News Kadaba

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಯಪಲ್ ಕಂಪನಿ ಸಿಇಒ ಕುಕ್..!

(ನ್ಯೂಸ್ ಕಡಬ)Newskadaba.com ನವದೆಹಲಿ,ಏ.20 ಆಯಪಲ್ ಕಂಪನಿಯ ಸಿಇಒ ಟಿಮ್ ಕುಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದರು. ಆಯಪಲ್ ಕಂಪನಿಯು ಭಾರತದಲ್ಲಿ ತನ್ನ ಮೊದಲ ರಿಟೇಲ್ ಮಳಿಗೆಯನ್ನು ಆರಂಭಿಸಿದೆ. ‘ಬೆಚ್ಚನೆಯ ಸ್ವಾಗತಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು,ದೇಶದಾದ್ಯಂತ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ’ ಎಂದು ಕುಕ್ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.  

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಆಯಪಲ್ ಕಂಪನಿ ಸಿಇಒ ಕುಕ್..! Read More »

ರಾಷ್ಟ್ರೀಯ ನ್ಯೂಸ್

ಗೃಹ ಸಚಿವ ಆರಗ ಜ್ಞಾನೇಂದ್ರ ಆಸ್ತಿಯಲ್ಲಿ ಬಿಡಿಎ ನಿವೇಶನ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.20 ಸುಪ್ರೀಂ ಕೋರ್ಟ್‌ ಆದೇಶದಂತೆ ಹಂಚಿಕೆ ರದ್ದುಪಡಿಸಿ, ಬಿಡಿಎ ವಶಕ್ಕೆ ಸ್ವತ್ತನ್ನು ಹಿಂಪಡೆಯಲು ಪ್ರಕ್ರಿಯೆ ಆರಂಭಿಸಿರುವ ವಿವಾದಿತ ನಿವೇಶನವನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಆಸ್ತಿ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಗೃಹ ಸಚಿವರಿಗೆ ನೋಟಿಸ್‌ ಜಾರಿ ಮಾಡಿದ್ದ ಬಿಡಿಎ, ಸ್ವತ್ತನ್ನು ಪ್ರಾಧಿಕಾರದ ವಶಕ್ಕೆ ಮರಳಿಸುವಂತೆ ಸೂಚಿಸಿತ್ತು. ಬಳಿಕ ಮನವಿಯೊಂದನ್ನು ಸಲ್ಲಿಸಿದ್ದ ಸಚಿವರು, ‘ಬಿಡಿಎ ತಪ್ಪಿನಿಂದಲೇ ಸಮಸ್ಯೆ ಉದ್ಭವಿಸಿದೆ. ನನಗೆ ಬೇರೊಂದು ನಿವೇಶನ ಮಂಜೂರು ಮಾಡಿ’ ಎಂದು ಕೋರಿದ್ದರು.  

ಗೃಹ ಸಚಿವ ಆರಗ ಜ್ಞಾನೇಂದ್ರ ಆಸ್ತಿಯಲ್ಲಿ ಬಿಡಿಎ ನಿವೇಶನ..! Read More »

ಕರ್ನಾಟಕ

ಸುಳ್ಯದಲ್ಲಿ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿದ ನಂದಕುಮಾರ್ ➤ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ ಏನು?

(ನ್ಯೂಸ್ ಕಡಬ) newskadaba.com. ಸುಳ್ಯ, ಏ.20. ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತೀರ್ಮಾನ ಮಾಡಿದ್ದ ಕೆಪಿಸಿಸಿ ಸದಸ್ಯ ಹಾಗೂ  ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಹೆಚ್.ಎಂ.ನಂದಕುಮಾರ್ ಚುನಾವಣಾ ಸ್ಪರ್ಧೆಯಿಂದ  ಹಿಂದೆ ಸರಿದಿದ್ದಾರೆ. ನಂದಕುಮಾರ್ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,  ನಂದಕುಮಾರ್ ಬಣ  ಚುನಾವಣಾ ಕಣದಲ್ಲಿ‌ ತಟಸ್ಥರಾಗಿ ಇರಲು ನಿರ್ಧರಿಸಲಾಗಿದೆ. ಪಕ್ಷೇತರರಾಗಿ ಸ್ಪರ್ಧೆ ಮಾಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸೂಚನೆ ನೀಡಿದ ಹಿನ್ನಲೆಯಲ್ಲಿ ಅವರ ಮಾತಿಗೆ ಬೆಲೆ ಕೊಟ್ಟು

