News Kadaba

ಕೊಡಗು: ಕಾರ್ಮಿಕರ ಕೊರತೆ ➤ ಭತ್ತ ಕೊಯ್ಲು ಯಂತ್ರಗಳನ್ನು ಬಾಡಿಗೆಗೆ ಪಡೆಯುತ್ತಿರುವ ರೈತರು

(ನ್ಯೂಸ್ ಕಡಬ)newskadaba.com  ಕೊಡಗು, ಜ.16. ಕೃಷಿ ಕ್ಷೇತ್ರದಲ್ಲಿ ಇದೀಗ ಕಾರ್ಮಿಕರ ಕೊರತೆ ಎದುರಾಗಿದ್ದರೂ ಹವಾಮಾನ ವೈಫರೀತ್ಯ ಮತ್ತು ವನ್ಯ ಜೀವಿಗಳ ಸಂಘರ್ಷದಿಂದಾಗಿ ಕೊಡಗಿನಾದ್ಯಂತ ಭತ್ತದ ಬೇಸಾಯ ಹಿಂದೆ ಬಿದಿದ್ದೆ. ಕೃಷಿ ಭೂಮಿ ಕಡಿಮೆಯಾಗಿರುವುದು ಹಾಗೂ ಇತರ ಕ್ಷೇತ್ರಗಳಲ್ಲಿ ಬೇಡಿಕೆಯಿಂದಾಗಿ  ಭತ್ತದ ಕೊಯ್ಲು ಸಮಯದಲ್ಲಿ ಹೊರಗಿನಿಂದ ಕಾರ್ಮಿಕರು ಜಿಲ್ಲೆಗೆ ವಲಸೆ ಬರುವವರ ಸಂಖ್ಯೆಯೂ ಕ್ಷೀಣಿಸಿದೆ. ಕಾರ್ಮಿಕರ ತೀವ್ರ ಕೊರತೆಯಿಂದಾಗಿ, ಸಾಂಪ್ರದಾಯಿಕ ರೈತರು ಈಗ ಭತ್ತ ಕಟಾವು ಯಂತ್ರಗಳ ಸಹಾಯವನ್ನು ಪಡೆಯುತ್ತಿದ್ದಾರೆ, ಅದು ದುಬಾರಿಯಾಗಿದೆ. ಕಾರ್ಮಿಕರ ಕೊರತೆಯಿಂದ ಭತ್ತ ಕಟಾವು […]

ಕೊಡಗು: ಕಾರ್ಮಿಕರ ಕೊರತೆ ➤ ಭತ್ತ ಕೊಯ್ಲು ಯಂತ್ರಗಳನ್ನು ಬಾಡಿಗೆಗೆ ಪಡೆಯುತ್ತಿರುವ ರೈತರು Read More »

ಕರ್ನಾಟಕ

ಮೊದಲ ಎಲೆಕ್ಟ್ರಿಕ್​​​ ಬಸ್​’ಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಕೆ.ಎಸ್‍.ಆರ್.ಟಿ.ಸಿ ಯ ಮೊದಲ ಎಲೆಕ್ಟ್ರಿಕ್ ಬಸ್‍ಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಕಳೆದ ಒಂದು ವಾರದಿಂದ ಡಿಪೋ ನಲ್ಲೇ ಪ್ರಾಯೋಗಿಕವಾಗಿ ಓಡಾಟ ನಡೆಸುತ್ತಿದ್ದ ಕೆಎಸ್​​​ಆರ್​​​ಟಿಸಿ ಎಲೆಕ್ಟ್ರಿಕ್​​​ ಬಸ್​ಗಳು ರಸ್ತೆಗೆ ಇಳಿದಿವೆ. ಮೆಜೆಸ್ಟಿಕ್​ ಕೆಎಸ್​​ಆರ್​​ಟಿಸಿ ನಿಲ್ದಾಣದ ಡಿಸಿ ಚಂದ್ರಶೇಖರ್ ಹಾಗೂ ಕೆಎಸ್​​​ಆರ್​​​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ಅವರು ಮೆಜೆಸ್ಟಿಕ್ ಕೆಎಸ್​​​ಆರ್​​​ಟಿಸಿ ನಿಲ್ದಾಣದಲ್ಲಿ ಎಲೆಕ್ಟ್ರಿಕ್​ ಬಸ್​​ಗೆ ಚಾಲನೆ ನೀಡಿದ್ದಾರೆ. ಬೆಂಗಳೂರು-ಮೈಸೂರು ನಡುವೆ ಮೊದಲ ಎಲೆಕ್ಟ್ರಿಕ್​​ ಬಸ್ ಸೇವೆ ಇಂದಿನಿಂದ ಆರಂಭವಾಗಿದೆ. ಎಕ್ಸ್​​​ಪ್ರೆಸ್ ವೇನಲ್ಲಿ ಈ ಕೆಎಸ್​ಆರ್​​ಟಿಸಿ

