News Kadaba

ಸ್ವಯಂಪ್ರೇರಿತ ರಾಜೀನಾಮೆ ನೀಡುವ ಉದ್ಯೋಗಿಗಳಿಗೆ 1 ವರ್ಷದ ವೇತನ ಘೋಷಿಸಿದ ಕಂಪನಿಗಳು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11  ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವ ಉದ್ಯೋಗಿಗಳಿಗೆ ಕೆಲವು ಕಂಪನಿಗಳು 1 ವರ್ಷದ ವೇತನ ನೀಡೋದಾಗಿ ಘೋಷಿಸಿವೆ. ಅಮೆಜಾನ್‌ನಲ್ಲಿ 5-8 ವರ್ಷಗಳ ಅನುಭವ ಹೊಂದಿರುವ ಕೆಲವು ಹಿರಿಯ ಮ್ಯಾನೇಜರ್‌ಗಳು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದರೆ ಒಂದು ವರ್ಷದ ಸಂಬಳದ ಬೇರ್ಪಡಿಕೆ ಪ್ಯಾಕೇಜ್‌ಗೆ ಅರ್ಹರಾಗಿರುತ್ತಾರೆ. ಕಂಪನಿಯು ‘ನಿರ್ಗಮಿಸುವ ಉದ್ಯೋಗಿಗಳಿಗೆ ರಜೆಯನ್ನು ನೀಡುತ್ತಿದೆ, ಆದ್ದರಿಂದ ಅವರ ಷೇರುಗಳನ್ನು ಬೋನಸ್‌ಗಳಾಗಿ ಇರಿಸಬಹುದು ಮತ್ತು ಪಾವತಿಸಬಹುದು’.  

ಸ್ವಯಂಪ್ರೇರಿತ ರಾಜೀನಾಮೆ ನೀಡುವ ಉದ್ಯೋಗಿಗಳಿಗೆ 1 ವರ್ಷದ ವೇತನ ಘೋಷಿಸಿದ ಕಂಪನಿಗಳು..! Read More »

ಕರ್ನಾಟಕ

ಬಾಲಿವುಡ್ ನಟ ʻಸಲ್ಮಾನ್ ಖಾನ್ʼಗೆ ಕೊಲೆ ಬೆದರಿಕೆ ಕರೆ ಪ್ರಕರಣ ➤ 16 ವರ್ಷದ ಬಾಲಕ ಅರೆಸ್ಟ್

(ನ್ಯೂಸ್ ಕಡಬ)newskadaba.com ಮುಂಬೈ, ಏ.11. ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ನೆರೆಯ ಥಾಣೆ ಜಿಲ್ಲೆಯ 16 ವರ್ಷದ ಬಾಲಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ. ಮುಂಬೈ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆ, ಪೊಲೀಸರು ತನಿಖೆ ಆರಂಭಿಸಿದ್ದು, ತಾಂತ್ರಿಕ ಸಹಾಯದಿಂದ ಅವರು ಮುಂಬೈನಿಂದ 70 ಕಿಮೀ ದೂರದಲ್ಲಿರುವ ಥಾಣೆ ಜಿಲ್ಲೆಯ

ಬಾಲಿವುಡ್ ನಟ ʻಸಲ್ಮಾನ್ ಖಾನ್ʼಗೆ ಕೊಲೆ ಬೆದರಿಕೆ ಕರೆ ಪ್ರಕರಣ ➤ 16 ವರ್ಷದ ಬಾಲಕ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

