News Kadaba

ತಂದೆಯ ಸಾವಿನ ಸುದ್ದಿ ತಿಳಿದ ಬಳಿಕ ಬಾವಿಗೆ ಹಾರಿದ 11 ವರ್ಷದ ಬಾಲಕಿ

(ನ್ಯೂಸ್ ಕಡಬ)newskadaba.com  ಮಧ್ಯಪ್ರದೇಶ, ಜ.21. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯಲ್ಲಿ ತಂದೆಯ ಸಾವಿನ ಸುದ್ದಿ ತಿಳಿದ 11 ವರ್ಷದ ಬಾಲಕಿ ಬಾವಿಗೆ ಹಾರಿ ಮೃತಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಬರ್ಖೇಡಾ ಜಾಗೀರ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ದೇಹತ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಪಹಲ್ವಾನ್ ಚೌಹಾನ್ ಹೇಳಿದ್ದಾರೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಾಲಕಿಯ ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸಾವಿನ ಸುದ್ದಿಯನ್ನು ಅವರ […]

ತಂದೆಯ ಸಾವಿನ ಸುದ್ದಿ ತಿಳಿದ ಬಳಿಕ ಬಾವಿಗೆ ಹಾರಿದ 11 ವರ್ಷದ ಬಾಲಕಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

‘ಕೇಂದ್ರ ಸರ್ಕಾರ’ದಿಂದ ಕೋಟ್ಯಾಂತರ ಕಾರ್ಮಿಕರಿಗೆ ಸಿಹಿ ಸುದ್ದಿ ➤ ‘ಹೊಸ ಯೋಜನೆ’ಗಳ ಆರಂಭಕ್ಕೆ ‘ಇ-ಲೇಬರ್ ಪೋರ್ಟಲ್’ ಪ್ರಾರಂಭ

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.21. ಕೇಂದ್ರ ಸರ್ಕಾರವು 2021-2022ರ ಕೇಂದ್ರ ಬಜೆಟ್ ನಲ್ಲಿ ಸಾರ್ವಜನಿಕರಿಗೆ ಅನೇಕ ಭರವಸೆಗಳನ್ನ ನೀಡಿತ್ತು, ಅದ್ರಲ್ಲಿ ಹಲವು ಈಡೇರಿಸಿದೆ. ಅದ್ರಂತೆ, ಬಜೆಟ್ ನಲ್ಲಿ ಮೋದಿ ಸರ್ಕಾರವು ಅಸಂಘಟಿತ ವಲಯದ ಕೋಟ್ಯಂತರ ಜನರಿಗೆ ಇ-ಕಾರ್ಮಿಕರಿಗಾಗಿ ಪೋರ್ಟಲ್ ತರುವುದಾಗಿ ಭರವಸೆ ನೀಡಿತ್ತು. ಇದನ್ನ ಸರ್ಕಾರವು ಆಗಸ್ಟ್ 2022ರಲ್ಲಿಯೇ ಪೂರ್ಣಗೊಳಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಇಂತಹ ಹಲವು ಭರವಸೆಗಳನ್ನ ನೀಡಿದ್ದರು, ಅದರ ಮೇಲೆ ಸರ್ಕಾರ ಈಗ ತನ್ನ ಪ್ರಗತಿಯನ್ನ ಹೇಳುತ್ತಿದೆ.  

‘ಕೇಂದ್ರ ಸರ್ಕಾರ’ದಿಂದ ಕೋಟ್ಯಾಂತರ ಕಾರ್ಮಿಕರಿಗೆ ಸಿಹಿ ಸುದ್ದಿ ➤ ‘ಹೊಸ ಯೋಜನೆ’ಗಳ ಆರಂಭಕ್ಕೆ ‘ಇ-ಲೇಬರ್ ಪೋರ್ಟಲ್’ ಪ್ರಾರಂಭ Read More »

ರಾಷ್ಟ್ರೀಯ ನ್ಯೂಸ್

ಮುರುಡೇಶ್ವರ – ಬೆಂಗಳೂರು ರೈಲು ಸೇವೆ 5 ತಿಂಗಳು ವಿಸ್ತರಣೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.21. ಚಳಿಗಾಲದ ಅವಧಿಗಾಗಿ ಜನವರಿ ಮಾಸಾಂತ್ಯ ತನಕ ಆರಂಭಿಸಲಾದ ಮುರುಡೇಶ್ವರ- ಪಡೀಲ್​ ಬೈಪಾಸ್​- ಯಶವಂತಪುರ ಸಾಪ್ತಾಹಿಕ ಸ್ಪೆಷಲ್​ ಎಕ್ಸ್​ಪ್ರೆಸ್​ (06563/06564) ರೈಲನ್ನು ಕರಾವಳಿಯ ಜನರ ಬೇಡಿಕೆಯಂತೆ ಮೇ ತಿಂಗಳ ಕೊನೆಯವರೆಗೆ ವಿಸ್ತರಿಸಿ ನೈಋತ್ಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ವಾರಕ್ಕೊಮ್ಮೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 1 ಗಂಟೆಗೆ ಮುರ್ಡೇಶ್ವರ ತಲುಪುತ್ತಿದೆ. ಮುರ್ಡೇಶ್ವರದಿಂದ ಹೊರಟು ಮರುದಿನ ಮುಂಜಾನೆ 4ಕ್ಕೆ ಯಶವಂತಪುರ ತಲುಪುತ್ತಿದೆ. ವಾರಾಂತ್ಯ ಬೆಂಗಳೂರಿನಿಂದ ರಾತ್ರಿ ತಡವಾಗಿ ಹೊರಡುವ ಕಾರಣದಿಂದ ಬೆಂಗಳೂರಿನಲ್ಲಿ ಇರುವ

