News Kadaba

‘ಆಧಾರ್, ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್’ ಇದ್ದವರಿಗೆ ‘ಮೋದಿ ಸರ್ಕಾರ’ದಿಂದ ಭರ್ಜರಿ ನ್ಯೂಸ್.!!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.09. ಆಧಾರ್ ಕಾರ್ಡ್ ನಮ್ಮಲ್ಲಿರುವ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಅದಿಲ್ಲದೇ ಬಹಳಷ್ಟು ಕೆಲಸ ನಡೆಯೋದೇ ಇಲ್ಲ. ಅಲ್ಲದೇ, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯಂತಹ ದಾಖಲೆಗಳು ಸಹ ಪ್ರತಿಯೊಬ್ಬರಿಗೂ ಆಧಾರ್ ಜೊತೆಗೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ದೇಶದ ಜನತೆಗೆ ಶುಭ ಸುದ್ದಿ ನೀಡಲು ಹೊರಟಿದ್ದು, ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಪಡಿತರ ಚೀಟಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

‘ಆಧಾರ್, ಪಡಿತರ ಚೀಟಿ, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್’ ಇದ್ದವರಿಗೆ ‘ಮೋದಿ ಸರ್ಕಾರ’ದಿಂದ ಭರ್ಜರಿ ನ್ಯೂಸ್.!! Read More »

ಕರ್ನಾಟಕ

ಹೊಲದಲ್ಲಿ ಸಿಕ್ಕ ನಾಲ್ಕು ಹುಲಿಮರಿಗಳನ್ನು ರಕ್ಷಣೆ ಮಾಡಿದ ಗ್ರಾಮಸ್ಥರು !

(ನ್ಯೂಸ್ ಕಡಬ)newskadaba.com ತಿರುಪತಿ, ಮಾ.09. ಅಂಧ್ರಪ್ರದೇಶದ ಆತ್ಮಾಕೂರು ಅರಣ್ಯ ವಲಯದಲ್ಲಿ ತಾಯಿಯಿಂದ ತಪ್ಪಿಸಿಕೊಂಡ ನಾಲ್ಕು ಹುಲಿಮರಿಗಳನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ನಂದ್ಯಾಲ ಜಿಲ್ಲೆಯ ಕೋಟಪಲ್ಲಿ ತಾಲೂಕಿನ ಪೆದ್ದ ಗುಮ್ಮದಪುರಂನಲ್ಲಿ ಈ ಘಟನೆ ನಡೆದಿದೆ. ಅರಣ್ಯಕ್ಕೆ ಹೊಂದಿಕೊಂಡಿರುವ ಪೆದ್ದ ಗುಮ್ಮದಪುರಂನ ಹೊಲದಲ್ಲಿನ ಫಾರ್ಮ್ ಹೌಸ್ ಬಳಿ ನಾಲ್ಕು ಹುಲಿ ಮರಿಗಳು ಪತ್ತೆಯಾಗಿದ್ದವು. ಗ್ರಾಮಸ್ಥರು ಅವನ್ನು ಕಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಆತ್ಮಾಕೂರು ಅರಣ್ಯ ವಲಯದ ಅಧಿಕಾರಿಗಳು ‘ಹುಲಿ ಮರಿಗಳನ್ನು ಕಾಡಿನಲ್ಲಿ ಬಿಟ್ಟಿದ್ದು, ಅವುಗಳು

ಹೊಲದಲ್ಲಿ ಸಿಕ್ಕ ನಾಲ್ಕು ಹುಲಿಮರಿಗಳನ್ನು ರಕ್ಷಣೆ ಮಾಡಿದ ಗ್ರಾಮಸ್ಥರು ! Read More »

ರಾಷ್ಟ್ರೀಯ ನ್ಯೂಸ್

➤ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com. ಪುತ್ತೂರು, ಮಾ 9.  ಕಳೆದ ಐದುವರ್ಷಗಳ ಹಿಂದೆ ಕೌಕ್ರಾಡಿಯ ದಡ್ಡಲಪಲ್ಕೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ ಆರೋಪಿಗಳನ್ನು ಪುತ್ತೂರು ಸಂಚಾರ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ಮೂಲದ ಮೂರ್ತಿ ಹಾಗೂ ತೆಂಕಿಲ ನಿವಾಸಿ ಪವನ್ ಬಂಧಿತ ಆರೋಪಿಗಳು. ಮೂರ್ತಿ ಬಸ್ ಚಾಲಕನಾಗಿದ್ದು, 2014ರ ಮೇನಲ್ಲಿ ದದ್ದಲಪಲ್ಕೆ ಎಂಬಲ್ಲಿ ಚಾಲನೆ ಮಾಡುತ್ತಿದ್ದ ಬಸ್ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿತ್ತು. ಬೆಂಗಳೂರಿನ ಹೊಸಕೋಟೆಯಲ್ಲಿ ಮೂರ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತೆಂಕಿಲ ನಿವಾಸಿ

