News Kadaba

ಸುಬ್ರಹ್ಮಣ್ಯ: ಕುಕ್ಕೆಯಲ್ಲಿ ಸಾವಿರಾರು ಮತ್ಸ್ಯಗಳ ಮಾರಣಹೋಮ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಏ. 06. ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸುತ್ತಲ ಕುಮಾರ ಪರ್ವತದಿಂದ ಹರಿದು ಬರುವ ನೀರು ಇಲ್ಲಿಯ ಬಾಬುರಾಯನ ಗುಂಡಿ ಎಂಬಲ್ಲಿ ಮಲಿನಗೊಂಡಿರುವ ನೀರಿನಿಂದಾಗಿ ಸಾವಿರಾರು ಮೀನುಗಳು ಸತ್ತು ತೇಲುತ್ತಿರುವ ದೃಶ್ಯ ಕಂಡುಬಂದಿದೆ. ಆದಿಸುಬ್ರಮಣ್ಯದಿಂದ ದರ್ಪಣ ತೀರ್ಥ ಸಮೀಪದ ಬಾಬುರಾಯನಗುಂಡಿ ಎಂಬಲ್ಲಿ ಈ ಘಟನೆ ನಡೆದಿದೆ. ಇದೇ ನೀರು ಕುಕ್ಕೆ ಸುಬ್ರಮಣ್ಯದ ಕುಮಾರಧಾರ ನದಿಗೆ ಸೇರುತ್ತದೆ ಎನ್ನಲಾಗಿದೆ. ಹೋಟೆಲ್ ಹಾಗೂ ಲಾಡ್ಜ್ ಗಳಿಂದ ಬರುವಂತಹ ಈ ಕಲುಷಿತ ನೀರಿನಿಂದಾಗಿ ಎಲ್ಲೆಂದರಲ್ಲಿ […]

ಸುಬ್ರಹ್ಮಣ್ಯ: ಕುಕ್ಕೆಯಲ್ಲಿ ಸಾವಿರಾರು ಮತ್ಸ್ಯಗಳ ಮಾರಣಹೋಮ Read More »

ಕರಾವಳಿ

ಕೇಸರಿ ಧ್ವಜಕ್ಕೆ ಅವಮಾನ ಆರೋಪ..! ➤ ಯುವಕ ಅರೆಸ್ಟ್

(ನ್ಯೂಸ್ ಕಡಬ)newskadaba.com ನವದೆಹಲಿ, ಏ.06. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ ನ ಬೀದಿಯಲ್ಲಿ ಕೇಸರಿ ಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ. ಸ್ಥಳೀಯ ನಿವಾಸಿ ಸಾಗರ್ ಅವರು ದೂರು ನೀಡಲು ಸ್ಥಳೀಯ ಪೊಲೀಸ್ ಠಾಣೆಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಸರಿ ಧ್ವಜಕ್ಕೆ ಅವಮಾನ ಆರೋಪ..! ➤ ಯುವಕ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

10 ವರ್ಷಗಳ ಅನೈತಿಕ ಸಂಬಂಧ   ➤ಕೊಲೆಯಲ್ಲಿ ಅಂತ್ಯ.!!

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.06  ಆಕೆ ಮದುವೆಯಾಗಿದ್ದರೂ ಗಂಡನಿಂದ ದೂರವಾಗಿ ಇನ್ನೊಬ್ಬನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ರೆ,‌ ಅಂತ್ಯವಾಗೋದು ದುರಂತದಲ್ಲೇ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ. ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಸುಟ್ಟ ದೇಹವೊಂದು ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು.‌ ಮಹಿಳೆಯೊಬ್ಬಳ ಹುಡುಕಾಟದಲ್ಲಿದ್ದ ಹೆಬ್ಬಗೋಡಿ ಪೊಲೀಸರು ಈ ದೇಹ ಅವಳದ್ದೇನಾ ಅಂತ ಅವಳ ಸಂಬಂಧಿಕರಿಗೆ ಕರೆದುಕೊಂಡು ಬಂದಾಗ ಪೊಲೀಸರಿಗೆ ಇದ್ದ ಶಂಕೆ ನಿಜವಾಯಿತು.  

10 ವರ್ಷಗಳ ಅನೈತಿಕ ಸಂಬಂಧ   ➤ಕೊಲೆಯಲ್ಲಿ ಅಂತ್ಯ.!! Read More »

