News Kadaba

ಕಾರು ಮತ್ತು ಬಸ್ ನಡುವೆ ಅಪಘಾತ ➤ ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.03. ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು, ಯುವತಿ ಗಾಯಗೊಂಡ ಘಟನೆ ಪೆರಿಯದಲ್ಲಿ ನಡೆದಿದೆ. ಪೆರಿಯ ನಡುವೆಟ್ಟ ಪಾರೆಯ ವೈಶಾಕ್(30) ಮೃತರು. ಘಟನೆಯಲ್ಲಿ ಕಾರಿನಲ್ಲಿದ್ದ ಆರತಿ (26) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ಹಲವರಿಗೆ ಕೂಡ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ವೈಶಾಖ್ ಪೆರಿಯದ ಇಂಟರ್ ಲಾಕ್ ಸಂಸ್ಥೆ ನಡೆಸುತ್ತಿದ್ದರು. ಆರತಿ ಕಾಸರಗೋಡು ಕಾಲೇಜಿನ ಮೂರನೇ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದರು […]

ಕಾರು ಮತ್ತು ಬಸ್ ನಡುವೆ ಅಪಘಾತ ➤ ಯುವಕನೋರ್ವ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪುತ್ತೂರು: ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ➤ ಓರ್ವನಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.03. ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದ ಘಟನೆ ಮುಂಡೂರಿನಲ್ಲಿ ನಡೆದಿದೆ. ಅಶ್ರಫ್ ಗಾಯಗೊಂಡವರು ಎಂದು ತಿಳಿದುಬಂದಿದೆ. ಅಶ್ರಫ್ ಗಂಭೀರವಾಗಿ ಗಾಯಗೊಂಡ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಶ್ರಫ್ ಮತ್ತು ಸ್ಥಳೀಯ ಕೆಲವರ ಜೊತೆ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಅಶ್ರಫ್ ಗೆ ಗಂಭೀರವಾಗಿ ಗಾಯಗೊಂಡಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಪುತ್ತೂರು: ಜಾಗದ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ➤ ಓರ್ವನಿಗೆ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ ➤ ಹೆಚ್ಚಿದ ಪೊಲೀಸ್ ಭದ್ರತೆ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.03. ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ನೀಡಿರುವುದಾಗಿ ಅಯೋಧ್ಯೆ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಅಯೋಧ್ಯೆಯ ರಾಮಕೋಟ್ ನಿವಾಸಿಯಾದ ಮನೋಜ್ ಎಂಬವರಿಗೆ ಅಪರಿಚಿತ ನಂಬರ್ನಿಂದ ಕರೆ ಬಂದಿದ್ದು, ಇಡೀ ಶ್ರೀರಾಮ ಜನ್ಮಭೂಮಿ ಸಂಕೀರ್ಣವನ್ನೇ ಸ್ಫೋಟಿಸುವುದಾಗಿ ಆತ ಹೇಳಿದ್ದಾನೆಂದು ಮನೋಜ್ ದೂರು ನೀಡಿದ್ದಾರೆ ಎಂದು ತಿಳಿದ್ದಾರೆ. ರಾಮಮಂದಿರ ಸ್ಫೋಟಿಸುವುದಾಗಿ ಕರೆ ಮಾಡಿದವನು ಹೇಳಿದ್ದ ಎಂದು ಮನೋಜ್ ಅವರು ನಮಗೆ ಮಾಹಿತಿ

ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ ➤ ಹೆಚ್ಚಿದ ಪೊಲೀಸ್ ಭದ್ರತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಿಳೆಯರಿಗೆ ಗುಡ್ ನ್ಯೂಸ್ ➤ ಉದ್ಯಮ ಆರಂಭಿಸಲು ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಫೆ.2. ಮಹಿಳೆಯರಲ್ಲಿ ಉದ್ಯಮಶೀಲತೆ ಹೆಚ್ಚಿಸಲು, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಸಾಲ ಪಡೆಯಲು ಅರ್ಹತೆ ಏನು, ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ. ಉದ್ಯೋಗಿನಿ ಯೋಜನೆ ಎಂದರೇನು? ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗಾಗಿ ಸಣ್ಣ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದಕ್ಕಾಗಿ ಕೇಂದ್ರ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಜಾರಿಗೆ ತಂದಿರುವ ಯೋಜನೆ ಇದಾಗಿದೆ.

ಮಹಿಳೆಯರಿಗೆ ಗುಡ್ ನ್ಯೂಸ್ ➤ ಉದ್ಯಮ ಆರಂಭಿಸಲು ಸಿಗುತ್ತೆ 3 ಲಕ್ಷ ಬಡ್ಡಿ ರಹಿತ ಸಾಲ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಶವಸಂಸ್ಕಾರಕ್ಕೂ ಬಂತು ‘ಸಂಚಾರಿ ಸ್ಮಶಾನ’ !  