➤ ತಲೆಮರೆಸಿಕೊಂಡಿದ್ದ ಇಬ್ಬರು ವಾರಂಟ್ ಆರೋಪಿಗಳ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ     ➤ ದ.ಕ, ಉಡುಪಿಯಿಂದ 49,975 ವಿದ್ಯಾರ್ಥಿಗಳು ಪರೀಕ್ಷೆಗೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಮಾ.09. ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 49,975 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಒಟ್ಟು 80 ಕ್ಷೇತ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಮಧ್ಯಾಹ್ನ 1.30ರ ತನಕ ನಡೆಯಲಿದೆ. ಪರೀಕ್ಷೆಗಳಲ್ಲಿ ಯಾವುದೇ ಗೊಂದಲಗಳಾಗದಂತೆ ಪಾರದರ್ಶಕವಾಗಿ ನಡೆಯಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಸಿಸಿ ಕ್ಯಾಮರಾ ಮೂಲಕ ನಿಗಾ ಇಡುವ ಪ್ರಕ್ರಿಯೆ ನಡೆಯಲಿದೆ. ಪ್ರತೀ ಕೊಠಡಿಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದ್ದು,

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ     ➤ ದ.ಕ, ಉಡುಪಿಯಿಂದ 49,975 ವಿದ್ಯಾರ್ಥಿಗಳು ಪರೀಕ್ಷೆಗೆ Read More »

ಕರಾವಳಿ

ಇಂದಿನಿಂದ ದ್ವಿತೀಯ ಪರೀಕ್ಷೆ ➤ ಕಟ್ಟುನಿಟ್ಟಿನ ಕಣ್ಗಾವಲು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.09. ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಆರಂಭವಾಗುತ್ತಿದ್ದು, ಮಾ.29ರವರೆಗೆ ಮುಂದುವರಿಯಲಿದೆ. ರಾಜ್ಯದಲ್ಲಿ ಈ ಬಾರಿ 7.26 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1,109 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದೆ. 7,26,195 ವಿದ್ಯಾರ್ಥಿಗಳಲ್ಲಿ 3,63,698 ಬಾಲಕರು ಮತ್ತು 3,62,497 ಬಾಲಕಿಯರು ಸೇರಿದ್ದಾರೆ. ಒಟ್ಟು 5,716 ಕಾಲೇಜುಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ಎಚ್ಚರವಹಿಸಲು 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ,

ಇಂದಿನಿಂದ ದ್ವಿತೀಯ ಪರೀಕ್ಷೆ ➤ ಕಟ್ಟುನಿಟ್ಟಿನ ಕಣ್ಗಾವಲು Read More »

ಕರಾವಳಿ, ಕರ್ನಾಟಕ

ಅತಿಯಾದ ಇಯರ್ ಫೋನ್ ಬಳಕೆಯಿಂದ ಕಿವುಡುತನ ➤ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್ ಧನಂಜಯ್

(ನ್ಯೂಸ್ ಕಡಬ) newskadaba.com. ಮಾ 9. ಮಂಡ್ಯ  ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಇಯರ್ ಫೋನ್ ಗಳ  ಅತಿಯಾದ ಬಳಕೆಯಿಂದ ಕಿವುಡುತನ ಕಾಣಿಸಿಕೊಳ್ಳುತ್ತಿದೆ. ಹೆಚ್ಚಾಗಿ ಹದಿಹರೆಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ. ಟಿ. ಎನ್ .ಧನಂಜಯ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ರಾಷ್ಟ್ರೀಯ ಶ್ರವಣದೋಷ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ  ಯೋಜನೆಯಡಿ ನಗರದ ಡಿ ಎಚ್ ಒ ಕಚೇರಿ ಆವರಣದಲ್ಲಿ ಅಯೋಜಿಸಿದ್ದ ವಿಶ್ವ ಶ್ರವಣ ದಿನಾಚರಣೆ

ಅತಿಯಾದ ಇಯರ್ ಫೋನ್ ಬಳಕೆಯಿಂದ ಕಿವುಡುತನ ➤ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್ ಧನಂಜಯ್ Read More »

ಆರೋಗ್ಯ ಮಾಹಿತಿ, ಕರ್ನಾಟಕ

ಉಳ್ಳಾಲ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ    ➤ ಕಿಂಗ್ ಪಿನ್ ಮಹಿಳೆಯ ಬಂಧನ

(ನ್ಯೂಸ್ ಕಡಬ)newskadaba.com  ಉಳ್ಳಾಲ, ಮಾ.09. ಉಳ್ಳಾಲ ತಾಲೂಕಿನ ಪಂಡಿತ್  ಹೌಸ್ ಸಮೀಪದ ವಿಜೇತ ನಗರದಲ್ಲಿರುವ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ಮಾ. 07 ರ ರಾತ್ರಿ ದಾಳಿ ನಡೆಸಿ ಕಿಂಗ್ ಪಿನ್ ಮಹಿಳೆಯನ್ನ ಬಂಧಿಸಿದ್ದು ,ಮತ್ತೋರ್ವ ಪಿಂಪ್ ತಲೆ ಮರೆಸಿಕೊಂಡಿದ್ದಾನೆ. ಬಂಟ್ವಾಳ ತಾಲೂಕಿನ ಬೊಳಂತೂರು ಗ್ರಾಮದ ,ವಿಟ್ಲಕೋಡಿ ನಿವಾಸಿ, ಪಿಂಪ್ ರುಕಿಯಾ (50)ಬಂಧಿತ ಆರೋಪಿ. ಮತ್ತೋರ್ವ ಪ್ರಮುಖ ಆರೋಪಿ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ.  

