News Kadaba

ಮಂಗಳೂರು: ಕರಾವಳಿಯಲ್ಲಿ ಎಲ್ಲೋ ಅಲರ್ಟ್ ➤ ಸಾಧರಣ ಮಳೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.06. ಕರಾವಳಿ ಭಾಗದ ಕೆಲವು ಪ್ರದೇಶದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿಯಲ್ಲಿ ಏ.07 ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 10ರವರೆಗೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆ ದಾಖಲಾಗಿದೆ. ಇದೇ ರೀತಿ ಮುಂದಿನ ಐದು ದಿನವು […]

ಮಂಗಳೂರು: ಕರಾವಳಿಯಲ್ಲಿ ಎಲ್ಲೋ ಅಲರ್ಟ್ ➤ ಸಾಧರಣ ಮಳೆ ಸಾಧ್ಯತೆ Read More »

ಕರಾವಳಿ

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.06. ಅಶೋಕನಗರ ಗೋಕುಲ ಕಲ್ಯಾಣ ಮಂಟಪ ಬಳಿಯ ನಿವಾಸಿ, ಮೂಲತಃ ನವದೆಹಲಿಯವರಾದ, 5 ವರ್ಷಗಳಿಂದ ನಗರದಲ್ಲಿರುವ ಬಂಧುಗಳ ಮನೆಯಲ್ಲಿ ನೆಲೆಸಿದ್ದ ದೀಕ್ಷಿತಾ ಅಲಿಯಾಸ್‌ ರಿಯಾ (20) ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಸಮಯ ಕಳೆಯುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು. ಎತ್ತರ 5.1 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಮನೆಯಿಂದ ಹೋಗುವಾಗ ಹಳದಿ ನೀಲಿ ಮಿಶ್ರಿತ ಚೂಡಿದಾರ ಧರಿಸಿದ್ದು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಯುವತಿ ಕಂಡುಬಂದಲ್ಲಿ

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ Read More »

ಕರಾವಳಿ

ಉಪ್ಪಿನಂಗಡಿ ಬ್ಲಾಕ್ ವತಿಯಿಂದ SDPI ಮಹಿಳಾ ಚುನಾವಣಾ ಪೂರ್ವಭಾವಿ ಸಭೆ

(ನ್ಯೂಸ್ ಕಡಬ)newskadaba.com ಪುತ್ತೂರು, ಏ.06. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಮಹಿಳಾ ಚುನಾವಣಾ ಪೂರ್ವಭಾವಿ ಸಭೆಯು ಝರೀನಾ ರವರ ನೇತೃತ್ವದಲ್ಲಿ ಉಪ್ಪಿನಂಗಡಿಯಲ್ಲಿ ನಡೆಯಿತು ಎಂದು ವರದಿ ತಿಳಿಸಿದೆ. ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ SDPI ರಾಜ್ಯ ಮಹಿಳಾ ಚುನಾವಣಾ ಉಸ್ತುವಾರಿ ನಸ್ರಿಯಾ ಬೆಳ್ಳಾರೆಯವರು ಮಾತನಾಡಿ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿದ್ದು ಮಹಿಳಾ ಮತದಾರರಿಗೆ ಅಭ್ಯರ್ಥಿಗೆ ಮತಯಾಚಿಸುವುದರೊಂದಿಗೆ ಸುಳ್ಳು ಕೇಸ್ ನಲ್ಲಿ ಅನ್ಯಾಯವಾಗಿ ಬಂಧಿಸಿ ನ್ಯಾಯ ನಿರಾಕರಣೆ ಮಾಡುತ್ತಿರುವ ವಿಚಾರದ ಬಗ್ಗೆಯೂ ಜನರಿಗೆ

ಉಪ್ಪಿನಂಗಡಿ ಬ್ಲಾಕ್ ವತಿಯಿಂದ SDPI ಮಹಿಳಾ ಚುನಾವಣಾ ಪೂರ್ವಭಾವಿ ಸಭೆ Read More »

