News Kadaba

ಮಂಗಳೂರು: ಬಾಲಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ ಬಿರುವೆರ್ ಕುಡ್ಲ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.18. ಫ್ರೆಂಡ್ಸ್ ಬಳ್ಳಾಲ್‍ಬಾಗ್ ಬಿರುವೆರ್ ಕುಡ್ಲ ಇದರ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ನೇತೃತ್ವದಲ್ಲಿ 2 ವರ್ಷದ ಬಾಲಕನಿಗೆ 50,000 ರೂಪಾಯಿ ವೈದ್ಯಕೀಯ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ಮೇ 17 ರಂದು ಬುಧವಾರ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಕುಪ್ಪೆ ಪದವಿನ ಜಯಶೀಲ ಮತ್ತು ಸದಾಶಿವ ಆಚಾರ್ಯ ಅವರ ಪುತ್ರ ಎರಡು ವರ್ಷದ ಬಾಲಕನ ಚಿಕಿತ್ಸೆಗಾಗಿ 50,000 ರೂಪಾಯಿಗಳ ಚೆಕ್ ಅನ್ನು ಕ್ಷೇತ್ರದ ಮೊಕ್ತೇಸರ ಸಾಯಿರಾಮ್ ಹಸ್ತಾಂತರಿಸಿ ಬಿರುವೆರ್ ಕುಡ್ಲ […]

ಮಂಗಳೂರು: ಬಾಲಕನಿಗೆ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿದ ಬಿರುವೆರ್ ಕುಡ್ಲ Read More »

ಕರಾವಳಿ

ಬಸ್ ಗೆ ಟ್ರಕ್ ವಾಹನ ಡಿಕ್ಕಿ.!➤ನಾಲ್ವರು ಮೃತ್ಯು,14 ಮಂದಿಗೆ ಗಾಯ

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ,ಮೇ.18 ಬಸ್-ಟ್ರಕ್ ಡಿಕ್ಕಿಯಾಗಿದ್ದು, 4 ಜನ ಮೃತಪಟ್ಟಿದ್ದು, 14 ಜನರು ಗಾಯಗೊಂಡಿರುವ ಭೀಕರವಾದ ಅಪಘಾತ ಶಾಜಾಪುರ ಜಿಲ್ಲೆಯಲ್ಲಿ ನಡೆದಿದೆ.ಅಪಘಾತದಲ್ಲಿ 4 ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಿಂದ ಅಹಮದಾಬಾದ್‌ಗೆ ಮದುವೆ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಮುಂಜಾನೆ 5 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಅಪ್ರಾಪ್ತರು ಸೇರಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಉಜ್ಜಯಿನಿಗೆ ರವಾನಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಲಾಗಿದೆ ಎಂದು ಪೊಲೀಸರು

ಬಸ್ ಗೆ ಟ್ರಕ್ ವಾಹನ ಡಿಕ್ಕಿ.!➤ನಾಲ್ವರು ಮೃತ್ಯು,14 ಮಂದಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಕಂಬಳ ಬಗ್ಗೆ ಸುಪ್ರೀಂಕೋರ್ಟ್‌‌ನಿಂದ ಮಹತ್ವದ ತೀರ್ಪು ➤ ಕರಾವಳಿಗರಿಗೆ ಹರ್ಷ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.18. ಕಂಬಳ ಹಾಗೂ ಜಲ್ಲಿಕಟ್ಟು ಸ್ಪರ್ಧೆಗೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂಕೋರ್ಟ್​ ಎತ್ತಿಹಿಡಿದಿದೆ. ಇದರೊಂದಿಗೆ ಇನ್ನುಮುಂದೆ ಕರ್ನಾಟಕದಲ್ಲಿ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳವು ಯಾವುದೇ ಅಡೆ-ತಡೆಗಳಿಲ್ಲದೆ ನಡೆಯಲಿದೆ. ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನಗಾಡಿ ಓಟಕ್ಕೆ ಅನುಮತಿ ನೀಡುವ ಕಾನೂನುಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​ನ ಸಂವಿಧಾನಪೀಠ ವಜಾಗೊಳಿಸಿದೆ.  

ಕಂಬಳ ಬಗ್ಗೆ ಸುಪ್ರೀಂಕೋರ್ಟ್‌‌ನಿಂದ ಮಹತ್ವದ ತೀರ್ಪು ➤ ಕರಾವಳಿಗರಿಗೆ ಹರ್ಷ Read More »

