News Kadaba

ಪಾಕ್‌ಗೆ ಗುಪ್ತ ಮಾಹಿತಿ ರವಾನೆ ➤ ರಕ್ಷಣಾ ಸಂಸ್ಥೆಯ ವಿಜ್ಞಾನಿಯ ಬಂಧನ

(ನ್ಯೂಸ್ ಕಡಬ) newskadaba.com. ಮುಂಬೈ, ಮೇ.5. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿಯೊಬ್ಬ ತನ್ನ ಎಲ್ಲಾ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್‍ಗೆ ನೀಡಿರುವ ಆರೋಪದ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದ್ದಾರೆ. ವಾಟ್ಸಾಪ್ ಮತ್ತು ವೀಡಿಯೊ ಕರೆಗಳ ಮೂಲಕ ಪಾಕಿಸ್ತಾನ ಗುಪ್ತಚರ ಏಜೆಂಟ್‍ನೊಂದಿಗೆ ಸಂಪರ್ಕದಲ್ಲಿದ್ದು ಹನಿಟ್ರ್ಯಾಪ್ ಮೂಲಕ ಆರೋಪಿಯನ್ನು ಬೆದರಿಸಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದ್ದು, ಈ ಎಲ್ಲಾ ಮಾಹಿತಿಗಳು ತನಿಖೆಯ ನಂತರ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಾಕಿಸ್ತಾನಿ ದೇಶಗಳಿಗೆ ತನ್ನ […]

ಪಾಕ್‌ಗೆ ಗುಪ್ತ ಮಾಹಿತಿ ರವಾನೆ ➤ ರಕ್ಷಣಾ ಸಂಸ್ಥೆಯ ವಿಜ್ಞಾನಿಯ ಬಂಧನ Read More »

ಕ್ರೈಮ್ ನ್ಯೂಸ್

ಸುಳ್ಯದಲ್ಲಿ ಕಳ್ಳರ ಕೈಚಳಕ ➤20 ಲಕ್ಷ ಮೌಲ್ಯದ ಸೊತ್ತು ದೋಚಿ ಪರಾರಿ

(ನ್ಯೂಸ್ ಕಡಬ) newskadaba.com. ಸುಳ್ಯ, ಮೇ.5. ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಶಂಶುದ್ದೀನ್ ಅವರ ಮನೆಗೆ ನುಗ್ಗಿದ ಕಳ್ಳರು 20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ. ಶಂಶುದ್ದೀನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕುಟುಂಬ ಸಮೇತ ಮಂಗಳೂರಿಗೆ ಹೋಗಿ ರಾತ್ರಿ 9.45ರ ಸುಮಾರಿಗೆ ಮನೆಗೆ ಮರಳಿದ್ದರು. ಮನೆಯ ಮುಂಬಾಗಿಲು ಮುರಿದಿರುವುದನ್ನು ಕುಟುಂಬದವರು ಗಮನಿಸಿ ಒಳಗೆ ಹೋಗಿ ಪರಿಶೀಲಿಸಿದಾಗ ಕಪಾಟುಗಳೂ ಒಡೆದಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು14 ಬ್ರಾಂಡ್ ವಾಚ್‌ಗಳು, 20 ಚಿನ್ನದ ಉಂಗುರಗಳು, ಮೂರು ಪೆಂಡೆಂಟ್‌ಗಳು,

ಸುಳ್ಯದಲ್ಲಿ ಕಳ್ಳರ ಕೈಚಳಕ ➤20 ಲಕ್ಷ ಮೌಲ್ಯದ ಸೊತ್ತು ದೋಚಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ…! ➤ಲಖ್ನೋದಲ್ಲಿ ಪತ್ತೆ…!

