News Kadaba

➤ ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ 70ರ ವೃದ್ಧೆಯನ್ನು ವರಿಸಿದ 75ರ ವೃದ್ಧ

(ನ್ಯೂಸ್ ಕಡಬ) newskadaba.com. ಮಹಾರಾಷ್ಟ್ರ.  ಮಾ.02. ಮಹಾರಾಷ್ಟ್ರದ ಜಾನಕಿ ವೃದ್ಧಾಶ್ರಮದಲ್ಲಿ ಹುಟ್ಟಿದ  ಅಪರೂಪದ ಪ್ರೇಮ ಕಥೆ. ತನ್ನ ಪತ್ನಿಯನ್ನು ಕಳೆದುಕೊಂಡು ಕಳೆದ ಕೆಲ ವರ್ಷಗಳಿಂದ  ಜಾನಕಿ ವೃದ್ಧಾಶ್ರಮದಲ್ಲಿ ವಾಸವಿದ್ದ ಬಾಬುರಾವ್ ಪಾಟೀಲ್ ಮತ್ತು ಅದೇ ವೃದ್ಧಾಶ್ರಮದಲ್ಲಿ ವಾಸವಿದ್ದ 70ರ  ಅನಸೂಯ ಶಿಂಧೆ ಮದುವೆಯಾಗಿದು, ಒಂಟಿತನವನ್ನು ದೂರಮಾಡಿದ್ದಾರೆ. ಈ ಇಬ್ಬರ ಮದುವೆಯನ್ನು ಆಶ್ರಮದಲ್ಲೇ ಎಲ್ಲರೂ ಸೇರುಕೊಂಡು ಮಾಡಿದ್ದಾರೆ. ಹಿರಿ ವಯಸ್ಸಿನಲ್ಲಿ ಪರಸ್ಪರ ಜೊತೆಯಾಗಿ ಇರುವ ಕಾರಣದಿಂದ ಮದುವೆಯಾಗಿದ್ಧೇವೆ ಎನ್ನುವುದು ನೂತನ ದಂಪತಿಯ ಮಾತು.

➤ ವೃದ್ಧಾಶ್ರಮದಲ್ಲಿ ಹುಟ್ಟಿದ ಪ್ರೇಮ 70ರ ವೃದ್ಧೆಯನ್ನು ವರಿಸಿದ 75ರ ವೃದ್ಧ Read More »

ರಾಷ್ಟ್ರೀಯ ನ್ಯೂಸ್

ಪಿಯುಸಿ ವಿದ್ಯಾರ್ಥಿನಿಗೆ ವಿವಾಹವಾಗುವಂತೆ ಕಿರುಕುಳ ಕೊಟ್ಟ ಅಂಕಲ್ ! ➤ ಕೋಪಗೊಂಡು ಸಾರ್ವಜನಿಕವಾಗಿ ಥಳಿಸಿದ ವಿದ್ಯಾರ್ಥಿನಿ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಪಿಯುಸಿ ವಿದ್ಯಾರ್ಥಿ ನಿಗೆ ಬೆನ್ನುಬಿದ್ದು ವಿವಾಹವಾಗುವಂತೆ ಪೀಡಿಸಿದ್ದಕ್ಕೆ ಬಾಲಕಿ ವ್ಯಕ್ತಿಯೋರ್ವನಿಗೆ ನಡು ರಸ್ತೆಯಲ್ಲಿಯೇ ಸಾರ್ವಜನಿಕರ ಸಮ್ಮುಖದಲ್ಲಿ ಚಪ್ಪಲಿಯಿಂದ ಥಳಿಸಿದ್ದಾಳೆ. ಯಶವಂತಪುರ ಹೋಳಿಗೆ ಮನೆ ಹೋಟೆಲ್‌ನ ಬಳಿ ಈ ಘಟನೆಯ ನಡೆದಿದೆ.ಬೆಳ್ಳಕೆರೆ ನಿವಾಸಿ ರವೀಂದ್ರ(40) ಎಂಬುವರು ಚಪ್ಪಲಿಯಿಂದ ಪೆಟ್ಟು ತಿಂದ ವ್ಯಕ್ತಿ. ಈತನಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  

ಪಿಯುಸಿ ವಿದ್ಯಾರ್ಥಿನಿಗೆ ವಿವಾಹವಾಗುವಂತೆ ಕಿರುಕುಳ ಕೊಟ್ಟ ಅಂಕಲ್ ! ➤ ಕೋಪಗೊಂಡು ಸಾರ್ವಜನಿಕವಾಗಿ ಥಳಿಸಿದ ವಿದ್ಯಾರ್ಥಿನಿ ! Read More »

