News Kadaba

ರಾಜ್ಯ ಮಟ್ಟದ ಕೃಷಿ ಮೇಳ ➤ ಸಿಎಂ ಬೊಮ್ಮಾಯಿ ಚಾಲನೆ

ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.27. ಅರಮನೆ ನಗರಿ ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕೃಷಿ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜ.27 ರಂದು ಉದ್ಘಾಟಿಸಿದರು. ಈ ಬಾರಿ ರಾಜ್ಯ ಸರ್ಕಾರ ಮತ್ತು ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಮಹಾರಾಜ ಕಾಲೇಜು  ಮೈದಾನದಲ್ಲಿ ಭಾನುವಾರದವರೆಗೆ ನಡೆಯುವ ಮೇಳದಲ್ಲಿ 120 ಮಳಿಗೆಗಳನ್ನು ತೆರೆಯಲಾಗಿದೆ. ಸಮಗ್ರ ಕೃಷಿ, ಸಾವಯವ ಕೃಷಿ, ಆಧುನಿಕ ಬೇಸಾಯ , ಉತ್ತಮ ಬಿತ್ತನೆ ಬೀಜಗಳು, ಕೃಷಿ ಅನ್ವೇಷಣೆ ಇನ್ನಿತರ ಮಾಹಿತಿ ಸಿಗಲಿವೆ.  ವೀರಗಾಸೆ, ಕಂಸಾಳೆ, ಸುಗ್ಗಿ ಕುಣಿತ, […]

ರಾಜ್ಯ ಮಟ್ಟದ ಕೃಷಿ ಮೇಳ ➤ ಸಿಎಂ ಬೊಮ್ಮಾಯಿ ಚಾಲನೆ Read More »

ಕರ್ನಾಟಕ

ಕರ್ನಾಟಕದಲ್ಲಿ ವನ್ಯಮೃಗಗಳ ದಾಳಿಗೆ ಮೂವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com   ಚಿಕ್ಕಮಗಳೂರು, ಜ.27. ರಾಜ್ಯದಲ್ಲಿ ವನ್ಯಮೃಗಗಳ ದಾಳಿಗೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ‌ ತೆರಳುವ ವೇಳೆ ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿದೆ. ಇನ್ನು ಮತ್ತೊಂದು ಕಡೆ ರೈತನ ಮೇಲೆ ಕಾಡಾನೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ.  ಬೈಕಿನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೀಲಿಪ್, ಆಶಾ ಎಂಬುವರೇ ಕಾಡುಕೋಣದ ದಾಳಿಗೊಳಗಾದವರು ಎನ್ನಲಾಗಿದೆ.  

ಕರ್ನಾಟಕದಲ್ಲಿ ವನ್ಯಮೃಗಗಳ ದಾಳಿಗೆ ಮೂವರಿಗೆ ಗಂಭೀರ ಗಾಯ Read More »

ಕರ್ನಾಟಕ

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್

(ನ್ಯೂಸ್ ಕಡಬ)newskadaba.com  ಮಡಿಕೇರಿ, ಜ.27. ರೈತರಿಗೆ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಸೌಲಭ್ಯ ವಿಸ್ತರಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಗೋಣಿಕೊಪ್ಪದ ಪೊನ್ನಪ್ಪಸಂತೆ ಗ್ರಾಮದಲ್ಲಿ ನಿರ್ಮಾಣವಾದ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ಮತ್ತು ನೂತನ ಶಾಖೆ ಪ್ರಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ರೈತರ ಆರ್ಥಿಕ ಚೇತರಿಕೆಗಾಗಿ ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ವಿಸ್ತರಿಸಲಾಗಿದ್ದು,

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಗುಡ್ ನ್ಯೂಸ್ Read More »

