News Kadaba

ಮುಂಬೈ ದಾಳಿ ಆರೋಪಿ ತಹಾವ್ವುರ್ ರಾಣಾ ಹಸ್ತಾಂತರಕ್ಕೆ ಅಮೇರಿಕಾ ಒಪ್ಪಿಗೆ !

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಮೇ.20. 2008 ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬೇಕಾಗಿದ್ದ, ಪಾಕ್ ಮೂಲದ ಕೆನಡಾ ಉದ್ಯಮಿ ತಹಾವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸ್ಥಳೀಯ ನ್ಯಾಯಾಲಯ ಅನುಮೋದನೆ ನೀಡಿದೆ. ಮುಂಬೈ ದಾಳಿಗೆ ಸಂಬಂಧಿಸಿದಂತೆ ಈತನನ್ನು ಒಪ್ಪಿಸಬೇಕು ಎಂಬ ಭಾರತದ ಕೋರಿಕೆಯ ಮೇರೆಗೆ ಕಳೆದ ಜೂ. 10 ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು. ಆತನ ಹಸ್ತಾಂತರಕ್ಕಾಗಿ ಅಮೆರಿಕ ಸರ್ಕಾರಕ್ಕೆ ಭಾರತ ಮನವಿ ಮಾಡಿದ್ದು, ಇದೀಗ ನ್ಯಾಯಾಲಯ ಇದಕ್ಕೆ ಸಮ್ಮತಿ ನೀಡಿದೆ.

ಮುಂಬೈ ದಾಳಿ ಆರೋಪಿ ತಹಾವ್ವುರ್ ರಾಣಾ ಹಸ್ತಾಂತರಕ್ಕೆ ಅಮೇರಿಕಾ ಒಪ್ಪಿಗೆ ! Read More »

ರಾಷ್ಟ್ರೀಯ ನ್ಯೂಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಕಟ್ಟದೆ ₹2.65 ಕೋಟಿ ದುರ್ಬಳಕೆ.!

(ನ್ಯೂಸ್ ಕಡಬ)newskadaba.com ಕಲಬುರಗಿ,ಮೇ.20 ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ (ಪಿಎಂವೈ-ಯು) ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳದೇ ₹ 2.65 ಕೋಟಿ ಅನುದಾನ ದುರ್ಬಳಕೆಯಾದ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಸತಿ ಇಲಾಖೆ ಅಧಿಕಾರಿಗಳ ತಂಡ ತನಿಖೆ ನಡೆಸಲು ಅಫಜಲಪುರಕ್ಕೆ ಭೇಟಿ ನೀಡಿದೆ. ‘2019-20 ಅವಧಿಯಲ್ಲಿ ಅಫಜಲಪುರದ 266 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 200 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಒಂದೂವರೆ ವರ್ಷದ ಅವಧಿಯಲ್ಲಿ ₹2.65 ಕೋಟಿ ಅನುದಾನ ಪಾವತಿ ಆಗಿತ್ತು. ಭುವನ್ ಆಯಪ್‌ನಲ್ಲಿ ನಮೂದಿಸಿದ್ದ ವಸತಿ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಕಟ್ಟದೆ ₹2.65 ಕೋಟಿ ದುರ್ಬಳಕೆ.! Read More »

ಕರ್ನಾಟಕ

ಪ್ರಮಾಣ ವಚನ ಸಮಾರಂಭ..! ➤ ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಗಣ್ಯರ ಆಗಮನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.20. ಇಂದು ಮಧ್ಯಾಹ್ನ ಸರಿಯಾಗಿ 12:30ಕ್ಕೆ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅಗಮಿಸಿದ್ದು ಇವರೆಲ್ಲಾ ಹೊಟೇಲ್ ಶಂಗ್ರಿಲಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಕೆಲವೇ ಕ್ಷಣದಲ್ಲಿ ಕಂಠೀರವ ಕ್ರೀಡಾಂಗಣದತ್ತ ಆಗಮಿಸಲಿದ್ದಾರೆ.

