ವಿಮಾನ ಪತನಗೊಂಡು ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ➤ಸುರಕ್ಷಿತವಾಗಿ ದಟ್ಟ ಕಾಡೊಂದರಲ್ಲಿ ಪತ್ತೆ.!

(ನ್ಯೂಸ್ ಕಡಬ)newskadaba.com ಕೊಲಂಬಿಯಾ,ಮೇ.18  ವಿಮಾನ ಅಪಘಾತವಾಗಿ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಸುರಕ್ಷಿತವಾಗಿ ದಟ್ಟ ಕಾಡೊಂದರಲ್ಲಿ ಪತ್ತೆಯಾಗಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಅಮೆಜಾನ್ ಪ್ರಾಂತ್ಯದ ಅರರಾಕುರಾ ಮತ್ತು ಗುವಿಯಾರ್ ಪ್ರಾಂತ್ಯದ ಸ್ಯಾನ್ ಜೋಸ್ ಡೆಲ್ ಗುವಿಯಾರ್ ನಡುವೆ‌ ಸಂಚರಿಸುತ್ತಿದ್ದ ವೇಳೆ ವಿಮಾನ ಇಂಜಿನ್‌ ನಲ್ಲಿ ವೈಫಲ್ಯ ಕಂಡು ಬಂದಿತ್ತು.

ಈ ವೇಳೆ ಪೈಲಟ್ ಎಷ್ಟೇ ಸಾಹಸಪಟ್ಟು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲು ಯತ್ನಿಸಿದರೂ ಅದು ಸಾಧ್ಯವಾಗದೇ ಪತನಗೊಂಡಿತು. ಪತನಗೊಂಡ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಇಳಿದ ತಂಡ ಪೈಲೆಟ್‌ ಸೇರಿದಂತೆ ಮೂವರು ವಯಸ್ಕರ ಮೃತದೇಹ ವಿಮಾನದೊಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆ ಮಾಡಿತ್ತು.

ಆದರೆ ಇನ್ನುಳಿದ ನಾಲ್ವರ ಸುಳಿವು ಸಿಕ್ಕಿರಲಿಲ್ಲ. ಇದಕ್ಕಾಗಿ ಸರ್ಕಾರ ಪೊಲೀಸ್ ಸ್ನಿಫರ್ ಡಾಗ್‌ಗಳೊಂದಿಗೆ 100 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದರು.‌ ಸತತ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಕಾಡಿನಲ್ಲಿ ಅಲೆದಾಡುತ್ತಿದ್ದ ನಾಲ್ವರು ಮಕ್ಕಳು ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

Also Read  ಅಂಚೆ ಚೀಟಿ ಪ್ರದರ್ಶನ / ಸ್ಪರ್ಧೆ ➤ ಆನ್ ಲೈನ್ ಅರ್ಜಿ ಆಹ್ವಾನ

 

 

 

error: Content is protected !!
Scroll to Top