ಪೊಲೀಸ್‌ ಇನ್‌ಸ್ಪೆಕ್ಟರ್‌ ಕಿರುಕುಳ, ವಸೂಲಿ ➤ ಸಿಬ್ಬಂದಿಯಿಂದ ರಾಷ್ಟ್ರಪತಿ, ಪ್ರಧಾನಿಗೆ ದೂರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.27. ಪೊಲೀಸ್ ಇನ್‌ ಸ್ಪೆಕ್ಟರ್ ಒಬ್ಬರ ವಸೂಲಿ ಕರ್ಮಕಾಂಡ, ಒತ್ತಡ, ಕಿರುಕುಳಗಳ ಬಗ್ಗೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳಿಗೆ ದೂರು ಠಾಣೆ ಸಿಬ್ಬಂದಿಯೇ ದೂರು ನೀಡಿದ್ದಾರೆ.


ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆಯಾ ಎಂಬ ಅನುಮಾನವನ್ನು ಈ ಪತ್ರದ ಅಂಶಗಳು ಬಿಚ್ಚಿಟ್ಟಿದೆ. ಸುಬ್ರಮಣ್ಯ ನಗರ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ನೀಡಿರುವ ಅನೇಕ ದೂರುಗಳನ್ನು ಹೊಂದಿರುವ ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಕಾರ್ಯಾಲಯ, ಪ್ರಧಾನಿ ಕಾರ್ಯಾಲಯ, ಗೃಹ ಸಚಿವರು, ಮಾನವ ಹಕ್ಕು ಆಯೋಗಗಳಿಗೆ ಪತ್ರ ನೀಡಲಾಗಿದೆ ಎಂದು ತಿಳಿಸಲಾಗಿದೆ.

Scroll to Top