ಕರ್ನಾಟಕ

ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ತಾಯಿ ನಿದ್ದೆ ಮಾಡಿದ್ದಾರೆಂದು ತಿಳಿದು 11 ವರ್ಷದ ಬಾಲಕನೊಬ್ಬ ಆಕೆಯ ಶವದೊಂದಿಗೆ ಎರಡು ದಿನ ಕಳೆದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಆರ್‌.ಟಿ. ನಗರದಲ್ಲಿ ನಡೆದಿದೆ. ಅಣ್ಣಮ್ಮ ( 44) ಅವರು ಮಧುಮೇಹ ಮತ್ತು ರಕ್ತದೊತ್ತಡ ಕಡಿಮೆಯಾಗಿ ಮನೆಯಲ್ಲಿ ಮಲಗಿದ್ದಾಗಲೇ ಸಾವನ್ನಪ್ಪಿದ್ದರು. ಅವರ 11 ವರ್ಷದ ಪುತ್ರ ತಾಯಿ ತನ್ನೊಂದಿಗೆ ಕೋಪದಿಂದ ಮಾತನಾಡದೇ ಮಲಗಿದ್ದಾರೆ ಎಂದೇ ಭಾವಿಸಿದ್ದ ಎನ್ನಲಾಗಿದೆ.  

ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಬಾಲಕ ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಎಲ್ಲ ಸಾರಿಗೆ ವಾಹನಗಳಿಗೆ ಈ ನಿಯಮ ಕಡ್ಡಾಯ ಮಾಡಿ ಸರ್ಕಾರ ಆದೇಶ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾರ್ಚ್. 02. ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಕರ್ನಾಟಕ ರಾಜ್ಯ ಎಲ್ಲ ಸಾರಿಗೆ ವಾಹನಗಳಿಗೆ ‘ರೆಟ್ರೋ ರೆಫ್ಲೆಕ್ಟಿವ್ ಟ್ಯಾಫ್ ಆಂಡ್ ರಿಯರ್ ಮಾರ್ಕಿಂಗ್ ಪ್ಲೇಟ್‌’ ಅಳವಡಿಕೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಮೋಟಾರು ವಾಹನ ನಿಯಮಗಳು 1989ರ ನಿಯಮ 104ರ ಅಡಿ ರಾಜ್ಯದ ಎಲ್ಲ ವಿಧದ ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ಮತ್ತು ಪತ್ರ ನವೀಕರಣ ಸಂದರ್ಭದಲ್ಲಿ ನಿಯಮ ಪಾಲಿಸಬೇಕು.

ಎಲ್ಲ ಸಾರಿಗೆ ವಾಹನಗಳಿಗೆ ಈ ನಿಯಮ ಕಡ್ಡಾಯ ಮಾಡಿ ಸರ್ಕಾರ ಆದೇಶ ! Read More »

ಕರ್ನಾಟಕ

ಗುಡಿಸಲಿನ ಮೇಲೆ ಹರಿದ ಲಾರಿ !     ➤ಕರ್ನಾಟಕ ಮೂಲದ ಮೂವರು ಮೃತ್ಯು!

(ನ್ಯೂಸ್ ಕಡಬ)newskadaba.com ತೆಲಂಗಾಣ, ಮಾ.02. ಗುಡಿಸಲಿನ ಮೇಲೆ ಲಾರಿವೊಂದು ಹರಿದು ಕರ್ನಾಟಕದ ಮೂವರು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಬಾಬು ರಾಠೋಡ್, ಕಮಲಿಬಾಯ್ ಮತ್ತು ಬಸಪ್ಪ ರಾಠೋಡ್ ಮೃತರೆಂದು ತಿಳಿದುಬಂದಿದೆ. ಲಾರಿ ರಿಂಗ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

ಗುಡಿಸಲಿನ ಮೇಲೆ ಹರಿದ ಲಾರಿ !     ➤ಕರ್ನಾಟಕ ಮೂಲದ ಮೂವರು ಮೃತ್ಯು! Read More »

ರಾಷ್ಟ್ರೀಯ ನ್ಯೂಸ್

ಬಸ್ಸಿಗೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು..!    

(ನ್ಯೂಸ್ ಕಡಬ)newskadaba.com ಉಡುಪಿ, ಮಾ.02. ಕಾರ್ಕಳ ತಾಲೂಕಿನ ಹಿರ್ಗಾನದ ಸಮೀಪದಲ್ಲಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ನಡೆದಿದೆ. ಮೃತ ಬೈಕ್ ಸವಾರ ಹಿರ್ಗಾನ ಗ್ರಾಮದ ಕಾನಂಗಿ ಹಂಕರಬೆಟ್ಟು ನಿವಾಸಿ ಮನೋಹರ ಪೂಜಾರಿ(43ವ) ಎಂದು ಗುರುತಿಸಲಾಗಿದೆ.

