News Kadaba

ಮಂಗಳೂರು: ಮೇ. 4ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು

(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ 04. ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಳೆಯಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.  

ಮಂಗಳೂರು: ಮೇ. 4ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು Read More »

ಕರಾವಳಿ

ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಇಳಿಕೆ..!

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.04 ಜನಸಾಮಾನ್ಯರಿಗೆ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ಮೂರು ವಾರಗಳಲ್ಲಿ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಕಡಿಮೆಯಾಗಲಿದೆ. ಬ್ರ್ಯಾಂಡ್ ಗಳ ಅನುಸಾರ ಗರಿಷ್ಠ 10 ರೂಪಾಯಿವರೆಗೆ ದರ ಇಳಿಕೆಯಾಗಲಿದ್ದು, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ.ಇದು ಹಣದುಬ್ಬರ ಇಳಿಕೆಗೂ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಜಾಗತಿಕ ಮಾರುಕಟ್ಟೆ ದರಗಳಿಗೆ ಅನುಸಾರ ದೇಶದಲ್ಲಿ ರಿಟೇಲ್ ದರ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಖಾದ್ಯ ತೈಲ ಕಂಪನಿಗಳು ದರ ಇಳಿಕೆಗೆ ಮುಂದಾಗಿವೆ.      

ಜನಸಾಮಾನ್ಯರಿಗೆ ಭರ್ಜರಿ ಗುಡ್ ನ್ಯೂಸ್ ಅಡುಗೆ ಎಣ್ಣೆ ದರ ಶೇಕಡ 6 ರಷ್ಟು ಇಳಿಕೆ..! Read More »

ರಾಷ್ಟ್ರೀಯ ನ್ಯೂಸ್

ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪೊಲೀಸ್ ಪೇದೆ..! ➤ಕಣ್ಣೀರು ಹಾಕಿದ ಕುಸ್ತಿಪಟುಗಳು

(ನ್ಯೂಸ್ ಕಡಬ)Newskadaba.com ದೆಹಲಿ,ಮೇ.04 ತಡರಾತ್ರಿ ಜಂತರ್ ಮಂತರ್ ನಲ್ಲಿ ದೆಹಲಿ ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕುಡಿದ ಮತ್ತಿನಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸ್ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಕುಸ್ತಿಪಟುಗಳು ಕಣ್ಣೀರಿಟ್ಟರು. ಈ ವಿಷಯದ ಬಗ್ಗೆ ವಿನೇಶ್ ಫೋಗಟ್ ಕಣ್ಣೀರಾಕಿದ್ದಾರೆ. ದೆಹಲಿ ಪೊಲೀಸರು ನಮ್ಮೊಂದಿಗೆ ನಡೆದುಕೊಂಡ ರೀತಿ ದುಃಖಕರವಾಗಿದೆ. ನಾವು ಅಪರಾಧಿಗಳಲ್ಲ, ಇಂತಹ ದಿನಗಳನ್ನು ನೋಡೋದಕ್ಕಾ ನಾವು ಪದಕಗಳನ್ನು ಗೆದ್ದಿದ್ದು ಎಂದು ಕಣ್ಣೀರು ಹಾಕಿದರು. ಕುಡಿತದ ಅಮಲಿನಲ್ಲಿ ಪೊಲೀಸರು ಮಹಿಳೆಯರೆಂಬುದನ್ನೂ

ಮದ್ಯದ ಅಮಲಿನಲ್ಲಿ ಅನುಚಿತವಾಗಿ ವರ್ತಿಸಿದ ಪೊಲೀಸ್ ಪೇದೆ..! ➤ಕಣ್ಣೀರು ಹಾಕಿದ ಕುಸ್ತಿಪಟುಗಳು Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಮೈನಾ ಸದಾನಂದ ಶೆಟ್ಟಿ ಇನ್ನಿಲ್ಲ..!