(ನ್ಯೂಸ್ ಕಡಬ)newskadaba.com ಉಡುಪಿ, ಫೆ.02. ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಲು ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಇತ್ತೀಚಿಗೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ. ಹಿಂದುಳಿದವರು, ದಲಿತರು ವಾಸಿಸುವ ಭಾಗದಲ್ಲಿ ಐದು ಸೆಂಟ್ಸ್ ಜಾಗವಿರುವ ಕುಟುಂಬಗಳ ಮನೆಯಲ್ಲಿ ಸಾವಿಗೀಡಾದರೆ ಸ್ಮಶಾನಕ್ಕೆ ಕುಂದಾಪುರದ 40 ಕಿ.ಮೀ ದೂರದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಬೇಕಿದೆ. ಹೀಗಾಗಿ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ (ಎಂಪಿಎಸಿ), ಗ್ರಾಮಸ್ಥರ ಅನುಕೂಲಕ್ಕಾಗಿ ಸಂಚಾರಿ ಶವಸಂಸ್ಕಾರ ವಾಹನವನ್ನು ಪರಿಚಯಿಸಿದೆ.  

ಶವಸಂಸ್ಕಾರಕ್ಕೂ ಬಂತು ‘ಸಂಚಾರಿ ಸ್ಮಶಾನ’ !   Read More »

ಕರಾವಳಿ

ಡ್ರಗ್ಸ್ ಖರೀದಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಪುತ್ರ   

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.02. ಡ್ರಗ್ಸ್ ಖರೀದಿಗೆ ಹಣ ಕೊಡಲಿಲ್ಲವೆಂದು ತನ್ನ ತಂದೆಯನ್ನೇ ಕೊಂದ ಪುತ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  ಮೃತರನ್ನು ಶಕುರ್‌ಪುರ ಗ್ರಾಮದ ನಿವಾಸಿ ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ. ವಾಯುವ್ಯ ದೆಹಲಿಯ ಸುಭಾಷ್ ಪ್ಲೇಸ್‌ನಲ್ಲಿ ಜಗಳ ನಡೆದಿರುವ ಬಗ್ಗೆ ಮಾಹಿತಿ ದೊರೆತ ನಂತರ ಪೊಲೀಸರು ಅಲ್ಲಿಗೆ ಧಾವಿಸಿದಾಗ ಸುರೇಶ್ ಗಾಯಗೊಂಡಿರುವುದು ತಿಳಿದುಬಂದಿದೆ. ಗಾಯದ ನೋವಿನಿಂದ ಬಳುತ್ತಿದ್ದ ಅವರ ಒಂದು ಕಿವಿಯಿಂದ ರಕ್ತ ಸ್ರಾವವಾಗುತ್ತಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ

ಡ್ರಗ್ಸ್ ಖರೀದಿಗೆ ಹಣ ಕೊಡಲಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಪುತ್ರ    Read More »

ರಾಷ್ಟ್ರೀಯ ನ್ಯೂಸ್

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಗರ್ಭಿಣಿ ಸೇರಿ ಇಬ್ಬರು ಸಜೀವ ದಹನ   

(ನ್ಯೂಸ್ ಕಡಬ)newskadaba.com ಕಣ್ಣೂರ್, ಫೆ.02. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಾರನ್ನು ವ್ಯಾಪಿಸಿದ ಪರಿಣಾಮ ಗರ್ಭಿಣಿ ಸೇರಿದಂತೆ ಇಬ್ಬರೂ ಸಜೀವ ದಹನಗೊಂಡ ಘಟನೆ ದೇವರನಾಡು ಕೇರಳದ ಕಣ್ಣೂರಿನಲ್ಲಿ ನಡೆದಿದೆ.   ಕಣ್ಣೂರು ಜಿಲ್ಲಾಸ್ಪತ್ರೆಯ ಮುಂಭಾಗವೇ ಈ ದುರಂತ ನಡೆದಿದೆ.  ಹೀಗೆ ಕಾರಿನಲ್ಲಿ ಸಿಲುಕಿ ಸಜೀವ ದಹನಗೊಂಡವರನ್ನು ಪ್ರಜೀತ್ ಹಾಗೂ ಆತನ ಪತ್ನಿ ರೀಷಾ ಎಂದು ಗುರುತಿಸಲಾಗಿದೆ. ಘಟನೆ ಸಂಭವಿಸುವ ವೇಳೆ  ಕಾರಿನಲ್ಲಿ  ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಕಾರಿನ ಮುಂಭಾಗದ ಸೀಟಿನಲ್ಲಿ ಗರ್ಭಿಣಿ  ರೀಷಾ ಹಾಗೂ

