News Kadaba

ಕಾಸರಗೋಡು ಆಸ್ಪತ್ರೆ ಆವರಣದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 27.   ನಗರದ ಪರಿಸರದ ಬಾವಿಯೊಂದರಲ್ಲಿ ಅಪರಿಚಿತ ಪುರುಷನೊಬ್ಬನ ಮೃತದೇಹ ಇಂದು ಪತ್ತೆಯಾಗಿದೆ. ಕರಂದಕ್ಕಾಡ್ ಅಶ್ವಿನಿ ನಗರದ ಖಾಸಗಿ ಆಸ್ಪತ್ರೆ ಪರಿಸರದ ಬಾವಿಯಲ್ಲಿ ದುರ್ವಾಸನೆ ಬರುತ್ತಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಬಾವಿಯಲ್ಲಿ ಮೃತದೇಹ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.  

ಕಾಸರಗೋಡು ಆಸ್ಪತ್ರೆ ಆವರಣದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್

ಮಗು ಪಡೆಯಲು ಅಪ್ರಾಪ್ತ ಬಾಲಕಿಯ ನರಬಲಿ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com. ಕೋಲ್ಕತ್ತಾ, ಮಾ. 27. ಸ್ವಂತ ಮಗುವನ್ನು ಪಡೆಯಲು ‘ನರಬಲಿ’ ಹೆಸರಲ್ಲಿ ತನ್ನ ನೆರೆಯಮನೆಯ ಅಪ್ರಾಪ್ತ ಬಾಲಕಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷದ ಬಾಲಕಿಯ ಮೃತದೇಹವನ್ನು ಭಾನುವಾರ ತಡರಾತ್ರಿ ದಕ್ಷಿಣ ಕೋಲ್ಕತ್ತಾದ ತಿಲಜಾಲದಲ್ಲಿರುವ ಆರೋಪಿಯ ನಿವಾಸದಿಂದ ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಾಲಕಿಯ ದೇಹವನ್ನು ಗೋಣಿ ಚೀಲದೊಳಗೆ ತುಂಬಲಾಗಿದ್ದು, ಆಕೆಯ ತಲೆ ಸೇರಿದಂತೆ ದೇಹದ ಮೇಲೆಲ್ಲ ಮಾರಣಾಂತಿಕ ಗಾಯದ ಗುರುತುಗಳು ಪತ್ತೆಯಾಗಿವೆ.

ಮಗು ಪಡೆಯಲು ಅಪ್ರಾಪ್ತ ಬಾಲಕಿಯ ನರಬಲಿ➤ ಆರೋಪಿ ಬಂಧನ Read More »

ಕ್ರೈಮ್ ನ್ಯೂಸ್

ಪೊಲೀಸ್‌ ಇನ್‌ಸ್ಪೆಕ್ಟರ್‌ ಕಿರುಕುಳ, ವಸೂಲಿ ➤ ಸಿಬ್ಬಂದಿಯಿಂದ ರಾಷ್ಟ್ರಪತಿ, ಪ್ರಧಾನಿಗೆ ದೂರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.27. ಪೊಲೀಸ್ ಇನ್‌ ಸ್ಪೆಕ್ಟರ್ ಒಬ್ಬರ ವಸೂಲಿ ಕರ್ಮಕಾಂಡ, ಒತ್ತಡ, ಕಿರುಕುಳಗಳ ಬಗ್ಗೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳಿಗೆ ದೂರು ಠಾಣೆ ಸಿಬ್ಬಂದಿಯೇ ದೂರು ನೀಡಿದ್ದಾರೆ. ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆಯಾ ಎಂಬ ಅನುಮಾನವನ್ನು ಈ ಪತ್ರದ ಅಂಶಗಳು ಬಿಚ್ಚಿಟ್ಟಿದೆ. ಸುಬ್ರಮಣ್ಯ ನಗರ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ನೀಡಿರುವ ಅನೇಕ ದೂರುಗಳನ್ನು ಹೊಂದಿರುವ ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಕಾರ್ಯಾಲಯ, ಪ್ರಧಾನಿ ಕಾರ್ಯಾಲಯ, ಗೃಹ ಸಚಿವರು,

ಪೊಲೀಸ್‌ ಇನ್‌ಸ್ಪೆಕ್ಟರ್‌ ಕಿರುಕುಳ, ವಸೂಲಿ ➤ ಸಿಬ್ಬಂದಿಯಿಂದ ರಾಷ್ಟ್ರಪತಿ, ಪ್ರಧಾನಿಗೆ ದೂರು Read More »

ಕರ್ನಾಟಕ

ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ, ಪರೋಟ ಮಾರಾಟಕ್ಕಿಳಿದ ವೈದ್ಯೆ..!

