News Kadaba

ಡಿಸ್ಕೌಂಟ್ ‘ಸೇಲ್’ನಲ್ಲಿ ಸೀರೆಗಾಗಿ ಮಹಿಳೆಯರ ಭಾರಿ ರಂಪಾಟ..!

(ನ್ಯೂಸ್ ಕಡಬ)Newskadaba.com ಬೆಂಗಳೂರು, ಏ.23 ಸೀರೆಗಳು ಅಂದ್ರೆ ನಾರಿಯರಿಗೆ ಪಂಚಪ್ರಾಣ. ತಮಗೆ ಇಷ್ಟವಾದ ಸೀರೆಗಳ ಸೆಲೆಕ್ಷನ್‌ಗೆ ಹೆಂಗಳೆಯರು ಸಿಕ್ಕಾಪಟ್ಟೆ ಶಾಪಿಂಗ್‌ ಮಾಡ್ತಾರೆ. ಅದೇ ಸೀರೆಗಳು ಕಡಿಮೆ ದರದಲ್ಲಿ ಸಿಕ್ರೆ ಸುಮ್ನೆ ಬಿಡ್ತಾರಾ. ನಾ ಮುಂದು ತಾ ಮುಂದು ಅಂತಾ ಮುಗಿ ಬೀಳ್ತಾರೆ. ಹೀಗೆ ನಡೆದ ಡಿಸ್ಕೌಂಟ್‌ ಸೇಲ್‌ನಲ್ಲಿ ಇಬ್ಬರು ಮಹಿಳೆಯರು ಜಡೆ ಹಿಡಿದು ಕಿತ್ತಾಡಿಕೊಂಡಿದ್ದಾರೆ.ಒಬ್ಬರ ಜಡೆ ಮತ್ತೊಬ್ಬರು ಹಿಡಿದು ರಂಪಾಟ ನಡೆಸಿರುವ ಘಟನೆ ಮಲ್ಲೇಶ್ವರಂನ KSIC ಡಿಸ್ಕೌಂಟ್ ಸೇಲ್‌ನಲ್ಲಿ ನಡೆದಿದೆ.    

ಡಿಸ್ಕೌಂಟ್ ‘ಸೇಲ್’ನಲ್ಲಿ ಸೀರೆಗಾಗಿ ಮಹಿಳೆಯರ ಭಾರಿ ರಂಪಾಟ..! Read More »

ಕರ್ನಾಟಕ

‘ಸಿದ್ದಗಂಗಾ’ ಮಠದ ಉತ್ತರಾಧಿಕಾರಿಗೆ ಏ.23(ಇಂದು)ಪಟ್ಟಾಭಿಷೇಕ ಕಾರ್ಯಕ್ರಮ..!

(ನ್ಯೂಸ್ ಕಡಬ)Newskadaba.com ತುಮಕೂರು, ಏ.23  ತುಮಕೂರಿನ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಏ.23(ಇಂದು) ನಡೆಯಲಿದೆ. ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯಲಿದೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದ್ದು, ಮನೋಜ್ ಕುಮಾರ್ ರವರನ್ನು ಉತ್ತರ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ನಮ್ಮ ಶಾಖಾ ಮಠವಾದ ಬಂಡೇಮಠಕ್ಕೆ ಹರ್ಷ ಕೆ.ಎಂ., ಬೆಂಗಳೂರು ಗ್ರಾಮಾಂತರದ ವಿಜಯಪುರದ ಬಸವಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ಶಿವಾನುಭವ ಆಯ್ಕೆ ಮಾಡಲಾಗಿದ್ದು, ಮೂವರಿಗೂ ಪಟ್ಟಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಲಿಂಗ ಶ್ರೀ

‘ಸಿದ್ದಗಂಗಾ’ ಮಠದ ಉತ್ತರಾಧಿಕಾರಿಗೆ ಏ.23(ಇಂದು)ಪಟ್ಟಾಭಿಷೇಕ ಕಾರ್ಯಕ್ರಮ..! Read More »

ಕರ್ನಾಟಕ

ರಾಷ್ಟ್ರಧ್ವಜ ಬಳಸಿ ಚಿಕನ್ ಕ್ಲೀನ್ ಮಾಡಿದ ವ್ಯಕ್ತಿಯ ಬಂಧನ

(ನ್ಯೂಸ್ ಕಡಬ)newskadaba.com ಸಿಲ್ವಾಸ್ಸಾ, ಏ.23. ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ್ ಹವೇಲಿಯ ಸಿಲ್ವಾಸ್ಸಾದ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜದಿಂದ ಕೋಳಿಯನ್ನು ಶುಚಿಗೊಳಿಸಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ರಾಷ್ಟ್ರಧ್ವಜ ಬಳಸಿ ಚಿಕನ್ ಸ್ವಚ್ಛಗೊಳಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಿಲ್ವಾಸ್ಸಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರಧ್ವಜ ಬಳಸಿ ಚಿಕನ್ ಕ್ಲೀನ್ ಮಾಡಿದ ವ್ಯಕ್ತಿಯ ಬಂಧನ Read More »

