News Kadaba

ಕೇಂದ್ರ ಬಜೆಟ್‌ ಮಂಡನೆ ➤ ಗೃಹ ಸಚಿವಾಲಯದಿಂದ ಇಂದು ಅನುಮೋದನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ದೆಹಲಿ ಸರ್ಕಾರದ ಬಜೆಟ್ ಮಂಡನೆಗೆ ಕೇಂದ್ರ ಗೃಹ ಸಚಿವಾಲಯವು ಇಂದು ಅನುಮೋದನೆ ನೀಡಿದೆ. ಈ ಕುರಿತು ಲೆಫ್ಟಿನೆಂಟ್ ಗವರ್ನರ್‍ ವಿ.ಕೆ. ಸಕ್ಸೇನಾ ಅವರ ಕಚೇರಿ ಮೂಲಗಳು ಮಾಹಿತಿ ನೀಡಿರುವ ಬಗ್ಗೆ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಸರ್ಕಾರದ ವೈಫಲ್ಯ ಮುಚ್ಚಿಡುವುದಕ್ಕಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ವೃಥಾ ಆರೋಪ ಮಾಡುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ. ದೆಹಲಿ ರಾಜ್ಯವಲ್ಲ, ಅದು ಕೇಂದ್ರಾಡಳಿತ ಪ್ರದೇಶ. ಹೀಗಾಗಿ ಭಾರತ ಸರ್ಕಾರದ ಅಂಗವಾಗಿದ್ದು, ಬಜೆಟ್‌ನ್ನು […]

ಕೇಂದ್ರ ಬಜೆಟ್‌ ಮಂಡನೆ ➤ ಗೃಹ ಸಚಿವಾಲಯದಿಂದ ಇಂದು ಅನುಮೋದನೆ Read More »

ರಾಷ್ಟ್ರೀಯ ನ್ಯೂಸ್

ಇದು ನನ್ನ ಕೊನೆಯ ಪ್ರೀತಿ ➤ 92ನೇ ವಯಸ್ಸಿಗೆ 5ನೇ ಮದುವೆಯಾದ ಉದ್ಯಮಿ

(ನ್ಯೂಸ್ ಕಡಬ) newskadaba.com ನ್ಯೂಯಾರ್ಕ್, ಮಾ. 21. ಮಾಧ್ಯಮ ಕ್ಷೇತ್ರದ ದಿಗ್ಗಜ ರೂಪರ್ಟ್ ಮುರ್ಡೋಕ್ ತಮ್ಮ 92ನೇ ವಯಸ್ಸಿನಲ್ಲಿ ಐದನೇ ಮದುವೆಯಾಗುತ್ತಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ರೂಪರ್ಟ್, ನಾನು ತುಂಬಾ ನರ್ವಸ್ ಆಗಿದ್ದು ನನಗೆ ನಿಜಕ್ಕೂ ಮತ್ತೊಮ್ಮೆ ಪ್ರೀತಿಯಲ್ಲಿ ಬೀಳಲು ಭಯವಾಗುತ್ತಿತ್ತು. ಆದರೂ ಇದು ನನ್ನ ಕೊನೆಯ ಪ್ರೀತಿ ಎಂದು ನನಗೆ ಗೊತ್ತಿದೆ ಎಂದಿದ್ದಾರೆ.

ಇದು ನನ್ನ ಕೊನೆಯ ಪ್ರೀತಿ ➤ 92ನೇ ವಯಸ್ಸಿಗೆ 5ನೇ ಮದುವೆಯಾದ ಉದ್ಯಮಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ನಿತಿನ್ ಗಡ್ಕರಿಗೆ ಮತ್ತೆ ಬೆದರಿಕೆ ಕರೆ ➤10 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟ ಅನಾಮಿಕ