➤ಬೇಸಿಗೆಯಲ್ಲಿ ಐಸ್ಕೋಲ್ಡ್ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಹಲವು

(ನ್ಯೂಸ್ ಕಡಬ) newskadaba.com ಬೆಂಗಳೂರು, ಏ.11. ಬೇಸಿಗೆ ಕಾಲದಲ್ಲಿ ತಣ್ಣೀರು ಕುಡಿಯುವುದು ನಮಗೆ ಸಾಕಷ್ಟು ಹಿತವಾಗಿರುತ್ತದೆ. ಆದರೆ ಕ್ಷಣಕಾಲ ಆರಾಮ ನೀಡುವ ತಣ್ಣೀರು ಆರೋಗ್ಯಕ್ಕೆ ಅದೆಷ್ಟೋ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದರೆ ತಂಪಾದ ನೀರು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ ಎಂಬುದು ಕೂಡ ಸತ್ಯ. ರೆಫ್ರಿಜರೇಟರ್‌ನಲ್ಲಿನ ತಣ್ಣೀರು ಶೀತವನ್ನು ಉಂಟುಮಾಡುವ ಮೂಲಕ ದೇಹಕ್ಕೆ ಹಾನಿಯನ್ನುಂಟುಮಾಡುತ್ತದೆ ಮತ್ತು ಜೀರ್ಣಕ್ರಿಯೆಯ ತೊಂದರೆಗಳನ್ನು ಉಂಟುಮಾಡುತ್ತದೆ ಎಂಬುದು ಸಾಕಷ್ಟು ಜನರಿಗೆ ತಿಳಿಸಿದೆ. ಆದರೆ ಇಷ್ಟು

➤ಬೇಸಿಗೆಯಲ್ಲಿ ಐಸ್ಕೋಲ್ಡ್ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ ಹಲವು Read More »

ಆರೋಗ್ಯ ಮಾಹಿತಿ, ಕರ್ನಾಟಕ

ಖಾಲಿಸ್ತಾನ ನಾಯಕ ಅಮೃತ್‌ಪಾಲ್‌ ಸಿಂಗ್‌ ಸಹಚರ ಅರೆಸ್ಟ್

(ನ್ಯೂಸ್ ಕಡಬ)newskadaba.com ಚಂಢೀಗಡ, ಏ.11. ಖಾಲಿಸ್ತಾನ ನಾಯಕ, ಸಿಖ್‌ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್‌ನ ಸಹಚರ ಪಪಲ್​ಪ್ರೀತ್ ಸಿಂಗ್​ನನ್ನು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿನ ಡೇರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪಪಲ್​ಪ್ರೀತ್ ಸಿಂಗ್‌ ಇರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭಿಸಿದ್ದು, ಇದೀಗ ಆತನನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಅಮೃತ್​ಪಾಲ್​ ಸಿಂಗ್ ಕೆಲ ದಿನಗಳಲ್ಲಿ ಬಂಧನವಾಗಬಹುದು ಎಂದು ಪಂಜಾಬ್‌ ಪೊಲೀಸರು ಹೇಳಿದ್ದಾರೆ. ಇನ್ನು ಅಮೃತಪಾಲ್ ಮತ್ತು ಪಪಲ್​ಪ್ರೀತ್ ಸಿಂಗ್‌ ಫಗ್ವಾರಾ ಪಟ್ಟಣ, ನಾದ್ಲೋನ್ ಮತ್ತು ಬೀಬಿ ಗ್ರಾಮದ ಮೂರು ವಿಭಿನ್ನ ಡೇರಾಗಳಲ್ಲಿ ತಂಗಿದ್ದರು ಎಂದು ಪೊಲೀಸರು

ಖಾಲಿಸ್ತಾನ ನಾಯಕ ಅಮೃತ್‌ಪಾಲ್‌ ಸಿಂಗ್‌ ಸಹಚರ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

ಲಂಚ ಪ್ರಕರಣ ➤ ಮಾಡಾಳ್ ಜಾಮೀನು ಅರ್ಜಿ ಏಪ್ರಿಲ್ 15ಕ್ಕೆ ಮುಂದುಡಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಏ.11. ಲಂಚ ಪ್ರಕರಣದಲ್ಲಿ ನ್ಯಾಯಾಂಗದ ಬಂಧನದಲ್ಲಿರುವ ಚೆನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏಪ್ರಿಲ್ 15ಕ್ಕೆ ಆದೇಶ ಕಾಯ್ದಿರಿಸಿದೆ. ಜೊತೆಗೆ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್​ಗೆ ಜಾಮೀನು ಅರ್ಜಿ ವಜಾಗೊಳಿಸಿದರೆ ಪ್ರಕರಣ ಮೂರನೇ ಆರೋಪಿ ಸುರೇಂದ್ರಗೆ ನ್ಯಾ. ಬಿ. ಜಯಂತ್ ಕುಮಾರ್ ಜಾಮೀನು‌ ನೀಡಿದ್ದಾರೆ.  ಅರ್ಜಿದಾರ ವಿರೂಪಾಕ್ಷಪ್ಪ ಮಾಡಾಳ್​ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.

