ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತ್ಯು



(ನ್ಯೂಸ್ ಕಡಬ)newskadaba.com  ದಾವಣಗೆರೆ. ಜ.24. ಲಾರಿ ಚಕ್ರಕ್ಕೆ ಬೈಕ್ ಸವಾರ ಸಿಲುಕಿ ಮೃತಪಟ್ಟಿರುವ ಘಟನೆ ಹರಪನಹಳ್ಳಿಯ ಗೌಳೆರಹಟ್ಟಿ ಕ್ರಾಸ್ ಬಳಿ ನಡೆದಿದೆ.








ತಾಲ್ಲೂಕಿನ ಹಿರೇಮೆಗಳಗೆರೆ ಗ್ರಾಮದ ರಮೇಶ್ (30) ಮೃತ ಯುವಕ. ರಮೇಶ್ ಉಚ್ಚಂಗಿದುರ್ಗದಿಂದ ಹಿರೇಮೆಗಳಗೆರೆ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ. ಅನಂತರ ಸವಾರ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಸಾರ್ವಜನಿಕರು ಘಟನಾ ಸ್ಥಳಕ್ಕೆ ಆಗಮಿಸಿದ್ದರು. ಘಟನೆ ಸ್ಥಳಕ್ಕೆ ಅರಸೀಕೆರೆ ಸಬ್ ಇನ್‌ಸ್ಪೆಕ್ಟರ್‌ ಎ. ಕಿರಣ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.






error: Content is protected !!
Scroll to Top