ಸುಳ್ಯದಲ್ಲಿ ಪಕ್ಷೇತರ ಸ್ಪರ್ಧೆಯಿಂದ ಹಿಂದೆ ಸರಿದ ನಂದಕುಮಾರ್ ➤ ಅಭಿಮಾನಿ ಬಳಗದ ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರ ಏನು? Read More »

ಕರಾವಳಿ, ಕರ್ನಾಟಕ

ರೈಲುಗಳ ನಡುವೆ ಭೀಕರ ದುರಂತ!!   ➤ರೈಲಿನ ಲೋಕೊ ಪೈಲಟ್‌ ಮೃತ್ಯು, ಐವರು ಸಿಬ್ಬಂದಿಗಳಿಗೆ ಗಾಯ!

(ನ್ಯೂಸ್ ಕಡಬ)Newskadaba.com ಬಿಲಾಸ್‌ಪುರ್‌,ಏ.20 ಚಲಿಸುತ್ತಿದ್ದ ಸರಕು ಸಾಗಣೆ ರೈಲೊಂದು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿತಪ್ಪಿದ್ದರಿಂದ ಗೂಡ್ಸ್ ರೈಲಿನ ಲೋಕೊ ಪೈಲಟ್‌ ಮೃತಪಟ್ಟಿದ್ದು, ಇತರ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬಿಲಾಸ್‌ಪುರ್‌-ಕಟ್ನಿ ರೈಲ್ವೆ ಮಾರ್ಗದಲ್ಲಿ ಸಿಗ್ನಲ್ ಸಮಸ್ಯೆ ಉಂಟಾಗಿ ಈ ದುರಂತ ಸಂಭವಿಸಿದೆ.

ರೈಲುಗಳ ನಡುವೆ ಭೀಕರ ದುರಂತ!!   ➤ರೈಲಿನ ಲೋಕೊ ಪೈಲಟ್‌ ಮೃತ್ಯು, ಐವರು ಸಿಬ್ಬಂದಿಗಳಿಗೆ ಗಾಯ! Read More »

ಅಂತರ್ರಾಷ್ಟ್ರೀಯ ನ್ಯೂಸ್

ಮಂಗಳೂರು: ಹೂಡಿಕೆ ಮಾಡಿಸಿಕೊಂಡು ವಂಚನೆ   ➤ 10.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.20. ಅಧಿಕ ಲಾಭ ಗಳಿಸುವ ಉದ್ದೇಶದಿಂದ ತಾನು ಆ್ಯಪ್ ಒಂದರಲ್ಲಿ ಹಣ ಹೂಡಿಕೆ ಮಾಡಿ ಬಳಿಕ 10.25 ಲಕ್ಷ ರೂ.ವನ್ನು ಕಳೆದುಕೊಂಡಿರುವುದಾಗಿ ವ್ಯಕ್ತಿಯೊಬ್ಬರು ಮಂಗಳೂರು ಸೆನ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾರರು ಕಳೆದ ವರ್ಷ ಇನ್ಸ್ಸ್ಟಾಗ್ರಾಮ್ ಖಾತೆ ಪರಿಶೀಲನೆ ಮಾಡುತ್ತಿದ್ದಾಗ, ಕ್ರಿಕೆಟಿಗ ಸುರೇಶ್ ರೈನಾ ಬ್ರಾಂಡ್ ಅಂಬಾಸೆಡರ್ ಆಗಿದ್ದ ಆ್ಯಪ್ ನೋಡಿದ್ದರು. ಅದರಲ್ಲಿ ಹಣ ಹೂಡಿಕೆಯಿಂದ ಲಾಭಗಳಿಸಬಹುದು ಎಂದು ಪ್ರಚಾರ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.  