ಲಂಚ ಪ್ರಕರಣ ➤ ಮಾಡಾಳ್ ಜಾಮೀನು ಅರ್ಜಿ ಏಪ್ರಿಲ್ 15ಕ್ಕೆ ಮುಂದುಡಿಕೆ Read More »

ಕರ್ನಾಟಕ

ಭಾರತೀಯ ಸೇನೆಯಿಂದ ಕಾರ್ಯಾಚರಣೆ ➤ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರ ಬಂಧನ

(ನ್ಯೂಸ್ ಕಡಬ)newskadaba.com ಶ್ರೀನಗರ, ಏ.11. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಾರಾಮುಲ್ಲಾ ಬಳಿ ಲಷ್ಕರ್ ಇ ತೊಯ್ಬಾ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಫಾರೂಕ್ ಅಹ್ಮದ್ ಫರಾ ಮತ್ತು ಸೈಮಾ ಬಶೀರ್ ಬಂಧಿತ ಉಗ್ರರು ಎಂದು ಗುರುತಿಸಲಾಗಿದೆ. ಇನ್ನು ಬಾರಾಮುಲ್ಲಾ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಬಂಧಿಸಿದ್ದು, ಅವರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡು ವಶಕ್ಕೆ ಪಡೆಯಲಾಗಿದೆ.

ಭಾರತೀಯ ಸೇನೆಯಿಂದ ಕಾರ್ಯಾಚರಣೆ ➤ ಲಷ್ಕರ್ ಸಂಘಟನೆಯ ಇಬ್ಬರು ಉಗ್ರರ ಬಂಧನ Read More »

ರಾಷ್ಟ್ರೀಯ ನ್ಯೂಸ್

ನಾಯಿ ವಿಚಾರಕ್ಕೆ ಗಲಾಟೆ ➤ಬ್ಯಾಟ್ ನಿಂದ ಹೊಡೆದು ವೃದ್ಧನ ಹತ್ಯೆ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಏ.11. ಮನೆ ಮುಂದೆ ನಾಯಿ ಕರೆದುಕೊಂಡು ಗಲೀಜು ಮಾಡಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಬ್ಯಾಟ್​ನಿಂದ ಹೊಡೆದು ಹಿರಿಯ ನಾಗರಿರೊಬ್ಬರ ಹತ್ಯೆ ಮಾಡಲಾಗಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಲದೇವನಹಳ್ಳಿಯ ಗಣಪತಿನಗರ ನಿವಾಸಿ 67 ವರ್ಷದ ಮುನಿರಾಜು ಕೊಲೆಯಾದ ವೃದ್ಧ. ಘಟನೆಯಲ್ಲಿ ಮುರುಳಿ ಎಂಬಾತ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಕೃತ್ಯವೆಸಗಿದ ಸಂಬಂಧ ಪ್ರಮೋದ್, ರವಿಕುಮಾರ್ ಹಾಗೂ ಈತನ ಪತ್ನಿ ಪಲ್ಲವಿ

ನಾಯಿ ವಿಚಾರಕ್ಕೆ ಗಲಾಟೆ ➤ಬ್ಯಾಟ್ ನಿಂದ ಹೊಡೆದು ವೃದ್ಧನ ಹತ್ಯೆ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟೆಸ್ಟ್‌ ಡ್ರೈವ್ ವೇಳೆ ಹೊತ್ತಿ ಉರಿದ ಕಾರು ➤ ಇಬ್ಬರು ಪ್ರಾಣಾಪಾಯದಿಂದ ಪಾರು