ಮೊದಲ ಎಲೆಕ್ಟ್ರಿಕ್​​​ ಬಸ್​’ಗೆ ಅಧಿಕೃತ ಚಾಲನೆ Read More »

ಕರ್ನಾಟಕ

ಡಾಕ್ಟರ್‌ ವೇಷ ಧರಿಸಿ ಕಳ್ಳತನ ! ➤ ರೋಗಿಯ ಚಿನ್ನದ ಸರ ಕದ್ದು ಪರಾರಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದುಡಿದು ಜೀವನ ಮಾಡಲು ಸಾವಿರಾರು ದಾರಿಗಳಿವೆ. ಆದರೂ, ದುಡಿದು ತಿನ್ನುವುದನ್ನು ಬಿಟ್ಟು ಇಲ್ಲೊಬ್ಬ ಖತರ್ನಾಕ್‌ ಮಹಿಳೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ವೈದ್ಯರ ವೇಷವನ್ನು ಧರಿಸಿಕೊಂಡು ಹೋಗಿ ರೋಗಿಗೆ ಚಿಕಿತ್ಸೆ ನೀಡುವುದಾಗಿ ಚಿಕಿತ್ಸಾ ಕೊಠಡಿಗೆ ತೆರಳಿ ಎಚ್ಚರವಿಲ್ಲದೆ ಮಲಗಿದ್ದ  ರೋಗಿಯ ಚಿನ್ನದ ಸರ ಮತ್ತು ಉಂಗುರವನ್ನು ಕದ್ದು ಪರಾರಿ ಆಗಿದ್ದಾಳೆ. ನಾನಾ ವೇಷ ಧರಿಸಿ ಕಳ್ಳತನ ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಹಲವು ಆರೋಪಗಳಿಗೆ ಶಿಕ್ಷೆ ಆಗುವುದನ್ನು ನಾವು ಪ್ರತಿನಿತ್ಯ

ಡಾಕ್ಟರ್‌ ವೇಷ ಧರಿಸಿ ಕಳ್ಳತನ ! ➤ ರೋಗಿಯ ಚಿನ್ನದ ಸರ ಕದ್ದು ಪರಾರಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆ ! ➤  ಗೃಹ ಸಚಿವ ಆರಗ ಜ್ಞಾನೇಂದ್ರ..!

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಸ್ಯಾಂಟ್ರೋ ರವಿ ಪ್ರಕರಣದ ತನಿಖಾ ಜವಾಬ್ಜಾರಿಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರಗ ಜ್ಞಾನೇಂದ್ರ ಅವರು, ‘ವಂಚಕ ಎನ್ನಲಾದ ಸ್ಯಾಂಟ್ರೋ ರವಿ ವಿರುದ್ಧದ ದೂರುಗಳ ತನಿಖೆಗೆ ರಾಜ್ಯ ಸರ್ಕಾರ ಸಿಐಡಿಗೆ ಆದೇಶಿಸಿದೆ ಎಂದು ಹೇಳಿದ್ದಾರೆ.    

ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವರ್ಗಾವಣೆ ! ➤  ಗೃಹ ಸಚಿವ ಆರಗ ಜ್ಞಾನೇಂದ್ರ..! Read More »

ಕರಾವಳಿ

72 ವರ್ಷಗಳ ಹಳೆಯ ಪ್ರಕರಣ ಕೊನೆಗೂ ಇತ್ಯರ್ಥ !

