News Kadaba

ಬುಲೆಟ್ ಬೈಕ್‌ನಿಂದ ಬಿದ್ದು ಯುವತಿ ಮೃತ್ಯು, ಗೆಳತಿಗೆ ಗಂಭೀರ

(ನ್ಯೂಸ್‌ ಕಡಬ) newskadaba.com,ಫೆ.23: ಚಲಾಯಸುತ್ತಿದ್ದ ಬೈಕ್‌ನಿಂದ ಬಿದ್ದು ಯುವತಿಯೋರ್ವಳು ಸಾವನ್ನಪ್ಪಿರು ಘಟನೆ ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಇದೇ ಬೈಕ್‌ನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಹಂಪ್ ಕಾಣದ ಹಿನ್ನೆಲೆ ಅಪಘಾತ ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿ. ಗಾಯಾಳು ಸ್ವಾತಿಯನ್ನು (24) ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ರಸ್ತೆಯಲ್ಲಿದ್ದ ಹಂಪ್ ಕಾಣದ ಹಿನ್ನೆಲೆ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಯುವತಿಯರಿಬ್ಬರು ಹೆಲ್ಮೆಟ್ ಧರಿಸದ ಕಾರಣ […]

ಬುಲೆಟ್ ಬೈಕ್‌ನಿಂದ ಬಿದ್ದು ಯುವತಿ ಮೃತ್ಯು, ಗೆಳತಿಗೆ ಗಂಭೀರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಈಜಲು ಹೋಗಿದ್ದ ಯುವಕನಿಗೆ ಕಾಡಿದ ವಾರಾಹಿ ಹೊಳೆ: 6 ದಿನಗಳ ಹೋರಾಟ ಅಂತ್ಯ!”

(ನ್ಯೂಸ್‌ ಕಡಬ) newskadaba.com,ಫೆ.23: ಉಡುಪಿ ಜಿಲ್ಲೆಯ ಅಮಾಸೆಬೈಲು ಸಮೀಪದ ತೊಂಬಟ್ಟು ವಾರಾಹಿ ಹೊಳೆಯಲ್ಲಿ ಈಜಲು ಹೋಗಿ ಮುಳುಗಿದ್ದ ಯುವಕ ಸುಧೀರ್ (26) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರು ಉಳ್ಳೂರು-74 ಗ್ರಾಮದ ಭುಜಂಗ ಶೆಟ್ಟಿ ಅವರ ಪುತ್ರ. ​ಫೆಬ್ರವರಿ 15ರಂದು: ಸುಧೀರ್ ಅವರು ಹೊಸಂಗಡಿ ಗ್ರಾಮದ ಭಾಗೀಮನೆ ಎಂಬಲ್ಲಿ ವಾರಾಹಿ ಹೊಳೆಗೆ ಈಜಲು ಹೋಗಿದ್ದರು. ಈಜು ಸರಿಯಾಗಿ ಬಾರದ ಕಾರಣ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದರು. ​ ತಕ್ಷಣವೇ ಅವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ

ಈಜಲು ಹೋಗಿದ್ದ ಯುವಕನಿಗೆ ಕಾಡಿದ ವಾರಾಹಿ ಹೊಳೆ: 6 ದಿನಗಳ ಹೋರಾಟ ಅಂತ್ಯ!” Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಪಶ್ಚಿಮ ಬಂಗಾಳದ ರಾಜಕೀಯ ‘ಚಾಣಕ್ಯ’ ಮುಕುಲ್ ರಾಯ್ ವಿಧಿವಶ

(ನ್ಯೂಸ್‌ ಕಡಬ) newskadaba.com,ಫೆ.23: ಪಶ್ಚಿಮ ಬಂಗಾಳ ರಾಜಕೀಯದ ಪ್ರಮುಖ ಮುಖ ಹಾಗೂ ‘ರಾಜಕೀಯ ಚಾಣಕ್ಯ’ ಎಂದೇ ಖ್ಯಾತರಾಗಿದ್ದ ಮುಕುಲ್ ರಾಯ್ (71) ಅವರು ಇಂದು ಬೆಳಗಿನ ಜಾವ ನಿಧನರಾದರು. ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 1.30ರ ಸುಮಾರಿಗೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮಾಜಿ ರೈಲ್ವೆ ಸಚಿವರಾಗಿದ್ದ ರಾಯ್, ಒಂದು ಕಾಲದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತ ಸಹಾಯಕರಾಗಿದ್ದು, ಪಕ್ಷದ ಎರಡನೇ ನಾಯಕನಂತೆ ಪರಿಗಣಿಸಲ್ಪಟ್ಟಿದ್ದರು. ಕಳೆದ ಎರಡು ವರ್ಷಗಳಿಂದ ಹಲವು ಕಾಯಿಲೆಗಳಿಂದ

ಪಶ್ಚಿಮ ಬಂಗಾಳದ ರಾಜಕೀಯ ‘ಚಾಣಕ್ಯ’ ಮುಕುಲ್ ರಾಯ್ ವಿಧಿವಶ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕುಂದಾಪುರ: ಅಪಘಾತ ಎಸಗಿ ಪರಾರಿಯಾಗಿದ್ದ ಬಸ್ ಚಾಲಕನಿಗೆ ಬಿತ್ತು ಭಾರಿ ದಂಡ!

