News Kadaba

ಅವಧಿಗೂ ಮುನ್ನವೇ ಉತ್ತರ ಪತ್ರಿಕೆ ಕಿತ್ತುಕೊಂಡ ಮೇಲ್ವಿಚಾರಕ  ➤ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ ವಿದ್ಯಾರ್ಥಿನಿ.!!

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಏ. 04. ವಿದ್ಯಾರ್ಥಿನಿಯೋರ್ವಳು ಗಣಿತ ಪರೀಕ್ಷೆ ಬರೆಯುತ್ತಿದ್ದಾಗ ಕೊಠಡಿಯ ಮೇಲ್ವಿಚಾರಕರೊಬ್ಬರು ನಿಗದಿತ ಅವಧಿಗೂ ಮುನ್ನವೇ ಉತ್ತರ ಪತ್ರಿಕೆ ಪಡೆದುಕೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಪರೀಕ್ಷೆ ಬರೆಯಲು 1.45 ರ ವರೆಗೆ ಸಮಯ ನಿಗದಿಯಾಗಿತ್ತು. ಆದರೆ ಕೊಠಡಿ ಸಂಖ್ಯೆ 13ರ ಮೇಲ್ವಿಚಾರಕರು ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು 1.30ಕ್ಕೆ ಕಸಿದುಕೊಂಡಿದ್ದಾರೆ ಎಂದು ಖಾಸಗಿ ಪ್ರೌಢಶಾಲೆ ವಿದ್ಯಾರ್ಥಿನಿಯೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.      

ಅವಧಿಗೂ ಮುನ್ನವೇ ಉತ್ತರ ಪತ್ರಿಕೆ ಕಿತ್ತುಕೊಂಡ ಮೇಲ್ವಿಚಾರಕ  ➤ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ ವಿದ್ಯಾರ್ಥಿನಿ.!! Read More »

ಕರ್ನಾಟಕ

ರವೀಂದ್ರ ಸ್ವಾಮಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿದ ಜಿಲ್ಲಾಡಳಿತ.!!

(ನ್ಯೂಸ್ ಕಡಬ) newskadaba.com ಬೀದರ್, ಏ. 04. ನಗರಸಭೆ ಮಾಜಿ ಸದಸ್ಯ ರವೀಂದ್ರ ಕಲ್ಲಯ್ಯ ಸ್ವಾಮಿ ಅವರಿಗೆ ನೀಡಲಾಗಿದ್ದ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರವನ್ನು ಜಿಲ್ಲಾಡಳಿತ ರದ್ದುಪಡಿಸಿದೆ. ಕಲಬುರಗಿಯ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ತಪ್ಪು ಮಾಹಿತಿ ನೀಡಿದ್ದ, ರವೀಂದ್ರ ಸ್ವಾಮಿ ಅವರು ಸಕ್ಷಮ ಪ್ರಾಧಿಕಾರ ಹಾಗೂ ನ್ಯಾಯಾಲಯದ ದಾರಿ ತಪ್ಪಿಸಿದ್ದರು. ತಪ್ಪು ನಿರೂಪಣೆ ಹಾಗೂ ತಪ್ಪು ಗ್ರಹಿಕೆಗಳನ್ನು ನಿರಂತರವಾಗಿ ಮಾಡಿದ ಕಾರಣ ಈಗಾಗಲೇ ಹೈಕೋರ್ಟ್‌ ಪೀಠವು ರವೀಂದ್ರ ಸ್ವಾಮಿಗೆ ₹ 1 ಲಕ್ಷ ದಂಡ

ರವೀಂದ್ರ ಸ್ವಾಮಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿದ ಜಿಲ್ಲಾಡಳಿತ.!! Read More »

ಕರ್ನಾಟಕ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ➤ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಏ. 04. ವಿಧಾನಸಭೆ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರತ್ಯೇಕ ದೂರು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ಸಾಮಾಜಿಕ ಕಾರ್ಯಕರ್ತ ಶೇಖರ ಲಾಯಿಲ ಬೆಳ್ತಂಗಡಿ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು, ದೂರಿನಲ್ಲಿ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ‌ಎಂದು ಆರೋಪಿಸಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ➤ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು Read More »