ಉಳ್ಳಾಲ: ವೇಶ್ಯಾವಾಟಿಕೆ ಅಡ್ಡೆಗೆ ದಾಳಿ    ➤ ಕಿಂಗ್ ಪಿನ್ ಮಹಿಳೆಯ ಬಂಧನ Read More »

ಕರಾವಳಿ

ಬಿಸಿಲಿನ ಕಾವು ಹೆಚ್ಚಳದ ಸಾಧ್ಯತೆ ➤ ದ.ಕ ಜಿಲ್ಲಾಧಿಕಾರಿಯಿಂದ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.09. ಕಳೆದ ಕೆಲ ದಿನಗಳಿಂದ ಬಿಸಿಲಿನ ಕಾವು ಹೆಚ್ಚಾಗಿದೆ. ವೈರಲ್ ಜ್ವರಗಳು ಕೂಡ ಹೆಚ್ಚಳವಾಗಿದೆ. ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ಹೆಚ್ಚಾಗಿ ರೋಗಗಳು ಹರಡುತ್ತದೆ. ಇದರಿಂದಾಗಿ ಉಪಾಹಾರ ಗೃಹಗಳು, ಕ್ಯಾಂಟೀನ್ಗಳು, ಹೊಟೇಲ್ಗಳು, ಬಾರ್ಗಳು, ಬೇಕರಿಗಳಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆಯನ್ನು ಹೊರಡಿಸಿದ್ದಾರೆ. ಹೊಟೇಲ್ಗಳಲ್ಲಿ ಆಹಾರ ಅಥವಾ ಅಡುಗೆ ತಯಾರಕರು ವೈಯಕ್ತಿಕ ಶುಚಿತ್ವ ಖಚಿತ ಪಡಿಸಿಕೊಳ್ಳಬೇಕು. ಅನಾರೋಗ್ಯದ ವೇಳೆ ಆಹಾರವನ್ನು ತಯಾರಿಸುವ, ಸರಬರಾಜು ಮಾಡುವ ಮತ್ತು ಬಡಿಸುವ ಕಾರ್ಯ

ಬಿಸಿಲಿನ ಕಾವು ಹೆಚ್ಚಳದ ಸಾಧ್ಯತೆ ➤ ದ.ಕ ಜಿಲ್ಲಾಧಿಕಾರಿಯಿಂದ ಆರೋಗ್ಯ ರಕ್ಷಣೆಗೆ ಮಾರ್ಗಸೂಚಿ ಪ್ರಕಟ Read More »

ಕರಾವಳಿ
Theft, crime, Robbery

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಮಾ. 09. ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗ ನಗದು ಕಳವು ಮಾಡಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ. ಒಟ್ಟು 3,11,550 ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿದ್ದು, ಸಣ್ಣ ಪ್ಲಾಸಿಕ್ ಬಾಕ್ಸ್ನಲ್ಲಿ ಇಟ್ಟಿದ್ದ ಕಿವಿಯ ಬೆಂಡೋಳೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಅದರ ಪಕ್ಕದಲ್ಲಿ ಇಟ್ಟಿದ್ದ ಕರಿಮಣಿ ಸರ,

ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗ ನಗದು ಕಳವು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

➤ಹಿರಿಯ ವಿದ್ವಾಂಸ ಪ್ರೊ. ಮಲೆಯೂರು ಗುರುಸ್ವಾಮಿ ನಿಧನ

(ನ್ಯೂಸ್ ಕಡಬ) newskadaba.com. ಮಾ 9. ಚಾಮರಾಜನಗರ. ಹಿರಿಯ ವಿದ್ವಾಂಸ ಪ್ರೊ. ಮಲೆಯೂರು ಗುರುಸ್ವಾಮಿ (76) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ  ಬಳಲುತ್ತಿದ್ದ ಮಲೆಯೂರು ಗುರುಸ್ವಾಮಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ನ ನಿಕಟಪೂರ್ವ ರಾಜ್ಯಾಧ್ಯಕ್ಷರಾಗಿದ್ದರು. ಇಂದು ಮಧ್ಯಾಹ್ನ ಚಾಮರಾಜನಗರ ತಾಲೂಕಿನ ಮಲೆಯೂರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.

➤ಹಿರಿಯ ವಿದ್ವಾಂಸ ಪ್ರೊ. ಮಲೆಯೂರು ಗುರುಸ್ವಾಮಿ ನಿಧನ Read More »

ಕರ್ನಾಟಕ
Scroll to Top