ರವೀಂದ್ರ ಸ್ವಾಮಿ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿದ ಜಿಲ್ಲಾಡಳಿತ.!!

(ನ್ಯೂಸ್ ಕಡಬ) newskadaba.com ಬೀದರ್, ಏ. 04. ನಗರಸಭೆ ಮಾಜಿ ಸದಸ್ಯ ರವೀಂದ್ರ ಕಲ್ಲಯ್ಯ ಸ್ವಾಮಿ ಅವರಿಗೆ ನೀಡಲಾಗಿದ್ದ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರವನ್ನು ಜಿಲ್ಲಾಡಳಿತ ರದ್ದುಪಡಿಸಿದೆ.

ಕಲಬುರಗಿಯ ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ತಪ್ಪು ಮಾಹಿತಿ ನೀಡಿದ್ದ, ರವೀಂದ್ರ ಸ್ವಾಮಿ ಅವರು ಸಕ್ಷಮ ಪ್ರಾಧಿಕಾರ ಹಾಗೂ ನ್ಯಾಯಾಲಯದ ದಾರಿ ತಪ್ಪಿಸಿದ್ದರು. ತಪ್ಪು ನಿರೂಪಣೆ ಹಾಗೂ ತಪ್ಪು ಗ್ರಹಿಕೆಗಳನ್ನು ನಿರಂತರವಾಗಿ ಮಾಡಿದ ಕಾರಣ ಈಗಾಗಲೇ ಹೈಕೋರ್ಟ್‌ ಪೀಠವು ರವೀಂದ್ರ ಸ್ವಾಮಿಗೆ ₹ 1 ಲಕ್ಷ ದಂಡ ವಿಧಿಸಿದೆ.

Scroll to Top