ಕರಾವಳಿ

ವಿಟ್ಲ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ವಿಟ್ಲ, ಏ.04. ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲ ಎಂಬಲ್ಲಿ ನಡೆದಿದೆ. ಯಮುನಾ ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಉಮೇಶ್ ಪೂಜಾರಿ ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ತನ್ನ ತಾಯಿಗೆ ಸಕ್ಕರೆ ಕಾಯಿಲೆ, ರಕ್ತದ ಒತ್ತಡವಿದ್ದು, ಔಷಧ ತೆಗೆದುಕೊಂಡರೂ ಗುಣವಾಗದ ಹಿನ್ನಲೆಯಲ್ಲಿ ಜಿಗುಪ್ಸೆಗೊಂಡು ಮನೆಯ ಊಟದ ಕೋಣೆಯ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

ವಿಟ್ಲ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮನೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ..! ➤ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಕೊಣಾಜೆ, ಏ.04. ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿ ದಿ. ಅಬ್ದುಲ್ ಖಾದ್ರಿ ಅವರ ಪತ್ನಿ ನೆಬಿಸಾ ಎಂಬವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಹಂಚಿನ ಮನೆಯು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಕೊಣಾಜೆ ಎಂಬಲ್ಲಿ ಸಂಭವಿಸಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಪ್ರಾಣ ಹಾನಿಯಾಗಿಲ್ಲ, ಆದರೆ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಪೀಠೋಪಕರಣಗಳು, ಪಾತ್ರೆಗಳು, ವಿದ್ಯುತ್ ಉಪಕರಣಗಳು, ಗೃಹ

ಮನೆಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ..! ➤ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು Read More »

ಕರ್ನಾಟಕ, ಕ್ರೈಮ್ ನ್ಯೂಸ್

3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ.!! ➤ ಎಚ್‌ ಡಿ.ಕುಮಾರಸ್ವಾಮಿ

(ನ್ಯೂಸ್ ಕಡಬ)Newskadaba.com ಮಂಡ್ಯ ,ಏ.04   ‘ನನಗೆ 2 ಬಾರಿ ಹೃದಯ ಶಸ್ತಚಿಕಿತ್ಸೆಯಾಗಿದೆ, ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. 3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಪಟ್ಟಣದಲ್ಲಿ ನಡೆದ ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಎಷ್ಟು ಬಾರಿ ಮುಖ್ಯಮಂತ್ರಿಯಾದರೂ ಮಣ್ಣಿಗೆ ಹೋಗುವಾಗ ನಾನು ಮಾಜಿ ಮುಖ್ಯಮಂತ್ರಿಯೇ. ನನ್ನ ಹೋರಾಟ ಮುಖ್ಯಮಂತ್ರಿ ಆಗುವುದಕ್ಕಾಗಿ ಅಲ್ಲ, ನನ್ನ ಹೋರಾಟವೇನಿದ್ದರೂ ಬಡವರ ಪರವಾಗಿ ಮಾತ್ರ’ ಎಂದರು.    

3ನೇ ಬಾರಿಗೆ ಮುಖ್ಯಮಂತ್ರಿಯಾಗುವ ಉದ್ದೇಶ ನನಗಿಲ್ಲ.!! ➤ ಎಚ್‌ ಡಿ.ಕುಮಾರಸ್ವಾಮಿ Read More »

ಕರ್ನಾಟಕ

ಮಂಗಳೂರು: ಕರ್ಕಶ ಹಾರ್ನ್ ಬಳಕೆ ! ➤ ಮೂರು ದಿನಗಳಲ್ಲಿ 130 ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.04. ಕರ್ಕಶ ಹಾರ್ನ್ ಬಳಸುತ್ತಿದ್ದ ವಾಹನಗಳನ್ನು ತಡೆದ ಮಂಗಳೂರು ಸಂಚಾರಿ ಠಾಣಾ ಪೊಲೀಸರು ಮೂರು ದಿನಗಳಲ್ಲಿ ಒಟ್ಟು 130 ವಾಹನಗಳ ಹಾನ್೯ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಠಾಣಾಧಿಕಾರಿ ರಮೇಶ್ ಹಾನಾಪುರ ನೇತೃತ್ವದ ಪೊಲೀಸರ ತಂಡ ತಲಪಾಡಿಯಲ್ಲಿ ತಪಾಸಣೆ ನಡೆಸಿ ಕ್ರಮಕೈಗೊಂಡಿದ್ದು, ಟ್ರಕ್ ಗಳಲ್ಲಿ ಕಾನೂನು ಉಲ್ಲಂಘಿಸಿ ಕರ್ಕಶವಾದ ಹಾನ್೯ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ತಪಾಸಣೆ ನಡೆಸಿದ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.

