ನೇಣು ಬಿಗಿದುಕೊಂಡು ಅಪ್ರಾಪ್ತ ವಯಸ್ಸಿನ ಪ್ರೇಮಿಗಳಿಬ್ಬರು ಆತ್ಮಹತ್ಯೆ.! ➤ದೂರು ದಾಖಲು

(ನ್ಯೂಸ್ ಕಡಬ)Newskadaba.com ವಿಜಯಪುರ,ಮೇ.05 ಹದಿಹರೆಯದ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಡಗುಂದಿ ಪಟ್ಟಣದ ಅಂಗಡಗೇರಿ ಎಂಬಲ್ಲಿ ನಡೆದಿದೆ. ಸಚಿನ್ ಮಾದರ(17) ಮತ್ತು ಸಕ್ಕುಬಾಯಿ ಮಾದರ(15) ಮೃತಪಟ್ಟವರು. ಸಚಿನ್ ಮತ್ತು ಸಕ್ಕುಬಾಯಿ ಮನೆಯಿಂದ ಹೊರಹೋಗುವುದಾಗಿ ತೆರಳಿದ್ದಾರೆ.

ಬಳಿಕ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ತನಿಖೆ ಬಳಿಕ ಆತ್ಮಹತ್ಯೆಗೆ ಕಾರಣ ಬಹಿರಂಗವಾಗಲಿದೆ. ಈ ಕುರಿತು ಕೂಡಗಿ ಎನ್​ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

 

 

 

Scroll to Top