಳಿ ವರದಿಯಾಗಿದೆ. ಶಿಕ್ಷಕ ವಿದ್ಯಾರ್ಥಿನಿಗೆ ಪ್ರೇಮ ಪತ್ರವನ್ನು ಬರೆದು, ಅದನ್ನು ಓದಿದ ಬಳಿಕ ಹರಿದು ಹಾಕು ಎಂದಿದ್ದಾನೆ. ಶಿಕ್ಷಕನ ಈ ಪ್ರೇಮ ಪತ್ರವನ್ನು ಓದಿದ ಬಳಿಕ ಅದನ್ನು ವಿದ್ಯಾರ್ಥಿನಿ ತಮ್ಮ ಪೋಷಕರಿಗೆ ತೋರಿಸಿದ್ದಾಳೆ ಎನ್ನಲಾಗಿದೆ. ವಿದ್ಯಾರ್ಥಿನಿಯ ಪೋಷಕರು ಠಾಣೆಯಲ್ಲಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಠಾಣೆಗೆ ಹೋಗುವ ಮೊದಲು ಪೋಷಕರು ಶಿಕ್ಷಕನ ಬಳಿ ಹೋಗಿ,

13 ವರ್ಷದ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದ 47 ವರ್ಷದ ಶಿಕ್ಷಕ! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Crime

ಉಡುಪಿ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ➤ ಇಬ್ಬರು ಆರೋಪಿಗಳು ಪರಾರಿ

(ನ್ಯೂಸ್ ಕಡಬ)newskadaba.com ಕಾಪು, ಜ.09. ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿನ ಅಕ್ರಮ ಕಸಾಯಿ ಖಾನೆಗೆ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ತಲುಪಿ ಅಲ್ಲಿನ ಫ್ಯಾಕ್ಟರಿಯ ಸಮೀಪ ಮರೆಯಲ್ಲಿ ನಿಂತು ನೋಡಿದಾಗಿ ಹಿಂಭಾಗದ ಹಾದಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ದನದ ಮಾಂಸವನ್ನು ಕಟಾವು ಮಾಡುತ್ತಿರುವುದು ಕಮಡುಬಂದಿದೆ ಎನ್ನಲಾಗಿದೆ. ಈ ವೇಳೆ ಮೊಹಮ್ಮದ್ ಆರೀಫ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಸುಮಾರು 200

ಉಡುಪಿ: ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ ➤ ಇಬ್ಬರು ಆರೋಪಿಗಳು ಪರಾರಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Scroll to Top