ರಾಷ್ಟ್ರೀಯ ನ್ಯೂಸ್

ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿದ ಸಿದ್ಧು, ಡಿಕೆಶಿ ➤ 30-30 ತಿಂಗಳು ಸಿಎಂ ಪಟ್ಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.18. ಕರ್ನಾಟಕ ಸಿಎಂ ಆಯ್ಕೆ ಅಂತಿಮ ಹಂತಕ್ಕೆ ಬಂದು ನಿಂತಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ಧರಾಮಯ್ಯ ಆಯ್ಕೆಯಾಗಿದ್ದರೆ, ಡಿಕೆ ಶಿವಕುಮಾರ್ ಗೆ ಉಪ ಮುಖ್ಯಮಂತ್ರಿ ಪಟ್ಟ ದೊರೆತಿದೆ. ಈ ಆಯ್ಕೆ ನಡೆದಿರೋದು ಅಧಿಕಾರ ಹಂಚಿಕೆ ಸೂತ್ರದಿಂದ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಕ್ಕೆ ಸ್ಪಷ್ಟ ಬಹುಮತ ವಿಧಾನಸಭಾ ಚುನಾವಣೆಯಲ್ಲಿ ಬಂದು ಐದು ದಿನಗಳ ನಂತ್ರ, ಇಂದು ಕರ್ನಾಟಕ ಸಿಎಂ ಆಯ್ಕೆ ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳಿಂದ ಸಿಎಂ ಹುದ್ದೆಗಾಗಿ ನಡೆಯುತ್ತಿದ್ದಂತ

ಅಧಿಕಾರ ಹಂಚಿಕೆ ಸೂತ್ರಕ್ಕೆ ಒಪ್ಪಿದ ಸಿದ್ಧು, ಡಿಕೆಶಿ ➤ 30-30 ತಿಂಗಳು ಸಿಎಂ ಪಟ್ಟ Read More »

ಕರ್ನಾಟಕ

ವಿಮಾನ ಪತನಗೊಂಡು ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ➤ಸುರಕ್ಷಿತವಾಗಿ ದಟ್ಟ ಕಾಡೊಂದರಲ್ಲಿ ಪತ್ತೆ.!

(ನ್ಯೂಸ್ ಕಡಬ)newskadaba.com ಕೊಲಂಬಿಯಾ,ಮೇ.18  ವಿಮಾನ ಅಪಘಾತವಾಗಿ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಸುರಕ್ಷಿತವಾಗಿ ದಟ್ಟ ಕಾಡೊಂದರಲ್ಲಿ ಪತ್ತೆಯಾಗಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಅಮೆಜಾನ್ ಪ್ರಾಂತ್ಯದ ಅರರಾಕುರಾ ಮತ್ತು ಗುವಿಯಾರ್ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಗುವಿಯಾರ್ ನಡುವೆ‌ ಸಂಚರಿಸುತ್ತಿದ್ದ ವೇಳೆ ವಿಮಾನ ಇಂಜಿನ್‌ ನಲ್ಲಿ ವೈಫಲ್ಯ ಕಂಡು ಬಂದಿತ್ತು. ಈ ವೇಳೆ ಪೈಲಟ್ ಎಷ್ಟೇ ಸಾಹಸಪಟ್ಟು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲು ಯತ್ನಿಸಿದರೂ ಅದು ಸಾಧ್ಯವಾಗದೇ ಪತನಗೊಂಡಿತು. ಪತನಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಇಳಿದ ತಂಡ ಪೈಲೆಟ್‌ ಸೇರಿದಂತೆ

ವಿಮಾನ ಪತನಗೊಂಡು ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ➤ಸುರಕ್ಷಿತವಾಗಿ ದಟ್ಟ ಕಾಡೊಂದರಲ್ಲಿ ಪತ್ತೆ.! Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಖಾಸಗಿ ಬಸ್ ಗೆ ಬೆಂಕಿ

(ನ್ಯೂಸ್ ಕಡಬ)newskadaba.com ಕಟೀಲು, ಮೇ.18. ಖಾಸಗಿ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಘಟನೆ ಕಟೀಲು ದೇವಸ್ಥಾನದ ಮುಂಭಾಗದಲ್ಲಿ ನಡೆದಿದ್ದು, ಘಟನೆಯಲ್ಲಿ ಪ್ರಯಾಣಿಕರು ಹಾಗೂ ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಗೋಲ್ಡನ್ ಟ್ರಾವೆಲ್ಸ್ ಎಂಬ ಹೆಸರಿನ ಬಸ್ ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ದೇವಸ್ಥಾನದ ಮುಂಭಾಗವೇ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಬಸ್ ನಲ್ಲಿ ಇಬ್ಬರ ಮಹಿಳೆಯರು ಮತ್ತು ಬಸ್ ಚಾಲಕ ಇದ್ದರು ಎಂದು ಹೇಳಲಾಗಿದ್ದು, ಮೂವರು ಬಸ್ ನಿಂದ ಇಳಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಖಾಸಗಿ ಬಸ್ ಗೆ ಬೆಂಕಿ Read More »

ಕರಾವಳಿ, ಕ್ರೈಮ್ ನ್ಯೂಸ್

91ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಮಂತ್ರಿ ಹೆಚ್​.ಡಿ ದೇವೇಗೌಡ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.18 ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್​ನ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್​.ಡಿ ದೇವೇಗೌಡ ಅವರು 91ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ‘ದೇಶಕ್ಕೆ ನಿಮ್ಮ ಕೊಡುಗೆ ಅಪಾರ, ಆರೋಗ್ಯದಿಂದ ಇನ್ನು ಹೆಚ್ಚು ಕಾಲ ಬದುಕಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿಯವರು ಟ್ವೀಟ್ ಮಾಡಿ, ‘ಹಿರಿಯ ಮುತ್ಸದ್ಧಿ

91ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಮಂತ್ರಿ ಹೆಚ್​.ಡಿ ದೇವೇಗೌಡ Read More »

ಕರ್ನಾಟಕ

ಬಸ್ ಚಾಲಕನ ಅಜಾಗರುಕತೆ ಚಾಲನೆಯಿಂದ ಸರಣಿ ಅಪಘಾತ

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.18. ಖಾಸಗಿ ಬಸ್ ಚಾಲಕನೊರ್ವ ಏಕಾಏಕಿ ಬಸ್ನ್ನುು ಹೆದ್ದಾರಿಗಡ್ಡವಾಗಿ ತಿರುಗಿಸಿದ್ದರ ಪರಿಣಾಮ ನಡೆದ ಸರಣಿ ಅಪಘಾತದಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಪಡುಬಿದ್ರಿಯ ಅಪಾಯಕಾರಿ ತಿರುವು ಸಹಿತ ಜಂಕ್ಷನ್ನ ಲ್ಲಿ ಮಂಗಳೂರು ಕಡೆಯಿಂದ ಬಂದ ಖಾಸಗಿ ಬಸ್ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಉಡುಪಿ ಕಡೆಯಿಂದ ಹೆದ್ದಾರಿಯಲ್ಲಿ ವಾಹನಗಳು ಬರುತ್ತಿದ್ದರೂ ಕ್ಯಾರೇ ಎನ್ನದೆ ಏಕಾಏಕಿ ಹೆದ್ದಾರಿಗಡ್ಡವಾಗಿ ಬಸ್ ಚಲಾಯಿಸಿದಾಗ ಹೆದ್ದಾರಿಯಲ್ಲಿ ಬರುತ್ತಿದ್ದ ವಿಆರ್ ಎಲ್ ಕಂಪನಿಯ ಬೃಹತ್ ಲಾರಿ ಡಿಕ್ಕಿಯಾಗಿದ್ದು, ನಿಯಂತ್ರಣ ಕಳೆದುಕೊಂಡ ಬಸ್ ಜಂಕ್ಷನ್ ನಲ್ಲಿದ್ದ

ಬಸ್ ಚಾಲಕನ ಅಜಾಗರುಕತೆ ಚಾಲನೆಯಿಂದ ಸರಣಿ ಅಪಘಾತ Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ದಾಖಲೆ ರಹಿತ 18 ಲಕ್ಷ ರೂ. ಸಹಿತ ಓರ್ವನ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಮೇ.18. ದಾಖಲೆಗಳಿಲ್ಲದ ಸುಮಾರು 18 ಲಕ್ಷ ರೂ. ಸಹಿತ ಓರ್ವನನ್ನು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಕಾಞ೦ಗಾಡ್ ನ ಕೆ. ಕೆ ಇರ್ಷಾದ್ (33) ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ನೀಲೇಶ್ವರ ಮಾರ್ಕೆಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈತನ ಸ್ಕೂಟರ್ ನಲ್ಲಿ ಸಾಗಿಸುತ್ತಿದ್ದ ಹಣ ವನ್ನು ವಶಪಡಿಸಿಕೊಳ್ಳಲಾಗಿದೆ. ಸೀಟಿನಡಿಯಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದನು. 500 ರೂ.ಮುಖಬೆಲೆಯ 18.5 ಲಕ್ಷ ರೂ. ವಶಪಡಿಸಿ

ಕಾಸರಗೋಡು: ದಾಖಲೆ ರಹಿತ 18 ಲಕ್ಷ ರೂ. ಸಹಿತ ಓರ್ವನ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ.!➤ನಳಿನ್ ಕುಮಾರ್ ಕಟೀಲ್ 

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.18 ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜನ ವಿದ್ಯುತ್ ಬಿಲ್ ಕಟ್ಟಬಾರದು. ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು. ತಮಗೂ ಸೇರಿಸಿ ಎಲ್ಲರಿಗೂ ವಿದ್ಯುತ್ ಉಚಿತ ಎಂದು ತಿಳಿಸಿದ್ದರು. ಹೀಗಾಗಿ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಹೇಳಿದ್ದಾರೆ.ಸಿದ್ಧರಾಮಯ್ಯನವರೇ ಹೇಳಿರುವಾಗ ಜನ ಏಕೆ ವಿದ್ಯುತ್ ಬಿಲ್ ಕಟ್ಟುತ್ತಾರೆ? ನನ್ನ ಪ್ರಕಾರ ಯಾರೂ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.    

ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ.!➤ನಳಿನ್ ಕುಮಾರ್ ಕಟೀಲ್  Read More »

ಕರ್ನಾಟಕ
Scroll to Top