(ನ್ಯೂಸ್ ಕಡಬ)Newskadaba.com ಉತ್ತರ ಪ್ರದೇಶ,ಮೇ.05  ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಯುವಕನೊಂದಿಗೆ ಉತ್ತರ ಪ್ರದೇಶದ ಲಖ್ನೋದಲ್ಲಿ ಪತ್ತೆಯಾಗಿದ್ದಾರೆ.ಡಿವೈಎಸ್ಪಿ ಪಿ.ಕೆ ಸುಧಾಕರನ್ ನೇತೃತ್ವದ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಜೋಡಿಯನ್ನು ಉತ್ತರಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಬಳಿಕ ಇಬ್ಬರನ್ನೂ ಕಾಸರಗೋಡಿಗೆ ಕರೆತರಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ಪಾವೂರು ಮೂಲದ ಸದ್ಯ ಮಂಜೇಶ್ವರದ ಫ್ಲಾಟ್ನಲ್ಲಿ ವಾಸಿಸುತ್ತಿರುವ ಕುಂಞಿಬಿ ಅಲಿಯಾಸ್ ಝಾಹಿದಾ (33) ಉತ್ತರ ಪ್ರದೇಶದ ಯುವಕನೊಂದಿಗೆ ಪತ್ತೆಯಾದ ಮಹಿಳೆಯಾಗಿದ್ದಾರೆ.    

ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ…! ➤ಲಖ್ನೋದಲ್ಲಿ ಪತ್ತೆ…! Read More »

ರಾಷ್ಟ್ರೀಯ ನ್ಯೂಸ್

ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ವಕೀಲ ಎಂ.ಅಶೋಕನ್‌ ಮೃತದೇಹ ಪತ್ತೆ…!

(ನ್ಯೂಸ್ ಕಡಬ)Newskadaba.com ಕಾಸರಗೋಡು,ಮೇ.05 ಸಂಘಪರಿವಾರದಿಂದ ಹತ್ಯೆಗೀಡಾಗಿದ್ದ ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ಸ್ಪೆಷಲ್‌ ಪ್ರಾಸಿಕ್ಯೂಟರ್ ನಿಗೂಢವಾಗಿ ಮೃತಪಟ್ಟಿದ್ದು, ಅವರ ಮೃತದೇಹ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಪತ್ತೆಯಾಗಿದೆ. ಕಲ್ಲಿಕೋಟೆ ಐಎಂಎ ಹಾಲ್‌ ರಸ್ತೆ ನಡಕ್ಕಾವು ಮೂಲದ ಖ್ಯಾತ ವಕೀಲ ಎಂ.ಅಶೋಕನ್‌ ಅವರು ನಿಗೂಢವಾಗಿ ಮೃತಪಟ್ಟಿದ್ದು, ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ.ನ್ಯಾ| ಅಶೋಕನ್ ಅವರು ಪ್ರಕರಣವೊಂದರಲ್ಲಿ ವಾದಿಸಲು ಎರ್ನಾಕುಳಂ ಜಿಲ್ಲೆಯ ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿ ಅವರು ಫ್ಲ್ಯಾಟೊಂದರಲ್ಲಿ ತಂಗಿದ್ದು, ನಿಗೂಢವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.      

ರಿಯಾಝ್ ಮೌಲವಿ ಪರ ವಾದಿಸುತ್ತಿದ್ದ ವಕೀಲ ಎಂ.ಅಶೋಕನ್‌ ಮೃತದೇಹ ಪತ್ತೆ…! Read More »

ರಾಷ್ಟ್ರೀಯ ನ್ಯೂಸ್

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಯ ‘ಶುಲ್ಕ ಪಾವತಿ’ಗೆ ಅವಧಿ ವಿಸ್ತರಣೆ.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಮೇ.05  ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಮೇ.22ರಿಂದ ಆರಂಭಗೊಂಡು, ಜೂನ್ 5ರವರೆಗೆ ನಡೆಯಲಿದೆ. ಇಂತಹ 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಪರೀಕ್ಷಾ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಸುತ್ತೋಲೆ ಹೊರಡಿಸಲಾಗಿದೆ. 2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸಲು ದಿನಾಂಕ 02-05-2023ವರೆಗೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳು, ಪೋಷಕರ ಮನವಿಯ ಮೇರೆಗೆ ಪರೀಕ್ಷಾ ಶುಲ್ಕವನ್ನು ಪಾವತಿಸಲು ದಿನಾಂಕ 04-05-2023ರಿಂದ 06-05-2023ರವರೆಗೆ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤2023ರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಯ ‘ಶುಲ್ಕ ಪಾವತಿ’ಗೆ ಅವಧಿ ವಿಸ್ತರಣೆ.! Read More »