ರಾಷ್ಟ್ರೀಯ ನ್ಯೂಸ್

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ ಉಂಟಾಗಿದೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.23 ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಉಂಟಾಗಿದೆ. 7 ಗಂಟೆಗೆ ಆರಂಭವಾಗಬೇಕಿದ್ದ ರೈಲುಗಳ ಸಂಚಾರ ತಡವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ನೇರಳೆ ಮಾರ್ಗದಲ್ಲಿ ರೈಲುಗಳು ಎಂದಿನಂತೆ ಸಂಚಾರ ನಡೆಸುತ್ತಿವೆ.  

ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ ಉಂಟಾಗಿದೆ..! Read More »

ಕರ್ನಾಟಕ

ನಮಾಝ್ ಗೆ ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ

(ನ್ಯೂಸ್ ಕಡಬ)newskadaba.com ಕೋಲಾರ, ಏ.23. ಬಾಲಕನೊಬ್ಬ ನಮಾಜ್‌ಗೆ ಹೋಗುವಾಗ ಬೀದಿ ನಾಯಿಗಳು ಗುಂಪು ಸೇರಿಕೊಂಡು ದಾಳಿ ಮಾಡಿ ಕಚ್ಚಿ ಎಳೆದಿರುವ ದುರ್ಘಟನೆ ಕೋಲಾರ ನಗರದಲ್ಲಿ ಬೆಳಗಿನ ಜಾವ ನಡೆದಿದೆ. ಕೋಲಾರದ ರಹಮತ್ ನಗರದ 9 ವರ್ಷದ ಬಾಲಕ ಜಾಫರ್ ರಂಜಾನ್ ಕೊನೆಯ ದಿನದ ಜಾಗರಣೆಯನ್ನು ಮಸೀದಿಯಲ್ಲಿ ಮುಗಿಸಿದ್ದ.ಮನೆಗೆ ಬಂದು ಮತ್ತೆ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ. ಈ ವೇಳೆ ನಾಯಿಗಳು ಬಾಲಕನ ಮೇಲೆ ದಿಢೀರ್ ದಾಳಿ ಮಾಡಿವೆ.

ನಮಾಝ್ ಗೆ ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ Read More »

ಕರ್ನಾಟಕ

ಬಿಜೆಪಿ ನಾಯಕ ಸುರೇಂದ್ರ ಮಟಿಯಾಲಾ ಹತ್ಯೆಗೈದ 6 ಮಂದಿ ಆರೋಪಿಗಳ ಬಂಧನ..!

(ನ್ಯೂಸ್ ಕಡಬ)Newskadaba.com ಹೊಸದಿಲ್ಲಿ,ಏ.23 ದಿಲ್ಲಿ ಬಿಜೆಪಿ ಕಿಸಾನ್‌ ಮೋರ್ಚಾ ನಾಯಕ ಸುರೇಂದ್ರ ಮಟಿಯಾಲಾ ಅವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಬಾಲ ಆರೋಪಿಗಳ ಸಹಿತ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಹರಿಯಾಣದ ಬಹದ್ದೂರ್‌ಗಢ ನಿವಾಸಿಗಳಾದ ಸಚಿನ್‌ ಹಾಗೂ ದಿಲ್ಲಿಯ ಪಾಲಮ್‌ ಕಾಲನಿಯ ಅರುಣ್‌ ಛಂದ್‌, ದೀಪಕ್‌ ಬರ್ವಾ, ಹರಿಯಾಣದ ಯೋಗೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ.ಇವರ ಜತೆಗೆ 16 ಮತ್ತು 17 ವರ್ಷದ ಇಬ್ಬರು ಬಾಲಕರೂ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.    

ಬಿಜೆಪಿ ನಾಯಕ ಸುರೇಂದ್ರ ಮಟಿಯಾಲಾ ಹತ್ಯೆಗೈದ 6 ಮಂದಿ ಆರೋಪಿಗಳ ಬಂಧನ..! Read More »

ರಾಷ್ಟ್ರೀಯ ನ್ಯೂಸ್

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್ ➤ ಬಸ್ ನಿರ್ವಾಹಕ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.23. ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಬಸ್ ನಿರ್ವಾಹಕನೋರ್ವನನ್ನು ಬೇಡಡ್ಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕುತ್ತಿಕೋಲ್ ಉಮೇಶ್ ಕುಮಾರ್ (30) ಬಂಧಿತ ಎಂದು ತಿಳಿದುಬಂದಿದೆ. ಬಂದಡ್ಕ ಸರಕಾರಿ ಶಾಲೆಯ ಪ್ಲಸ್ 2 ವಿದ್ಯಾರ್ಥಿನಿ ಮಾಲಕುಂಡುವಿನ ಶರಣ್ಯ(17)ಆತ್ಮಹತ್ಯೆಗೆ ಸಂಬಂಧ ಪಟ್ಟಂತೆ ಈತನನ್ನು ಬಂಧಿಸಲಾಗಿದೆ.  