(ನ್ಯೂಸ್‌ ಕಡಬ) newskadaba.com,ಫೆ.23: ಸುಮಾರು 6 ವರ್ಷಗಳ ಹಿಂದೆ ರಾ.ಹೆ. 66 ರ ಕುಂದಾಪುರದ ಹೇರಿಕುದ್ರು ಸೇತುವೆ ಮೇಲೆ ಕೆಎಸ್ ಆರ್ ಟಿಸಿ ಬಸ್ಸನ್ನು ಅಜಾಗರೂಕತೆ, ನಿರ್ಲಕ್ಷ್ಯದಿಂದ ಚಲಾಯಿಸಿ, ಅಪಘಾತ ನಡೆಸಿದ್ದಲ್ಲದೆ,ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸದೇ, ಪರಾರಿಯಾಗಿದ್ದ ಚಾಲಕ ಸಂಜಯ ಶಾನುಭಾಗ್ ಗೆ ದಂಡದ ರೂಪದಲ್ಲಿ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ. 2019ರ ಜು.30 ರ ಬೆಳಗ್ಗೆ ಆರೋಪಿ ಸಂಜಯನು ಹೇರಿಕುದ್ರು ಸೇತುವೆ ಮೇಲೆ ವೇಗವಾಗಿ ಚಲಾಯಿಸಿ, ಎದುರಿನ ವಾಹನ ನೋಡಿ ಒಮ್ಮೆಲೆ ಬ್ರೇಕ್ ಹಾಕಿದ್ದಾನೆ. ಇದರಿಂದ ಪ್ರಯಾಣಿಕರಾದ

ಕುಂದಾಪುರ: ಅಪಘಾತ ಎಸಗಿ ಪರಾರಿಯಾಗಿದ್ದ ಬಸ್ ಚಾಲಕನಿಗೆ ಬಿತ್ತು ಭಾರಿ ದಂಡ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಇಂದಿನ ರಾಜ್ಯದ ಹವಾಮಾನ ವರದಿ

(ನ್ಯೂಸ್ ಕಡಬ) newskadaba.com,ಫೆ.23: ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಒಣಹವೆ ಇರಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಲ್ಲಿ ಮುಂದಿನ 2-3 ದಿನಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್

ಇಂದಿನ ರಾಜ್ಯದ ಹವಾಮಾನ ವರದಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಪು: ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಕಸಿದು ಪರಾರಿಯಾದ ಯುವಕರ ತಂಡ

(ನ್ಯೂಸ್‌ ಕಡಬ) newskadaba.com,  ಫೆ.21 :   ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಬೈಕ್ ನಲ್ಲಿ ಬಂದ ಮೂವರು ಯುವಕರ ತಂಡವೊಂದು ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಶಿರ್ವ ಸಮೀಪದ ಶಂಕರಪುರದಲ್ಲಿ ನಡೆದಿದೆ.ಶಂಕರಪುರದ ನಿವಾಸಿ ಹೆಲೆನ್ ಡಿಸೋಜಾ (70) ಚಿನ್ನದ ಸರ ಕಳೆದುಕೊಂಡ ವೃದ್ಧ ಮಹಿಳೆ. ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಯ ಸುಮಾರಿಗೆ ಹೆಲೆನ್ ಅವರು ಮನೆಯಲ್ಲಿದ್ದಾಗ, ಮೋಟಾರ್ ಬೈಕ್ ನಲ್ಲಿ ಬಂದ ಮೂವರು ಯುವಕರು ಅಕ್ಕಪಕ್ಕದಲ್ಲಿ ಬಾಡಿಗೆಗೆ ಮನೆ ಇದೆಯೇ

ಕಾಪು: ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಕಸಿದು ಪರಾರಿಯಾದ ಯುವಕರ ತಂಡ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಏಪ್ರಿಲ್ 1 ರಿಂದ ನಗದು ಟೋಲ್ ಪಾವತಿ ಬಂದ್: ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ NHAI ಮುಂದು!

(ನ್ಯೂಸ್‌ ಕಡಬ) newskadaba.com,  ಫೆ.21 :   ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಏಪ್ರಿಲ್ 1ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟನ್ನು ಸ್ಥಗಿತಗೊಳಿಸಲು ಯೋಜನೆ ರೂಪಿಸಿದೆ. ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಹೊಸ ನಿಯಮ ಜಾರಿಗೆ ಬಂದರೆ, ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಸಾಧ್ಯವಾಗುತ್ತದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಯುಪಿಐ ಮೂಲಕ ಪಾವತಿಸಿದರೆ 1.25% ಹೆಚ್ಚುವರಿ ಶುಲ್ಕವನ್ನು ಕಟ್ಟಬೇಕಾಗುತ್ತದೆ. ಈ ನಿರ್ಧಾರದಿಂದ ಟೋಲ್ ಪ್ಲಾಜಾಗಳಲ್ಲಿ ದಟ್ಟಣೆ ಕಡಿಮೆ ಆಗುವುದರ ಜೊತೆಗೆ