ಕರ್ನಾಟಕ

ಬಸ್ ಹಾಗೂ ಕಾರು ಮಖಾಮುಖಿ ಡಿಕ್ಕಿ.! ➤ ಮೂವರು ಮೃತ್ಯು

(ನ್ಯೂಸ್ ಕಡಬ)Newskadaba.com ಯಾದಗಿರಿ,ಮೇ.05 ರಾಜ್ಯ ಹೆದ್ದಾರಿಯ ಮೂಡಬೂಳ ಕ್ರಾಸ್ ಹತ್ತಿರ ಬಸ್ ಹಾಗೂ ಕಾರಿನ ನಡುವೆ ಮಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಅಸುನೀಗಿದ್ದಾರೆ.ಸುರಪುರ ತಾಲ್ಲೂಕಿನ ರಂಗಂಪೇಟ ಗ್ರಾಮದ ನಾಗರಾಜ ಸಿದ್ದಣ್ಣ ಸಜ್ಜನ (60), ಮಹಾದೇವಿ ನಾಗರಾಜ ಸಜ್ಜನ (55), ಗ್ರಾಮದವರೇ ಆದ ರೇಣುಕಾ ನಾರಾಯಣರಾವ್ ಪಾಡಮುಖಿ (62) ಮೃತಪಟ್ಟವರು. ಕಲಬುರಗಿಯಲ್ಲಿ ಸ್ನೇಹಿತನ ಮಗನ ಮದುವೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಪತ್ನಿಯೊಂದಿಗೆ ಕಾರು ಚಲಾಯಿಸಿಕೊಂಡು ನಾಗರಾಜ ಆಗಮಿಸುತ್ತಿದ್ದರು. ತಾಲ್ಲೂಕಿನ ಮುಡಬೂಳ ಕ್ರಾಸ್ ಬಳಿ ಶಹಾಪುರದಿಂದ ಕಲಬುರಗಿಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ

ಬಸ್ ಹಾಗೂ ಕಾರು ಮಖಾಮುಖಿ ಡಿಕ್ಕಿ.! ➤ ಮೂವರು ಮೃತ್ಯು Read More »

ಕರ್ನಾಟಕ

ಮನೆಯಿಂದಲೇ ಮತದಾನ ಮಾಡಿದ 82ರ ವೃದ್ಧೆ ➤ ಮತದಾನ ಮಾಡಿ ಅರ್ಧ ಗಂಟೆಯಲ್ಲಿ ಮೃತ್ಯು.!

(ನ್ಯೂಸ್ ಕಡಬ)Newskadaba.com ರಾಯಚೂರು,ಮೇ.05 ಮನುಷ್ಯನಿಗೆ ಸಾವು ಯಾವಾಗ ಬರುತ್ತದೆ ಎಂದು ಹೇಳುವುದೇ ಕಷ್ಟ. ಅದರಲ್ಲೂ ಅನಾರೋಗ್ಯ ಹೊಂದಿರುವ ವಯೋವೃದ್ಧರು ತಮ್ಮ ಅಂತಿಮ ದಿನ ಎಣಿಸುತ್ತಿರುತ್ತಾರೆ. ಇಲ್ಲೊಬ್ಬ ವೃದ್ಧೆ ಮತದಾನ ಮಾಡಿ ಕೇವಲ ಅರ್ಧ ಗಂಟೆಯಲ್ಲಿಯೇ ಮೃತಪಟ್ಟಿದ್ದಾರೆ. ವಿಧಾನಸಭೆ ಚುಣಾವಣೆ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿಲಾಗಿತ್ತು.ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅರ್ಧ ಗಂಟೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಅಲಬನೂರು ಗ್ರಾಮದಲ್ಲಿ ನಡೆದಿದೆ.ಮಂಗಮ್ಮ ರಾಜಪ್ಪ (82) ಮತದಾನ ಮಾಡಿ ಮೃತಪಟ್ಟವರು.    

ಮನೆಯಿಂದಲೇ ಮತದಾನ ಮಾಡಿದ 82ರ ವೃದ್ಧೆ ➤ ಮತದಾನ ಮಾಡಿ ಅರ್ಧ ಗಂಟೆಯಲ್ಲಿ ಮೃತ್ಯು.! Read More »