(ನ್ಯೂಸ್ ಕಡಬ) newskadaba.com ಮಹಾರಾಷ್ಟ್ರ, ಮಾ. 21. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೆ ಅನಾಮಿಕ ವ್ಯಕ್ತಿಯಿಂದ ಮತ್ತೊಮ್ಮೆ ಬೆದರಿಕೆ ಕರೆ ಬಂದಿರುವುದಾಗಿ ಮೂಲಗಳು ತಿಳಿಸಿವೆ. ಅವರು ಮಹಾರಾಷ್ಟ್ರದ ನಾಗ್ಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದು, ನಾಗ್ಪುರದ ಖಾಮ್ಲಾ ಪ್ರಾಂತ್ಯದಲ್ಲಿ ಅವರು ಸಾರ್ವಜನಿಕ ಸಂಪರ್ಕ ಕಚೇರಿಯನ್ನು ಹೊಂದಿದ್ದಾರೆ. ಕಚೇರಿಗೆ ಕರೆ ಮಾಡಿದ ವ್ಯಕ್ತಿಯೋರ್ವ 10 ಕೋಟಿ ರೂ.ಗಳ ಬೇಡಿಕೆಯಿಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಾಗ್ಪುರ ಪೊಲೀಸರು ಅನಾಮಧೇಯ ವ್ಯಕ್ತಿಯ ಕರೆಯನ್ನು ಟ್ರೇಸ್ ಮಾಡಲು ಮುಂದಾಗಿದ್ದಾರೆ.

ನಿತಿನ್ ಗಡ್ಕರಿಗೆ ಮತ್ತೆ ಬೆದರಿಕೆ ಕರೆ ➤10 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟ ಅನಾಮಿಕ Read More »

ರಾಷ್ಟ್ರೀಯ ನ್ಯೂಸ್

406 ನಗರಗಳಲ್ಲಿ ಮತ್ತೆ ರಿಲಯನ್ಸ್ ಜಿಯೊ 5ಜಿ ನೆಟ್‌ವರ್ಕ್ ಸೇವೆ ಆರಂಭ

(ನ್ಯೂಸ್ಕಡಬ) newskadaba.com ಮುಂಬೈ, ಮಾ. 21. 5ಜಿ ನೆಟ್‌ವರ್ಕ್ ಸೇವೆಯನ್ನು ಮತ್ತೆ 406 ನಗರಗಳಲ್ಲಿ ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ. 16 ರಾಜ್ಯಗಳ 406 ನಗರಗಳಿಗೆ 5ಜಿ ನೆಟ್‌ವರ್ಕ್ ಸೇವೆ ಒದಗಿಸಲಾಗಿದೆ. ಈ ಮೂಲಕ ಅತಿವೇಗದಲ್ಲಿ ದೇಶದಲ್ಲಿ 5ಜಿ ಸೇವೆಯನ್ನು ವಿಸ್ತರಿಸುವಲ್ಲಿ ರಿಲಯನ್ಸ್ ಜಿಯೊ ಮೊದಲ ಸ್ಥಾನದಲ್ಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

406 ನಗರಗಳಲ್ಲಿ ಮತ್ತೆ ರಿಲಯನ್ಸ್ ಜಿಯೊ 5ಜಿ ನೆಟ್‌ವರ್ಕ್ ಸೇವೆ ಆರಂಭ Read More »

ತಂತ್ರಜ್ಞಾನ

ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಎಸ್‌ಐ..!

(ನ್ಯೂಸ್ ಕಡಬ) newskadaba.com ರಾಣೆಬೆನ್ನೂರು, ಮಾ. 21. ಲಂಚ ಪಡೆಯುವಾಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ಫಿರೋಜ್ ಎಂಬವರಿಗೆ ಬಾಡಿಗೆ ವಸೂಲಿ ಮಾಡಿಕೊಡಲು 40,000 ರೂಪಾಯಿ ಲಂಚ ಪಡೆಯುವಾಗ ರಾಣೆಬೆನ್ನೂರು ನಗರ ಪೊಲೀಸ್‌ ಠಾಣೆ ಸಬ್ ಇನ್ಸ್ಪೆಕ್ಟರ್ ಸುನಿಲ್ ತೇಲಿ ಅವರನ್ನು ದಾವಣಗೆರೆ ಲೋಕಾಯುಕ್ತ ಪೊಲೀಸರು ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಸುನಿಲ್ ತೇಲಿಯವರ ವಾಹನ ಚಾಲಕ ಸಚಿನ್ ಅವರನ್ನೂ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.  

ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಿಎಸ್‌ಐ..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ಭಾರತ ಮೂಲದ ವಿದ್ಯಾರ್ಥಿಗೆ ಅಪರಿಚಿತ ವ್ಯಕ್ತಿಗಳಿಂದ ದಾಳಿ

(ನ್ಯೂಸ್ ಕಡಬ) newskadaba.com ಕೆನಡಾ, ಮಾ. 21. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಭಾರತದ 21 ವರ್ಷದ ಸಿಖ್ ವಿದ್ಯಾರ್ಥಿಯ ಮೇಲೆ ದಾಳಿ ಮಾಡಿದ ಕುರಿತು ವರದಿಯಾಗಿದೆ. ಹಲ್ಲೆಗೊಳಗಾದವರನ್ನು ಗಗನ್ ದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈತನ ಪೇಟವನ್ನು ಕಿತ್ತು  ಕೂದಲು ಹಿಡಿದು ಕಾಲುದಾರಿಯ ಉದ್ದಕ್ಕೂ ದುಷ್ಕರ್ಮಿಗಳ ಗುಂಪು ಎಳೆದಾಡಿ, ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಭಾರತ ಮೂಲದ ವಿದ್ಯಾರ್ಥಿಗೆ ಅಪರಿಚಿತ ವ್ಯಕ್ತಿಗಳಿಂದ ದಾಳಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸೀಬೆ ಹಣ್ಣಿನ ಆರೋಗ್ಯದ ಗುಟ್ಟು

(ನ್ಯೂಸ್ ಕಡಬ) newskadaba.com ಮಾ. 21. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ ಎಂದು ಹೇಳಬಹುದು. ಏಕೆಂದರೆ ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದು. ಅಗತ್ಯವಾಗಿ ಬೇಕಾಗಿರುವ ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಸಂಶೋಧನೆಯೊಂದರ ಪ್ರಕಾರ, ಮಧುಮೇಹ ಕಾಯಿಲೆಯಿಂದ ನರಳುವವರು ಸೀಬೆಹಣ್ಣನ್ನು ತಿನ್ನುವಾಗ ಅದರ ಮೇಲಿನ ಹಸಿರು ಸಿಪ್ಪೆಯನ್ನು ತೆಗೆದು ಸೇವಿಸಿದರೆ ಒಳಿತು. ಏಕೆಂದರೆ, ಅದರಲ್ಲಿನ ಅತ್ಯಧಿಕ ಗ್ಲೂಕೋಸ್ ಪ್ರಮಾಣ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸುವುದು. ವಿಟಮಿನ್ ಎ, ಬಿ ಹಾಗೂ ಸಿ

ಸೀಬೆ ಹಣ್ಣಿನ ಆರೋಗ್ಯದ ಗುಟ್ಟು Read More »

ಆರೋಗ್ಯ ಮಾಹಿತಿ

ಸರ್ಕಾರಿ ಕೋಟಾದಡಿ ಓದಿ ವೈದ್ಯೆಯಾದ ಅಮೆರಿಕ ಪ್ರಜೆ ➤ ಹೈಕೋರ್ಟ್ ನಿಂದ ಹಿಗ್ಗಾಮುಗ್ಗಾ ತರಾಟೆ

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 21. ಭಾರತದ ಪ್ರಜೆಯೆಂದು ಘೋಷಿಸಿಕೊಂಡು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪದವಿ ಪೂರ್ಣಗೊಳಿಸಿ ನಂತರ ಹುಟ್ಟೂರಾದ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಸಲು ಮುಂದಾಗಿದ್ದ ಮಹಿಳಾ ವೈದ್ಯರೊಬ್ಬರ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಅನಿವಾಸಿ ಭಾರತೀಯ ಅಥವಾ ಭಾರತದ ಸಾಗರೋತ್ತರ ನಾಗರಿಕ ಕೋಟಾದಡಿ ವಿಧಿಸುವ ಎಂಬಿಬಿಎಸ್‌ ಪದವಿಯ ಶುಲ್ಕ ಪಡೆದು ವಾಪಸ್ಸಾಗಲು ಮಹಿಳೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಅಮೆರಿಕಕ್ಕೆ ತೆರಳಲು ಎಕ್ಸಿಟ್‌ ಪರ್ಮಿಟ್‌ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ವಲಸೆ

