News Kadaba

ದಕ್ಷಿಣ ಆಫ್ರಿಕಾದಿಂದ ತಂದಿದ್ದ ಕೊನೆಯುಸಿರೆಳೆದ ಚೀತಾ

(ನ್ಯೂಸ್ ಕಡಬ)newskadaba.com ಮಧ್ಯ ಪ್ರದೇಶ, ಏ.24. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಕೊನೆಯುಸಿರೆಳೆದಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ಉದಯ್ ಎಂಬ ಚಿರತೆ ಮೃತಪಟ್ಟಿದೆ. ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೀತಾ ಅಸುನೀಗಿದೆ. ಕುನೋದಲ್ಲಿ ಇದರೊಂದಿಗೆ ಎರಡನೇ ಚೀತಾ ಸಾವನ್ನಪ್ಪಿದಂತಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ತಿಳಿಸಿದ್ದಾರೆ.  

ದಕ್ಷಿಣ ಆಫ್ರಿಕಾದಿಂದ ತಂದಿದ್ದ ಕೊನೆಯುಸಿರೆಳೆದ ಚೀತಾ Read More »

ರಾಷ್ಟ್ರೀಯ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿಎರಡು ಬಸ್​ಗಳು ಮುಖಾಮುಖಿ ಡಿಕ್ಕಿ.!   ➤16 ಜನರಿಗೆ ಗಂಭೀರ ಗಾಯ

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.24 ಚಾಲಕನ ನಿಯಂತ್ರಣ ತಪ್ಪಿ ಎರಡು ಕೆಎಸ್​ಆರ್​​ಟಿಸಿ ಬಸ್​ಗಳು ಮುಖಾಮುಖಿ ಡಿಕ್ಕಿ. ಪರಿಣಾಮ 16 ಜನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕಿನ ಹಳಿಯೂರು ಬಳಿ ನಡೆದಿದೆ. ಗಾಯಾಳುಗಳುಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.    

ಚಾಲಕನ ನಿಯಂತ್ರಣ ತಪ್ಪಿಎರಡು ಬಸ್​ಗಳು ಮುಖಾಮುಖಿ ಡಿಕ್ಕಿ.!   ➤16 ಜನರಿಗೆ ಗಂಭೀರ ಗಾಯ Read More »

ಕರ್ನಾಟಕ

ಏ.26ರಂದು ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ.!  

(ನ್ಯೂಸ್ ಕಡಬ)Newskadaba.comಮಂಡ್ಯ,ಏ.24 ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏ. 26ರಂದು ಮಂಡ್ಯಕ್ಕೆ ಭೇಟಿ ನೀಡಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿಪಿ ಉಮೇಶ್ ತಿಳಿಸಿದರು. ಅಂದು ಬೆಳಗ್ಗೆ 11 ಗಂಟೆಗೆ ಆಗಮಿಸುವ ಯೋಗಿ ಆದಿತ್ಯನಾಥ್ ಅವರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ನಗರದಲ್ಲಿ ರೋಡ್‌ಶೋ ನಡೆಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಜೇಂದ್ರ ಪ್ರಸಾದ್ ರಸ್ತೆ,ಅಂಬೇಡ್ಕರ್ ವೃತ್ತ,ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿಶ್ವೇಶ್ವರಯ್ಯ ರಸ್ತೆ ಸೇರಿದಂತೆ

ಏ.26ರಂದು ಯೋಗಿ ಆದಿತ್ಯನಾಥ್ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ.!   Read More »