ಪ್ರಮಾಣ ವಚನ ಸಮಾರಂಭ..! ➤ ರಾಹುಲ್ ಗಾಂಧಿ, ಪ್ರಿಯಾಂಕಾ ಸೇರಿ ಗಣ್ಯರ ಆಗಮನ Read More »

ಕರ್ನಾಟಕ

ಸಿದ್ದು ಹೈಕಮಾಂಡ್ ಕೈಗೊಂಬೆ, ರಬ್ಬರ್ ಸ್ಟ್ಯಾಂಪ್ ಸಿಎಂ ಎನ್ನಲು ಈ ಪತ್ರ ಸಾಕ್ಷಿ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.20. ನೂತನ ಸಿಎಂ ಆಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಕೈಗೊಂಬೆ, ರಬ್ಬರ್ ಸ್ಟ್ಯಾಂಪ್ ಸಿಎಂ ಎನ್ನಲು ಈ ಪತ್ರವೇ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ , 8 ಮಂದಿ ಶಾಸಕರು ಸಚಿವರಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ

ಸಿದ್ದು ಹೈಕಮಾಂಡ್ ಕೈಗೊಂಬೆ, ರಬ್ಬರ್ ಸ್ಟ್ಯಾಂಪ್ ಸಿಎಂ ಎನ್ನಲು ಈ ಪತ್ರ ಸಾಕ್ಷಿ ➤ ರಾಜ್ಯಾಧ್ಯಕ್ಷ ನಳಿನ್ ಕುಮಾರ್ Read More »

ಕರ್ನಾಟಕ

ಪೊಲೀಸ್‌ ಜೀಪ್‌ ಮೇಲೆ ಹತ್ತಿ ರೀಲ್ಸ್‌ ಮಾಡಿದ ಯುವಕರು.!

(ನ್ಯೂಸ್ ಕಡಬ)newskadaba.com ಲಕ್ನೋ,ಮೇ.20 ಖಾಕಿ ತೊಟ್ಟ ಪೊಲೀಸರು ಎಂದರೆ ಕೆಲವರಿಗೆ ಭಯ. ಆದರೆ ಇಬ್ಬರು ಯುವಕರು ಪೊಲೀಸರ ಗಾಡಿಯನ್ನೇ ಬಳಸಿಕೊಂಡು ರೀಲ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿದೆ.ಉತ್ತರ ಪ್ರದೇಶದ ಕಾನ್ಪುರದ ಬಜಾರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಕಮಿಷನರ್‌ ಪೊಲೀಸ್‌ ಜೀಪ್‌ ನ ಮೇಲೆ ಇಬ್ಬರು ಯುವಕರು ಕೂತು ಇನ್ಸ್ಟ್ರಾಗ್ರಾಮ್‌ ರೀಲ್ಸ್‌ ಮಾಡಿದ್ದಾರೆ. ಪೊಲೀಸ್‌ ಜೀಪ್‌ ನ್ನು ರಿಪೇರಿಗೆಂದು ಗ್ಯಾರೇಜ್‌ ನಲ್ಲಿ ಇಟ್ಟಾಗ ಯುವಕರು ಇದನ್ನು

ಪೊಲೀಸ್‌ ಜೀಪ್‌ ಮೇಲೆ ಹತ್ತಿ ರೀಲ್ಸ್‌ ಮಾಡಿದ ಯುವಕರು.! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಸಿಇಟಿ ಪರೀಕ್ಷೆ ಆರಂಭ !!

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.20. ಎಂಜಿನಿಯರಿಂಗ್ ಮತ್ತು ಬಿಎಸ್ಸಿ ನರ್ಸಿಂಗ್ ವೃತ್ತಿಪರ ಕೋರ್ಸ್‌ಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ದಕ್ಷಿಣ ಕನ್ನಡ , ಉಡುಪಿ ಉಭಯ ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ಹಾಗೂ ನಾಳೆ ಪರೀಕ್ಷೆ ನಡೆಯಲಿದ್ದು ದ.ಕ.ದಲ್ಲಿ 28 ಕೇಂದ್ರಗಳಲ್ಲಿ 16,113 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಉಡುಪಿಯಲ್ಲಿ 12 ಕೇಂದ್ರಗಳಲ್ಲಿ 5,712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಎರಡೂ

ಮಂಗಳೂರು: ಸಿಇಟಿ ಪರೀಕ್ಷೆ ಆರಂಭ !! Read More »

ಕರಾವಳಿ

ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ತಡೆಯಾಜ್ಞೆ

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.20. ವಾರಾಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರೆತಿರುವ ‘ಶಿವಲಿಂಗ’ ಎಷ್ಟು ವರ್ಷ ಹಳೆಯದು ಎಂದು ತಿಳಿಯಲು ಕಾರ್ಬನ್‌ ಡೇಟಿಂಗ್‌ ಪರೀಕ್ಷೆ ಹಾಗೂ ವೈಜ್ಞಾನಿಕ ಸರ್ವೇ ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠವು ಸದ್ಯಕ್ಕೆ ಹೈಕೋರ್ಟ್ ನಿರ್ದೇಶನಗಳನ್ನು ಮುಂದೂಡುವ ಆದೇಶವನ್ನು ನೀಡಿದೆ.  

ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ತಡೆಯಾಜ್ಞೆ Read More »

ರಾಷ್ಟ್ರೀಯ ನ್ಯೂಸ್

ವಿವಾಹಿತ ಮಹಿಳೆ‌ ಜೊತೆ ಅಕ್ರಮ‌ ಸಂಬಂಧ➤FIR ದಾಖಲು

(ನ್ಯೂಸ್ ಕಡಬ)newskadaba.com ಕುಶಾಲನಗರ,ಮೇ.20 ವಿವಾಹಿತ ಮಹಿಳೆ‌ ಜೊತೆ ಅಕ್ರಮ‌ ಸಂಬಂಧ ಆರೋಪಿಸಿ, ಮಹಿಳೆ ಸಂಬಂಧಿಕರಿಂದ ಗುತ್ತಿಗೆದಾರನ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಗುತ್ತಿಗೆದಾರ ಸಂಪತ್ ಹಲ್ಲೆಗೊಳಗಾದ ವ್ಯಕ್ತಿ. ಮಹಿಳೆಯ ಮನೆಯಲ್ಲಿದ್ದ ಸಂದರ್ಭದಲ್ಲಿ ಆಕೆಯ ಸಂಬಂಧಿಕರು ಇತನನ್ನು ರೆಡ್​ಹ್ಯಾಂಡ್​ ಆಗಿ ಹಿಡಿದು ಹಲ್ಲೆ ಮಾಡಿದ್ದಾರೆ, ಜೊತೆಗೆ ಸಂಪತ್ ವಿರುದ್ಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.    

ವಿವಾಹಿತ ಮಹಿಳೆ‌ ಜೊತೆ ಅಕ್ರಮ‌ ಸಂಬಂಧ➤FIR ದಾಖಲು Read More »

ಕರಾವಳಿ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಮತ್ತೆ ಹಿನ್ನಡೆ

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.20 ಕರ್ನಾಟಕದ 108 ಕಿ.ಮೀ. ದಟ್ಟ ಅರಣ್ಯಗಳ ನಡುವೆ ಸಾಗುವ ಪ್ರಸ್ತಾವವಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಮತ್ತೆ ಹಿನ್ನಡೆಯಾಗಿದೆ. ಈಗಿನ ಸ್ವರೂಪದಲ್ಲಿ ಯೋಜನೆಗೆ ಒಪ್ಪಿಗೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ. ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಯೋಜನೆಯ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆದಿದೆ.    

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಮತ್ತೆ ಹಿನ್ನಡೆ Read More »

ರಾಷ್ಟ್ರೀಯ ನ್ಯೂಸ್

‘ತಾಜ್ ಮಹಲ್’ ಬಳಿ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ದಂಪತಿ

(ನ್ಯೂಸ್ ಕಡಬ)newskadaba.com ವಿಜಯಪುರ,ಮೇ.20 ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 74 ವರ್ಷದ ಮರೆಪ್ಪ ಹಾಗೂ 67 ವರ್ಷದ ಅವರ ಪತ್ನಿ ಶಾಂತಾ ತಳವಾರ ತಮ್ಮ ಐವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಆಗ್ರಾದ ತಾಜ್ ಮಹಲ್ ಬಳಿ ಆಚರಿಸಿಕೊಂಡಿದ್ದಾರೆ. ಪ್ರೇಮಸೌಧ ತಾಜ್ ಮಹಲ್ ಬಳಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಈ ದಂಪತಿ ಬಯಸಿದ್ದು, ಮಕ್ಕಳಾದ ಪರಶುರಾಮ, ಬಸವರಾಜ ಆಗ್ರಾಕ್ಕೆ ಕರೆದೊಯ್ಯುವ ಮೂಲಕ ಇದನ್ನು ನೆರವೇರಿಸಿದ್ದಾರೆ.ಅಲ್ಲದೆ ಆಗ್ರಾದ ಪಂಚತಾರಾ ಹೋಟೆಲ್ ನಲ್ಲಿ ಕೇಕ್ ಕತ್ತರಿಸಿ ದಂಪತಿ ಸಂಭ್ರಮಿಸಿದ್ದಾರೆ.  

‘ತಾಜ್ ಮಹಲ್’ ಬಳಿ 50ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ದಂಪತಿ Read More »

ಕರ್ನಾಟಕ
Scroll to Top