ಕರ್ನಾಟಕ

ಅಬುಧಾಬಿಯಲ್ಲಿ ಬರೊಬ್ಬರಿ 44 ಕೋಟಿ ಲಾಟರಿ ಗೆದ್ದ ವ್ಯಕ್ತಿ

(ನ್ಯೂಸ್ ಕಡಬ)newskadaba.com ಸೌದಿ, ಏ.06. ಅಬುಧಾಬಿಯ ಜನಪ್ರಿಯ ಸೀರೀಸ್ 250 ಬಿಗ್ ಟಿಕೆಟ್ ಲೈವ್‌ ಡ್ರಾ ಲಾಟರಿಯಲ್ಲಿ ಬೆಂಗಳೂರು ಮೂಲದ ಅರುಣ್ ಕುಮಾರ್‌ 44,75,67,571ರೂ. ಗಳ ಬಹುಮಾನ ಗೆದ್ದುಕೊಂಡಿದ್ದಾರೆ. ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾ ಸರಣಿ 250 ರಲ್ಲಿ ಬೆಂಗಳೂರಿನ ನಿವಾಸಿ ಅರುಣ್ ಕುಮಾರ್ ವಟಕ್ಕೆ 1 ಮಿಲಿಯನ್ ಗೆದ್ದಿದ್ದಾರೆ. ಮಾರ್ಚ್ 22 ರಂದು 261031 ರ ವಿಜೇತ ಟಿಕೇಟ್ ಹೊಂದಿರುವ ಅರುಣ್ ಅವರಿಗೆ 20 ಮಿಲಿಯನ್ ದಿರ್ಹಂ (ಸುಮಾರು ರೂ 44,75,67,571) ಬಹುಮಾನ ನೀಡಲಾಯಿತು.

ಅಬುಧಾಬಿಯಲ್ಲಿ ಬರೊಬ್ಬರಿ 44 ಕೋಟಿ ಲಾಟರಿ ಗೆದ್ದ ವ್ಯಕ್ತಿ Read More »

ರಾಷ್ಟ್ರೀಯ ನ್ಯೂಸ್

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತು!   ➤ ದೇಶದ 10 ಲಕ್ಷ ಕಡೆಗಳಲ್ಲಿ ಭಾಷಣ ನೇರ ಪ್ರಸಾರ.!!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.06ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಏ.06(ಇಂದು)42ನೇ ಸಂಸ್ಥಾಪನಾ ದಿನ ಆಚರಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.ಅದನ್ನು ದೇಶದ 10 ಲಕ್ಷ ಕಡೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರ ಜತೆಗೆ ದೇಶದ 10.72 ಲಕ್ಷ ಸ್ಥಳಗಳಲ್ಲಿ 2024ನೇ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು ಎನ್ನುವ ಆಶಯದಿಂದ “ಏಕ್‌ ಬಾರ್‌ ಫಿರ್‌ ಸೆ ಮೋದಿ ಸರ್ಕಾರ್‌’ ಮತ್ತು “ಏಕ್‌ ಬಾರ್‌ ಫಿರ್‌

ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮೋದಿ ಮಾತು!   ➤ ದೇಶದ 10 ಲಕ್ಷ ಕಡೆಗಳಲ್ಲಿ ಭಾಷಣ ನೇರ ಪ್ರಸಾರ.!! Read More »

ರಾಷ್ಟ್ರೀಯ ನ್ಯೂಸ್

ಕಾನ್ಸ್ ಟೇಬಲ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ..!!   ➤1.3 ಲಕ್ಷ CRPF ಕಾನ್ ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ  

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.06 ಸಿಆರ್‌ಪಿಎಫ್ ಕಾನ್ಸ್‌ ಟೇಬಲ್ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ ಇಲ್ಲಿದೆ. ಗೃಹ ವ್ಯವಹಾರಗಳ ಸಚಿವಾಲಯವು ಖಾಲಿ ಇರುವ 1.3 ಲಕ್ಷ CRPF ಕಾನ್ಸ್ಟೇಬಲ್ ಹುದ್ದೆ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಗಳಲ್ಲಿ 1.3 ಲಕ್ಷ ಕಾನ್‌ಸ್ಟೆಬಲ್ ಶ್ರೇಣಿಯ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ.              

ಕಾನ್ಸ್ ಟೇಬಲ್ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ..!!   ➤1.3 ಲಕ್ಷ CRPF ಕಾನ್ ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ   Read More »

ರಾಷ್ಟ್ರೀಯ ನ್ಯೂಸ್

ಪುಣ್ಯಸ್ನಾನಕ್ಕೆ ಕಲ್ಯಾಣಿಗಿಳಿದ ಐವರು ಮೃತ್ಯು

(ನ್ಯೂಸ್ ಕಡಬ)newskadaba.com ಚೆನ್ನೈ, ಏ.06. ದಾರುಣ ಘಟನೆಯೊಂದರಲ್ಲಿ ಐವರು ಚೆನ್ನೈನ ದೇವಸ್ಥಾನದ ಬಳಿಯ ಸಾರ್ವಜನಿಕ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಭಕ್ತರು ಪಂಗುನಿ ಆಚರಣೆಯ ಅಂಗವಾಗಿ ಧಾರ್ಮಿಕ ಕ್ರಿಯೆಗಳಿಗಾಗಿ ತೊಟ್ಟಿಯಲ್ಲಿ ಜಮಾಯಿಸಿದಾಗ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ‘ಮೊದಲಿಗೆ ಒಬ್ಬರು ಜಾರಿಬಿದ್ದರು, ಮತ್ತು ನಂತರ ಅವರನ್ನು ರಕ್ಷಿಸಲು ಪ್ರಯತ್ನಿಸಿದವರೂ ನೀರಿನಲ್ಲಿ ಮುಳುಗಿದರು. ಪೊಲೀಸರ ಪ್ರಕಾರ, ಎಲ್ಲಾ ಐದು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವಿಷಯದ ಬಗ್ಗೆ

