ದೋಣಿ ಮಗುಚಿ ಬಿದ್ದು ಈದ್ ಆಚರಣೆಗೆ ಬಂದಿದ್ದ ನಾಲ್ವರು ಯುವಕರು ಮೃತ್ಯು

(ನ್ಯೂಸ್ ಕಡಬ)newskadaba.com ಬ್ರಹ್ಮಾವರ, ಏ.24. ದೋಣಿ ಮಗುಚಿ ಬಿದ್ದು ನಾಲ್ವರು ಯುವಕರು ಮೃತಪಟ್ಟ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ.

ಮೃತಪಟ್ಟವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದ್ದು, ಓರ್ವನ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ಈದ್ ಆಚರಣೆಗೆಂದು ತನ್ನ ಮನೆಗೆ ಬಂದಿದ್ದ 6 ಮಂದಿ ಯುವಕರೊಂದಿಗೆ ಹೂಡೆ ನಿವಾಸಿ ಫೈಝಾನ್ ದೋಣಿಯಲ್ಲಿ ತೆರಳುವಾಗ ಅವಘಡ ನಡೆದಿದೆ ಎನ್ನಲಾಗಿದೆ.

 

Scroll to Top