News Kadaba

ಚೀನಾ ಡಾಕ್ಟರ್‌ಗೆ ಇಲ್ಲ ಸರ್ಕಾರಿ ಹುದ್ದೆ; ಹೈಕೋರ್ಟ್‌

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27.  ಮಹಾರಾಷ್ಟ್ರದಲ್ಲಿ ಜಾರಿಯಿರುವ ಅರ್ಹತಾ ಮಾನದಂಡವನ್ನೇ ಪರಿಗಣಿಸಿ ಕರ್ನಾಟಕದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿ ಚೀನಾದ ವಿಶ್ವವಿದ್ಯಾಲಯವೊಂದರಿಂದ ಎಂಬಿಬಿಎಸ್‌ ಪದವಿ ಪಡೆದ ಬೀದರ್‌ ಮಹಿಳೆಯ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ವೈದ್ಯಾಧಿಕಾರಿ ನೇಮಕಾತಿಗೆ ತಾವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೀದರ್‌ ಜಿಲ್ಲೆಯ ಬಸವಕಲ್ಯಾಣ ನಿವಾಸಿ ಡಾ.ಸತ್ಯಕ್ಕ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಆರ್‌. ಹೆಗ್ಡೆ ಅವರ ನ್ಯಾಯಪೀಠ, ವೈದ್ಯಾಧಿಕಾರಿ ಹುದ್ದೆಗೆ […]

ಚೀನಾ ಡಾಕ್ಟರ್‌ಗೆ ಇಲ್ಲ ಸರ್ಕಾರಿ ಹುದ್ದೆ; ಹೈಕೋರ್ಟ್‌ Read More »

ಕರ್ನಾಟಕ

ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ➤ ಸಿಎಂ ಬೊಮ್ಮಾಯಿ 

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಆಯೋಜನೆ ಮಾಡಿರುವ “ವಿಜ್ಞಾನ ಮೇಳ 2023″ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕೇವಲ ಕಟ್ಟಡ ಕಟ್ಟಿದರೆ ಸಾಲದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನೂ ಕೊಡಬೇಕು. ಯಾವ ಯಾವ ಶಾಲೆಯಲ್ಲಿ ಏನೇನು

ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ➤ ಸಿಎಂ ಬೊಮ್ಮಾಯಿ  Read More »

ಕರ್ನಾಟಕ

ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಇಬ್ಬರು ಕಳ್ಳರು ➤ ಖರೀದಿಸಿದ ಇನ್ನೊಬ್ಬನ ಬಂಧನ                           

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಇತ್ತೀಚೆಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯನ್ನು ಹಿಂಬಾಲಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಸೈದ್‌ ಖಾಸೀಫ್‌(22), ಫರೀದ್‌ ಅಹಮದ್‌(20) ಹಾಗೂ ಕಳವು ಮಾಲು ಸ್ವೀಕರಿಸಿದ್ದ ಪಾದರಾಯನಪುರದ ಸುಲ್ತಾನ್‌ ಪಾಷಾ(27) ಬಂಧಿತರು. ಆರೋಪಿಗಳಿಂದ 48.50 ಗ್ರಾಂ ತೂಕದ ಚಿನ್ನದ ಸರ, ಕದ್ದ ಮೊಬೈಲ್‌ ಮಾರಾಟದಿಂದ ಬಂದಿದ್ದ 4,720 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಈ

ವೃದ್ಧೆಯ ಚಿನ್ನದ ಸರ ಎಗರಿಸಿದ್ದ ಇಬ್ಬರು ಕಳ್ಳರು ➤ ಖರೀದಿಸಿದ ಇನ್ನೊಬ್ಬನ ಬಂಧನ                            Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ➤ ಹೈ ಕೋರ್ಟ್ ಮಹತ್ವದ ತೀರ್ಪು

(ನ್ಯೂಸ್ ಕಡಬ)newskadaba.com  ನವದೆಹಲಿ, ಜ.27. ಉದ್ಯೋಗಿಗೆ ಕೋವಿಡ್ -19 ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ಎಂದು ದೆಹಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೆ ಕರ್ತವ್ಯಕ್ಕೆ ಅವಕಾಶ ನಿರಾಕರಿಸಲಾಗಿದ್ದ ಉದ್ಯೋಗಿಗೆ 30 ದಿನಗಳೊಳಗಾಗಿ ಮರಳಿ ಪಡೆಯುವಂತೆ ನಿರ್ದೇಶಿಸಿದೆ.ಕೋವಿಡ್- 19 ಲಸಿಕೆ ತಮಗೆ ಬಲವಂತಪಡಿಸಲಾಗುತ್ತಿದ್ದು, ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡುತ್ತಿಲ್ಲ ಎಂದು ಶಿಕ್ಷಕರೊಬ್ಬರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಪ್ರಕರಣದ ವಿಚಾರಣೆ ವೇಳೆ ಮಹತ್ವದ ತೀರ್ಪು ಹೊರ ಬಿದ್ದಿದೆ. ಅಲ್ಲದೆ ಶಿಕ್ಷಕರಿಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಲು ಅನುವು