(ನ್ಯೂಸ್ ಕಡಬ)newskadaba.com ಕೊಲ್ಕತ್ತ, ಜ.16. 72 ವರ್ಷದ ಹಿಂದಿನ ಅತ್ಯಂತ ಹಳೆಯ ಪ್ರಕರಣವೊಂದು ಇದೀಗ ಕೋಲ್ಕೊತ್ತಾ ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿದೆ. ವಿಶೇಷ ಎಂದರೆ, ಪ್ರಕರಣ ಇತ್ಯರ್ಥಗೊಳಿಸಿದ ಮುಖ್ಯ ನ್ಯಾಯಮೂರ್ತಿಯವರು ಜನಿಸಿದ್ದೇ ಈ ಪ್ರಕರಣ ದಾಖಲಾಗಿದ್ದ ಹತ್ತು ವರ್ಷಗಳ ಬಳಿಕ! ಸಾಮಾನ್ಯವಾಗಿ ಯಾವುದೇ ಪ್ರಕರಣ ಕೋರ್ಟ್ ಮೆಟ್ಟಿಲೇರಿದರೆ ಅದು ಇತ್ಯರ್ಥ ಕಾಣಲು ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಏಳು ದಶಕಕ್ಕೂ ಹೆಚ್ಚು ಕಾಲ ಕಾಯಬೇಕಾಗಿ ಬಂದಿದೆ. ದೇಶದ ಅತ್ಯಂತ ಹಳೆಯ ಹೈಕೋರ್ಟ್ ಕೋಲ್ಕೊತ್ತಾ ಹೈಕೋರ್ಟ್‌ನಲ್ಲಿ 72 ವರ್ಷಗಳ ಹಳೆಯ

72 ವರ್ಷಗಳ ಹಳೆಯ ಪ್ರಕರಣ ಕೊನೆಗೂ ಇತ್ಯರ್ಥ ! Read More »

ರಾಷ್ಟ್ರೀಯ ನ್ಯೂಸ್

ಕೇಂದ್ರ ಸಚಿವೆ ಬೆಂಗಾವಲು ವಾಹನ ಪಲ್ಟಿ ➤  ಐವರಿಗೆ ಗಂಭೀರ ಗಾಯ..!

(ನ್ಯೂಸ್ ಕಡಬ)newskadaba.com  ಬಕ್ಸರ್, ಜ.16. ಕೇಂದ್ರ ಸಚಿವೆ ಅಶ್ವಿನಿ ಕುಮಾರ್ ಚೌಬೆ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ಐವರು ಗಂಭೀರ ಗಾಯಗೊಂಡಿರುವ ಘಟನೆ  ಬಿಹಾರದಲ್ಲಿ ವರದಿಯಾಗಿದೆ. ಕೇಂದ್ರ ಸಚಿವರು ಬಕ್ಸರ್ ನಿಂದ ಪಾಟ್ನಾಗೆ ಹೋಗುತ್ತಿದ್ದ ವೇಳೆ ಅವಘಢ ಸಂಭವಿಸಿದೆ ಎನ್ನಲಾಗಿದೆ. ಪೊಲೀಸ್ ಠಾಣೆಯ ನಾಲ್ವರು ಪೊಲೀಸರು ಮತ್ತು ಅವರೊಂದಿಗೆ ಪ್ರಯಾಣಿಸುತ್ತಿದ್ದ ವಾಹನದ ಚಾಲಕ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.  

ಕೇಂದ್ರ ಸಚಿವೆ ಬೆಂಗಾವಲು ವಾಹನ ಪಲ್ಟಿ ➤  ಐವರಿಗೆ ಗಂಭೀರ ಗಾಯ..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೋರಿ ಬೆದರಿಸುವ ಸ್ಪರ್ಧೆ ➤  ಹೋರಿ ತಿವಿದು ಇಬ್ಬರು ಮೃತ್ಯು..!

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಜ.16. ಹೋರಿ ಬೆದರಿಸುವ ಹಬ್ಬದಲ್ಲಿ ಇಬ್ಬರು ಬಲಿಯಾಗಿರುವ ಪ್ರತ್ಯೇಕ ದುರ್ಘಟನೆಗಳು ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಡೆದಿವೆ. ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಕೊನಗವಳ್ಳಿಯಲ್ಲಿ ನಡೆದಿದ್ದ ಹೋರಿಬೆದರಿಸುವ ಸ್ಪರ್ಧೆಯನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಆಲ್ಕೊಳ ನಿವಾಸಿ ಲೋಕೇಶ್ (32) ಎದೆಗೆ ಹೋರಿ ತಿವಿದು ಮೃತಪಟ್ಟಿದ್ದಾರೆ.

