News Kadaba

ಕಂದಕಕ್ಕೆ ಉರುಳಿ ಬಿದ್ದ ಬಸ್ ➤ 17 ಜನರು ಮೃತ್ಯು, ಹಲವರಿಗೆ ಗಾಯ 

(ನ್ಯೂಸ್ ಕಡಬ) newskadaba.com ಬಾಂಗ್ಲದೇಶ, ಮಾ. 21. ಬಸ್ ಕಂದಕಕ್ಕೆ ಬಿದ್ದ ಪರಿಣಾಮ 17 ಜನರು ಮೃತಪಟ್ಟು, 30 ಜನರು ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ಮದರಿಪುರದಲ್ಲಿ ನಡೆದಿದೆ. ಢಾಕಾಗೆ ತೆರಳುತ್ತಿದ್ದ ಬಸ್ ಮದರಿಪುರದ ಎಕ್ಸ್ ಪ್ರೆಸ್ ವೇನಲ್ಲಿ ಕಮರಿಗೆ ಬಿದ್ದಿದ್ದು, ಪರಿಣಾಮ 17 ಜನರು ಮೃತಪಟ್ಟಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮದರಿಪುರ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಮಸೂದ್ ಆಲಂ ತಿಳಿಸಿದ್ದಾರೆ.

ಕಂದಕಕ್ಕೆ ಉರುಳಿ ಬಿದ್ದ ಬಸ್ ➤ 17 ಜನರು ಮೃತ್ಯು, ಹಲವರಿಗೆ ಗಾಯ  Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆಂಬ್ಯುಲೆನ್ಸ್‌ ನಲ್ಲೇ 10 ನೇ ತರಗತಿ ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿನಿ

(ನ್ಯೂಸ್ ಕಡಬ) newskadaba.com ಮುಂಬೈ, ಮಾ. 21. ಅಪಘಾತದಿಂದಾಗಿ ಬಾಂದ್ರಾದ 10ನೇ ತರಗತಿ ವಿದ್ಯಾರ್ಥಿನಿ ಆಂಬ್ಯುಲೆನ್ಸ್‌ನಲ್ಲಿ ಬೋರ್ಡ್ ಪರೀಕ್ಷೆ ಬರೆದಿರುವ ಘಟನೆ ನಡೆದಿದೆ. ವಿಜ್ಞಾನ 1 ಪರೀಕ್ಷೆಯನ್ನು ಮುಗಿಸಿ ಅಂಜುಮನ್-ಐ-ಇಸ್ಲಾಂ ಶಾಲೆಯ ವಿದ್ಯಾರ್ಥಿನಿ ಮುಬಾಶಿರಾ ಸಾದಿಕ್ ಸಯ್ಯದ್ ರಸ್ತೆ ದಾಟುತ್ತಿದ್ದಾಗ ಹಿಲ್ ರೋಡ್‌ನ ಸೇಂಟ್ ಜೋಸೆಫ್ ಕಾನ್ವೆಂಟ್ ಬಳಿ ಕಾರು ಢಿಕ್ಕಿ ಹೊಡೆದು ಆಕೆಯ ಎಡ ಪಾದಕ್ಕೆ ಗಂಭೀರವಾದ ಗಾಯಗಳಾಗಿದ್ದು, ಅದೇ ದಿನ ಆಕೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.

ಆಂಬ್ಯುಲೆನ್ಸ್‌ ನಲ್ಲೇ 10 ನೇ ತರಗತಿ ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿನಿ Read More »

ರಾಷ್ಟ್ರೀಯ ನ್ಯೂಸ್

ಪ್ರಧಾನಿ ಭೇಟಿ ವೇಳೆ ಭದ್ರತಾ ವೈಫಲ್ಯ➤ ಪೊಲೀಸರ ವಿರುದ್ದ ಶಿಸ್ತುಕ್ರಮ

(ನ್ಯೂಸ್ ಕಡಬ) newskadaba.com ಪಂಜಾಬ್, ಮಾ. 21.  ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಪ್ರವಾಸದ ಸಂದರ್ಭದಲ್ಲಿ ಏರ್ಪಟ್ಟ ಅತಿದೊಡ್ಡ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಪಂಜಾಬ್‌ನ ಮಾಜಿ ಡಿಜಿಪಿ ಸಹಿತ ಹಲವು ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಲು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸೂಚನೆ ನೀಡಿದ್ದಾರೆ.   2022ರ ಜನವರಿಯಲ್ಲಿ ಪಂಜಾಬ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದ ವೇಳೆ ಉಂಟಾದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಹಿಂದಿನ ಡಿಜಿಪಿ ಸಿದ್ದಾರ್ಥ್

ಪ್ರಧಾನಿ ಭೇಟಿ ವೇಳೆ ಭದ್ರತಾ ವೈಫಲ್ಯ➤ ಪೊಲೀಸರ ವಿರುದ್ದ ಶಿಸ್ತುಕ್ರಮ Read More »