ಕರ್ನಾಟಕ

ಟಿಕೆಟ್ ‘ಕೈ’ ತಪ್ಪಿದ ಬೇಸರವಿದೆ.!  ➤ ಆದರೆ ಪಕ್ಷಕ್ಕೆ ಯಾವತ್ತಿಗೂ ದ್ರೋಹ ಬಗೆಯಲ್ಲ

(ನ್ಯೂಸ್ ಕಡಬ)Newskadaba.com ದಾವಣಗೆರೆ,ಏ.24 ಮಾರ್ಚ್ 29ಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿಯನ್ನು ಮಾರ್ಚ್ 25ಕ್ಕೆ ಬಿಡುಗಡೆ ಮಾಡಿ 124 ಅಭ್ಯರ್ಥಿಗಳನ್ನು ಹೆಸರಿಸಿತ್ತು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ಖಚಿತಪಡಿಸಿತ್ತು.ಆದರೆ ದಾವಣಗೆರೆ ಜಿಲ್ಲೆಯ ಹರಿಹರದ ಲೆಕ್ಕಾಚಾರವೇ ಬದಲಾಗಿತ್ತು. ಹರಿಹರ ಕ್ಷೇತ್ರದಲ್ಲಿ ಹಾಲಿ ಕಾಂಗ್ರೇಸ್ಕಕರು ಇದ್ದರೂ ಅಭ್ಯರ್ಥಿ ಘೋಷಣೆಯಾಗಿದ್ದು ಕೊನೆಯ ಪಟ್ಟಿಯಲ್ಲಿ. ಎಸ್. ರಾಮಪ್ಪ ಕ್ಷೇತ್ರದ ಹಾಲಿ ಶಾಸಕರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಶ್ರೀನಿವಾಸ್ ನಂದಿಗಾವಿ ಅಭ್ಯರ್ಥಿ ಎಂದು ಘೋಷಣೆ

ಟಿಕೆಟ್ ‘ಕೈ’ ತಪ್ಪಿದ ಬೇಸರವಿದೆ.!  ➤ ಆದರೆ ಪಕ್ಷಕ್ಕೆ ಯಾವತ್ತಿಗೂ ದ್ರೋಹ ಬಗೆಯಲ್ಲ Read More »

ಕರ್ನಾಟಕ

15 ವರ್ಷದ ಬಾಲಕಿಯನ್ನು ಅಪಹರಿಸಿ,ಅತ್ಯಾಚಾರವೆಸಿಗಿದ ಪಾಪಿ.!

(ನ್ಯೂಸ್ ಕಡಬ)Newskadaba.com ಉತ್ತರಪ್ರದೇಶದ,ಏ.24 ಉತ್ತರಪ್ರದೇಶದಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಆರು ತಿಂಗಳ ಕಾಲ ಅತ್ಯಾಚಾರ ಎಸಗಿದ ಘೋರ ಘಟನೆ ನಡೆದಿದೆ. ಬಾಲಕಿಯನ್ನು ರಕ್ಷಿಸಿದ್ದು, ಆರೋಪಿ ಆಶಿಶ್ ಕುಮಾರ್‌ನನ್ನು (24) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಾಲಕಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಬಾಲಕಿ ಪೋಷಕರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು, ಎಂದು ತಖಾ ಪೊಲೀಸ್ ಹೊರಠಾಣೆ ಪ್ರಭಾರಿ ಫೂಲ್‌ಚಂದ್ರ ಯಾದವ್ ಹೇಳಿದ್ದಾರೆ.    

15 ವರ್ಷದ ಬಾಲಕಿಯನ್ನು ಅಪಹರಿಸಿ,ಅತ್ಯಾಚಾರವೆಸಿಗಿದ ಪಾಪಿ.! Read More »

ರಾಷ್ಟ್ರೀಯ ನ್ಯೂಸ್

ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ.!

(ನ್ಯೂಸ್ ಕಡಬ)Newskadaba.com ಮಂಗಳೂರು,ಏ.24 ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ನವ ವಿವಾಹಿತೆ ಸಾವನ್ನಪ್ಪಿದ್ದಾರೆ. ಐದು ತಿಂಗಳ ಹಿಂದೆ ಮದುವೆಯಾಗಿದ್ದ ಕೌಶಲ್ಯ(27) ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕೊಪ್ಪದಕೋಡಿ ನಿವಾಸಿಯಾಗಿರುವ ಕೌಶಲ್ಯ ಮೂರು ದಿನಗಳ ಹಿಂದೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೌಶಲ್ಯ ಸಾವನ್ನಪ್ಪಿದ್ದಾರೆ.      

ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ.! Read More »

ಕರಾವಳಿ

20 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಕ್ಕೆ ಪಡೆದ CBN​

(ನ್ಯೂಸ್ ಕಡಬ)newskadaba.com ಗುಜರಾತ್​, ಏ.24. ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್(ಸಿಬಿಎನ್) ಜಿಲ್ಲೆಯ ಚಂಗೋದ್​ನಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಿಷೇಧಿತ ಡ್ರಗ್ಸ್ ಅ​​ನ್ನು ವಶಪಡಿಸಿಕೊಂಡಿದೆ. ಸೆಂಟ್ರಲ್ ಬ್ಯೂರೋ ಆಫ್ ನಾರ್ಕೋಟಿಕ್ಸ್ 20 ಕೋಟಿ ರೂ. ಮೌಲ್ಯದ ಒಂದು ಕೋಟಿಗೂ ಹೆಚ್ಚು ಟ್ಯಾಬ್ಲೆಟ್‌ಗಳ ಇರುವ ಮಾಹಿತಿಯ ಮೇರೆಗೆ ಚಂಗೋದರ್‌ನಲ್ಲಿ ಈ ದಾಳಿ ನಡೆಸಲಾಗಿದೆ.  