ಮಂಗಳೂರು: ಹೂಡಿಕೆ ಮಾಡಿಸಿಕೊಂಡು ವಂಚನೆ   ➤ 10.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ Read More »

ಕರಾವಳಿ

ಕಡಬದಲ್ಲಿ ಕಾಡಾನೆ ಸ್ಥಳಾಂತರ ಮಾಡುವ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ಪ್ರಕರಣ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ

(ನ್ಯೂಸ್ ಕಡಬ) newskadaba.com. ಕಡಬ, ಏ.20. ಕಾಡಾನೆ ಸೆರೆ ಹಿಡಿಯುವ ವೇಳೆ ತಂಡವೊಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಅರಣ್ಯ, ಪೊಲೀಸ್ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮೂವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ಉಮೇಶ್ ಕಮರ್‌ಕಜೆ, ರಾಜೇಶ್ ಕನಡ ಕಮರ್‌ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್‌ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ

ಕಡಬದಲ್ಲಿ ಕಾಡಾನೆ ಸ್ಥಳಾಂತರ ಮಾಡುವ ವೇಳೆ ಅಧಿಕಾರಿಗಳೊಂದಿಗೆ ವಾಗ್ವಾದ ಪ್ರಕರಣ ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದ ನ್ಯಾಯಾಲಯ Read More »

ಕರಾವಳಿ

(ನ್ಯೂಸ್ ಕಡಬ)Newskadaba.com ಮೂಡಿಗೆರೆ,ಏ.20 ಅಧಿಕಾರ ಯಾರಿಗೂ ಶಾಶ್ವತ ಅಲ್ಲ, ಜನ ಒಂದು ದಿನ ಅಧಿಕಾರದಿಂದ ಇಳಿಸುತ್ತಾರೆ. ನನಗೂ ಅಧಿಕಾರ ಶಾಶ್ವತ ಅಲ್ಲ. ಸುಮಲತಾ ಅವರಿಗೆ 2019ರ ಚುನಾವಣೆಯ ಗುಂಗಿನ ದುರಹಂಕಾರ ಇನ್ನೂ ಕಡಿಮೆಯಾಗಿಲ್ಲ ಎಂದು ಮಾಜಿ ಸಿಎಂ ಎಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಮನಗರದಲ್ಲೇ ಸ್ಪರ್ಧಿಸುವುದು ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದೇನೆ. ಕಾರ್ಯಕರ್ತರು, ಅಭಿಮಾನಿಗಳು ಮಂಡ್ಯದಲ್ಲಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆಂದು ಅಭಿಮಾನದಿಂದ ಹೇಳಿದ್ದಾರೆ. ಇದಕ್ಕೆ ಸುಮಲತಾ ಅವರು ಮಂಡ್ಯದಲ್ಲಿ ನನಗೆ ಸವಾಲು

Read More »

ಕರ್ನಾಟಕ

ಬಂಟ್ವಾಳ: ಅಕ್ರಮ ಗೋ ಸಾಗಾಟ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಬಂಟ್ವಾಳ, ಏ.20. ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಖಚಿತ ಮಾಹಿತಿಯನ್ವಯ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿ, ಎರಡು ಜಾನುವಾರುಗಳನ್ನು ರಕ್ಷಿಸಲಾಗಿದೆ. ಆರೋಪಿ ಕಾರಾಜೆಯ ಪ್ರದೀಪ್ ಸಿಕ್ವೇರ ಚಲಾಯಿಸುತ್ತಿದ್ದ ಪಿಕಪ್ ನಲ್ಲಿ ಎರಡು ಜಾನುವಾರುಗಳಿದ್ದು, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.  

