News Kadaba

ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ➤  ಮೂವರು ವಶಕ್ಕೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ಅಕ್ರಮವಾಗಿ ಗೋಮಾಂಸ ತಯಾರಿಸುತ್ತಿದ್ದ ಅಡ್ಡೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ಮದ್ದಡ್ಕ ಬಳಿ ನಡೆದಿದೆ. ಮದ್ದಡ್ಕದ ಹಮೀದ್‌ (46), ಬೇಲೂರು ಗೋಣಿಬೀಡಿನ ಇಸ್ಮಾಯಿಲ್‌ (41) ಮತ್ತು ಹ್ಯಾರಿಸ್‌ (30) ಪೊಲೀಸ್ ವಶವಾದವರು. ಕುವೆಟ್ಟು ಗ್ರಾಮದ ಮದ್ದಡ್ಕದ ಅನಿಲ ಎಂಬಲ್ಲಿಯ ಮನೆಯೊಂದರಲ್ಲಿ ಗೋವಧೆ ಮಾಡಿ ಅಕ್ರಮವಾಗಿ ಮಾಂಸ ತಯಾರಿಸುತ್ತಿರುವ ಬಗ್ಗೆ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆ […]

ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ ➤  ಮೂವರು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ಮಂಗಳೂರು:  ಎಂಡಿಎಂಎ ಮಾದಕ ದ್ರವ್ಯ ಮಾರಾಟ ➤  ಆರೋಪಿ ಅಂದರ್ !

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ನಗರದಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಂದರು ಜೆ.ಎಂ ರೋಡ್ ನ ತೂಸಿಮನ್ ಹೌಸ್ ನ ನಿವಾಸಿ ಇಕ್ಬಾಲ್ ಆಲಿ ಅಹಮ್ಮದ್ ಯಾನೆ ಇಕ್ಬಾಲ್ (38) ಎಂದು ಗುರುತಿಸಲಾಗಿದೆ. ಆರೋಪಿ ಕುದ್ರೋಳಿಯ ಮೊಯಿದ್ದಿನ ನಗರದ ಬಳಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಈ ವೇಳೆ 11.13 ಗ್ರಾಂ

ಮಂಗಳೂರು:  ಎಂಡಿಎಂಎ ಮಾದಕ ದ್ರವ್ಯ ಮಾರಾಟ ➤  ಆರೋಪಿ ಅಂದರ್ ! Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ 2ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ (ದ.ಕ. ಮತ್ತು ಉಡುಪಿ ಜಿಲ್ಲೆ) 2ನೇ ವಾರ್ಷಿಕೋತ್ಸವ ಸಮಾರಂಭವು ಶಾರದಾ ಶಾಲಾ ಮೈದಾನದಲ್ಲಿ ಜರಗಿತು. ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಸುಲ್ತಾನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಯು.ಬಿ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಂಗೀತ ಕಲಾವಿದರಿಗೆ ಕ್ರಿಕೆಟ್ ಪಂದ್ಯಾಟ, ವಿಶೇಷ ಚೇತನರಿಗೆ ವೀಲ್‌ಚೇರ್ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಅರ್ಹ ಕಲಾವಿದರಿಗೆ ಧನಸಹಾಯ ಹಸ್ತಾಂತರಿಸಲಾಯಿತು. ರಾಝ್ ಕಲಾಯಿ ನಾಯಕತ್ವದ ಬ್ಯಾರಿ

ಮಂಗಳೂರು: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ 2ನೇ ವಾರ್ಷಿಕೋತ್ಸವ Read More »

ಕರಾವಳಿ

ನಾಲ್ವರು ಐಐಎಸ್ಸಿ ಸಂಶೋಧಕರಿಗೆ ಐಎನ್ಎಸ್ಎ ಯುವ ವಿಜ್ಞಾನಿ ಪ್ರಶಸ್ತಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಭಾರತೀಯ ವಿಜ್ಞಾನ ಸಂಸ್ಥೆಯ ನಾಲ್ವರು ಅಧ್ಯಾಪಕರು ಯುವ ವಿಜ್ಞಾನಿಗಳ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಡಾ ಶ್ರೀಮೊಂಟಾ ಗಯೆನ್, ಡಾ ಸುಭೋಜೋಯ್ ಗುಪ್ತಾ, ಡಾ ಮೋಹಿತ್ ಕುಮಾರ್ ಜಾಲಿ ಮತ್ತು ಡಾ ವೆಂಕಟೇಶ್ ರಾಜೇಂದ್ರನ್ ಸೇರಿದಂತೆ ಭಾರತದಾದ್ಯಂತ 42 ವಿಜ್ಞಾನಿಗಳು ಪದಕಕ್ಕೆ ಆಯ್ಕೆಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ 40 ವರ್ಷದೊಳಗಿನ ವಿಜ್ಞಾನಿಗಳಿಗೆ ವಾರ್ಷಿಕವಾಗಿ INSA ನಿಂದ ಯುವ ವಿಜ್ಞಾನಿಗಳಿಗೆ ಪದಕವನ್ನು ನೀಡಲಾಗುತ್ತದೆ. ಡಾ ಗಯೆನ್ ಅವರು