ಕರ್ನಾಟಕ

ನೇಣು ಬಿಗಿದುಕೊಂಡು ಅಪ್ರಾಪ್ತ ವಯಸ್ಸಿನ ಪ್ರೇಮಿಗಳಿಬ್ಬರು ಆತ್ಮಹತ್ಯೆ.! ➤ದೂರು ದಾಖಲು

(ನ್ಯೂಸ್ ಕಡಬ)Newskadaba.com ವಿಜಯಪುರ,ಮೇ.05 ಹದಿಹರೆಯದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡಗುಂದಿ ಪಟ್ಟಣದ ಅಂಗಡಗೇರಿ ಎಂಬಲ್ಲಿ ನಡೆದಿದೆ. ಸಚಿನ್ ಮಾದರ(17) ಮತ್ತು ಸಕ್ಕುಬಾಯಿ ಮಾದರ(15) ಮೃತಪಟ್ಟವರು. ಸಚಿನ್ ಮತ್ತು ಸಕ್ಕುಬಾಯಿ ಮನೆಯಿಂದ ಹೊರಹೋಗುವುದಾಗಿ ತೆರಳಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ತನಿಖೆ ಬಳಿಕ ಆತ್ಮಹತ್ಯೆಗೆ ಕಾರಣ ಬಹಿರಂಗವಾಗಲಿದೆ. ಈ ಕುರಿತು ಕೂಡಗಿ ಎನ್​ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್

ನೇಣು ಬಿಗಿದುಕೊಂಡು ಅಪ್ರಾಪ್ತ ವಯಸ್ಸಿನ ಪ್ರೇಮಿಗಳಿಬ್ಬರು ಆತ್ಮಹತ್ಯೆ.! ➤ದೂರು ದಾಖಲು Read More »

ಕರ್ನಾಟಕ

ಮನೆಗೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ.! ➤ಆರೋಪಿ ಆರೆಸ್ಟ್

(ನ್ಯೂಸ್ ಕಡಬ)Newskadaba.com ಗದಗ,ಮೇ.05 ಗದಗ ನಗರದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ಮನೆಗೆ ನುಗ್ಗಿ ಮೊಹಮ್ಮದ್ ಹುಸೇನ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ. ಹುಸೇನ್ ಎಂಬುವವರ ಹೊಟ್ಟೆಗೆ ನಾಲ್ಕರಿಂದ ಐದು ಬಾರಿ ಕೆಂಚಪ್ಪ ಎಂಬಾತ ಚಾಕುವಿನಿಂದ ಇರಿದಿದ್ದಾನೆ.ಆರೋಪಿ ಕೆಂಚಪ್ಪನನ್ನು ಗದಗ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.  

ಮನೆಗೆ ನುಗ್ಗಿ ಅಪರಿಚಿತ ವ್ಯಕ್ತಿಯಿಂದ ಚಾಕು ಇರಿತ.! ➤ಆರೋಪಿ ಆರೆಸ್ಟ್ Read More »

ಕರ್ನಾಟಕ

ಬೈಕ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ.! ➤ಯೂಟ್ಯೂಬರ್ ದುರಂತ ಅಂತ್ಯ

(ನ್ಯೂಸ್ ಕಡಬ)Newskadaba.com ನವದೆಹಲಿ,ಮೇ.05 ಯೂಟ್ಯೂಬ್​ ವಿಡಿಯೋಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬೈಕ್​ ಓಡಿಸುವಾಗ ನಿಯಂತ್ರಣ ತಪ್ಪಿ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ ಯೂಟ್ಯೂಬರ್​ ದುರಂತ ಸಾವಿಗೀಡಾಗಿರುವ ಘಟನೆ ಯುಮುನಾ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ. ಮೃತ ಯೂಟ್ಯೂಬರ್​ನನ್ನು ಅಗಸ್ತ್ಯ ಚೌಹಾಣ್​ (22) ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡದ ಡೆಹ್ರಾಡೂನ್​ನ ಕನ್ನಾಟ್ ಪ್ಲೇಸ್ ನಿವಾಸಿ. ಬೈಕ್​ ರೈಡರ್​ ಹಾಗೂ ಯೂಟ್ಯೂಬರ್​​ ಆಗಿದ್ದ. ಈತ ವೃತ್ತಿಪರ ಬೈಕರ್​ ಆಗಿದ್ದ. ಆದರೆ, ದುರಾದೃಷ್ಟವಶಾತ್​ ಅದೇ ಬೈಕ್​ನಿಂದ ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

ಬೈಕ್ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ.! ➤ಯೂಟ್ಯೂಬರ್ ದುರಂತ ಅಂತ್ಯ Read More »

ರಾಷ್ಟ್ರೀಯ ನ್ಯೂಸ್
Scroll to Top