ಏಪ್ರಿಲ್ 1 ರಿಂದ ನಗದು ಟೋಲ್ ಪಾವತಿ ಬಂದ್: ಸಂಪೂರ್ಣ ಡಿಜಿಟಲ್ ವ್ಯವಸ್ಥೆಗೆ NHAI ಮುಂದು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಕಾಸರಗೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ: ಕಾರು ಸವಾರ ಸಾವು

(ನ್ಯೂಸ್‌ ಕಡಬ) newskadaba.com,  ಫೆ.21 :   ಬದಿಯಡ್ಕದ ನೆಲ್ಲಿಕಟ್ಟೆ ಬಳಿ ಇಂದು ಮುಂಜಾನೆ ಕಾರು ಮತ್ತು ಕರ್ನಾಟಕ ಕೆಎಸ್ ಆರ್ ಟಿಸಿ ಬಸ್ ಪರಸ್ಪರ ಬಡಿದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ಸಹ ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ನೆಲ್ಲಿಕಟ್ಟೆ ಸಂಶುದ್ದೀನ್ (68) ಮೃತ ವ್ಯಕ್ತಿಯಾಗಿದ್ದಾರೆ. ಇವರ ಮಗ ಸಲ್ಮಾನ್ ಹಾರಿಸ್(22)ಎಂಬವರು ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮುಂಜಾನೆ ಆರು ಗಂಟೆಗೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕೆಳಗಿನ ನೆಲ್ಲಿಕಟ್ಟೆಯಲ್ಲಿ ಅಪಘಾತ ಸಂಭವಿಸಿದೆ.

ಕಾಸರಗೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರಿನ ನಡುವೆ ಅಪಘಾತ: ಕಾರು ಸವಾರ ಸಾವು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಬಿಗ್‌ ರೂಲ್ಸ್‌!

(ನ್ಯೂಸ್‌ ಕಡಬ) newskadaba.com,  ಫೆ.21   ರಾಜ್ಯದಲ್ಲಿ ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ರೀಲ್ಸ್ ಮತ್ತು ವೀಡಿಯೋ ಶೂಟಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿಯಮಗಳನ್ನು ಜಾರಿಗೆ ತರುವ ನಿರ್ಧಾರ ಮಾಡಿದೆ. ಇನ್ಮುಂದೆ, ದೇವಸ್ಥಾನಗಳಲ್ಲಿ ಚಿತ್ರೀಕರಣ ಮಾಡಬೇಕಾದರೆ ಆಯ್ಕೆ ಮಾಡಿದ ಸ್ಥಳಗಳಲ್ಲಿ ಮಾತ್ರ ಅವಕಾಶ ದೊರೆಯಲಿದೆ ಮತ್ತು ಅದಕ್ಕಾಗಿ ಶುಲ್ಕ ಕಡ್ಡಾಯವಾಗಲಿದೆ. ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಈ ಬಗ್ಗೆ ತಿಳಿಸಿದ್ದಾರೆ. ರಾಜ್ಯದ ಎಲ್ಲಾ ಎ ಮತ್ತು ಬಿ ವರ್ಗದ ಮುಜರಾಯಿ ದೇವಾಲಯಗಳಲ್ಲಿ ಈ ನಿಯಮ ಅನ್ವಯವಾಗಲಿದೆ.

ದೇವಸ್ಥಾನದಲ್ಲಿ ರೀಲ್ಸ್‌ ಮಾಡೋರಿಗೆ ಬಿಗ್‌ ರೂಲ್ಸ್‌! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಉಡುಪಿ: ಪೊಲೀಸ್ ಇಲಾಖೆಗೆ ಕೊಂಕಣ ರೈಲ್ವೆಯಿಂದ ಬೊಲೆರೋ ಜೀಪ್ ಹಸ್ತಾಂತರ

(ನ್ಯೂಸ್‌ ಕಡಬ) newskadaba.com,  ಫೆ.21  ಉಡುಪಿ : ಸಿಎಸ್‌ಆರ್ ಅಡಿಯಲ್ಲಿ ಪೊಲೀಸ್ ಇಲಾಖೆಗೆ ಜೀಪು ಹಸ್ತಾಂತರ..ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಸಂಸ್ಥೆಯ ಸಿಎಸ್‌ಆರ್ ಅಡಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಬೊಲೆರೋ ಜೀಪ್ ವಾಹನವನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಈ ವಾಹನವನ್ನು ಕಾರವಾರ ರೀಜನಲ್ ರೈಲ್ವೆ ಮ್ಯಾನೇಜರ್ ಆಶಾ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರಿಗೆ ವಾಹನವನ್ನು

ಉಡುಪಿ: ಪೊಲೀಸ್ ಇಲಾಖೆಗೆ ಕೊಂಕಣ ರೈಲ್ವೆಯಿಂದ ಬೊಲೆರೋ ಜೀಪ್ ಹಸ್ತಾಂತರ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top