ರಾಷ್ಟ್ರೀಯ ನ್ಯೂಸ್

ಖ್ಯಾತ ಪತ್ರಕರ್ತ ಇರ್ಫಾನ್ ಮೆಹ್ರಾಜ್ ಬಂಧಿಸಿದ NIA ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಕಾಶ್ಮೀರ ಮೂಲದ ಪತ್ರಕರ್ತ ಇರ್ಫಾನ್ ಮೆಹ್ರಾಜ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿಯ ಎನ್ಐಎಯಲ್ಲಿ ದಾಖಲಾದ ಎಫ್ಐಆರ್ ಸಂಖ್ಯೆ ಆರ್ಸಿ -37/2020 ಗೆ ಸಂಬಂಧಿಸಿದಂತೆ ಮೆಹ್ರಾಜ್ ಅವರನ್ನು ಎನ್ಐಎ ವಿಚಾರಣೆಗಾಗಿ ಬಂಧಿಸಿದೆ.

ಖ್ಯಾತ ಪತ್ರಕರ್ತ ಇರ್ಫಾನ್ ಮೆಹ್ರಾಜ್ ಬಂಧಿಸಿದ NIA ಅಧಿಕಾರಿಗಳು Read More »

ರಾಷ್ಟ್ರೀಯ ನ್ಯೂಸ್

ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪಾಪಿ ಪತಿ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 21. ಅಕ್ರಮ ಸಂಬಂಧದ ಹಿನ್ನೆಲೆ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಮಗುವಿನ ಮೇಲೂ ಹಲ್ಲೆ ನಡೆಸಿರುವ ದಾರುಣ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸಾರಾಯಿ ಪಾಳ್ಯದಲ್ಲಿ ನಡೆದಿದೆ. ಕೊಲೆಯಾದವರನ್ನು ಸಾರಾಯಿ ಪಾಳ್ಯದ ಆಫ್ಜಲ್ ಲೇಔಟ್ ನ ತಬ್ಸಿಮ್ ಬೇಬಿ (32) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾಗಿರುವ ಆಕೆಯ ಎರಡೂವರೆ ವರ್ಷದ ಮಗು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದೆ. ಕೃತ್ಯ ನಡೆಸಿದ ಆರೋಪಿ ಪತಿ ಕೋಲ್ಕತ್ತಾ

ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪಾಪಿ ಪತಿ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕೇಂದ್ರ ಸರ್ಕಾರದ ಸಾಲ 155 ಲಕ್ಷ ಕೋಟಿ ➤ ನಿರ್ಮಲಾ ಸೀತಾರಾಮನ್‌

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ (2023ರ ಮಾರ್ಚ್‌ 31) ಕೇಂದ್ರ ಸರ್ಕಾರದ ಒಟ್ಟು ಸಾಲದ ಮೊತ್ತವು ₹ 155.8 ಲಕ್ಷ ಕೋಟಿ (ದೇಶದ ಒಟ್ಟು ಆಂತರಿಕ ಉತ್ಪಾದನೆಯ ಶೇಕಡ 57.3ರಷ್ಟು ) ಅಂದಾಜು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ. ಒಟ್ಟು ಸಾಲದ ಮೊತ್ತದಲ್ಲಿ ವಿದೇಶಿ ಸಾಲದ ಮೊತ್ತವು ಸದ್ಯ ಇರುವ ವಿನಿಮಯ ದರದ ಆಧಾರದಲ್ಲಿ ₹ 7.03 ಲಕ್ಷ ಕೋಟಿ

ಕೇಂದ್ರ ಸರ್ಕಾರದ ಸಾಲ 155 ಲಕ್ಷ ಕೋಟಿ ➤ ನಿರ್ಮಲಾ ಸೀತಾರಾಮನ್‌ Read More »

ರಾಷ್ಟ್ರೀಯ ನ್ಯೂಸ್

ಕರಾವಳಿ ಮುಂದುವರಿದ ಮುಷ್ಕರ ➤ ಬಿಗಡಾಯಿಸಿದ ಕಸದ ಸಮಸ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21. ವಿವಿಧ ಬೇಡಿಕೆ ಆಗ್ರಹಿಸಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರ ಪ್ರತಿಭಟನೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ 9ನೇ ದಿನಕ್ಕೆ ಮುಂದುವರಿದಿದೆ. ನಗರ ಪ್ರದೇಶದ ಪ್ರಮುಖ ವಾರ್ಡ್‌ಗಳು ಸೇರಿದಂತೆ ಅಪಾರ್ಟ್‌ಮೆಂಟ್‌, ಮನೆ ಸೇರಿದಂತೆ ನಾನಾ ಭಾಗದಲ್ಲಿ ಕಸ ವಿಲೇವಾರಿಯಾಗದೇ ಸಮಸ್ಯೆ ತೀವ್ರವಾಗಿದೆ. ನಾಗರಿಕರು ತಮ್ಮ ಮನೆಯ ಕಸವನ್ನು ರಸ್ತೆಯ ಪಕ್ಕದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಕಸ ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆ ಸ್ಥಗಿತದಿಂದಾಗಿ ರಸ್ತೆಯಲ್ಲಿ ಕಸದ ರಾಶಿ ಹೆಚ್ಚುತ್ತಿದೆ. ಬೀದಿ ಬದಿ ಅಂಗಡಿಗಳ