ಕರಾವಳಿ

ಜಯಂತಿಗಳ ಪಟ್ಟಿಯಿಂದ ಅಂಬೇಡ್ಕರ್ ಜಯಂತಿ ಕೈಬಿಟ್ಟಿಲ್ಲ.!!   ➤ ಸಂಸ್ಕೃತಿ ಇಲಾಖೆ ಸ್ಪಷ್ಟನೆ  

(ನ್ಯೂಸ್ ಕಡಬ)Newskadaba.com ಬಂಗಳೂರು,ಏ.06 ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೈಬಿಟ್ಟಿದೆ ಎಂಬ ಸುದ್ದಿಯನ್ನು ಹರಿಯಬಿಡಲಾಗಿದ್ದು, ಈ ಸುದ್ದಿಯು ವಾಸ್ತವಾಂಶಕ್ಕೆ ದೂರವಾಗಿರುತ್ತದೆ. ವಾಸ್ತವವಾಗಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ರವರ ಜಯಂತಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ 2 ಜಯಂತಿಗಳ ಆಚರಣೆಗೆ ಸಂಬಂಧಿಸಿದ ವಿಷಯಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ ಎಂಬ ಅಂಶವನ್ನು ಈ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

ಜಯಂತಿಗಳ ಪಟ್ಟಿಯಿಂದ ಅಂಬೇಡ್ಕರ್ ಜಯಂತಿ ಕೈಬಿಟ್ಟಿಲ್ಲ.!!   ➤ ಸಂಸ್ಕೃತಿ ಇಲಾಖೆ ಸ್ಪಷ್ಟನೆ   Read More »

ಕರ್ನಾಟಕ

ರಾಜ್ಯ ವಿಧಾನಸಭಾ ಚುನಾವಣೆ ➤ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ, 06. ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ 2ನೇ ಪಟ್ಟಿಯ ಬಿಡುಗಡೆಗಾಗಿ ಚುನಾವಣಾ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹೀಗಿದೆ ಕಾಂಗ್ರೆಸ್ ಪಕ್ಷದ 124 ಅಭ್ಯರ್ಥಿಗಳ ಮೊದಲ ಪಟ್ಟಿ ಚಿಕ್ಕೋಡಿ – ಸದಲಗಾ ಗಣೇಶ ಹುಕ್ಕೇರಿ ಕಾಗವಾಡ – ಭರಮಗೌಡ ಆಲಗೌಡ ಕಾಗೆ

ರಾಜ್ಯ ವಿಧಾನಸಭಾ ಚುನಾವಣೆ ➤ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ Read More »

ಕರ್ನಾಟಕ

ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ನಡೆದ ದುರಂತ..!!   ➤  ಮರೈನ್ ಕಮಾಂಡೋ ಮೃತ್ಯು

(ನ್ಯೂಸ್ ಕಡಬ)Newskadaba.com ಪಶ್ಚಿಮ ಬಂಗಾಳ,ಏ.06 ಪಶ್ಚಿಮ ಬಂಗಾಳದಲ್ಲಿ ಭಾರತೀಯ ನೌಕಾಪಡೆಯ ವಿಶೇಷ ಪಡೆಗಳ ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ಮರೈನ್ ಕಮಾಂಡೋ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಮೃತನನ್ನು ಆಂಧ್ರಪ್ರದೇಶದ ನಿವಾಸಿ  ಚಂದ್ರಕ ಗೋವಿಂದ್(31) ಎಂದು ಗುರುತಿಸಲಾಗಿದೆ. ಅವರ ಪ್ಯಾರಾಚೂಟ್ ತೆರೆಯದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.              

ಪ್ಯಾರಾ-ಜಂಪ್ ವ್ಯಾಯಾಮದ ವೇಳೆ ನಡೆದ ದುರಂತ..!!   ➤  ಮರೈನ್ ಕಮಾಂಡೋ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.06. ಬಹು ನಿರೀಕ್ಷಿತ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಹಲವು ಸಭೆಗಳನ್ನು ಮಾಡಿದ್ದ ಕಾಂಗ್ರೆಸ್ 2 ನೇ ಪಟ್ಟಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಇನ್ನು ಮೊದಲ ಪಟ್ಟಿಯನ್ನು ಕಾಂಗ್ರೆಸ್ ಈಗಾಗಲೇ ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಎರಡನೇ ಪಟ್ಟಿಯಲ್ಲಿ ಸುಮಾರು ಐವತ್ತು ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳಬಹುದು ಎಂದು ಕಾಂಗ್ರೆಸ್ ಉನ್ನತ ಮೂಲಗಳು ಹೇಳಿವೆ.  

ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ Read More »

ಕರ್ನಾಟಕ

ಬೆಂಗಳೂರು ರೈಲ್ವೆ ವಿಭಾಗದ ನೇಮಕಾತಿ ಹಗರಣ ಬಯಲು!   ➤  ನಾಲ್ವರು ನಕಲಿ ಟಿಟಿಇಗಳು ಪತ್ತೆ.!!  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.06  ಬೆಂಗಳೂರು ರೈಲ್ವೆ ವಿಭಾಗದ ಟಿಕೆಟ್ ತಪಾಸಣಾ ದಳವು  ಚಾಮರಾಜನಗರ-ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಟಿಕೆಟ್​ ಪರಿವೀಕ್ಷಕರೆಂದು ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ನಕಲಿ ಟಿಟಿಇಗಳನ್ನು ಪತ್ತೆಹಚ್ಚಿದ್ದಾರೆ. ರೈಲಿನ ಟಿಕೆಟ್​ ಪರಿವೀಕ್ಷಕ ಎಂಬಂತೆ ಸೋಗು ಹಾಕಿದ್ದಕ್ಕಾಗಿ ನಾಲ್ವರನ್ನೂ ಬಂಧಿಸಲಾಗಿದ್ದರೂ, ಅವರು ನೈಋತ್ಯ ರೈಲ್ವೆ ವಲಯದಾದ್ಯಂತ ನಡೆದ ನೇಮಕಾತಿ ಹಗರಣಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.                

ಬೆಂಗಳೂರು ರೈಲ್ವೆ ವಿಭಾಗದ ನೇಮಕಾತಿ ಹಗರಣ ಬಯಲು!   ➤  ನಾಲ್ವರು ನಕಲಿ ಟಿಟಿಇಗಳು ಪತ್ತೆ.!!   Read More »

ಕರ್ನಾಟಕ

ರೆಪೋ ರೇಟ್ ಯಥಾಸ್ಥಿತಿ ➤ ಸಾಲಗಾರರಿಗೆ ರಿಲೀಫ್‌

(ನ್ಯೂಸ್ ಕಡಬ)newskadaba.com “ಆರ್‌‌ಬಿಐಯು ಯಾವುದೇ ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಶೇ.6.5ರಷ್ಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ” ಎಂದು ಆರ್‌‌ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ಮಾಹಿತಿ ನೀಡಿರುವ ಅವರು, “ಆರ್‌‌ಬಿಐನಿಂದ ರೆಪೋ ದರದಲ್ಲಿ ಯಾವುದೇ ಹೆಚ್ಚಳ ಮಾಡದೇ ಶೇ.6.5ರಷ್ಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿದೆ” ಎಂದು ತಿಳಿಸಿದ್ದಾರೆ.  

ರೆಪೋ ರೇಟ್ ಯಥಾಸ್ಥಿತಿ ➤ ಸಾಲಗಾರರಿಗೆ ರಿಲೀಫ್‌ Read More »

ರಾಷ್ಟ್ರೀಯ ನ್ಯೂಸ್

* ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ   ➤ಹೊಟ್ಟೆಯಲ್ಲೇ ಮಗು ಮೃತ್ಯು.!!

(ನ್ಯೂಸ್ ಕಡಬ)Newskadaba.com ಗದಗ,ಏ.06   ಹೆರಿಗೆ ವೇಳೆ ವೈದ್ಯರ ನಿರ್ಲಕ್ಷದಿಂದ ಮಗು ಮೃತ್ಯು.  ಜಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಹೊಡೆದಿದ್ದು, ಮಗು ಹೊಟ್ಟೆಯಲ್ಲೇ ಸಾವಿಗೀಡಾಗಿದೆ ಎಂದೂ ಹೇಳಲಾಗಿದೆ. ಗದಗ ಜಿಮ್ಸ್​ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಹೆರಿಗೆಗೆ ಎಂದು ಬಂದಿದ್ದ ಮಹಿಳೆಯನ್ನು ಹೆರಿಗೆಗೆ ಒಳಪಡಿಸದೆ ವಿಳಂಬ ಮಾಡಲಾಗಿದೆ ಎನ್ನಲಾಗಿದೆ. ಮಾತ್ರವಲ್ಲ, ಹೆರಿಗೆ ಮಾಡಿಸದೆ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಬಾರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.   .              

* ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ   ➤ಹೊಟ್ಟೆಯಲ್ಲೇ ಮಗು ಮೃತ್ಯು.!! Read More »

ಕರ್ನಾಟಕ
Scroll to Top