20 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಕ್ಕೆ ಪಡೆದ CBN​ Read More »

ರಾಷ್ಟ್ರೀಯ ನ್ಯೂಸ್

ಸಿಎಂಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿ.! ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡ ಜನ!

(ನ್ಯೂಸ್ ಕಡಬ)Newskadaba.com ಚಿಕ್ಕಮಗಳೂರು,ಏ.24 ವಿಧಾನಸಭೆ ಚುನಾವಣೆ ಹಿನ್ನೆಲೆ ಈಗಾಗಲೇ ಎಲ್ಲಾ ರಾಜಕಾರಣಿಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ರೋಡ್‌ ಶೋಗಳ ಮೂಲಕ ಅಬ್ಬರದ ಪ್ರಚಾರಕ್ಕೂ ಇಳಿದಿದ್ದಾರೆ. ಇದೇ ರೀತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ರೋಡ್‌ ಶೋ ಮಾಡುವ ವೇಳೆ ಅವರಿಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ನಡೆದಿದೆ. ನಂತರ ರೊಚ್ಚಿಗೆದ್ದ ಜನ ಸಿಎಂ ಗೆ ಬೈದಿದ್ದ ವ್ಯಕ್ತಿಗೆ ಕ್ಲಾಸ್‌ ತೆಗೆದುಕೊಂಡ ಘಟನೆಯೂ ನಡೆದಿದೆ. ಬಳಿಕ ಆತನನನ್ನು ಪೊಲೀಸರೇ ಜೀಪಿನಲ್ಲಿ

ಸಿಎಂಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ವ್ಯಕ್ತಿ.! ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡ ಜನ! Read More »

ಕರ್ನಾಟಕ

ದೋಣಿ ಮಗುಚಿ ಬಿದ್ದು ಈದ್ ಆಚರಣೆಗೆ ಬಂದಿದ್ದ ನಾಲ್ವರು ಯುವಕರು ಮೃತ್ಯು

(ನ್ಯೂಸ್ ಕಡಬ)newskadaba.com ಬ್ರಹ್ಮಾವರ, ಏ.24. ದೋಣಿ ಮಗುಚಿ ಬಿದ್ದು ನಾಲ್ವರು ಯುವಕರು ಮೃತಪಟ್ಟ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದ್ದು, ಓರ್ವನ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಈದ್ ಆಚರಣೆಗೆಂದು ತನ್ನ ಮನೆಗೆ ಬಂದಿದ್ದ 6 ಮಂದಿ ಯುವಕರೊಂದಿಗೆ ಹೂಡೆ ನಿವಾಸಿ ಫೈಝಾನ್ ದೋಣಿಯಲ್ಲಿ ತೆರಳುವಾಗ ಅವಘಡ ನಡೆದಿದೆ ಎನ್ನಲಾಗಿದೆ.  

ದೋಣಿ ಮಗುಚಿ ಬಿದ್ದು ಈದ್ ಆಚರಣೆಗೆ ಬಂದಿದ್ದ ನಾಲ್ವರು ಯುವಕರು ಮೃತ್ಯು Read More »

ಕರಾವಳಿ

SSLC ಮೌಲ್ಯಮಾಪನ ಆರಂಭ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.24. ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನ ಎ.24ರಿಂದ ಆರಂಭವಾಗಲಿದ್ದು, ಮೇ 2 ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗಿದ್ದು, ಮೇ ಎರಡನೇ ವಾರದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ.ಈ ಬಾರಿ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಗೆ 8.60 ಲಕ್ಷವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 10 ನೇ ತರಗತಿ ಮಕ್ಕಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಮೇ

SSLC ಮೌಲ್ಯಮಾಪನ ಆರಂಭ Read More »

ಕರ್ನಾಟಕ
Scroll to Top