(ನ್ಯೂಸ್ ಕಡಬ)Newskadaba.com ಮಂಗಳೂರು,ಮೇ.04 ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಖ್ಯಾತ ಹೋಟೆಲ್ ಉದ್ಯಮಿ, ಇಂಟರ್‌ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎ. ಸದಾನಂದ ಶೆಟ್ಟಿ ಅವರ ಪತ್ನಿ ಮುಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ (75) ಅವರು ಅಲ್ಪ ಕಾಲದ ಆಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮುಲ್ಕಿ ಕುಬೆವೂರು ದೊಡ್ಡಮನೆಯ ಕುಟುಂಬ ಸ್ನೇಹ ಮಿಲನ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದ್ದರು. ಬೆಂಗಳೂರು, ಮಂಗಳೂರಿನಲ್ಲಿ

ಮಂಗಳೂರು: ಮೈನಾ ಸದಾನಂದ ಶೆಟ್ಟಿ ಇನ್ನಿಲ್ಲ..! Read More »

ಕರಾವಳಿ

ವಿಧಾನಸಭಾ ಚುನಾವಣೆ ಹಿನ್ನಲೆ ➤ ಮೇ 9-10 ರಂದು ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ 04.  ವಿಧಾನಸಭಾ ಚುಣಾವಣೆ ಹಿನ್ನಲೆಯಲ್ಲಿ ಮೇ 9 ಮತ್ತು 10ರಂದು ನಿಗಮದ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ದೂರದ ಊರಿಗೆ ಪ್ರಯಾಣಿಸುವವರು, ಮುಂಚಿತವಾಗಿ ಹಂತಹಂತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಯೋಜಿಸಿಕೊಂಡು ನಿಗಮದ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನಲೆ ➤ ಮೇ 9-10 ರಂದು ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ Read More »

ಕರಾವಳಿ, ಕರ್ನಾಟಕ

ಬೆಂಗಳೂರಿನಲ್ಲಿ ಮಳೆ ಅವಾಂತರ..! ➤ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸೋರಿಕೆ

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.04 ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸೋರಿಕೆ ಉಂಟಾಗಿತ್ತು. ಇತ್ತೀಚೆಗಷ್ಟೇ ಈ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ನೀರು ಸೋರಿಕೆಯಾಗಿರುವುದಕ್ಕೆ ಭಾರೀ ಆಕ್ರೋಶ ಉಂಟಾಗಿದೆ. ಟರ್ಮಿನಲ್‌ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನೆಟಿಜನ್‌ಗಳು ರೂ 5,000 ಕೋಟಿ ಟರ್ಮಿನಲ್‌ನ “ನೈಜ ಮೌಲ್ಯ” ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಕೇವಲ

ಬೆಂಗಳೂರಿನಲ್ಲಿ ಮಳೆ ಅವಾಂತರ..! ➤ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸೋರಿಕೆ Read More »

ಕರ್ನಾಟಕ

ಧರ್ಮಸ್ಥಳದಲ್ಲಿ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ➤ 201 ಜೋಡಿ ವಧು-ವರರು ಹೊಸ ಜೀವನಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com, ಉಜಿರೆ , ಮೇ 04.  ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬುಧವಾರ ಸಂಜೆ ಗಂಟೆ 6.40 ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ನಡೆದ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 201 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಭವ್ಯ ಮೆರವಣಿಗೆಯಲ್ಲಿ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾಭವನಕ್ಕೆ ತೆರಳಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಚಲನಚಿತ್ರ ನಟ ದರ್ಶನ್ ತೂಗುದೀಪ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್

ಧರ್ಮಸ್ಥಳದಲ್ಲಿ 51ನೆ ವರ್ಷದ ಉಚಿತ ಸಾಮೂಹಿಕ ವಿವಾಹ ➤ 201 ಜೋಡಿ ವಧು-ವರರು ಹೊಸ ಜೀವನಕ್ಕೆ ಪಾದಾರ್ಪಣೆ Read More »

ಕರಾವಳಿ

ಬಿಜೆಪಿ ನಂಟು ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಬೆಂಬಲಿಗರು..!

(ನ್ಯೂಸ್ ಕಡಬ)Newskadaba.com ಹುಬ್ಬಳ್ಳಿ,ಮೇ.04 ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್‌ ಅಸಮಾಧಾನದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಭರ್ಜರಿ ಪ್ರಚಾರ ಕೂಡ ನಡೆಸಿದ್ದಾರೆ. ಇದೀಗ ಬಿಜೆಪಿಗೆ ಮತ್ತೊಂದು ಆಘಾತವಾಗಿದ್ದು, ಜಗದೀಶ್ ಶೆಟ್ಟರ್ ನೂರಾರು ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.      

ಬಿಜೆಪಿ ನಂಟು ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಬೆಂಬಲಿಗರು..! Read More »

ಕರ್ನಾಟಕ

ಸಿದ್ದರಾಮಯ್ಯರನ್ನು ಸೋಲಿಸಲು ವರುಣಾದಲ್ಲಿ ದೊಡ್ಡ ಪಿತೂರಿ ನಡೆಯುತ್ತಿದೆ..! ➤ ಎಂಎಲ್ ಸಿ ವಿಶ್ವನಾಥ್

(ನ್ಯೂಸ್ ಕಡಬ)Newskadaba.com ಮೈಸೂರು,ಮೇ.04  ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ದೊಡ್ಡ ಪಿತೂರಿ ನಡೆಸುತ್ತಿದೆ ಎಂದು ಎಂಎಲ್’ಸಿ ವಿಶ್ವನಾಥ್ ಅವರು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ, ಚುನಾವಣೆಗೆ ಒಂದೆರಡು ದಿನ ಬಾಕಿ ಇರುವಾಗಲೆ ದಲಿತ ಹುಡುಗನ ಹತ್ಯೆ ಮಾಡಿ ಅದನ್ನು ಕುರುಬರ ತಲೆಗೆ ಕಟ್ಟುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.  

ಸಿದ್ದರಾಮಯ್ಯರನ್ನು ಸೋಲಿಸಲು ವರುಣಾದಲ್ಲಿ ದೊಡ್ಡ ಪಿತೂರಿ ನಡೆಯುತ್ತಿದೆ..! ➤ ಎಂಎಲ್ ಸಿ ವಿಶ್ವನಾಥ್ Read More »

ಕರ್ನಾಟಕ

ಕೋಡಿ ಮಠದ ಶ್ರೀಗಳನ್ನು ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ…!

(ನ್ಯೂಸ್ ಕಡಬ)Newskadaba.com ಹಾಸನ,ಮೇ.04 ವಿಧಾನಸಭೆ ಚುನಾವಣೆ ಹೊತ್ತಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಡಿ ಮಠದ ಶ್ರೀಗಳನ್ನು ಭೇಟಿಯಾಗಿದ್ದಾರೆ.ಅರಸೀಕೆರೆ ತಾಲೂಕಿನ ಕೋಡಿಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಒಂದು ಗಂಟೆಗೂ ಹೆಚ್ಚು ಕಾಲ ಕೋಡಿಮಠದ ಶ್ರೀಗಳ ಜೊತೆ ಮಾತುಕತೆ ನಡೆಸಿದ್ದು ಶ್ರೀಗಳು ನುಡಿದ ಭವಿಷ್ಯದ ಬಗ್ಗೆ ಕುತೂಹಲ ಮೂಡಿದೆ. ಒಂದು ಗಂಟೆ ಚರ್ಚೆ ಬಳಿಕ ಶ್ರೀಗಳ ಆಶೀರ್ವಾದ ಪಡೆದು ಸಿದ್ದರಾಮಯ್ಯ ಖುಷಿಯಾಗಿ ಹೊರ ಬಂದಿದ್ದಾರೆ. ಸಿದ್ದುಗೆ ಹಾರ ಹಾಕಿ ಸನ್ಮಾನ ಮಾಡಿ ಶುಭ ಹಾರೈಸಿ ಶ್ರೀಗಳು ಕಳುಹಿಸಿದ್ದಾರೆ. ರಾಜಕೀಯ ಭವಿಷ್ಯ ನುಡಿಯುವ

ಕೋಡಿ ಮಠದ ಶ್ರೀಗಳನ್ನು ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ…! Read More »

ಕರ್ನಾಟಕ
Scroll to Top