News Kadaba

ವಿಟ್ಲ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com  ಕೊಣಾಜೆ, ಮಾ.21. ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಹರೀಶ್ ಮನೆಗೆ ಬರುವಾಗ ಕೈಯಲ್ಲಿ ಪೆಟ್ರೋಲ್ ನ್ನು ಕ್ಯಾನಿನಲ್ಲಿ ಹಿಡಿದುಕೊಂಡು ಬಂದಿದ್ದಾರೆ. ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌‌ ಎನ್ನಲಾಗಿದೆ.    

ವಿಟ್ಲ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

7ನೇ ನೂತನ ವಿ.ವಿ ಗಳಿಗೆ ಕುಲಪತಿಗಳ ನೇಮಕ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.21. ರಾಜ್ಯ ಸರಕಾರವು ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ, ಆದೇಶ ಹೊರಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಇದರಂತೆ ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ.ಬಿ ಕೆ ರವಿ ಅವರನ್ನು ಕೊಪ್ಪಳ ವಿವಿ, ಬಾಗಲಕೋಟೆಯ ತೋಟಗಾರಿಕೆ ವಿ.ವಿ.ದ ಡಾ.ಅಶೋಕ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ.ಎಂ

7ನೇ ನೂತನ ವಿ.ವಿ ಗಳಿಗೆ ಕುಲಪತಿಗಳ ನೇಮಕ Read More »

ಕರ್ನಾಟಕ

ಮಂಗಳೂರು: ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನಿಗೆ ಥಳಿಸಿ ಹಲ್ಲೆ ➤ ಪ್ರಕರಣ ದಾಖಲು   

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21.ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನೊಬ್ಬನಿಗೆ ಉಳಿದ ಆಟೋ ಚಾಲಕರು ಥಳಿಸಿ ಗಾಯಗೊಳಿಸಿದ ಘಟನೆ ಪಣಂಬೂರು ಬೀಚ್ ನಲ್ಲಿ ನಡೆದಿದೆ. ಗಾಯಗೊಂಡ ಚಾಲಕನನ್ನು ಹೇಮಚಂದ್ರ ಎಂದು ಗುರುತಿಸಲಾಗಿದೆ. ಪ್ರಯಾಣಿಕರೊಬ್ಬರ ಬಾಡಿಗೆ ನಿಮಿತ್ತ ಹೇಮಚಂದ್ರ ಅವರು ಪಣಂಬೂರು ಪಾರ್ಕ್ ಗೆ ಹೋಗಿದ್ದು, ಈ ವೇಳೆ ಸ್ಥಳಕ್ಕೆ ಬಂದ 10 ಮಂದಿ ಆಟೋ ಚಾಲಕರ ತಂಡ “ನೀನು ಇಲ್ಲಿ ಬಾಡಿಗೆ ಮಾಡಬಾರದು. ಇದು ನಮ್ಮ ಏರಿಯಾ, ಇಲ್ಲಿ ನಾವು ಮಾತ್ರ ಬಾಡಿಗೆ ಮಾಡುವುದು”

ಮಂಗಳೂರು: ಪಾರ್ಕಿಂಗ್ ಗೆ ನಿಲ್ಲಿಸಿದ್ದ ಆಟೋ ಚಾಲಕನಿಗೆ ಥಳಿಸಿ ಹಲ್ಲೆ ➤ ಪ್ರಕರಣ ದಾಖಲು    Read More »

ಕರಾವಳಿ, ಕ್ರೈಮ್ ನ್ಯೂಸ್

ನಾಗರ ಹಾವಿನ ಕಡಿತದಿಂದ ತಾಯಿಯನ್ನು ಕಾಪಾಡಿದ ಮಗಳು

ನ್ಯೂಸ್ ಕಡಬ) newskadaba.com. ಪುತ್ತೂರು, ಮಾ20.  ಅಮ್ಮನ ಜೀವಕ್ಕಾಗಿ ಮಗಳೊಬ್ಬಳು ಸಾಹಸ ಮೆರೆದ ಘಟನೆ  ಕರಾವಳಿಯಲ್ಲಿ ಬೆಳಕಿಗೆ ಬಂದಿದೆ. ಪುತ್ತೂರು ತಾಲೂಕಿನ ಮಾಡಾವು ಎಂಬ ಗ್ರಾಮದಲ್ಲಿ ಶ್ರಮ್ಯ ರೈ ಎಂಬ ಯುವತಿಯೊಬ್ಬಳು ಹಾವು ಕಡಿದ ತನ್ನ ಅಮ್ಮನಿಗೆ ಧೈರ್ಯ ತುಂಬಿ ಬಾಯಿಂದ ಕಚ್ಚಿ ವಿಷ ತೆಗೆದು ಅಮ್ಮನ ಜೀವವನ್ನು ಕಾಪಾಡಿದ್ದಾಳೆ. ಕೆಯ್ಯೂರು ಗ್ರಾಮ ಪಂಚಾಯತ್‌ ಸದಸ್ಯೆ ಮಮತಾ ರೈ ಎಂಬವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಅವರಿಗೆ ಆಕಸ್ಮಿಕವಾಗಿ ನಾಗರ ಹಾವೊಂದು ಕಡಿದಿದೆ. ಇದನ್ನು ಗಮನಿಸಿದ