ಕರಾವಳಿ

ರಸ್ತೆ, ಆಸ್ಪತ್ರೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ತೀರ್ಮಾನ ➤ ಸಿಎಂ ಬೊಮ್ಮಾಯಿ ಘೋಷಣೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ರಸ್ತೆ, ಆಸ್ಪತ್ರೆ, ಸಂಸ್ಥೆಗಳಿಗೆ ಕನ್ನಡ ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಖೋಡೆ ವೃತ್ತದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 191ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಬ್ರಿಟಿಷರ ಕಾಲದಲ್ಲಿ ಬ್ರಿಟಿಷ್ ಖ್ಯಾತನಾಮರ ಹೆಸರುಗಳನ್ನು ಬೆಂಗಳೂರಿನ ರಸ್ತೆ, ಆಸ್ಪತ್ರೆಗಳಿಗೆ ಇಡಲಾಗಿತ್ತು. ಈ ವಿಚಾರವನ್ನು ಸಂಸದ ಪಿ.ಸಿ.ಮೋಹನ್ ಅವರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ರಸ್ತೆ, ಆಸ್ಪತ್ರೆ, ಸಂಸ್ಥೆಗಳಿಗೆ ಕನ್ನಡ

ರಸ್ತೆ, ಆಸ್ಪತ್ರೆಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲು ತೀರ್ಮಾನ ➤ ಸಿಎಂ ಬೊಮ್ಮಾಯಿ ಘೋಷಣೆ Read More »

ಕರ್ನಾಟಕ

ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಮಹಿಳೆ ಮೃತ್ಯು     

(ನ್ಯೂಸ್ ಕಡಬ)newskadaba.com  ಕಾರ್ಕಳ, ಜ.27. ದ್ವಿಚಕ್ರ ವಾಹನ ಹಾಗೂ ಟಿಪ್ಪರ್ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿ ನಡೆದಿದೆ. ಮೃತರನ್ನು ಜಾಹಿರ ಬಾನು ಎಂದು ಗುರುತಿಸಲಾಗಿದೆ . ಟಿಪ್ಪರ್ ಹಾಗೂ ಸ್ಕೂಟಿ ಅತ್ತುರಿನತ್ತ ಸಾಗುತಿತ್ತು ಎನ್ನಲಾಗಿದೆ.

ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಮಹಿಳೆ ಮೃತ್ಯು      Read More »

ಕರಾವಳಿ, ಕ್ರೈಮ್ ನ್ಯೂಸ್

➤ಇಬ್ಬರು ಮಕ್ಕಳಿಗೆ ವಾಸಿಯಾಗದ ಖಾಯಿಲೆ ➤ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ.27. ಮಧ್ಯಪ್ರದೇಶದ ವಿದಿಶಾದಲ್ಲಿ ಹೃದಯ ವಿದ್ರಾವಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬಿಜೆಪಿ ಮುಖಂಡರೊಬ್ಬರು ತಮ್ಮ ಪತ್ನಿ ಹಾಗೂ ಇಬ್ಬರು ಪುತ್ರರೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದಿಶಾದ ಈ ಬಿಜೆಪಿ ನಾಯಕ ಸಂಜೀವ್ ಮಿಶ್ರಾ ತನ್ನ ಇಬ್ಬರು ಪುತ್ರರ ವಾಸಿಯಾಗದ ಕಾಯಿಲೆಯಿಂದ ಅವರು ಕಂಗಾಲಾಗಿದ್ದರು. ಈ ಕಾರಣಕ್ಕಾಗಿಯೇ ಗುರುವಾರ ಸಂಜೆ ಪತ್ನಿ ಹಾಗೂ ಇಬ್ಬರು ಪುತ್ರರಿಗೆ ವಿಷವುಣಿಸಿ, ತಾನೂ ಕೂಡ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಂಜೀವ್ ಮಿಶ್ರಾ ಅವರು

➤ಇಬ್ಬರು ಮಕ್ಕಳಿಗೆ ವಾಸಿಯಾಗದ ಖಾಯಿಲೆ ➤ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ

(ನ್ಯೂಸ್ ಕಡಬ)newskadaba.com  ಭುವನೇಶ್ವರ, ಜ.27. ನಾಲ್ಕು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಸ್ಕಾ ಬಳಿ ಬಂಧಿಸಲಾಗಿದೆ. ಮಗು ನಾಪತ್ತೆಯಾದ ಬಳಿಕ ಮನೆಯವರು ಮನೆಯ ಟೆರೇಸ್‌ನಿಂದ ರಕ್ತದ ಮಡುವಿನಲ್ಲಿ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಲಾಗಲಿಲ್ಲ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕಬ್ಬಿಣದ ಬಾಗಿಲಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ ಎಂಬುದು