ಬಸ್ಸಿಗೆ ಬೈಕ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು..!     Read More »

ಕರಾವಳಿ, ಕ್ರೈಮ್ ನ್ಯೂಸ್

➤ ಟಿಕೆಟ್ ಇಲ್ಲದೆ ರೈಲು ಪ್ರಯಾಣ ರೂ. 100 ಕೋಟಿ ದಂಡ ಸಂಗ್ರಹ

ನ್ಯೂಸ್ ಕಡಬ) newskadaba.com. ಮುಂಬೈ, ಮಾ.2.  ರೈಲ್ವೇ ಅಧಿಕಾರಿಗಳು ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವರಿಗೆ ಭಾರಿ ದಂಡ ವಿಧಿಸಿದ್ದಾರೆ. ಸೆಂಟ್ರಲ್ ರೈಲ್ವೇ ಟಿಕೆಟ್ ರಹಿತ ರೈಲ್ವೇ ಪ್ರಯಾಣಿಕರಿಂದ ರೂ.100 ಕೋಟಿ ದಂಡ ಸಂಗ್ರಹಿಸಿದೆ. ಕಳೆದ ವರ್ಷ ಎಪ್ರಿಲ್ ನಿಂದ  ಈ ವರ್ಷದ ಫೆಬ್ರವರಿ ಅಂತ್ಯದವರೆಗೆ 100 ಕೋಟಿ  ಮೊತ್ತದ ದಂಡವನ್ನು ಸಂಗ್ರಹಿಸಲಾಗಿದೆ. ಎಂದು ತಿಳಿದು ಬಂದಿದೆ.

➤ ಟಿಕೆಟ್ ಇಲ್ಲದೆ ರೈಲು ಪ್ರಯಾಣ ರೂ. 100 ಕೋಟಿ ದಂಡ ಸಂಗ್ರಹ Read More »

ರಾಷ್ಟ್ರೀಯ ನ್ಯೂಸ್

ದೆಹಲಿ ನಾಯಿ ಮೇಲೆ ಅತ್ಯಾಚಾರ ➤ ಪಾಪಿ ವ್ಯಕ್ತಿಯ ಬಂಧನ!

(ನ್ಯೂಸ್ ಕಡಬ) newskadaba.com. ನವದೆಹಲಿ , ಮಾ.2.  ದೆಹಲಿಯ ಹರಿನಗರ ಪ್ರದೇಶದಲ್ಲಿ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ . ಪೊಲೀಸರು ದೂರು ಸ್ವೀಕರಿಸಿದ ನಂತರ ಐಪಿಸಿ ಮತ್ತು ಪ್ರಾಣಿ ಹಿಂಸೆ ಕಾಯ್ದೆಯ ಸೆಕ್ಷನ್ 377 ಅಡಿಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ. ಈ ಘೋರ ಕೃತ್ಯವನ್ನು ಪ್ರಾಣಿಗಳಿಗೆ ಆಹಾರ ನೀಡುವವರೊಬ್ಬರ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಆರೋಪಿಯ ಪ್ರಾಣಿ ಹಿಂಸೆಯ ಕೃತ್ಯವನ್ನು ಜನರು ಖಂಡಿಸಿದ್ದಾರೆ.

ದೆಹಲಿ ನಾಯಿ ಮೇಲೆ ಅತ್ಯಾಚಾರ ➤ ಪಾಪಿ ವ್ಯಕ್ತಿಯ ಬಂಧನ! Read More »

ಕ್ರೈಮ್ ನ್ಯೂಸ್

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆ..!

(ನ್ಯೂಸ್ ಕಡಬ)newskadaba.com ಉಡುಪಿ, ಮಾ.02. ಸಮುದ್ರ ತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಹುಡುಗಿಯನ್ನು ಲೈಫ್‌ಗಾರ್ಡ್‌ಗಳು ರಕ್ಷಿಸಿದ ಘಟನೆ ಉಡುಪಿ ಮಲ್ಪೆ ಬೀಚ್ ಪರಿಸರಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಮಾನಗಿ ಗ್ರಾಮದ ಐಶ್ವರ್ಯಾ ( 16) ನೀರಿಗೆ ಬಿದ್ದ ಬಾಲಕಿ. ಈಕೆ ಸಮುದ್ರ ತೀರದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬೃಹದಾಕಾರದ ಅಲೆ ಅಪ್ಪಳಿಸಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿದ್ದಳು.

ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆ..! Read More »

ಕರಾವಳಿ

ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.02. ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮೃತಪಟ್ಟ ಘಟನೆ ಉಪ್ಪಳ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತಪಟ್ಟವರು.  

ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top