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಗರ್ಭಿಣಿ ಸೇರಿ ಇಬ್ಬರು ಸಜೀವ ದಹನ    Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೂವರು ಬೈಕ್ ಕಳ್ಳರ ಬಂಧನ; ಬೈಕ್‌ಗಳು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಸಿಂಧನೂರು, ಫೆ.02. ಸಿಂಧನೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರು ಹಾಗೂ 18 ಬೈಕ್‌ಗಳನ್ನು ವಿಶೇಷ ಪೋಲಿಸ್ ತನಿಖಾ ತಂಡ ವಶಪಡಿಸಿಕೊಂಡಿದೆ. ನಗರದಲ್ಲಿ ಬೈಕ್‌ಗಳ ಕಳ್ಳತನ ಹೆಚ್ಚಾಗಿದ್ದು ಇದರಿಂದ ಬೈಕ್‌ಗಳ ಮಾಲೀಕರು ಭಯ ಬೀತರಾಗಿದ್ಧರು ಬೈಕ್‌ಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಡಿವೈಎಸ್ಪಿ ವೆಂಕಟಪ್ಪ ನಾಯಕ ಮಾರ್ಗ ದರ್ಶನದಲ್ಲಿ ದುರಗಪ್ಪ ಪಿ.ಐ.ನೇತೃತ್ವದಲ್ಲಿ ಸಿಬ್ಬಂದಿಗಳಾದ ಆದಯ್ಯ ಸಂಗನಗೌಡ, ರಾಮಪ್ಪ, ಅನಿಲ ಕುಮಾರ, ವಿಜಯಕುಮಾರ, ಸಿದ್ದಪ್ಪ, ಭಾಷಾ, ಆನಂದ ಕುಮಾರ ಅಜೀಮ ಪಾಷಾ,

ಮೂವರು ಬೈಕ್ ಕಳ್ಳರ ಬಂಧನ; ಬೈಕ್‌ಗಳು ಪೊಲೀಸ್ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ಫೆ. 11, 12 ರಂದು ಪ್ರಥಮ ಯಕ್ಷಗಾನ ಸಮ್ಮೇಳನ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.02. ಯಕ್ಷಗಾನ ವಿದ್ವಾಂಸ ಹಾಗೂ ಸಂಶೋಧಕ ಡಾ.ಎಂ.ಪ್ರಭಾಕರ ಜೋಶಿ ಅವರ ಅಧ್ಯಕ್ಷತೆಯಲ್ಲಿ ಫೆ.11 ಮತ್ತು 12 ರಂದು ಉಡುಪಿಯ ಎಂ.ಜಿ.ಎ ಕ್ರೀಡಾಂಗಣದಲ್ಲಿ ನಡೆಯುವ ಪ್ರಥಮ ಯಕ್ಷಗಾನ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು. ನಗರದ ಎಂ.ಜಿ.ಎ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಯಕ್ಷಗಾನ ಸಮ್ಮೇಳನದ ಪೂರ್ವಭಾವಿ ತಯಾರಿಯ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಯಕ್ಷಗಾನ ಸಮ್ಮೇಳನವು ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಪ್ರಾರಂಭವಾಗಲಿದ್ದು, ಮಾನ್ಯ ಮುಖ್ಯಮಂತ್ರ್ರಿಗಳಾದ ಬಸವರಾಜ

ಉಡುಪಿ: ಫೆ. 11, 12 ರಂದು ಪ್ರಥಮ ಯಕ್ಷಗಾನ ಸಮ್ಮೇಳನ Read More »

ಕರಾವಳಿ
Death, deadbody, Waterfall

ಬಟ್ಟೆ ತೊಳೆಯಲು ಕಾಲುವೆಗಿಳಿದ ಇಬ್ಬರು ಜಲಸಮಾಧಿ

(ನ್ಯೂಸ್ ಕಡಬ)newskadaba.com ವಿಜಯನಗರ, ಫೆ.02. ಕೃಷ್ಣಾ ಮೇಲ್ದಂಡೆ ಯೋಜನೆ ಕಾಲುವೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಓರ್ವ ಬಾಲಕ ಸೇರಿ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿ ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ. ರಸೂಲ್ ಮಾಲದಾರ (26) ಹಾಗೂ ಸಮೀವುಲ್ಲಾ ಗೊಳಸಂಗಿ (10) ಮೃತ ದುರ್ದೈವಿಗಳು. ಮುದ್ದೇಬಿಹಾಳ ಪಟ್ಟಣದ ಚಿಕನ್‌ ಸೆಂಟರ್‌ವೊಂದರಲ್ಲಿ ಇವರಿಬ್ಬರು ಕೆಲಸ ಮಾಡುತ್ತಿದ್ದರು. ಬಟ್ಟೆ ತೊಳೆಯಲೆಂದು ಹಡಗಲೇರಿ ಬಳಿಯ ನಾಲೆಗೆ ಹೋಗಿದ್ದರು. ಇದು ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಯಾಗಿದ್ದು, ನೀರು ತುಂಬಿ ಹರಿಯುತ್ತಿತ್ತು. ಬಟ್ಟೆ

ಬಟ್ಟೆ ತೊಳೆಯಲು ಕಾಲುವೆಗಿಳಿದ ಇಬ್ಬರು ಜಲಸಮಾಧಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top