News Kadaba

ಶ್ರದ್ದಾ ವಾಕರ್ ಹತ್ಯೆ ಪ್ರಕರಣ ➤ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧ

(ನ್ಯೂಸ್ ಕಡಬ)newskadaba.com ನವದೆಹಲಿ, ಜ.23. ದೆಹಲಿಯಲ್ಲಿ ತನ್ನ ಲಿವ್ ಇನ್ ಸಂಗಾತಿ ಶ್ರದ್ದಾ ವಾಕರ್ ಳನ್ನು ಹತ್ಯೆಗೈದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲ ವಿರುದ್ದ ದೆಹಲಿ ಪೊಲೀಸರು 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದ್ದಾರೆ. ಫೋರೆನ್ಸಿಕ್ ಸಾಕ್ಷ್ಯಗಳು, 100ಕ್ಕೂ ಅಧಿಕ ಸಾಕ್ಷಿ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚಾರ್ಜ್‌ಶೀಟ್‌ನಲ್ಲಿದೆ. ಅಫ್ತಾಬ್ ತಪ್ಪೊಪ್ಪಿಗೆ, ನಾರ್ಕೋ ಪರೀಕ್ಷೆಯ ಫಲಿತಾಂಶ, ಫೊರೆನ್ಸಿಕ್ ವರದಿಯನ್ನೂ ಉಲ್ಲೇಖಿಸಲಾಗಿದೆ. ಕಾನೂನು ತಜ್ಞರು ಇದನ್ನು ಪರಿಶೀಲಿಸುತ್ತಿದ್ದಾರೆ. ಅಫ್ತಾಬ್ ಮತ್ತು ಶ್ರದ್ದಾ ನಡುವೆ ನಡೆದ ಸಂಭಾಷಣೆಯ ಆಡಿಯೋ ಕ್ಲಿಪ್ ಪೊಲೀಸರಿಗೆ […]

ಶ್ರದ್ದಾ ವಾಕರ್ ಹತ್ಯೆ ಪ್ರಕರಣ ➤ 3,000 ಪುಟಗಳ ಚಾರ್ಜ್‌ಶೀಟ್ ಸಿದ್ಧ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.23. ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಕುಂಡಂಗುಯಿಯಲ್ಲಿ ಸಂಭವಿಸಿದೆ ಎನ್ನಲಾಗಿದೆ. ಕುಂಡಂಗುಯಿ ಚಂದ್ರ ಎಂಬವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12)ಮೃತದೇಹ ಪತ್ತೆಯಾಗಿದೆ. ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ವರದಿ ತಿಳಿಸಿದೆ. ನಾರಾಯಣಿರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾಳ ಮೃತದೇಹ ಮನೆಯ ಕೋಣೆಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗಿದೆ..

ಕಾಸರಗೋಡು: ತಾಯಿ ಮತ್ತು ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುರತ್ಕಲ್ : ರೈಲ್ವೇ ಹಳಿ  ಮೇಲೆ ಯುವಕನೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಅಪರಿಚಿತ ಯುವಕನೊಬ್ಬನ ಮೃತದೇಹವು ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿರುವ ಘಟನೆ ಕುಳಾಯಿಗುಡ್ಡೆ ರೈಲ್ವೆ ಸೇತುವೆ ಬಳಿ ನಡೆದಿದೆ ಎಂದು ವರದಿ ತಿಳಿಸಿದೆ. 30 ವರ್ಷದ ಯುವಕನ ಛಿದ್ರವಾದ ಮೃತದೇಹ ಪತ್ತೆಯಾಗಿದ್ದು, ಈತ ರೈಲಿಗೆ ಸಿಲುಕಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯು ಕಪ್ಪು ನೈಟ್ ಪ್ಯಾಂಟ್, ಹಳದಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ಇದ್ದರೆ ಸುರತ್ಕಲ್ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.  

ಸುರತ್ಕಲ್ : ರೈಲ್ವೇ ಹಳಿ  ಮೇಲೆ ಯುವಕನೋರ್ವನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ    ➤ ಆರೋಪಿ ಅರೆಸ್ಟ್                  

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸಾರ್ವಜನಿಕರು ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಕಂಕನಾಡಿ ಬಳಿ ವರದಿಯಾಗಿದೆ. ಉಳ್ಳಾಲದ ನಿವಾಸಿ ನವಾಜ್‌ (35)ಗೆ ಥಳಿಸಲಾಗಿದೆ ಎನ್ನಲಾಗಿದೆ. ಬಾಲಕಿ ಗಿಡವೊಂದರಿಂದ ಹಣ್ಣು ಕೀಳುತ್ತಿದ್ದಾಗ ಅಲ್ಲಿಯೇ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ನವಾಜ್‌ ಲೈಂಗಿಕ ಕಿರುಕುಳ ನೀಡಿದ್ದು, ಈ ವೇಳೆ ಬಾಲಕಿ ಬೊಬ್ಬೆ ಹಾಕಿದ್ದಳು. ಇದನ್ನು ಕೇಳಿ ಅಲ್ಲಿದ್ದವರು ಬಂದು ನವಾಜ್ ಗೆ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ವರದಿ ತಿಳಿಸಿದೆ.