ನಾಗರ ಹಾವಿನ ಕಡಿತದಿಂದ ತಾಯಿಯನ್ನು ಕಾಪಾಡಿದ ಮಗಳು Read More »

ಕರಾವಳಿ, ಕರ್ನಾಟಕ

➤ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com. ಬಿಲಾಸಪುರ್‌, ಮಾ20. ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಕಾಲೇಜಿನ ಟೆರೇಸ್ ಮೇಲಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಛತ್ತೀಸಗಢದ ಬಿಲಾಸಪುರ ಪಟ್ಟಣದಲ್ಲಿ ನಡೆದಿದೆ. ಬಿಲಾಸಪುರದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ ಅಶುತೋಷ್‌ ಸಾವೊ (20) ಮೃತ ವಿದ್ಯಾರ್ಥಿ ರೀಲ್ಸ್ ಮಾಡಲೆಂದು ಐವರು ಸ್ನೇಹಿತರೊಂದಿಗೆ ಕಾಲೇಜಿನ ಟೆರೇಸ್‌ಗೆ ತೆರಳಿದ್ದಾನೆ. ಟೆರೇಸ್‌ನ ಗೋಡೆ ಮೇಲೆ ನಿಂತು ಕಿಟಕಿಯ ಸಜ್ಜೆ ಮೇಲೆ ಹಾರಿದ್ದಾನೆ. ಈ ವೇಳೆ 20 ಅಡಿ ಎತ್ತರದ ಕಟ್ಟಡದಿಂದ ಆಯತಪ್ಪಿ

➤ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ Read More »

ಕ್ರೈಮ್ ನ್ಯೂಸ್

ಶಾಲಾ ಮಕ್ಕಳಿಗೆ ಸಿಹಿಸುದ್ದಿ ➤ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಣೆ!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ20.  ಶಾಲಾ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮೂಂದೆ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಿಸುವಂತೆ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ. ಪ್ರಧಾನಮಂತ್ರಿ ಪೋಷಣ್ ಯೋಜನೆಯಡಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಜೇನುತುಪ್ಪವನ್ನು ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದ್ದು, ಚೇನುತುಪ್ಪದಲ್ಲಿನ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಜೇನು ತುಪ್ಪ ನೀಡಲು ಮುಂದಾಗಿದೆ. ದೇಶದಲ್ಲಿ ಜೇನು ಸಾಕಣೆ ಮಾಡುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ

ಶಾಲಾ ಮಕ್ಕಳಿಗೆ ಸಿಹಿಸುದ್ದಿ ➤ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಣೆ! Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಿಮೋಟ್‌ನಲ್ಲೇ ʻತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಪಂಗನಾಮʼ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ20.  ಸಿಲಿಕಾನ್‌ ಸಿಟಿಯಲ್ಲಿ ದಿನ ಖತರ್ನಾಕ್‌ ಕಳ್ಳರು ಹೆಚ್ಚಾಗುತ್ತಿದ್ದು, ಅದಲ್ಲೂ ಕಣ್ಣೆದುರಲ್ಲೇ ಗ್ರಾಹಕರ ಕಣ್ಣಿಗೆ ಖದೀಮರು ಮಣ್ಣೆರಚುತ್ತಿರೋ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ರಿಮೋಟ್ ಕಂಟ್ರೋಲ್‌ ಮೂಲಕ ತೂಕದಲ್ಲೂ ವಂಚನೆಗೆ ಮುಂದಾಗಿರುವ ಘಟನೆ ವರದಿಯಾಗಿದೆ. ಇದೀಗ ನಗರದ ಪ್ರಮುಖವಾಗಿ ನ್ಯಾಯಬೆಲೆ ಅಂಗಡಿ, ಗುಜರಿ, ಮಾಂಸದ ಅಂಗಡಿಗಳಲ್ಲಿ ಹೊಸ ಕಳ್ಳಾಟ ಶುರುವಾಗಿದ್ದು, ಪಿಸಿಬಿ ಚಿಪ್ ಅಳವಡಿಸಿಕೊಂಡು‌ ರಿಮೋಟ್ ಮೂಲಕ ತೂಕದ ಸ್ಕೇಲ್ ಕಂಟ್ರೋಲ್ ಮಾಡುತ್ತಾ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಕಂಡ

ರಿಮೋಟ್‌ನಲ್ಲೇ ʻತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಪಂಗನಾಮʼ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಿಂಕೆ ಬೇಟೆ ➤ಓರ್ವ ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com. ಹನೂರು, ಮಾ20. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.  ಜಲ್ಲಿಪಾಳ್ಯದ ಮಾರುಶೆಟ್ಟಿ ಬಂಧಿತ ಆರೋಪಿ. ಈ ವೇಳೆ ಈತನ ಜೊತೆಗಿದ್ದ ಮೂರ್ತಿ, ರಾಮು ಎಂಬವರು ಪರಾರಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹೂಗ್ಯಂ ವನ್ಯಜೀವಿ ವಲಯದ ಪಾಲಾರ್ ಹಳ್ಳದಲ್ಲಿ ಜಿಂಕೆ ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಅಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ಮಾರುಶೆಟ್ಟಿ ಸಿಕ್ಕಿಬಿದ್ದಿದ್ದಾನೆ. ಈತನ ಜೊತೆಗಾರರಾದ ಮೂರ್ತಿ, ರಾಮು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ

ಜಿಂಕೆ ಬೇಟೆ ➤ಓರ್ವ ಆರೋಪಿಯ ಸೆರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಲೆಯಲ್ಲಿ ರ‍್ಯಾಗಿಂಗ್ ➤ ಬೇಸತ್ತು ಬಾಲಕಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಮಡಿಕೇರಿ, ಮಾ20.  ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್  ನಿಂದ ಬೇಸತ್ತ  7ನೇ ತರಗತಿಯ ವಿದ್ಯಾರ್ಥಿನಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು  ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವರಹಳ್ಳಿ ಗ್ರಾಮದ ಜಿತೇಂದ್ರ-ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ  7ನೇ ತರಗತಿ ಓದುತ್ತಿದ್ದ ವೈಷ್ಣವಿಗೆ ಕಳೆದ ಒಂದು ವಾರದ ಹಿಂದೆ ರ‍್ಯಾಗಿಂಗ್  ಮಾಡಲಾಗಿತ್ತು, ಇದರಿಂದ  ಖಿನ್ನತೆಗೊಳಗಾಗಿದ್ದ ಆಕೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಾಲೆಯಲ್ಲಿ ರ‍್ಯಾಗಿಂಗ್ ➤ ಬೇಸತ್ತು ಬಾಲಕಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಲಿಕ್ಕರ್ ಬಾಕ್ಸ್ ನಾಪತ್ತೆ ➤ ಐವರು ಅಬಕಾರಿ ಸಿಬ್ಬಂದಿ ಅಮಾನತು!

(ನ್ಯೂಸ್ ಕಡಬ) newskadaba.com.ಬೆಳಗಾವಿ. ಮಾ20. ಇದೇ ತಿಂಗಳ ಆರಂಭದಲ್ಲಿ ಕಾರ್ಯಾಚರಣೆ ವೇಳೆಯಲ್ಲಿ ವಶಕ್ಕೆ ಪಡೆಯಲಾದ ಮದ್ಯದ ಬಾಟಲಿಗಳನ್ನು ನಿಗೂಢವಾಗಿ ಸಾಗಿಸಿರುವುದು ಇಲಾಖಾ ತನಿಖೆ ವೇಳೆ ತಿಳಿದುಬಂದ ನಂತರ ಮೂವರು ಶ್ರೇಣಿ ಅಧಿಕಾರಿಗಳು ಸೇರಿದಂತೆ ಐವರು ಅಬಕಾರಿ ಸಿಬ್ಬಂದಿಯನ್ನು ಅಮಾನುತು ಮಾಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಅಕ್ರಮ ಹಣ ಹಾಗೂ ಮಧ್ಯ ಸಾಗಾಟವನ್ನು ತಡೆಯಲು ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಮಾರ್ಚ್ 7 ರ ಸಂಜೆ  ಖಾನಪುರ ತಾಲೂಕಿನ

ಲಿಕ್ಕರ್ ಬಾಕ್ಸ್ ನಾಪತ್ತೆ ➤ ಐವರು ಅಬಕಾರಿ ಸಿಬ್ಬಂದಿ ಅಮಾನತು! Read More »

ಕರ್ನಾಟಕ
Scroll to Top