(ನ್ಯೂಸ್ ಕಡಬ)newskadaba.com  ರಾಜಸ್ಥಾನ: ಮಾ,27 ವೈದ್ಯರೋರ್ವರು ತಮ್ಮ ಆಸ್ಪತ್ರೆಗಳನ್ನು ಮುಚ್ಚಿ ಪಾನಿಪುರಿ ಮತ್ತು ಪರೋಟ ವ್ಯಾಪಾರಕ್ಕಿಳಿದಿದ್ದರೆ.ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರ ಇತ್ತೀಚೆಗೆ ತಂದ ಆರೋಗ್ಯ ಮಸೂದೆಗೆ ವಿರೋಧಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಬೀದಿ ಬದಿ ವ್ಯಾಪಾರಿಗಳಾಗಿದ್ದಾರೆ. ಮಸೂದೆ ವಿರೋಧಿಸಿ ರಾಜ್ಯಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ.ಸಿಕಾರ್ನಡಾ.ಅನಿತಾ ಗಾಡಿ ಮೇಲೆ ಪಾನಿಪೂರಿ ಮಾರುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.ಪಾಣಿಪುರಿ ವಿವಿಧ ರುಚಿಗಳಲ್ಲಿ ಲಭ್ಯವಿದೆ ಎಂದು ಅವರು ಬೋರ್ಡ್‌ನಲ್ಲಿ ಪೋಸ್ಟ್ ಮಾಡಿದ್ದಾಳೆ. ಆಸ್ಪತ್ರೆಯ ಬೋರ್ಡನ್ನೂ ತೆಗೆದು ಪಾನಿಪುರಿ ಅಂಗಡಿಯ ಬೋರ್ಡ್ ಎಂದು

ಆಸ್ಪತ್ರೆಗೆ ಬೀಗ ಜಡಿದು ಪಾನಿಪುರಿ, ಪರೋಟ ಮಾರಾಟಕ್ಕಿಳಿದ ವೈದ್ಯೆ..! Read More »

ರಾಷ್ಟ್ರೀಯ ನ್ಯೂಸ್

ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮಾ.27. ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಹರೇಕಳ ಬೈತಾರ್ ನಿವಾಸಿ ಪ್ರಕಾಶ್ ಗಟ್ಟಿ (46) ಎಂಬವರು ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ. ಹರೇಕಳದ ಉಳಿದೊಟ್ಟು ಬಳಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಪ್ರಕಾಶ್ ಅವರು ಸ್ನೇಹಿತರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದಿದ್ದರು. ಸುಮಾರು 20ರಷ್ಟು ನೆಂಟರು ಸ್ನೇಹಿತರನ್ನು ಕರೆದುಕೊಂಡು ಪ್ರಕಾಶ್ ಅವರು ತಮ್ಮ ತೋಟದ ಬಳಿಯಿರುವ ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಅಲ್ಲಿ ನದಿ ನೀರಿಗೆ ಅಡಿಕೆ ಮರವನ್ನು ಅಡ್ಡವಾಗಿ

ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಮೃತ್ಯು Read More »

ಕರಾವಳಿ

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ➤ 6 ತಿಂಗಳು ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.27. ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಲಯ 6 ತಿಂಗಳು ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ. ಕಡಬ ಗ್ರಾಮದ ಲಿಗೋರಿ ಡಿಸೋಜ ಪುತ್ರ ವಿಲ್ಫ್ರೇಡ್ ಡಿಸೋಜ (34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ಪ್ರಸ್ತುತ ಮಂಗಳೂರು ಕುಲಶೇಖರ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಸಿರ್ಲಾ ಪಡ್ಪು ಹೆವೆನ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದು, ಈತನ ವಿರುದ್ಧ conviction warrent ಹೊರಡಿಸಿದ ನಂತರ ಆತ

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ➤ 6 ತಿಂಗಳು ಜೈಲು ಶಿಕ್ಷೆ Read More »

ಕರಾವಳಿ

ಪಡುಬಿದ್ರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ನಗದು ಜಪ್ತಿ ➤ ಕಾರು ವಶಕ್ಕೆ

(ನ್ಯೂಸ್ ಕಡಬ)newskadaba.com ಪಡುಬಿದ್ರೆ, ಮಾ.27. 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಹೆಜ ಮಾಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರ ಪುರುಷೋತ್ತಮ ಎ ಇವರು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟೊಯೆಟಾ ಗ್ಲಾಂಝಾ ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ತಪಾಸಣೆ

