News Kadaba

ಹವಾಮಾನ ವರದಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.28. ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬೀದರ್, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ಶಿವಮೊಗ್ಗ, ರಾಮನಗರ ಜಿಲ್ಲೆಗಳ ಕೆಲವು […]

ಹವಾಮಾನ ವರದಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ Read More »

ಕರ್ನಾಟಕ

ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ 24 ಲಕ್ಷ ರೂ. ಕಳೆದುಕೊಂಡ ಯುವತಿ..!

(ನ್ಯೂಸ್ ಕಡಬ)newskadaba.com ಮುಂಬೈ, ಏ.28. ಆನ್‌ಲೈನ್‌ ನಲ್ಲಿ ಹಣ ವಂಚನೆಯ ಹಲವು ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ಪುಣೆಯ ಯುವತಿಯೊಬ್ಬಳು ಇಂತಹ ವಂಚನೆಗೆ ಬಲಿಯಾದ ಘಟನೆ ನಡೆದಿದೆ. ಆನ್‌ಲೈನ್ ವಂಚನೆಯಿಂದ ಯುವತಿ ಬರೋಬ್ಬರಿ 24 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕಂಪೆನಿಯೊಂದು ಯೂಟ್ಯೂಬ್ ವಿಡಿಯೋ ಗಳನ್ನು ಲೈಕ್ ಮಾಡುವ ಕೆಲಸ ನೀಡಿ ಯುವತಿಯಿಂದ ಲಕ್ಷ ಗಟ್ಟಲೆ ಹಣ ವಸೂಲಿ ಮಾಡಿದೆ. ವಂಚನೆಗೊಳಗಾದ ಯುವತಿ ನೇತ್ರ ತಜ್ಞೆಯಾಗಿದ್ದು, ವರ್ಕ್ ಫ್ರಂ ಹೋಮ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆನ್ಲೈನ್ ಕಂಪೆನಿಯೊಂದನ್ನು

ಯೂಟ್ಯೂಬ್ ವಿಡಿಯೋ ಲೈಕ್ ಮಾಡಿ 24 ಲಕ್ಷ ರೂ. ಕಳೆದುಕೊಂಡ ಯುವತಿ..! Read More »

ರಾಷ್ಟ್ರೀಯ ನ್ಯೂಸ್

ಕಾಸರಗೋಡು: ಬೈಕ್ ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ     ➤ ಮಂಗಳೂರು ನಿವಾಸಿ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಏ.28. ಬೈಕ್ ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಪತ್ನಿ ಮೃತಪಟ್ಟು, ಪತಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಬಳಿ ನಡೆದಿದೆ. ಮಂಗಳೂರು ಕೊಟ್ಟಾರ ಚೌಕಿಯ ನಳಿನಾಕ್ಷಿ (65) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅವರ ಪತಿ ಪ್ರಭಾಕರ ಘಟನೆಯಲ್ಲಿ ಗಾಯಗೊಂಡಿದ್ದಾರೆ‌.  

ಕಾಸರಗೋಡು: ಬೈಕ್ ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ     ➤ ಮಂಗಳೂರು ನಿವಾಸಿ ಮಹಿಳೆ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ ಹಣ ವಶಕ್ಕೆ

(ನ್ಯೂಸ್ ಕಡಬ) newskadaba.com. ಕಾರವಾರ, ಏ.27. ಆಟೋ ರಿಕ್ಷಾದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93.50 ಲಕ್ಷ ರೂ. ಹಣವನ್ನು ಕುಮಟಾ ತಾಲೂಕಿನ ಚಂದಾವರ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ರಾತ್ರಿ 2.30 ರ ಸುಮಾರಿಗೆ ಸೂಟ್ ಕೇಸ್ ನಲ್ಲಿ ತುಂಬಿ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆದ ಎಸ್ ಎಸ್ ಟಿ ತಂಡದ ಸದಸ್ಯರು ಚಾಲಕನನ್ನು ವಶಕ್ಕೆ ಪಡೆದು ಹಣ ಯಾರದ್ದು ಎಂಬ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 93 ಲಕ್ಷ ಹಣ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪೋಷಕರಿಗೆ ಬಿಗ್ ಶಾಕ್ ➤ಶಾಲೆ ಮಕ್ಕಳ ನೋಟ್ಸ್ ಬುಕ್ ಬೆಲೆಯಲ್ಲಿ ಏರಿಕೆ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.28 ಶಾಲೆ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಠ್ಯ ಪುಸ್ತಕ, ಮಕ್ಕಳ ಶುಲ್ಕ ಏರಿಕೆ ಬೆನ್ನಲ್ಲೇ ಇದೀಗ ಮಕ್ಕಳ ನೋಟ್ಸ್ ಬುಕ್, ವರ್ಕ್ ಬುಕ್ ಹಾಗೂ ಪೇಪರ್ ಬೆಲೆಯಲ್ಲಿ ಏರಿಕೆಯಾಗಿದೆ. ಉಕ್ರೇನ್ ಹಾಗೂ ರಷ್ಯಾ ಯುದ್ದದ ಪರಿಣಾಮ ಕಚ್ಚಾ ಪೇಪರ್​ ಬರುತ್ತಿಲ್ಲ.ಹೀಗಾಗಿ ಪೇಪರ್ ನೋಟ್ ಬುಕ್ಸ್ ಗೆ ಬೇಡಿಕೆ ಹೆಚ್ಚಾಗಿದ್ದು, ಪಠ್ಯ ಪುಸ್ತಕಗಳ ಬೆಲೆ ಏರಿಕೆಯ ಜೊತೆಗೆ ನೋಟ್ಸ್ ಬುಕ್ , ವರ್ಕ್ ಬುಕ್, ಪೇಪರ್ ಗಳ ಬೆಲೆ 30-40% ಏರಿಕೆಯಾಗಿದೆ.