ಸರ್ಕಾರಿ ಕೋಟಾದಡಿ ಓದಿ ವೈದ್ಯೆಯಾದ ಅಮೆರಿಕ ಪ್ರಜೆ ➤ ಹೈಕೋರ್ಟ್ ನಿಂದ ಹಿಗ್ಗಾಮುಗ್ಗಾ ತರಾಟೆ Read More »

ಕರ್ನಾಟಕ

ನೃತ್ಯ ಮಾಡುತ್ತಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಸರ್ಕಾರಿ ನೌಕರ

(ನ್ಯೂಸ್ ಕಡಬ) newskadaba.com ಭೋಪಾಲ್, ಮಾ. 21. ನೃತ್ಯ ಮಾಡುತ್ತಾ ಸರ್ಕಾರಿ ನೌಕರರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಭೋಪಾಲ್ ನಲ್ಲಿ ನಡೆದಿದೆ. ಮೃತರನ್ನು ಮಧ್ಯಪ್ರದೇಶ ಅಂಚೆ ವೃತ್ತದ ಸಹಾಯಕ ನಿರ್ದೇಶಕ ಟೆಕ್ನಿಕಲ್ ಸುರೇಂದ್ರ ಕುಮಾರ್ ದೀಕ್ಷಿತ್ (55) ಎಂದು ಗುರುತಿಸಲಾಗಿದೆ. ಅಖಿಲ ಭಾರತ ಅಂಚೆ ಹಾಕಿ ಪಂದ್ಯಾವಳಿಯನ್ನು ಅಂಚೆ ಇಲಾಖೆಯು ಮಾರ್ಚ್ 20 ರಂದು ಮಧ್ಯಪ್ರದೇಶದ ರಾಜದಾನಿ ಭೋಪಾಲ್ ನಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸುರೇಂದ್ರ ಕುಮಾರ್ ದೀಕ್ಷಿತ್ ಅವರು ತಮ್ಮ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿದ್ದ ವೇಳೆ

ನೃತ್ಯ ಮಾಡುತ್ತಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಸರ್ಕಾರಿ ನೌಕರ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಜ್ಯದ 5 ನಗರಗಳಿಗೆ ಇ-ಬಸ್ ಸೇವೆ ವಿಸ್ತರಿಸಿದ KSRTC

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 21. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೊಸದಾಗಿ ಬೆಂಗಳೂರಿನಿಂದ ರಾಜ್ಯದ ಐದು ನಗರಗಳಿಗೆ ಇವಿ ಪವರ್‌ ಪ್ಲಸ್‌ ಎಂಬ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನ ಆರಂಭಿಸಿದೆ. ಈ ಮೂಲಕ ಬೆಂಗಳೂರು-ಮೈಸೂರು ಮಾತ್ರವಲ್ಲದೇ ರಾಜ್ಯದ ಇತರೆ ನಗರಗಳ ಪ್ರಯಾಣಿಕರು ಕೂಡಾ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಪಡೆಯಬಹುದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್​ಆರ್​ಟಿಸಿ) ಅಂತರ್ ನಗರ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಚಾಲಿತ ಇ.ವಿ.

ರಾಜ್ಯದ 5 ನಗರಗಳಿಗೆ ಇ-ಬಸ್ ಸೇವೆ ವಿಸ್ತರಿಸಿದ KSRTC Read More »

ಕರ್ನಾಟಕ
Scroll to Top