ಪಡುಬಿದ್ರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ನಗದು ಜಪ್ತಿ ➤ ಕಾರು ವಶಕ್ಕೆ Read More »

ಕರಾವಳಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ➤ ಸುಳ್ಯ PFI ಕಚೇರಿ ಸಂಪೂರ್ಣ ಜಪ್ತಿ ಮಾಡಿದ NIA

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.27. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಭಯೋತ್ಪಾದಕ ಚಟುವಟಿಕೆಗೆ ಬಳಸಲಾಗುತ್ತಿದ್ದ  ಸುಳ್ಯ ಪಿಎಫ್ ಕಚೇರಿ ಸಂಪೂರ್ಣ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರ ಅಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್  ಮೊದಲ ಮಹಡಿಯಲ್ಲಿದ್ದ ಕಚೇರಿಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.  

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ➤ ಸುಳ್ಯ PFI ಕಚೇರಿ ಸಂಪೂರ್ಣ ಜಪ್ತಿ ಮಾಡಿದ NIA Read More »

ಕರಾವಳಿ

ಬಾಣಂತಿ ಕೊಲೆ ಪ್ರಕರಣ ➤ತಾಯಿ, ತಮ್ಮ ಅರೆಸ್ಟ್!

(ನ್ಯೂಸ್ ಕಡಬ) newskadaba.com. ಕೊಪ್ಪಳ, ಮಾ. 27. ಬಾಣಂತಿಯ ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಮೃತ ಮಹಿಳೆಯ ತಾಯಿ ಹಾಗೂ ತಮ್ಮನನ್ನೇ ಪೊಲೀಸರು ಬಂಧನ ಮಾಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರಿಗೆ ಶಾಕ್ ಆಗಿದ್ದು, ಬಾಣಂತಿ ಅಂತಲೂ ನೋಡದೆ ಹೆತ್ತ ತಾಯಿಯೇ ಮಗಳನ್ನು ಕೊಲೆಗೈದು ಸುಟ್ಟು ಹಾಕಲು ಕಾರಣವೇನು ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತ ಮಹಿಳೆ ನೇತ್ರಾವತಿ ಹಾಗೂ ಆರೋಪಿಗಳ ಇಬ್ಬರ ನಡುವೆ ಹಣ ಹಾಗೂ ಬಂಗಾರದ ವಿಚಾರದಲ್ಲಿ ಆರಂಭವಾದ ಜಗಳವೇ

ಬಾಣಂತಿ ಕೊಲೆ ಪ್ರಕರಣ ➤ತಾಯಿ, ತಮ್ಮ ಅರೆಸ್ಟ್! Read More »

ಕ್ರೈಮ್ ನ್ಯೂಸ್

ಮನೆಯಲ್ಲಿ ಆಕಸ್ಮಿಕ ಬೆಂಕಿ             ➤ ದಂಪತಿ ಸಜೀವ ದಹನ…!

(ನ್ಯೂಸ್ ಕಡಬ)newskadaba.com ಕೊಪ್ಪಳ: ಮಾ,27  ‘ಶಾರ್ಟ್​ ಸರ್ಕ್ಯೂಟ್​’ನಿಂದ ಮನೆಗೆ ಬೆಂಕಿ ಹೊತ್ತುಕೊಂಡು ದಂಪತಿ ಸಜೀವ ದಹನವಾಗಿರುವ ದಾರುಣ ಘಟನೆ ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ನಡೆದಿದೆ.ಸೈದಾಪುರ ಪಟ್ಟಣದ ರಾಗಯ್ಯ(39), ಮತ್ತವರ ಪತ್ನಿ ಶಿಲ್ಪಾ(35) ಮೃತಪಟ್ಟವರು.   ಅಶೋಕಯ್ಯ ಕಾಳಬೆಳಗುಂದಿ ಎಂಬುವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಅಜ್ಜ ಹಾಗೂ ಅಜ್ಜಿಯೊಂದಿಗೆ ಮನೆಯ ಕೆಳಮಹಡಿಯಲ್ಲಿ ಮಲಗಿದ್ದರು. ಇದರಿಂದಾಗಿ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕದಳ ಸಿಬ್ಬಂದಿ  ಬೆಂಕಿ ನಂದಿಸಿದ್ದು, ಸೈದಾಪುರ ಪೊಲೀಸರು ಪ್ರಕರಣ

ಮನೆಯಲ್ಲಿ ಆಕಸ್ಮಿಕ ಬೆಂಕಿ             ➤ ದಂಪತಿ ಸಜೀವ ದಹನ…! Read More »

ಕರ್ನಾಟಕ
Scroll to Top