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಏ.11. ಕಾರ್‌ ಗೆ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ಮಧ್ಯಪ್ರದೇಶದ ಇಂದೋರ್‌ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ನಡೆದಿದ್ದು, ಅದೃಷ್ಟವಶಾತ್ ಕಾರೊಳಗಿದ್ದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ಯಾರೇಜ್ ನಡೆಸುತ್ತಿರುವ ಇರ್ಷಾದ್ ಖಾನ್ ಮತ್ತು ಅವರ ಸಹೋದ್ಯೋಗಿ ಹಲೀಂ ಖಾನ್ ಅವರು ಮಹೀಂದ್ರ ಸ್ಕಾರ್ಪಿಯೊವನ್ನು ಟೆಸ್ಟ್ ಡ್ರೈವ್ ಮಾಡಲು ಹೊರಟಿದ್ದು, ಡ್ಯಾಶ್‌ ಬೋರ್ಡ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ, ಟೆಸ್ಟ್ ಡ್ರೈವ್‌ನಲ್ಲಿ ಕಾರಿನಿಂದ ಹೊಗೆ ಬರಲಾರಂಭಿಸಿತು. ಸ್ವಲ್ಪ ಹೊತ್ತಿನಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.  

ಟೆಸ್ಟ್‌ ಡ್ರೈವ್ ವೇಳೆ ಹೊತ್ತಿ ಉರಿದ ಕಾರು ➤ ಇಬ್ಬರು ಪ್ರಾಣಾಪಾಯದಿಂದ ಪಾರು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಠಾಣೆಗೆ ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ SI..!!*  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11  ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ಆರೋಪ, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಕೇಳಿಬಂದಿದೆ. ​ವರದಕ್ಷಿಣೆ ಪ್ರಕರಣ ಸಂಬಂಧ ಮಹಿಳೆಯ ಹೇಳಿಕೆ ಪಡೆಯುವ ನೆಪದಲ್ಲಿ ಮಹಿಳೆಯ ಜತೆ ಎಸ್​ಐ ಮಂಜುನಾಥ ಸ್ವಾಮಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಆಪಾದನೆ ಇದೆ. ಠಾಣೆಯಲ್ಲಿ ಮಾತ್ರವಲ್ಲದೆ, ವಾಟ್ಸ್​ಆಯಪ್​ ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಮನೆಗೆ

ಠಾಣೆಗೆ ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ SI..!!*   Read More »

ಕರ್ನಾಟಕ

ಮೊಬೈಲ್ ಕಸಿದುಕೊಂಡ ಪೋಷಕರು..! ➤ 7ನೇ ಅಂತಸ್ತಿನಿಂದ ಜಿಗಿದು ಬಾಲಕಿ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಮುಂಬೈ, ಏ.11. ಪೋಷಕರು ಮೊಬೈಲ್ ಕಸಿದು ಕೊಂಡರೆಂಬ ಕ್ಷುಲಕ ಕಾರಣಕ್ಕೆ 15 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬಯಿಯ ಪಶ್ಚಿಮ ಉಪನಗರದ ಅಲ್ವಾನಿ ಪ್ರದೇಶದಲ್ಲಿ ನಡೆದಿದೆ. ಬಾಲಕಿ ಹೆಚ್ಚು ಮೊಬೈಲ್‌ ಬಳಸುತ್ತಿದ್ದು, ಇದರಿಂದ ಬಾಲಕಿಗೆ ಪೋಷಕರು ಬುದ್ದಿ ಮಾತನ್ನು ಹೇಳಿದ್ದರು. ಆದರೂ, ಬಾಲಕಿ ಇದನ್ನು ಕೇಳದ ಕಾರಣ ಪೋಷಕರು ಬಾಲಕಿಯಿಂದ ಮೊಬೈಲ್‌ ಕಸಿದುಕೊಂಡಿದ್ದಾರೆ. ಇದೇ ಕಾರಣದಿಂದ ಬಾಲಕಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಬೈಲ್ ಕಸಿದುಕೊಂಡ ಪೋಷಕರು..! ➤ 7ನೇ ಅಂತಸ್ತಿನಿಂದ ಜಿಗಿದು ಬಾಲಕಿ ಆತ್ಮಹತ್ಯೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top