4 ವರ್ಷದ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

20 ವರ್ಷದ ಯುವಕನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ

(ನ್ಯೂಸ್ ಕಡಬ)newskadaba.com  ಉತ್ತರಪ್ರದೇಶ, ಜ.27. ಪ್ರತಾಪ್‌ಗಢ ಜಿಲ್ಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರ 20 ವರ್ಷದ ಮಗನನ್ನು ಅಪರಿಚಿತ ವ್ಯಕ್ತಿಗಳು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಅತರ್ಸುಯಿ ಬದ್ಲಿ ಕಾ ಪೂರ್ವಾ ಗ್ರಾಮದಲ್ಲಿ ರಾತ್ರಿ ಬಾಘರೈ ಪೊಲೀಸ್ ಠಾಣೆ ವ್ಯಾಪ್ತಿಯ ರೋರ್ ಗ್ರಾಮದ ನಿವಾಸಿ ವಿಶಾಲ್ ಪಾಂಡೆ ಎಂಬಾತನನ್ನು ಅಪರಿಚಿತರು ಕಾರಿನಿಂದ ಡಿಕ್ಕಿ ಹೊಡೆದು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸದರ್ ಅಮರ್

20 ವರ್ಷದ ಯುವಕನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.27. ನಾಪತ್ತೆಯಾಗಿದ್ದ ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾದ ಘಟನೆ ಪಲ್ಲಿಕೆರೆ ಪೂಚೆಕ್ಕಾಡ್ ಬಳಿ ನಡೆದಿದೆ. ಮುಹಮ್ಮದ್ ಶಹೀಮ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಈತ ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರನಾಗಿದ್ದ. ಶಹೀಮ್ ಶಾಲೆಯಿಂದ ಬೇಗನೇ‌ ಬಂದಿದ್ದ. ಆದರೆ ಮನೆಗೆ ತೆರಳಿಲ್ಲ. ಸಂಜೆ ಶಾಲಾ ಸಮಯ‌ ಕಳೆದರೂ‌ ಮಗು ಮನೆಗೆ ಬರದಿದ್ದಾಗ ಪೋಷಕರು ವಿಚಾರಿಸಿದ್ದಾರೆ.ಈ ವೇಳೆ‌ ಶಹೀಮ್‌ ಶಾಲೆಯಿಂದ ಮಧ್ಯಾಹ್ನ‌ ತೆರಳಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ಕಾಸರಗೋಡು: ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕುಂದಾಪುರ: ಮದ್ಯಪಾನಕ್ಕೆ ಹಣ ನೀಡದಕ್ಕೆ ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಕುಂದಾಪುರ, ಜ.27. ಮದ್ಯಪಾನ ಮಾಡಲು ಹಣ ನೀಡದ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ವಿಟ್ಟಲ (48) ಆತ್ಮಹತ್ಯೆಗೈದ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೋವಾದಲ್ಲಿ ಹೊಟೇಲ್ ನಡೆಸುತ್ತಿರುವ ಚಂದಮ್ಮ ಶೆಟ್ಟಿ ಸಳ್ವಾಡಿ ಅವರ ಪುತ್ರನ ಹೊಟೇಲ್‌ನಲ್ಲಿ ವಿಟ್ಟಲ ಕೆಲಸ ಮಾಡಿಕೊಂಡಿದ್ದ. ಬಳಿಕ ಚಂದಮ್ಮ ಶೆಟ್ಟಿ ಅವರನ್ನು ನೋಡಿಕೊಳ್ಳಲೆಂದ ವಿಟ್ಟಲನನ್ನು ಮನೆಯಲ್ಲಿ ಇರುವಂತೆ ಹೇಳಲಾಗಿತ್ತು. ಆದರೆ ಕಳೆದ ಐದು ವರ್ಷಗಳಿಂದ ವಿಟ್ಟಲ ಕುಡಿತದ ಚಟ ಹೊಂದಿದ್ದ. ಮದ್ಯಪಾನ ಮಾಡಲು ಹಣ

ಕುಂದಾಪುರ: ಮದ್ಯಪಾನಕ್ಕೆ ಹಣ ನೀಡದಕ್ಕೆ ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ
Scroll to Top