ಮಂಗಳೂರು: ಕರ್ಕಶ ಹಾರ್ನ್ ಬಳಕೆ ! ➤ ಮೂರು ದಿನಗಳಲ್ಲಿ 130 ಪ್ರಕರಣ ದಾಖಲು Read More »

ಕರಾವಳಿ

ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ.!!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.04  2022-23ರಲ್ಲಿ ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆಯಾಗಿ ₹ 16.61 ಲಕ್ಷ ಕೋಟಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.2021-22ರ ಅವಧಿಯಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ₹ 14.12 ಲಕ್ಷ ಕೋಟಿ ಇತ್ತು.ಇದಕ್ಕೆ ಹೋಲಿಸಿದರೆ ಈಗ ಸಂಗ್ರಹಿಸಲಾಗಿರುವ ತೆರಿಗೆ ಶೇ 17.63ರಷ್ಟು ಹೆಚ್ಚು. 2022-23ನೆಯ ಸಾಲಿಗೆ ಬಜೆಟ್‌ ಅಂದಾಜಿನ ಪ್ರಕಾರ ನೇರ ತೆರಿಗೆ ಸಂಗ್ರಹವು ₹ 14.20 ಲಕ್ಷ ಕೋಟಿ ಆಗುವ ನಿರೀಕ್ಷೆ ಇತ್ತು. ಪರಿಷ್ಕೃತ

ದೇಶದ ನಿವ್ವಳ ನೇರ ತೆರಿಗೆ ಸಂಗ್ರಹ ಶೇ 18ರಷ್ಟು ಏರಿಕೆ.!! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಏ.04. ಅಕ್ರಮವಾಗಿ ಪಿಸ್ತೂಲ್‌ ಹೊಂದಿದ್ದ ವ್ಯಕ್ತಿಯೋರ್ವನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ನಗರದ ಕದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಜಾರ್ಜ್‌ ಮಾರ್ಟಿಸ್‌ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿಶಿರ್‌ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ ಒಂದು ಪಿಸ್ತೂಲ್‌ ಮತ್ತು ಬುಲೆಟ್‌ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ತನ್ನ ಮನೆಯ ಒಂದು ಮಹಡಿಯಲ್ಲಿ ಸುಮಾರು ಐದು ತಿಂಗಳಿಂದ ಬಾಡಿಗೆ ಇದ್ದ ಶಿಶಿರ್‌ ಬಳಿ ಪಿಸ್ತೂಲ್‌ ಇರುವ ಬಗ್ಗೆ ಮನೆಯ ಮಾಲಕರು ಪೊಲೀಸರಿಗೆ ದೂರು ನೀಡಿದ್ದರು.

ಮಂಗಳೂರು: ಅಕ್ರಮವಾಗಿ ಪಿಸ್ತೂಲ್ ಹೊಂದಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ ➤ ಐವರ ವಿರುದ್ದ FIR..!

(ನ್ಯೂಸ್ ಕಡಬ)newskadaba.com ಕನಕಗಿರಿ, ಏ.03. ಮಾದರಿ‌ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಸೇರಿದಂತೆ ಐದು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚುನಾವಣಾ ಮಾದರಿ ನೀತಿ‌ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಸಾರ್ವಜನಿಕರ ಬಳಕೆಗೆ ನೀಡಲಾಗಿದ್ದ ಆಂಬುಲೆನ್ಸ್‌ ಅನ್ನು ಅಧಿಕಾರಿಗಳು ಕನಕಗಿರಿಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.

ನೀತಿ ಸಂಹಿತೆ ಉಲ್ಲಂಘನೆ ➤ ಐವರ ವಿರುದ್ದ FIR..! Read More »

ಕರ್ನಾಟಕ
Scroll to Top