ನಾಲ್ವರು ಐಐಎಸ್ಸಿ ಸಂಶೋಧಕರಿಗೆ ಐಎನ್ಎಸ್ಎ ಯುವ ವಿಜ್ಞಾನಿ ಪ್ರಶಸ್ತಿ Read More »

ಕರ್ನಾಟಕ

ವಾರಾಂತ್ಯದಲ್ಲಿ 108 ನಮ್ಮ ಕ್ಲಿನಿಕ್‌ಗಳು ಪ್ರಾರಂಭ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಹಲವಾರು ಗಡುವುಗಳು ಮುಗಿದ ನಂತರ, ಬಹುನಿರೀಕ್ಷಿತ ನಮ್ಮ ಕ್ಲಿನಿಕ್ ಈ ವಾರಾಂತ್ಯದ ವೇಳೆಗೆ 108 ಬಿಬಿಎಂಪಿ ವಾರ್ಡ್‌ಗಳಲ್ಲಿ (ಒಟ್ಟು 243 ವಾರ್ಡ್‌ಗಳ ಪೈಕಿ) ತನ್ನ ಬಾಗಿಲು ತೆರೆಯಲು ಸಿದ್ಧವಾಗಿದೆ. ಬಿಬಿಎಂಪಿಯು ವೈದ್ಯರ ಕೊರತೆಯನ್ನು ನಿಭಾಯಿಸುತ್ತಿದ್ದು, ಮುಂದಿನ ಕೆಲವು ಹಂತಗಳಲ್ಲಿ ಉಳಿದ 135 ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಬೆಂಗಳೂರಿನಲ್ಲಿ 243 ಸೇರಿದಂತೆ ಎಲ್ಲಾ 438 ಕ್ಲಿನಿಕ್‌ಗಳನ್ನು ಆಗಸ್ಟ್ ನಲ್ಲಿ ತೆರೆಯಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಬಿಡುಗಡೆಯ ಗಡುವನ್ನು ವಿಸ್ತರಿಸುತ್ತಲೇ ಇತ್ತು.

ವಾರಾಂತ್ಯದಲ್ಲಿ 108 ನಮ್ಮ ಕ್ಲಿನಿಕ್‌ಗಳು ಪ್ರಾರಂಭ Read More »

ಕರ್ನಾಟಕ

ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ)newskadaba.com  ದಾವಣಗೆರೆ. ಜ.24. ಲಾರಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿ ಮೃತಪಟ್ಟಿರುವ ಘಟನೆ ಹರಪನಹಳ್ಳಿಯ ಗೌಳೆರಹಟ್ಟಿ ಕ್ರಾಸ್ ಬಳಿ ನಡೆದಿದೆ. ತಾಲ್ಲೂಕಿನ ಹಿರೇಮೆಗಳಗೆರೆ ಗ್ರಾಮದ ರಮೇಶ್ (30) ಮೃತ ಯುವಕ. ರಮೇಶ್ ಉಚ್ಚಂಗಿದುರ್ಗದಿಂದ ಹಿರೇಮೆಗಳಗೆರೆ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಅನಂತರ ಸವಾರ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಸಾರ್ವಜನಿಕರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಘಟನೆ ಸ್ಥಳಕ್ಕೆ ಅರಸೀಕೆರೆ ಸಬ್ ಇನ್‌ಸ್ಪೆಕ್ಟರ್‌ ಎ. ಕಿರಣ್ ಕುಮಾರ್ ಭೇಟಿ

ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

20,000 ಕೋಟಿ ದಾಟಿದ ಕೆನರಾ ಬ್ಯಾಂಕ್‌ ಜಾಗತಿಕ ವ್ಯವಹಾರ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಸಾರ್ವಜನಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಕೆನರಾ ಬ್ಯಾಂಕ್‌ನ ಜಾಗತಿಕ ವ್ಯವಹಾರವು ವಾರ್ಷಿಕ ಶೇ.13.63 ರಷ್ಟು ಬೆಳವಣಿಗೆಯೊಂದಿಗೆ 20 ಸಾವಿರ ಕೋಟಿ ರೂ. ಗಡಿ ದಾಟಿದೆ. ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದ (2022-2023) ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ನಿವ್ವಳ ಲಾಭವು 2021ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.91.8ರಷ್ಟು ಹೆಚ್ಚಳದೊಂದಿಗೆ 2,882 ಕೋಟಿ ರು.ಗೆ ತಲುಪಿದೆ. ಒಟ್ಟಾರೆ ಜಾಗತಿಕ ಠೇವಣಿಯು ವಾರ್ಷಿಕ ಶೇ.11.5 ರಷ್ಟು ಬೆಳವಣಿಗೆಯಾಗಿ 11,63,470 ಕೋಟಿ ರು.ಗೆ ತಲುಪಿದೆ. ಸದ್ಯ ಬ್ಯಾಂಕ್‌ನ ಜಾಗತಿಕ

20,000 ಕೋಟಿ ದಾಟಿದ ಕೆನರಾ ಬ್ಯಾಂಕ್‌ ಜಾಗತಿಕ ವ್ಯವಹಾರ Read More »

ಕರ್ನಾಟಕ

ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌

(ನ್ಯೂಸ್ ಕಡಬ)newskadaba.com  ಬಾಗಲಕೋಟೆ, ಜ.24. ಅನುದಾನಿತ ಶಾಲೆಯೊಂದರ ಶಿಕ್ಷಕ ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅನುದಾನಿತ ಶಾಲೆಯೊಂದರ ಶಿಕ್ಷಕ ಲಕ್ಷ್ಮಣ ದೇವೆಂದ್ರಪ್ಪ ಕೊಪ್ಪದ ಬಂಧಿತ ಆರೋಪಿ. ಆರೋಪಿ ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಕಾಲುವೆ ಯಲ್ಲಾಪೂರ ಗ್ರಾಮದವನು. ಕಳೆದೊಂದು ವರ್ಷದಿಂದ ತನ್ನ ಮನೆಯಲ್ಲಿ ಇಂಗ್ಲಿಷ್‌ ಟ್ಯೂಷನ್‌ ಹೇಳಿಕೊಡುವುದಾಗಿ ಕರೆಸಿಕೊಂಡು ಟ್ಯೂಷನ್‌ ಬಿಟ್ಟ

ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಈಜಲು ನೀರಿಗಿಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ)newskadaba.com  ಸಾಗರ, ಜ.24. ಕೆರೆಗೆ ಈಜಲು ಹೋದ ಯುವಕನೋರ್ವ ನಾಪತ್ತೆಯಾದ ಘಟನೆ ಭೀಮನಕೋಣೆ ಕೆರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸಾಗರ ಪಟ್ಟಣದ ಯಶ್ವಂತ್ (22) ನಾಪತ್ತೆಯಾದ ಯುವಕ. ಯಶ್ವಂತ್ ತನ್ನ ಸ್ನೇಹಿತರೊಂದಿಗೆ ಭೀಮನಕೋಣೆ ಕೆರೆಗೆ ಹೋಗಿದ್ದರು. ಈ ವೇಳೆ ಯಶ್ವಂತ್, ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಇಳಿದಿದ್ದಾನೆ.ಆದರೆ ಆತನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.  

ಈಜಲು ನೀರಿಗಿಳಿದ ಯುವಕ ನಾಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

`ಆಧಾರ’ ಯೋಜನೆಯಡಿ ವಿಕಲಚೇತನರಿಗೆ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸಲು 2022-23ನೇ ಸಾಲಿನ ‘ಆಧಾರ’ ಯೋಜನೆಯಡಿ 1.00 ಲಕ್ಷ ರೂ. ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದರಲ್ಲಿ 50% ಸಬ್ಸಿಡಿಯನ್ನು ಇಲಾಖೆಯು ಭರಿಸಲಿದ್ದು, ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಎಲ್ಲಾ ವಿಕಲಚೇತರು ಹಾಗೂ ಅರ್ಹ ವಿಕಲಚೇತನರು ಕೆಳಕಂಡ ಅಗತ್ಯ ದಾಖಲಾತಿಗಳೊಂದಿಗೆ 2023ರ ಫೆಬ್ರವರಿ 04 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಜಿಲ್ಲೆಯಲ್ಲಿ

`ಆಧಾರ’ ಯೋಜನೆಯಡಿ ವಿಕಲಚೇತನರಿಗೆ 1 ಲಕ್ಷ ರೂ.ವರೆಗೆ ಸಾಲ ಸೌಲಭ್ಯ Read More »

ಕರ್ನಾಟಕ
Scroll to Top