ಲಸಿಕೆ ಪಡೆಯಲು ಬಲವಂತ ಪಡಿಸುವಂತಿಲ್ಲ ➤ ಹೈ ಕೋರ್ಟ್ ಮಹತ್ವದ ತೀರ್ಪು Read More »

ರಾಷ್ಟ್ರೀಯ ನ್ಯೂಸ್

ಬೆಂಕಿ ಅನಾಹುತ; ಚಹಾ ಅಂಗಡಿ ಭಸ್ಮ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಚಹಾ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರಿನ ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್‌ ರೋಡ್‌ ಸಮೀಪ ನಡೆದಿದೆ. ರವಿ ಎಂಬವರಿಗೆ ಸೇರಿದ ಚಹಾದ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದಿದೆ. ಬೆಂಕಿ ಹತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯ ನಡೆಸಿದರೂ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಮಾಗಡಿ

ಬೆಂಕಿ ಅನಾಹುತ; ಚಹಾ ಅಂಗಡಿ ಭಸ್ಮ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮುದುಕನ ಮದುವೆಯಾಗಿ ಚಿನ್ನ ದೋಚಿ 2ನೇ ಪತ್ನಿ ಪರಾರಿ

(ನ್ಯೂಸ್ ಕಡಬ)newskadaba.com  ಎರಡನೇ ವಿವಾಹದ ನೆಪದಲ್ಲಿ 62 ವರ್ಷದ ವ್ಯಕ್ತಿಯೊಬ್ಬರಿಗೆ ಟೋಪಿ ಹಾಕಿ 2.30 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಮಹಿಳೆ ಪರಾರಿಯಾಗಿರುವ ಘಟನೆ ಕಾಟನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಟನ್‌ಪೇಟೆ ಒಟಿಸಿ ರಸ್ತೆಯ ಷಣ್ಮುಗಂ ಮೋಸ ಹೋಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ತಮಿಳುನಾಡು ಮೂಲದ ಮಲ್ಲಿಕಾ ಅಲಿಯಾಸ್‌ ಮಲ್ಗರ್‌ (35) ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಬ್ರೋಕರ್‌ ಮೂಲಕ ಷಣ್ಮುಗಂ ಅವರನ್ನು ಪರಿಚಯ ಮಾಡಿಕೊಂಡು ಬಳಿಕ ಎರಡನೇ ಮದುವೆ ಮಾಡಿಕೊಂಡು ಆರೋಪಿ ವಂಚಿಸಿದ್ದಾಳೆ

ಮುದುಕನ ಮದುವೆಯಾಗಿ ಚಿನ್ನ ದೋಚಿ 2ನೇ ಪತ್ನಿ ಪರಾರಿ Read More »

ಕರ್ನಾಟಕ

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

(ನ್ಯೂಸ್ ಕಡಬ)newskadaba.com  ಟೋಕಿಯಾ, ಜ.27. ಟೋಕಿಯೊ-ನರಿಟಾದಿಂದ ದುಬೈಗೆ ತೆರಳುತ್ತಿದ್ದ ವೇಳೆ ಮಹಿಳಾ ಪ್ರಯಾಣಿಕರೋರ್ವರು ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಎಮಿರೇಟ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ದುಬೈಗೆ ಆಗಮಿಸಿದ ಬಳಿಕ ತಾಯಿ ಮತ್ತು ಮಗುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಯಿತು. ವಿಮಾನ ಸಿಬ್ಬಂದಿ ಇಬ್ಬರನ್ನೂ ಸುರಕ್ಷಿತವಾಗಿ ನೋಡಿಕೊಂಡರು. ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ಎಮಿರೇಟ್ಸ್‌ ತಿಳಿಸಿದೆ. ಕೊಲೊರಾಡೊಗೆ ಪ್ರಯಾಣಿಸುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್‌ ವಿಮಾನದಲ್ಲಿ ಶೌಚಾಲಯದಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು.

ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ Read More »

ರಾಷ್ಟ್ರೀಯ ನ್ಯೂಸ್

‘ಆಕ್ಸಿಜನ್ ನೀಡದೆ 36 ಜನರ ಕೊಲೆ’ ➤ ಸುಧಾಕರ್ ವಿರುದ್ದ ಡಿಕೆಶಿ ಸಿಡಿಮಿಡಿ    

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.27. ಕೋವಿಡ್ ಸಮಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ನೀಡದೆ 36 ಜನರನ್ನ ಕೊಲೆ ಮಾಡಿದ್ದು, ಇದಕ್ಕೆ ಸಚಿವ ಕೆ. ಸುಧಾಕರ್ ಅವರೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಚಾಮರಾಜನಗರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಪೀಡಿತರು ಮೃತಪಟ್ಟಿದ್ದಲ್ಲ, ಅದೊಂದು ವ್ಯವಸ್ಥಿತ ಕೊಲೆಯಾಗಿದೆ. ಮೊದಲು ಕೇವಲ 3 ಜನ ಮಾತ್ರ ಮೃತಪಟ್ಟಿದ್ದಾಗಿ ಹೇಳಿದ್ದು, ನಾವೆಲ್ಲ ಬಂದು ಮೃತರ ಕುಟುಂಬಸ್ಥರನ್ನ ಭೇಟಿಯಾಗಿ ಬಂದ ಬಳಿಕ 36 ಜನ

‘ಆಕ್ಸಿಜನ್ ನೀಡದೆ 36 ಜನರ ಕೊಲೆ’ ➤ ಸುಧಾಕರ್ ವಿರುದ್ದ ಡಿಕೆಶಿ ಸಿಡಿಮಿಡಿ     Read More »

ಕರ್ನಾಟಕ

ವರ್ಷದಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಲಿದೆ ಜರ್ಮನಿಯ ಎಸ್‌ಎಪಿ

(ನ್ಯೂಸ್ ಕಡಬ)newskadaba.com  ಫ್ರಾಂಕ್‌ಫರ್ಟ್‌, ಜ.27. ಜರ್ಮನಿಯ ಸಾಫ್ಟ್ ವೇರ್‌ ಕಂಪನಿ ಎಸ್‌ಎಪಿ ಈ ವರ್ಷದಲ್ಲಿ 3 ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲು ಯೋಜಿಸಿರುವುದಾಗಿ ಹೇಳಿದೆ. ಮೂಲ ವಹಿವಾಟಿನ ಕಡೆಗೆ ಹೆಚ್ಚು ಗಮನ ಕೊಡುವ ಉದ್ದೇಶದಿಂದ ಕಂಪನಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ. ಇದರಿಂದಾಗಿ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 2.5ರಷ್ಟು ಮಂದಿಗೆ ಸಮಸ್ಯೆ ಆಗುವ ಅಂದಾಜು ಮಾಡಲಾಗಿದೆ ಎಂದು ಅದು ತಿಳಿಸಿದೆ. ಕಂಪನಿಯು ಜಾಗತಿಕವಾಗಿ ಒಟ್ಟು 1.20 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

ವರ್ಷದಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಲಿದೆ ಜರ್ಮನಿಯ ಎಸ್‌ಎಪಿ Read More »

ರಾಷ್ಟ್ರೀಯ ನ್ಯೂಸ್

ಪ್ರಜೆಗಳ ಕಲ್ಯಾಣಕ್ಕಾಗಿ ತಾರತಮ್ಯ ಮುಕ್ತ ಆಡಳಿತ ➤ ಸಚಿವ ಬಿ.ಸಿ. ನಾಗೇಶ್‌           

(ನ್ಯೂಸ್ ಕಡಬ)newskadaba.com  ಮಡಿಕೇರಿ, ಜ.27. ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಗತಿಯನ್ನು ಸಾಧಿಸಿ, ಗೌರವಯುತ ಜೀವನ ನಡೆಸಬೇಕು. ಯಾರೊಬ್ಬರಿಗೂ ತಾರತಮ್ಯ ಮಾಡಬಾರದು ಎನ್ನುವುದು ನಮ್ಮ ಸಂವಿಧಾನದ ಮೂಲ ಆಶಯವಾಗಿದ್ದು, ಇದಕ್ಕೆ ಅನುಗುಣವಾಗಿ ಸರ್ವರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್‌ ಕೆ.ಎಸ್‌. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು ಎಂದು ತಿಳಿದುಬಂದಿದೆ.  

ಪ್ರಜೆಗಳ ಕಲ್ಯಾಣಕ್ಕಾಗಿ ತಾರತಮ್ಯ ಮುಕ್ತ ಆಡಳಿತ ➤ ಸಚಿವ ಬಿ.ಸಿ. ನಾಗೇಶ್‌            Read More »

ಕರಾವಳಿ, ಕರ್ನಾಟಕ
Scroll to Top