ಹೋರಿ ಬೆದರಿಸುವ ಸ್ಪರ್ಧೆ ➤  ಹೋರಿ ತಿವಿದು ಇಬ್ಬರು ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನ! ➤  ಇಬ್ಬರು ಪೊಲೀಸರ ಅಮಾನತು..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.16. ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನಿಸಿದ ಆರೋಪದ ಮೇರೆಗೆ ಬೆಂಗಳೂರಿನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಕಳೆದವಾರ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ ಇದೀಗ ಆರೋಪಿತ ಇಬ್ಬರು ಪೊಲೀಸರನ್ನು ಅಮಾನತು ಮಾಡಿದೆ. ಇಬ್ಬರನ್ನು ಅಮಾನತು ಮಾಡಲಾಗಿದ್ದು, ಇಬ್ಬರು ಕಾನ್ಸ್​ಟೆಬಲ್​ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿರುವುದನ್ನು ಡಿಸಿಪಿ ಸಿ.ಕೆ.ಬಾಬಾ ದೃಢಪಡಿಸಿದ್ದಾರೆ. ‘ವಿಚಾರಣೆಯು ಮುಕ್ತಾಯಗೊಂಡಿದ್ದು, ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿರುವುದು

ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನ! ➤  ಇಬ್ಬರು ಪೊಲೀಸರ ಅಮಾನತು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ನಕಲಿ ಗೊಬ್ಬರ ತಯಾರಿ ಘಟಕ ಪತ್ತೆ ➤  ಕೃಷಿ ಅಧಿಕಾರಿಗಳ ದಾಳಿ..!

(ನ್ಯೂಸ್ ಕಡಬ)newskadaba.com  ಮೈಸೂರು, ಜ.16. ನಕಲಿ ರಸಗೊಬ್ಬರ ತಯಾರಿ ದಾಸ್ತಾನು ಘಟಕದ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಶ್ಯಾದನಹಳ್ಳಿಯಲ್ಲಿ ಅಕ್ರಮವಾಗಿ ಎದ್ದು ನಿಂತಿದ್ದ ದಾಸ್ತಾನು ಘಟಕದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಕಲಿ ರಸಗೊಬ್ಬರ ವಶಕ್ಕೆ ಪಡೆದಿದ್ದಾರೆ. 50ಕ್ಕೂ ಹೆಚ್ಚು ನಕಲಿ ರಸಗೊಬ್ಬರದ ಚೀಲ ಕಚ್ಚಾ ವಸ್ತು ಚೀಲ ಹೊಲೆಯುವ ಯಂತ್ರ ವಶಕ್ಕೆ ಪಡೆದಿದ್ದಾರೆ. ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಹೇಶ್ ಎಂಬುವವರಿಂದ ನಕಲಿ ರಸಗೊಬ್ಬರ ತಯಾರಿ ಆರೋಪ

ನಕಲಿ ಗೊಬ್ಬರ ತಯಾರಿ ಘಟಕ ಪತ್ತೆ ➤  ಕೃಷಿ ಅಧಿಕಾರಿಗಳ ದಾಳಿ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಯಾಂಟ್ರೋ ರವಿಗೆ ಜ.25 ರವರೆಗೆ ನ್ಯಾಯಾಂಗ ಬಂಧನ ➤ ಕೋರ್ಟ್ ಆದೇಶ..!

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.16. ಸ್ಯಾಂಟ್ರೊ ರವಿಯನ್ನು ಪೊಲೀಸ್ ವಶಕ್ಕೆ ನೀಡಲು ನಿರಾಕರಿಸಿರುವ ಕೋರ್ಟ್ ಜನವರಿ 25ರ ವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸ್ಯಾಂಟ್ರೋ ರವಿ ಪ್ರಕರಣನ್ನು ಸಿಐಡಿಗೆ ವರ್ಗಾವಣೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದು, ಮೈಸೂರಿನ ವಿಜಯನಗರ ಪೊಲೀಸರು ಮೈಸೂರು ಜೈಲಿನಿಂದ ಸ್ಯಾಂಟ್ರೊ ರವಿ, ಪ್ರೇಮ್‌ಜಿ ಮತ್ತು ಶ್ರುತೇಶ್‌ರನ್ನು ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯ ಸ್ಯಾಂಟ್ರೊ ರವಿ ಮತ್ತು ಇತರ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಲು

ಸ್ಯಾಂಟ್ರೋ ರವಿಗೆ ಜ.25 ರವರೆಗೆ ನ್ಯಾಯಾಂಗ ಬಂಧನ ➤ ಕೋರ್ಟ್ ಆದೇಶ..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top