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್ ➤ ಬಸ್ ನಿರ್ವಾಹಕ ಅರೆಸ್ಟ್ Read More »

ರಾಷ್ಟ್ರೀಯ ನ್ಯೂಸ್

ಪುತ್ತೂರು: ಅಕ್ರಮವಾಗಿ ಗೋಮಾಂಸ ಸಾಗಾಟ ➤ ಗೋಮಾಂಸ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಪುತ್ರೂರು, ಏ.23. ಗೋಮಾಂಸ ಸಾಗಾಟ ಮಾಡಿದ ವ್ಯಕ್ತಿಯಿಂದ ಗೋಮಾಂಸವನ್ನು ಪುತ್ತೂರು ಕೊಟಾಚಾ ಹಾಲ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಯ ವಿರುದ್ಧ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯಡಿ ಕೇಸ್ ದಾಖಲಾಗಿದೆ ಎಂದು ವರದಿಯಾಗಿದೆ. ಪಡೀಲ್ ನಲ್ಲಿನ ಕೋಳಿ ಮಾಂಸದ ಅಂಗಡಿಯಲ್ಲಿ ದನದ ಮಾಂಸ ಮಾರಾಟದ ಬಗ್ಗೆ ಪೊಲೀಸರಿಗೆ ಹಿಂದೂ ಸಂಘಟನೆಗಳು ದೂರು‌ ನೀಡಿದ್ದರು.ಅರುಣ್ ಪುತ್ತಿಲ ಕೂಡ ಪೊಲೀಸರ ಬಳಿ ತೆರಳಿ ಈ ಕುರಿತು ಮಾತುಕತೆ ನಡೆಸಿದ್ದರು ಎನ್ನಲಾಗಿದೆ.  

ಪುತ್ತೂರು: ಅಕ್ರಮವಾಗಿ ಗೋಮಾಂಸ ಸಾಗಾಟ ➤ ಗೋಮಾಂಸ ಪೊಲೀಸ್ ವಶಕ್ಕೆ Read More »

ಕರಾವಳಿ

ಬೈಕ್ ಮತ್ತು ಕಾರಿನ ನಡುವೆ ಅಪಘಾತ ➤ ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಮಂಡ್ಯ, ಏ.23. ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಮಳವಳ್ಳಿ ತಾಲೂಕಿನ ಸರಗೂರು ಬಳಿಯ ಟಿ.ನರಸೀಪುರ-ಬೆಳಕವಾಡಿ ರಸ್ತೆಯಲ್ಲಿ ನಡೆದಿದೆ. ಗ್ರಾಮದ ಶಿವಪ್ಪ(52), ಸತೀಶ್ (46) ಸಾವನ್ದನಪ್ಪಿದ್ದಾರೆ ಅಪಘಾತದ ರಸಭಕ್ಕೆ ಬೈಕ್​ ಸ್ಥಳದಲ್ಲೇ ಹೊತ್ತಿ ಉರಿದಿದೆ. ಸಂಬಂಧಿಕರ ಮದುವೆಗೆಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸರಗೂರು ಬಳಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬೈಕ್​ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.  

ಬೈಕ್ ಮತ್ತು ಕಾರಿನ ನಡುವೆ ಅಪಘಾತ ➤ ಸವಾರರಿಬ್ಬರು ಮೃತ್ಯು Read More »

ಕರ್ನಾಟಕ

ಮಂಗಳೂರು: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಏ.23. ಮೀನುಗಾರಿಕೆಗೆ ತೆರಳಿ ದೋಣಿಯಲ್ಲಿ ಬಲೆಯನ್ನು ಎಳೆಯುತ್ತಿರುವವಾಗ ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಮೀನುಗಾರರೊಬ್ಬರು ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ನಾಗರಾಜ (43) ಎಂದು ಗುರುತಿಸಲಾಗಿದೆ. ಇನ್ನು ದೋಣಿಯಲ್ಲಿದ್ದವರು ನೀರಿಗೆ ಬಿದ್ದ ತಕ್ಷಣ ನಾಗರಾಜ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಉಪಚರಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ಸೇರಿಸಿ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.  

ಮಂಗಳೂರು: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು Read More »

ಕರಾವಳಿ
Scroll to Top