ಪೋಷಕರಿಗೆ ಬಿಗ್ ಶಾಕ್ ➤ಶಾಲೆ ಮಕ್ಕಳ ನೋಟ್ಸ್ ಬುಕ್ ಬೆಲೆಯಲ್ಲಿ ಏರಿಕೆ..! Read More »

ಕರ್ನಾಟಕ

ಉಪ್ಪಿನಂಗಡಿ: ಆಟೋ ಚಾಲಕನಿಗೆ ಹಲ್ಲೆ ನಡೆಸಿ ತಂಡ ಪರಾರಿ    ➤ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಏ.28. ಓವರ್ ಟೇಕ್ ವಿಚಾರದಲ್ಲಿ ಜಗಳ ನಡೆದು ರಿಕ್ಷಾ ಚಾಲಕನ‌ ಮೇಲೆ ಕೇರಳ ನೋಂದಣಿಯ ಕಾರಿನಲ್ಲಿದ್ದ ತಂಡ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಕಡಬ ತಾಲೂಕಿನ ಅಡ್ಡಹೊಳೆ ಬಳಿ ಘಟನೆ ನಡೆದಿದೆ ಎನ್ನಲಾಗಿದೆ. ಶಿರಾಡಿ ಗ್ರಾಮದ ಪೆರುಮಜಲು ನಿವಾಸಿ ಆಟೋ ಚಾಲಕ ವಿಶ್ವನಾಥ್ ಈ ಕುರಿತು ದೂರು ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  

ಉಪ್ಪಿನಂಗಡಿ: ಆಟೋ ಚಾಲಕನಿಗೆ ಹಲ್ಲೆ ನಡೆಸಿ ತಂಡ ಪರಾರಿ    ➤ ಆಸ್ಪತ್ರೆಗೆ ದಾಖಲು Read More »

ಕರಾವಳಿ

ಪಿಯುಸಿಯಲ್ಲಿ ಅನುತ್ತೀರ್ಣವಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಏ.28. ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಇಬ್ಬರು ವಿದ್ಯಾರ್ಥಿನಿಯರು ವಿಷ ಸೇವಿಸಿದ್ದು, ಈ ಪೈಕಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು ಮತ್ತೊಬ್ಬಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಕಳಸ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಚಂದ್ರರಾಜಯ್ಯ ಅವರ ಪುತ್ರಿ ಸ್ಪರ್ಶ ಮೃತಳು. ಜೀವಶಾಸ್ತ್ರ ವಿಷಯದಲ್ಲಿ ಅನುತ್ತೀರ್ಣಳಾಗಿದ್ದ ಸ್ಪರ್ಶ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು.

ಪಿಯುಸಿಯಲ್ಲಿ ಅನುತ್ತೀರ್ಣವಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್​ ಅಧಿಕಾರಿ.! ➤ಅಧಿಕಾರಿ ಶಾಶ್ವತವಾಗಿ ಕೆಲಸದಿಂದ ವಜಾ..!