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ    ➤ ಆರೋಪಿ ಅರೆಸ್ಟ್                   Read More »

ಕರಾವಳಿ, ಕ್ರೈಮ್ ನ್ಯೂಸ್

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್ ಕಂಟೈನರ್ ಲಾರಿ ಪಲ್ಟಿ

(ನ್ಯೂಸ್ ಕಡಬ)newskadaba.com ಕುಂದಾಪುರ, ಜ.23. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಸಂಗಂ ಜಂಕ್ಷನ್ ನಲ್ಲಿ ಸಿಮೆಂಟ್ ತುಂಬಿದ ಕಂಟೈನರ್ ಪಲ್ಟಿಯಾಗಿ ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕಾರೊಂದು ಜಖಂಗೊಂಡು ಮೂರು ಗಂಟೆಗಿಂತಲೂ ಹೆಚ್ಚು ಸಂಚಾರ ವ್ಯತ್ಯಯಗೊಂಡ ಘಟನೆ ಕುಂದಾಪುರದಲ್ಲಿ ವರದಿಯಾಗಿದೆ. ಕೊಪ್ಪಳದಿಂದ ಸುಮಾರು 50 ಟನ್ ಗಿಂತಲೂ ಹೆಚ್ಚು ಸಿಮೆಂಟ್ ತುಂಬಿದ್ದ ಕಂಟೈನರ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಯಾರ್ಡ್ ಗೆ ಪ್ರಯಾಣಿಸುತ್ತಿತ್ತು. ಚಾಲಕ ರಾಹುಲ್ ಕುಡಿದು ಟೈಟಾಗಿ ವಾಹನ ಚಾಲನೆ ಮಾಡುತ್ತಿದ್ದ ಪರಿಣಾಮ ಸಂಗಂ ಜಂಕ್ಷನ್

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್ ಕಂಟೈನರ್ ಲಾರಿ ಪಲ್ಟಿ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ !!

(ನ್ಯೂಸ್ ಕಡಬ)newskadaba.com  ಉಡುಪಿ, ಜ.21. ಉಡುಪಿ ನಗರದ ಬನ್ನಂಜೆಯಲ್ಲಿ ಉಬ್ಬು ಚಿತ್ರವಿರುವ ಅಪರೂಪದ ಐತಿಹಾಸಿಕ ಶಾಸನ ಪತ್ತೆಯಾಗಿದೆ. ಈ ಶಾಸನ ವಿಜಯನಗರದ ಕಾಲದ್ದು ಎಂದು ಹೇಳಲಾಗುತ್ತಿದೆ. ಬನ್ನಂಜೆಯ ಮೂಡನಿಡಂಬೂರು ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಈ ಅಪರೂಪದ ಶಾಸನ ಪತ್ತೆಯಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಬಾಯಿಮಾತಿನಲ್ಲಿ ಇದನ್ನು  ‘ನಿರ್ಪುಗಲ್ಲು’ ಎಂದೇ ಕರೆಯಲಾಗುತ್ತಿತ್ತಂತೆ. ಸುಮಾರು ಒಂದುವರೆ ಅಡಿ ಅಗಲ ನಾಲ್ಕು ಫೀಟು ಎತ್ತರ ಇರುವ ಈ ಶಾಸನದ ಬಲಭಾಗದಲ್ಲಿ ಚಂದ್ರ, ಎಡ ಭಾಗದಲ್ಲಿ ಸೂರ್ಯ. ಮಧ್ಯಭಾಗದಲ್ಲಿ ಪೀಠ ಇರುವ

ಉಡುಪಿ: ಅಪರೂಪದ ಐತಿಹಾಸಿಕ ಕಲ್ಲಿನ ರಚನೆ ಪತ್ತೆ !! Read More »

ಕರಾವಳಿ

ಸರ್ಕಾರಿ ಆಸ್ಪತ್ರೆ ರೋಗಿಗಳ ಕಂಬಳಿಗಳ ಮೇಲೆ ಹಂದಿ, ನಾಯಿಗಳ ಓಡಾಟ !       