ಕರಾವಳಿ ಮುಂದುವರಿದ ಮುಷ್ಕರ ➤ ಬಿಗಡಾಯಿಸಿದ ಕಸದ ಸಮಸ್ಯೆ Read More »

ಕರಾವಳಿ

ರೈತರಿಗೆ ಸರ್ಕಾರದಿಂದ ಯುಗಾದಿ ಗಿಫ್ಟ್ ➤ ಖಾತೆಗೆ 2000 ರೂ. ಜಮಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 21. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತ ಫಲಾನುಭವಿಗಳಿಗೆ ಇಂದು ರಾಜ್ಯ ಸರ್ಕಾರದ ಎರಡನೇ ಕಂತು ಜಮಾ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆ 2022 -23ನೇ ಸಾಲಿನ ಎರಡನೇ ಕಂತಿನ ಆರ್ಥಿಕ ನೆರವು 975 ಕೋಟಿ ರೂ. ಮೊತ್ತವನ್ನು 48,75,000 ರೈತರ ಖಾತೆಗಳಿಗೆ ಬಿಡುಗಡೆ ಮಾಡಲಿದ್ದಾರೆ. ಪಿಎಂ ಕಿಸಾನ್ ನಿಧಿ ಭಾರತದಲ್ಲಿರುವ ಭೂಹಿಡುವಳಿ ಹೊಂದಿದ ರೈತರ ಆದಾಯ ಬೆಂಬಲಿಸುವ ಯೋಜನೆಯಾಗಿದ್ದು, ಕೇಂದ್ರ

ರೈತರಿಗೆ ಸರ್ಕಾರದಿಂದ ಯುಗಾದಿ ಗಿಫ್ಟ್ ➤ ಖಾತೆಗೆ 2000 ರೂ. ಜಮಾ Read More »

ಕರ್ನಾಟಕ

ಇನ್ಮುಂದೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಣೆ ➤ ಕೇಂದ್ರ ಶಿಕ್ಷಣ ಸಚಿವಾಲಯ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.21. ಶಾಲಾ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಿಸುವಂತೆ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ. ಪ್ರಧಾನಮಂತ್ರಿ ಪೋಷಣ್ ಯೋಜನೆಯಡಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಜೇನುತುಪ್ಪವನ್ನು ನೀಡಲು ಎಲ್ಲ ರಾಜ್ಯಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯ ಸೂಚನೆ ನೀಡಿದ್ದು, ಚೇನುತುಪ್ಪದಲ್ಲಿನ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಜೇನು ತುಪ್ಪ ನೀಡಲು ಮುಂದಾಗಿದೆ.  

ಇನ್ಮುಂದೆ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಜೇನುತುಪ್ಪ ವಿತರಣೆ ➤ ಕೇಂದ್ರ ಶಿಕ್ಷಣ ಸಚಿವಾಲಯ Read More »

ರಾಷ್ಟ್ರೀಯ ನ್ಯೂಸ್

ಮಾ.23 ರಂದು ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶವು ಮಾರ್ಚ್, 23 ರಂದು ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಂಗಣದಲ್ಲಿ ಮಾಜಿ ಯೋಧರು ಅನುಭವಿಸುತ್ತಿರುವ ಸಮಸ್ಯೆಗಳು ಕುಂದುಕೊರತೆಗಳ ಬಗ್ಗೆ ಸಭೆ ನಡೆಯಲಿದೆ. ಅಡ್ವೋಕೇಟ್ ಜನರಲ್ ಮತ್ತು ಸಮಾಜ ಸೇವಕರಾದ ಎಸ್.ಎಸ್.ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ಅವರು ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ವಿಚಾರ ವ್ಯಕ್ತಪಡಿಸಲಿದ್ದಾರೆ. ಫೀಲ್ಡ್ ಮಾರ್ಷಲ್ ಕೊಡವ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗುರುಮನೆ-12

ಮಾ.23 ರಂದು ಅರೆ ಸೇನಾಪಡೆ ನಿವೃತ್ತ (ಮಾಜಿ) ಯೋಧರ ಸಮಾವೇಶ Read More »

ರಾಷ್ಟ್ರೀಯ ನ್ಯೂಸ್
Scroll to Top