(ನ್ಯೂಸ್ ಕಡಬ)Newskadaba.com ಕೊಟ್ಟಾಯಂ,ಏ.28 ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ್ದ ಪೊಲೀಸ್​ ಅಧಿಕಾರಿಯನ್ನು ಶಾಶ್ವತವಾಗಿ ಕೆಲಸದಿಂದ ವಜಾಗೊಳಸಲಾಗಿದೆ. ಇಡುಕ್ಕಿ ಜಿಲ್ಲೆಯ ಪೊಲೀಸ್​ ಮುಖ್ಯಸ್ಥರು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ. ಶಿಹಾಬ್ ವಜಾಗೊಂಡ ಅಧಿಕಾರಿ. ಶಿಹಾಬ್​ ಇಡುಕ್ಕಿಯಲ್ಲಿರುವ ಎಆರ್​ ಕ್ಯಾಂಪ್​ನಲ್ಲಿ ಸಿವಿಲ್​ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇಡುಕ್ಕಿಯ ಪೊಲೀಸ್​ ವರಿಷ್ಠಾಧಿಕಾರಿ ವಿ.ಯು. ಕುರೈಕೂಸ್​ ಅವರು ಸೇವೆಯಿಂದ ಯಾಕೆ ವಜಾ ಮಾಡಬಾರದು ಎಂಬುದಕ್ಕೆ ವಿವರಣೆ ನೀಡುವಂತೆ ಈ ಹಿಂದೆ ನೋಟಿಸ್​ನಲ್ಲಿ ತಿಳಿಸಿದ್ದರು.       

ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್​ ಅಧಿಕಾರಿ.! ➤ಅಧಿಕಾರಿ ಶಾಶ್ವತವಾಗಿ ಕೆಲಸದಿಂದ ವಜಾ..! Read More »

ರಾಷ್ಟ್ರೀಯ ನ್ಯೂಸ್

ಮಣಿಪುರದ ಸಿಎಂ ಬಿರೇನ್‌ ಸಿಂಗ್‌ ಕಾರ್ಯಕ್ರಮದ ಸ್ಥಳಕ್ಕೆ ಗುಂಪು ದಾಳಿ      ➤ ಬೆಂಕಿ ಹಚ್ಚಿ ಧ್ವಂಸ

(ನ್ಯೂಸ್ ಕಡಬ)newskadaba.com ಮಣಿಪುರ, ಏ.28. ಮಣಿಪುರದ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಅವರು ಚುರಾಚಂದ್‌ಪುರ ಜಿಲ್ಲೆಯ ನ್ಯೂ ಲಮ್ಕಾದಲ್ಲಿ ಭಾಗವಹಿಸಲಿದ್ದ ಕಾರ್ಯಕ್ರಮವೊಂದರ ಸ್ಥಳವನ್ನು ಗುಂಪೊಂದು ಧ್ವಂಸಗೊಳಿಸಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಿರೇನ್ ಸಿಂಗ್ ಉದ್ಘಾಟಿಸಲಿರುವ ನ್ಯೂ ಲಮ್ಕಾದಲ್ಲಿರುವ ಪಿಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಹೊಸದಾಗಿ ಸ್ಥಾಪಿಸಲಾದ ತೆರೆದ ಜಿಮ್ ಅನ್ನು ಗುಂಪು ಭಾಗಶಃ ಸುಟ್ಟು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಮಣಿಪುರದ ಸಿಎಂ ಬಿರೇನ್‌ ಸಿಂಗ್‌ ಕಾರ್ಯಕ್ರಮದ ಸ್ಥಳಕ್ಕೆ ಗುಂಪು ದಾಳಿ      ➤ ಬೆಂಕಿ ಹಚ್ಚಿ ಧ್ವಂಸ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ವೈದ್ಯಕೀಯ ಸದಸ್ಯತ್ವ ಕೊಡಿಸುವುದಾಗಿ 5 ಲ.ರೂ. ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಏ.28. ವೈದ್ಯಕೀಯ ವಿಜ್ಞಾನ ಅಕಾಡೆಮಿಯ ಸದಸ್ಯತ್ವ ಕೊಡಿಸುವುದಾಗಿ ಹೇಳಿ 5 ಲ.ರೂ. ಪಡೆದು ಬಳಿಕ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ‘ಪೋಸ್ಟ್ ಗ್ರಾಜುವೇಟ್ ಅಕಾಡಮಿ ಆಫ್ ಮೆಡಿಕಲ್ ಸೈಯನ್ಸ್’ನಿಂದ ಮಾತನಾಡುತ್ತಿದ್ದು, ಫೆಲೋ ಆಫ್ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನಲ್ಲಿ ಸದಸ್ಯತ್ವ ಕೊಡಿಸುವುದಾಗಿ ಹೇಳಿ ಮೊದಲ ಹಂತದಲ್ಲಿ 1.50 ಲ.ರೂ ಪಾವತಿಸುವಂತೆ ಸೂಚಿಸಿದೆ. ಬಳಿಕ ಅಪರಿಚಿತ ವ್ಯಕ್ತಿಯು ಹಂತ ಹಂತವಾಗಿ 5 ಲ.ರೂ.

ಮಂಗಳೂರು: ವೈದ್ಯಕೀಯ ಸದಸ್ಯತ್ವ ಕೊಡಿಸುವುದಾಗಿ 5 ಲ.ರೂ. ವಂಚನೆ Read More »

ಕರಾವಳಿ
Scroll to Top