ವಿಧಾನಸಭಾ ಚುನಾವಣೆ ಹಿನ್ನಲೆ ➤ ಮೇ 9-10 ರಂದು ಕೆಎಸ್ ಆರ್ ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ

(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ 04.  ವಿಧಾನಸಭಾ ಚುಣಾವಣೆ ಹಿನ್ನಲೆಯಲ್ಲಿ ಮೇ 9 ಮತ್ತು 10ರಂದು ನಿಗಮದ ಸಾರಿಗೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಹೀಗಾಗಿ ದೂರದ ಊರಿಗೆ ಪ್ರಯಾಣಿಸುವವರು, ಮುಂಚಿತವಾಗಿ ಹಂತಹಂತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ಯೋಜಿಸಿಕೊಂಡು ನಿಗಮದ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್ ಆರ್ ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top