ಪುಣ್ಯಸ್ನಾನಕ್ಕೆ ಕಲ್ಯಾಣಿಗಿಳಿದ ಐವರು ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರು-ಮೈಸೂರು ನಡುವೆ ಹೆಚ್ಚುವರಿ ರೈಲು ಸೇವೆಗೆ ಬೇಡಿಕೆ

(ನ್ಯೂಸ್ ಕಡಬ)newskadaba.com ಮೈಸೂರು, ಏ.05. ಸಂಪೂರ್ಣ ವಿದ್ಯುದೀಕರಣಗೊಂಡ ಡಬಲ್‌ ಲೈನ್‌ ಬ್ರಾಡ್‌ಗೇಜ್‌ ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ರೈಲುಗಳ ಸಂಖ್ಯೆ ಹೆಚ್ಚಿಸಬೇಕೆಂಬ ಒತ್ತಾಯ ಕೇಳಿಬಂದಿದೆ ಎಂದು ವರದಿಯಾಗಿದೆ. 140 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಡಬಲ್‌ ಲೈನ್‌ ಯೋಜನೆ ಪೂರ್ಣಗೊಳಿಸುವ ವೇಳೆಗೆ ವೆಚ್ಚ ಅಂದಾಜಿಗಿಂತ ದುಪ್ಪಟ್ಟಾಗಿದೆ. ಈ ಮಾರ್ಗದ ಸಾಮರ್ಥ್ಯಕ್ಕೆ ಅನುಗುಣವಾಗಿ ರೈಲುಗಳ ಸಂಚಾರಕ್ಕೆ ಕ್ರಮ ವಹಿಸಿಲ್ಲ. ಈ ಮಾರ್ಗದಲ್ಲಿ 24 ಗಂಟೆ ಅವಧಿಯಲ್ಲಿ ಇನ್ನು ಹೆಚ್ಚಿನ ರೈಲುಗಳ ಸಂಚಾರಕ್ಕೆ ಅವಕಾಶವಿದೆ. ಆದರೆ, ಪ್ರಸ್ತುತ ಶೇ. 65ರಿಂದ

ಬೆಂಗಳೂರು-ಮೈಸೂರು ನಡುವೆ ಹೆಚ್ಚುವರಿ ರೈಲು ಸೇವೆಗೆ ಬೇಡಿಕೆ Read More »

ಕರ್ನಾಟಕ

ಪುನೀತ್ ಕೆರೆಹಳ್ಳಿ ಸೇರಿ ಐವರು ಆರೋಪಿಗಳ ಬಂಧನ..!!

(ನ್ಯೂಸ್ ಕಡಬ)Newskadaba.com ರಾಮನಗರ,ಏ.05  ಇದ್ರೀಷ್ ಪಾಷಾ ಹತ್ಯೆ ಪ್ರಕರಣದ ಆರೋಪಿಗಳಾದ ಪುನೀತ್ ಕೆರೆಹಳ್ಳಿ ಹಾಗೂ ಆತನ ನಾಲ್ವರು ಸಹಚರರನ್ನು ರಾಮನಗರ ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಪುನೀತ್ ಮತ್ತು ಆತನ ಸಹಚರರ ಬಂಧನಕ್ಕೆ 4 ತಂಡ ರಚಿಸಲಾಗಿತ್ತು. ಪೊಲೀಸರು ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಿದ್ದು ಅಲ್ಲಿಂದ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.              

ಪುನೀತ್ ಕೆರೆಹಳ್ಳಿ ಸೇರಿ ಐವರು ಆರೋಪಿಗಳ ಬಂಧನ..!! Read More »

ಕರ್ನಾಟಕ

ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ

 (ನ್ಯೂಸ್ ಕಡಬ)newskadaba.com ಬೆಂಗಳೂರು, ಏ.05. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಚುನಾವಣಾ ಆಯೋಗ ಕಣ್ಗಾವಲನ್ನು ಹೆಚ್ಚಿಸಿದೆ. ಚುನಾವಣೆ ಪ್ರಕ್ರಿಯೆ ಮುಕ್ತವಾಗಿ ಹಾಗೂ ನ್ಯಾಯಯುತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಗಳ ಸ್ಥಾಪಿಸುವಂತೆ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ. ನಾಯಕರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ಜನರು ನಿಯಂತ್ರಣ ಕೊಠಡಿಗಳ ಸಹಾಯವಾಣಿ ಸಂಖ್ಯೆ 080-28604331 ಮತ್ತು 080-28600954ಗಳ ಮೂಲಕ ದೂರು ನೀಡಬಹುದಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ Read More »

ಕರ್ನಾಟಕ
Scroll to Top