(ನ್ಯೂಸ್ ಕಡಬ)newskadaba.com  ಧಾರವಾಡ, ಜ.21. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಬಳಸುವ ಹಾಸಿಗೆ ಹೊದಿಕೆಗಳನ್ನು ಹಂದಿ ಮತ್ತು ನಾಯಿಗಳು ತುಳಿದು ಹಾಕಿರುವ ಘಟನೆ ನಡೆದಿದೆ. ಹಂದಿಗಳು, ನಾಯಿಗಳು ಹಾಗೂ ಇತರೆ ಬಿಡಾಡಿ ಪ್ರಾಣಿಗಳು ಓಡಾಡುವ ತೆರೆದ ಮೈದಾನದಲ್ಲಿ ರೋಗಿಗಳ ಹಾಸಿಗೆಗೆ ಹಾಕಲಾಗಿದ್ದ ಕಂಬಳಿ, ಏಪ್ರನ್‌ಗಳನ್ನು ಒಗೆದು ಒಣಗಿಸಿ ಹಾಕಲಾಗಿತ್ತು. ಆದರೆ ಈ ಕಂಬಳಿ, ಹೊದಿಕೆಗಳ ಮೇಲೆ ಪ್ರಾಣಿಗಳು ಓಡಾಡಿರುವ ಘಟನೆ ಧಾರವಾಡದಲ್ಲಿ ಜಿಲ್ಲಾ ಆಸ್ಪತ್ರೆಲ್ಲಿ ನಡೆದಿದೆ. ಅದಾಗ್ಯೂ ಅಧಿಕಾರಿಗಳ ನಿರ್ಲಕ್ಷ್ಯ ಅಂತಹ ಸ್ಥಳಗಳಲ್ಲಿ ಒಣಗಿಸಿದ ಬಟ್ಟೆಗಳನ್ನು ಸುಮಾರು 200 ರೋಗಿಗಳಿಗೆ

ಸರ್ಕಾರಿ ಆಸ್ಪತ್ರೆ ರೋಗಿಗಳ ಕಂಬಳಿಗಳ ಮೇಲೆ ಹಂದಿ, ನಾಯಿಗಳ ಓಡಾಟ !        Read More »

ಕರ್ನಾಟಕ

ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ವಿವಾಹ ನಿಶ್ಚಯವಾಗಿದ್ದ ಯುವಕ‌ ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com  ಚಿಕ್ಕಮಗಳೂರು, ಜ.21. ಭೀಕರ ಅಪಘಾತದಲ್ಲಿ ವಿವಾಹ ನಿಶ್ಚಯಗೊಂಡ ಯುವಕ ಸೇರಿ ಇಬ್ಬರು ಮೃತಪಟ್ಟ ಘಟನೆ ಅಜ್ಜಂಪುರದ ಮಾಕನಹಳ್ಳಿಯಲ್ಲಿ ನಡೆದಿದೆ. ಚನ್ನರಾಯಪಟ್ಟಣ ಮೂಲದ ಕಿರಣ್(32) ಹಾಗೂ ಅಜ್ಜಂಪುರ ತಾಲೂಕಿನ ಶಿವನಿ ಮೂಲದ ನಾಗರಾಜ್ (40) ಮೃತ ದುರ್ದೈವಿಗಳು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕಿರಣ್​ ಮೆಸ್ಕಾಂನಲ್ಲಿ ಜೆಇ ಆಗಿ ಕೆಲಸ ಮಾಡುತ್ತಿದ್ದರು. ಕಿರಣ್​ಗೆ ಮದುವೆ ನಿಗದಿಯಾಗಿತ್ತು.ಇದೀಗ ಮದುವೆ ಮನೆಯಲ್ಲಿ ಶೋಕ ಮುಡುಗಟ್ಟಿದೆ.  

ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ➤ ವಿವಾಹ ನಿಶ್ಚಯವಾಗಿದ್ದ ಯುವಕ‌ ಸೇರಿ ಇಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಈ ವರ್ಷದ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಮುಖ್ಯ ಅತಿಥಿ        

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.21. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಈ ವರ್ಷ 74ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.  ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಆಗಮಿಸುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಅರಬ್ ರಿಪಬ್ಲಿಕ್ ದೇಶ ಈಜಿಪ್ಟ್ ನ ಅಧ್ಯಕ್ಷರು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಈಜಿಪ್ಟ್ ಸೇನೆಯ ಮಿಲಿಟರಿ ಪಡೆ ಸಹ ಭಾರತದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಲಿದೆ ಎಂದು ಹೇಳಿದೆ.

ಈ ವರ್ಷದ ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷ ಮುಖ್ಯ ಅತಿಥಿ         Read More »

ರಾಷ್ಟ್ರೀಯ ನ್ಯೂಸ್

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ 

(ನ್ಯೂಸ್ ಕಡಬ)newskadaba.com  ಜ.21. ಕ್ಯಾರೆಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೆಟ್. ಅಂತೆಯೇ ಕ್ಯಾರೆಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ ಅತಿ ಸುಲಭ. ಬೇಕಾಗುವ ಸಾಮಗ್ರಿಗಳು: ಅನ್ನ, ಕ್ಯಾರೇಟ್, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು, ಶುಂಠಿ, ಎಣ್ಣೆ, ಉದ್ದಿನಬೇಳೆ, ಸಾಸಿವೆ, ಶೇಂಗಾ, ಅರಿಶಿಣ, ಉಪ್ಪು ಹಾಗೂ ಸಕ್ಕರೆ. ಮಾಡುವ ವಿಧಾನ: ಕ್ಯಾರೆಟ್ ನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು

ಬಿಸಿ ಬಿಸಿ ಕ್ಯಾರೆಟ್ ಬಾತ್ ಮಾಡುವ ವಿಧಾನ  Read More »

ಅಡುಗೆ
Scroll to Top