ಮುರುಡೇಶ್ವರ – ಬೆಂಗಳೂರು ರೈಲು ಸೇವೆ 5 ತಿಂಗಳು ವಿಸ್ತರಣೆ Read More »

ಕರಾವಳಿ, ಕರ್ನಾಟಕ

ರಾಜ್ಯದ ರೈತರಿಗೆ ಗುಡ್ ನ್ಯೂಸ್   ➤ ಇನ್ಮುಂದೆ 7 ಗಂಟೆ ನಿರಂತರ ‘ವಿದ್ಯುತ್’ ಸರಬರಾಜು

(ನ್ಯೂಸ್ ಕಡಬ)newskadaba.com  ಮೈಸೂರು, ಜ.21. ರಾಜ್ಯದ ರೈತರಿಗೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದು, ರೈತರಿಗೆ ಏಳು ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ವಿದ್ಯುತ್ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗಿದ್ದರೂ ಸರಬರಾಜು ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತದೆ, ಲೋಡ್ ಶೆಡ್ಡಿಂಗ್ ಇಲ್ಲದಂತೆ ವಿದ್ಯುತ್ ಅನ್ನು ಯಶಸ್ವಿಯಾಗಿ

ರಾಜ್ಯದ ರೈತರಿಗೆ ಗುಡ್ ನ್ಯೂಸ್   ➤ ಇನ್ಮುಂದೆ 7 ಗಂಟೆ ನಿರಂತರ ‘ವಿದ್ಯುತ್’ ಸರಬರಾಜು Read More »

ಕರ್ನಾಟಕ

ಆಟೋ ಹತ್ತಿದ ಮಗಳನ್ನೇ ಪಟಾಯಿಸಿದ ➤ ಸೂಸೈಡ್​ ನಾಟಕ ಮಾಡಿದ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ಆಟೋ ಡ್ರೈವರ್ ಜೊತೆಗೆ ಪ್ರೀತಿಗೆ ಬಿದ್ದಿದ್ದ ಮಗಳಿಗೆ ಪೋಷಕರು ಬುದ್ಧಿಮಾತು ಹೇಳಲು ಮುಂದಾಗಿದ್ದರು. ಆದರೆ ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಹೆಚ್​​ಎಎಲ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಲಾವಣ್ಯ ಎಂದು ಗುರುತಿಸಲಾಗಿದ್ದು, ತನ್ನ ಪ್ರೀತಿಯನ್ನು ಸಾಬೀತು ಪಡಿಸಲು ಮುಂದಾಗಿ ವಿಷ ಸೇವನೆ ಮಾಡಿದ್ದ ಯುವತಿ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾಳೆ.  

ಆಟೋ ಹತ್ತಿದ ಮಗಳನ್ನೇ ಪಟಾಯಿಸಿದ ➤ ಸೂಸೈಡ್​ ನಾಟಕ ಮಾಡಿದ ಯುವತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ      

(ನ್ಯೂಸ್ ಕಡಬ)newskadaba.com  ವಿಜಯಪುರ, ಜ.21. ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಗಂಡ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ. ಇದೇ ಕಾರಣಕ್ಕೆ ಅವಳ ಪತಿ ದಾನಯ್ಯ ಗಣಚಾರಿ ಕೊಲೆ ಮಾಡಿದ್ದಾನೆ. ಈ ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು.

ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ       Read More »

ಕರ್ನಾಟಕ, ಕ್ರೈಮ್ ನ್ಯೂಸ್

ಫೆ.6 ರಂದು ರಾಜ್ಯಕ್ಕೆ ಮತ್ತೆ ‘ಪ್ರಧಾನಿ ಮೋದಿ’ ಭೇಟಿ   

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ಕರ್ನಾಟಕದಲ್ಲಿ ಮತದಾರರನ್ನು ಸೆಳೆಯುತ್ತಿರುವ ಬಿಜೆಪಿ ಈಗಾಗಲೇ ರಾಜ್ಯದ ಹಲವು ಕಡೆ ಭರ್ಜರಿ ಸಮಾವೇಶ, ಪ್ರಚಾರ ನಡೆಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಫೆ.6 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಧಾರವಾಡ, ತುಮಕೂರು ಜಿಲ್ಲೆಗೆ ಭೇಟಿ ನೀಡಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಸಮಾವೇಶದ ವೇದಿಕೆಯಲ್ಲಿ ಪ್ರಧಾನಿ ಮೋದಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ

ಫೆ.6 ರಂದು ರಾಜ್ಯಕ್ಕೆ ಮತ್ತೆ ‘ಪ್ರಧಾನಿ ಮೋದಿ’ ಭೇಟಿ    Read More »

ಕರ್ನಾಟಕ

ಕೆಆರ್‌ಎಸ್‌ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

(ನ್ಯೂಸ್ ಕಡಬ)newskadaba.com  ಕೊಪ್ಪಳ, ಜ.21. ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್‌.ಎಸ್‌) ಪಕ್ಷದ ಹತ್ತು ಜನ ಕಾರ್ಯಕರ್ತರು ಇಲ್ಲಿನ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಬಳಿಕ ಅವರಿಗೆ ಮಧ್ಯಂತರ ಜಾಮೀನು ಲಭಿಸಿದೆ. ಕೆಆರ್‌ಎಸ್‌ ಪದಾಧಿಕಾರಿಯೊಬ್ಬರ ಸಂಬಂಧಿಕರ ಹೆರಿಗೆ ಜಿಲ್ಲಾಸ್ಪತ್ರೆಯಲ್ಲಿ ಆಗಿದ್ದು, ಮಾತ್ರೆ ತೆಗೆದುಕೊಳ್ಳುವ ವಿಷಯಕ್ಕೆ ಸಂಬಂಧಿಸಿ ಕಾರ್ಯಕರ್ತ ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ಜಟಾಪಟಿಯಾಗಿದೆ ಎಂದು ತಿಳಿದುಬಂದಿದೆ. ಬಳಿಕ ಕೆಲ ಕಾರ್ಯಕರ್ತರು ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ

ಕೆಆರ್‌ಎಸ್‌ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ Read More »

ಕರ್ನಾಟಕ

ಭಾರತವನ್ನು ಹಿಮ್ಮೆಟ್ಟಿಸಲು ಅಸಾಧ್ಯ ➤ ಸಚಿವ ಅಮಿತ್‌ ಶಾ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಜ.21. ದೇಶದ ಭದ್ರತಾಸಂಸ್ಥೆಗಳು ತಮ್ಮ ಕಾರ್ಯವೈಖರಿಯಲ್ಲಿ ಪಾರಮ್ಯ ಮೆರೆದಿದ್ದು, ಇಂದಿಗೆ ಭಾರತವನ್ನು ಯಾರಿಗೂ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ನಿರ್ಲಕ್ಷಿಸಲೂ ಕೂಡ ಆಸ್ಪದವಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಡಿಜಿಪಿ ಹಾಗೂ ಐಜಿಪಿಗಳ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಿಂದೆಂದಿಗಿಂತ ಸುರಕ್ಷಿತ, ಸದೃಢ ಹಾಗೂ ಉತ್ತಮ ಸ್ಥಾನದಲ್ಲಿದೆ ಎಂದಿದ್ದಾರೆ. ಅಲ್ಲದೇ, ಮೋದಿ ಅವರ ಆಡಳಿತದಲ್ಲಿ ಭದ್ರತಾ ಸಂಸ್ಥೆಗಳು ಸ್ವತಂತ್ರವಾಗಿದ್ದು, ದೇಶ ರಕ್ಷಣೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ

ಭಾರತವನ್ನು ಹಿಮ್ಮೆಟ್ಟಿಸಲು ಅಸಾಧ್ಯ ➤ ಸಚಿವ ಅಮಿತ್‌ ಶಾ Read More »

ರಾಷ್ಟ್ರೀಯ ನ್ಯೂಸ್

ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

(ನ್ಯೂಸ್ ಕಡಬ)newskadaba.com  ಪಣಜಿ, ಜ. 21. ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ಚಾರ್ಟರ್ಡ್ ವಿಮಾನ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆ ಮಾಡಿ ಉಜ್ಬೇಕಿಸ್ತಾನದತ್ತ ಪ್ರಯಾಣಿಸಿದೆ. ದಕ್ಷಿಣ ಗೋವಾದ ದಬೋಲಿಮ್ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 4.15ಕ್ಕೆ ವಿಮಾನ ಲ್ಯಾಂಡ್ ಆಗಬೇಕಿತ್ತು. ಅಜುರ್ ಏರ್ ಸಂಸ್ಥೆಯ ಈ ವಿಮಾನ ಭಾರತೀಯ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲು ಮಾರ್ಗ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಬಂದಿರುವ ಕುರಿತು, ಡಾಬೋಲಿಮ್ ವಿಮಾನ ನಿಲ್ದಾಣದ

ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top