ಬಂಟ್ವಾಳ: ಅಕ್ರಮ ಗೋ ಸಾಗಾಟ ➤ ಆರೋಪಿ ಅರೆಸ್ಟ್ Read More »

ಕರಾವಳಿ

ಕಡಬ:ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ಗ್ಯಾಸ್ ಪಂಪ್ ಸಿಬ್ಬಂದಿ ವಾಗ್ವಾದ.!

(ನ್ಯೂಸ್ ಕಡಬ)Newskadaba.com ಕಡಬ,ಏ.20 ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ಗ್ಯಾಸ್ ಪಂಪ್ ಸಿಬ್ಬಂದಿ ವಾಗ್ವಾದ ನಡೆಸಿದರೆಂಬ ಸುದ್ದಿ ತಿಳಿದು  ಪಂಪ್ ಕಚೇರಿಯತ್ತ  ತಂಡೋಪತಂಡವಾಗಿ ಅಟೋಚಾಲಕರು ಜಮಾಯಿಸಿದ ಘಟನೆಯೋಂದು ನಡೆದಿದೆ. ಕೆಲ ಸಮಯದ ಬಳಿಕ ಕಡಿಮೆ ದರದಲ್ಲಿ ಮಾರಾಟ ಮಾಡಿದ್ದರು. ಆಟೋ ಚಾಲಕರೊಂದಿಗೆ ಸಿಬ್ಬಂದಿ  ಉಡಾಫೆ ಉತ್ತರ ನೀಡಿದರೆಂಬ ವಿಚಾರಕ್ಕೆ ಆಟೋ ಚಾಲಕಮಾಲಕರು ದಿಡೀರ್ ಎಲ್ಪಿಜಿ ಪಂಪ್ ಮುಂದೆ ದೌಡಾಯಿಸಿದ್ದರು. ಆಟೋ ಚಾಲಕರಿಂದ ಪಡೆದ ಅಧಿಕ ದರವನ್ನು ವಾಪಾಸು ನೀಡುವುದಲ್ಲದೆ  ಸಿಬ್ಬಂದಿ ಕ್ಷಮೆ ಹೇಳಬೇಕೆಂದು ಹಠ ಹಿಡಿದಿದ್ದರು.

ಕಡಬ:ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ಗ್ಯಾಸ್ ಪಂಪ್ ಸಿಬ್ಬಂದಿ ವಾಗ್ವಾದ.! Read More »

ಕರಾವಳಿ

ಇಂದು ಅಪರೂಪದ ಸೂರ್ಯ ಗ್ರಹಣ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.20. ಇಂದು ಹಲವೆಡೆ ಸೂರ್ಯಗ್ರಹಣ ಗೋಚರಿಸಲಿದ್ದು, ಕಂಕಣ ಮತ್ತು ಪೂರ್ಣ ಸೂರ್ಯಗ್ರಹಣಗಳು ಒಟ್ಟಿಗೆ ಸಂಭವಿಸುವುದರಿಂದ ಈ ಗ್ರಹಣವನ್ನು ಸಮ್ಮಿಶ್ರ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಗ್ರಹಣದಲ್ಲಿ ಸೂರ್ಯ ಉಂಗುರವಾಗಿ ಕೆಲವು ಸೆಕೆಂಡ್‌ಗಳ ಕಾಲ ಕಾಣಿಸಲಿದ್ದು, ಮತ್ತೆ ಮರೆಯಾಗುತ್ತದೆ. ಸೂರ್ಯಗ್ರಹಣದ ಸಮಯವು ಬೆಳಿಗ್ಗೆ 7:04 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12:29 ರವರೆಗೆ ಮುಂದುವರಿಯುತ್ತದೆ ಎಂದು ವರದಿ ತಿಳಿಸಿದೆ.

ಇಂದು ಅಪರೂಪದ ಸೂರ್ಯ ಗ್ರಹಣ Read More »

ಕರ್ನಾಟಕ
Scroll to Top